< ಜೆಕರ್ಯನು 11 >

1 ಲೆಬನೋನೇ, ನಿನ್ನ ಬಾಗಿಲುಗಳನ್ನು ತೆರೆ, ಬೆಂಕಿಯು ನಿನ್ನ ದೇವದಾರುಗಳನ್ನು ನುಂಗಲಿ!
ए लेबनान तेरा ढोकाहरू खोल्, ताकि आगोले तेरा देवदारुहरूलाई भस्म पारोस्!
2 ತುರಾಯಿ ಮರವೇ, ಗೋಳಾಡು! ದೇವದಾರು ಬಿದ್ದಿದೆ, ಶ್ರೇಷ್ಠವೃಕ್ಷಗಳು ನಾಶವಾಗಿವೆ. ಬಾಷಾನಿನ ಅಲ್ಲೋನ್ ಮರಗಳೇ ಕಿರಿಚಿರಿ! ನುಗ್ಗಲಾಗದ ದಟ್ಟವಾದ ವನವು ಉರುಳಿದೆ.
ए सल्लोको रूख, विलाप गर्, किनकि देवदारुका रूखहरू ढलेका छन्! सुन्दर र महान् भनिएका कुराहरू ध्वस्त भएका छन्! ए बाशानका फलाँटका रूखहरू, विलाप गर, किनभने त्यो ठुलो जङ्गल सखाप भएको छ ।
3 ಆಹಾ, ಕುರುಬರು ಗೋಳಾಡುತ್ತಾರೆ! ಅವರ ಅತಿಶಯದ ಕಾವಲು ಹಾಳಾಗಿದೆ. ಇಗೋ, ಪ್ರಾಯದ ಸಿಂಹಗಳು ಗರ್ಜಿಸುತ್ತವೆ! ಯೊರ್ದನಿನ ದಟ್ಟ ಅಡವಿಯು ಹಾಳಾಗಿದೆ.
गोठालाहरू वेदनामा रुन्छन्, किनभने तिनीहरूको महिमा नष्‍ट पारिएको छ! जवान सिंहहरू गर्जन्छन्, किनकि यर्दन नदीको घमण्ड नष्‍ट पारिएको छ ।
4 ನನ್ನ ದೇವರಾದ ಯೆಹೋವನು ಹೀಗೆ ಅಪ್ಪಣೆಕೊಟ್ಟನು, “ಕೊಯ್ಗುರಿಗಳ ಮಂದೆಯನ್ನು ಕಾಯಿ;
परमप्रभु मेरा परमेश्‍वर यस्तो भन्‍नुहुन्छ, “गोठालाले झैँ काटिनको निम्ति अलग गरिएको बगालको हेरचाह गर्!
5 ಕೊಂಡುಕೊಳ್ಳುವವರು ಅವುಗಳನ್ನು ಕೊಯ್ದರೂ ದೋಷಿಗಳೆಂದು ಎಣಿಸುವುದಿಲ್ಲ; ಮಾರುವವರು ಯೆಹೋವನಿಗೆ ಸ್ತೋತ್ರವಾಗಲಿ, ಧನವಂತರಾದೆವು ಅಂದುಕೊಳ್ಳುವರು. ಆ ಮಂದೆಯ ಕುರುಬರಾದರೂ ಅವುಗಳನ್ನು ಕರುಣಿಸುವುದಿಲ್ಲ.”
ती किन्‍नेहरूले तिनीहरूलाई काट्छन् र तिनीहरूलाई सजाय दिइँदैन, र तिनीहरूलाई बेच्नेहरूले भन्छन्, ‘परमप्रभुको प्रशंसा होस्! म धनी भएको छु!’ किनकि बगालका मालिकहरूका निम्ति काम गर्ने गोठालाहरूले तिनीहरूमाथि दया देखाएनन् ।
6 ಯೆಹೋವನು ಇಂತೆನ್ನುತ್ತಾನೆ, “ನಾನು ಲೋಕನಿವಾಸಿಗಳನ್ನು ಇನ್ನು ಕರುಣಿಸೆನು; ಇಗೋ, ಪ್ರತಿಯೊಬ್ಬನನ್ನು ಅವನವನ ನೆರೆಯವನ ಕೈಗೂ, ಅರಸನ ಕೈಗೂ ಒಪ್ಪಿಸುವೆನು; ಆ ಬಲಿಷ್ಠರು ಲೋಕವನ್ನು ಪುಡಿಪುಡಿಮಾಡುವರು; ಅವರ ಕೈಗೆ ಸಿಕ್ಕಿದವರನ್ನು ಉದ್ಧರಿಸೆನು.”
किनकि अब म भूमिमा बसोबास गर्नेहरूलाई दया देखाउनेछैनँ! - परमप्रभु घोषणा गर्नुहुन्छ । हेर, म हरेक मानिसलाई त्यसको छिमेकी र त्यसको राजाको हातमा सुम्पन लाग्दै छु, अनि तिनीहरूले भूमिलाई नष्‍ट गर्नेछन् र तिनीहरूका हातबाट म कसैलाई पनि छुटाउनेछैन ।”
7 ಆಗ ನಾನು ದೀನಾವಸ್ಥೆಯಲ್ಲಿದ್ದ ಆ ಕೊಯ್ಗುರಿಗಳ ಮಂದೆಯನ್ನು ಮೇಯಿಸಿದೆನು. ಎರಡು ಕೋಲುಗಳನ್ನು ತೆಗೆದುಕೊಂಡು ಒಂದಕ್ಕೆ “ಕೃಪೆ” ಎಂತಲೂ ಇನ್ನೊಂದಕ್ಕೆ, “ಒಗ್ಗಟ್ಟು” ಎಂತಲೂ ಹೆಸರಿಟ್ಟು ಅವುಗಳಿಂದ ಮಂದೆಯನ್ನು ಮೇಯಿಸಿದೆನು.
यसैकारण म काटिनको निम्ति चिन्ह लगाइएको भेडाको बगालको गोठालो बनेँ । मैले दुईवटा लौरो लिएँ: एउटा लौरोलाई मैले “अनुग्रह” नाउँ दिएँ र अर्कोलाई“एकता” नाउँ दिएँ । यसरी मैले बगालको हेरचाह गरेँ ।
8 ಒಂದೇ ತಿಂಗಳೊಳಗೆ ಮೂವರು ಕುರುಬರನ್ನು ಅಡಗಿಸಿಬಿಟ್ಟೆನು; ಅನಂತರ ನನಗೆ ಕುರಿಗಳ ವಿಷಯವಾಗಿ ತಾಳ್ಮೆ ತಪ್ಪಿತು; ಅವುಗಳಿಂದ ನನಗೆ ಬೇಸರವಾಯಿತು.
एक महिनामा मैले तिनवटा गोठालालाई नाश गरेँ । म तिनीहरूप्रति धैर्य भइनँ, र तिनीहरूले मलाई घृणा गरे ।
9 ಆಗ, “ನಾನು ನಿಮ್ಮನ್ನು ಮೇಯಿಸೆನು; ಸಾಯುವುದು ಸಾಯಲಿ, ಹಾಳಾಗುವುದು ಹಾಳಾಗಲಿ, ಉಳಿದವುಗಳು ಒಂದರ ಮಾಂಸವೊಂದನ್ನು ತಿನ್ನಲಿ ಅಂದುಕೊಂಡೆನು.”
अनि मैले मालिकहरूलाई भनेँ, “म अब तिमीहरूका निम्ति गोठालोको रूपमा काम गर्नेछैनँ । मर्न लागेका भेडाहरू मरून्, नष्‍ट भइरहेका भेडाहरूलाई नष्‍ट हुनदेऊ । बाँकी रहेको भेडोलेचाहिँ आफ्नो छिमेकीको मासु खाओस् ।”
10 ೧೦ ಆಗ ನಾನು ಎಲ್ಲಾ ಜನಾಂಗಗಳೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆಯನ್ನು ಭಂಗಪಡಿಸಬೇಕೆಂದು “ಕೃಪೆ” ಎಂಬ ನನ್ನ ಕೋಲನ್ನು ತೆಗೆದು ಕತ್ತರಿಸಿಬಿಟ್ಟೆನು. ಆಗಲೇ ಮುರಿದುಹೋಯಿತು;
यसैकारण मैले आफ्नो लौरो “अनुग्रह” लिएँ अनि आफ्ना सबै कुलहरूसँग गरेको करार तोड्नको निम्ति त्यो भाँचिदिएँ ।
11 ೧೧ ಇದರಿಂದ ಆ ದೀನವಾದ ಮಂದೆಯಲ್ಲಿ ನನ್ನನ್ನು ಲಕ್ಷಿಸುತ್ತಿದ್ದ ಕುರಿಗಳು, ಇದು ಯೆಹೋವನ ನುಡಿ ಎಂದು ತಿಳಿದುಕೊಂಡವು.
त्यस दिन त्यो करार तोडियो, र भेडाको हेरचाह गर्नेहरू र मलाई हेर्नेहरूले परमप्रभु बोल्नुभएको थाहा पाए ।
12 ೧೨ ಅನಂತರ ನಾನು ನಿಮಗೆ, “ಸರಿಯಾಗಿ ತೋರಿದರೆ ನನಗೆ ಸಂಬಳವನ್ನು ಕೊಡಿರಿ ಇಲ್ಲವಾದರೆ ಬಿಡಿರಿ” ಅನ್ನಲು ಅವರು ಮೂವತ್ತು ತೊಲೆ ಬೆಳ್ಳಿಯನ್ನು ತೂಗಿ ನನ್ನ ಸಂಬಳಕ್ಕಾಗಿ ಕೊಟ್ಟರು.
मैले तिनीहरूलाई भनेँ, “यदि तिमीहरूलाई यो असल लागे, मलाई मेरो ज्याला देओ । तर तिमीहरूलाई असल नलागे, नदेओ ।” यसैले तिनीहरूले मेरो ज्याला चाँदीका तिस टुक्रा हिसाब गरे ।
13 ೧೩ ಅವರು ಇವನ ಯೋಗ್ಯತೆ ಇಷ್ಟೇ ಎಂದುಕೊಂಡು ನನಗೆ ಕೊಟ್ಟ ಆ ಭಾರೀ ಸಂಬಳವನ್ನು ಯೆಹೋವನು ನೋಡಿ, “ಅದನ್ನು ಡಬ್ಬಿಗೆ ಹಾಕು” ಎಂದು ಅಪ್ಪಣೆ ಮಾಡಿದಾಗ ನಾನು ಆ ಮೂವತ್ತು ಶೆಕೆಲ್ ಬೆಳ್ಳಿ ನಾಣ್ಯವನ್ನು ತೆಗೆದು ಯೆಹೋವನ ಆಲಯದ ಡಬ್ಬಿಗೆ ಹಾಕಿದೆನು.
अनि परमप्रभुले मलाई भन्‍नुभयो, “तिनीहरूले तेरो मुल्य तय गरेको उत्कृष्‍ट मोलमा त्यो चाँदी भण्डारमा जम्मा गर्!” यसैकारण मैले ती तिस टुक्रा चाँदी लिएर परमप्रभुको भवनमा भण्डारमा जम्मा गरेँ ।
14 ೧೪ ಕೂಡಲೆ ಯೆಹೂದಕ್ಕೂ, ಇಸ್ರಾಯೇಲಿಗೂ ಇದ್ದ ಸಹೋದರಭಾವವನ್ನು ಭಂಗಪಡಿಸಬೇಕೆಂದು “ಒಗ್ಗಟ್ಟು” ಎಂಬ ನನ್ನ ಎರಡನೆಯ ಕೋಲನ್ನು ಮುರಿದುಬಿಟ್ಟೆನು.
अनि यहूदा र इस्राएलबिचको दाजुभाइको नातालाई तोड्नको निम्ति मैले मेरो दोस्रो लौरो “एकता” पनि भाँचे ।
15 ೧೫ ಆ ಮೇಲೆ ಯೆಹೋವನು ನನಗೆ ಹೀಗೆ ಅಪ್ಪಣೆ ಮಾಡಿದನು, “ನೀನು ಮತ್ತೊಮ್ಮೆ ತಕ್ಕ ಸಲಕರಣೆಗಳನ್ನು ತೆಗೆದುಕೊಂಡು ಮೂರ್ಖ ಕುರುಬನಂತೆ ನಟಿಸು.
परमप्रभुले मलाई भन्‍नुभयो, “फेरि, मूर्ख गोठालोको उपकरण तेरो निम्ति ली,
16 ೧೬ ಇಗೋ, ದೇಶದಲ್ಲಿ ನಾನು ಒಬ್ಬ ಕುರುಬನನ್ನು ನೇಮಿಸುವೆನು; ಅವನು ಹಾಳಾಗುತ್ತಿರುವ ಕುರಿಗಳನ್ನು ನೋಡಿಕೊಳ್ಳನು, ಚದುರಿದವುಗಳನ್ನು ಹುಡುಕನು, ಊನವಾದವುಗಳನ್ನು ಗುಣಪಡಿಸನು, ನೆಟ್ಟಗಿರುವವುಗಳನ್ನು ಸಾಕನು; ಕೊಬ್ಬಿದವುಗಳ ಮಾಂಸವನ್ನು ತಿನ್ನುವನು, ಕುರಿಗಳ ಗೊರಸುಗಳನ್ನು ಚೂರುಚೂರು ಮಾಡುವನು.
किनभने हेर्, म भूमिमा एउटा गोठालो नियुक्त गर्दैछु । त्यसले हराउँदै गरेको भेडाको वास्ता गर्नेछैन । हराएको भेडालाई त्यो खोज्न जानेछैन, न त घाइते भेडालाई निको पार्नेछ । त्यसले स्वस्थ भेडाहरूलाई खुवाउनेछैन, तर मोटो भेडाको मासु खानेछ र तिनीहरूका खुरलाई च्यात्‍नेछ ।
17 ೧೭ ಮಂದೆಯನ್ನು ಕಾಯದೆ ಬಿಟ್ಟು ಬಿಟ್ಟ ಕುರುಬನ ಗತಿಯನ್ನು ಏನು ಹೇಳಲಿ? ಖಡ್ಗವು ಅವನ ತೋಳಿಗೂ, ಬಲಗಣ್ಣಿಗೂ ತಾಗುವುದು; ಅವನ ತೋಳು ತೀರಾ ಒಣಗಿಹೋಗುವುದು. ಅವನ ಬಲಗಣ್ಣು ಪೂರಾ ಮೊಬ್ಬಾಗುವುದು.”
धिक्‍कार, आफ्नो बगाललाई त्याग्‍ने बेकामको गोठालो! त्यसको पाखुरा र दाहिने आँखाको विरुद्ध तरवार चलाइयोस्! त्यसको पाखुरा सुकोस् र त्यसको दाहिने आँखा अन्धो होस्!”

< ಜೆಕರ್ಯನು 11 >