< ತೀತನಿಗೆ ಬರೆದ ಪತ್ರಿಕೆ 1 >
1 ೧ ದೇವರ ಸೇವಕನೂ, ಯೇಸು ಕ್ರಿಸ್ತನ ಅಪೊಸ್ತಲನೂ ಆಗಿರುವ ಪೌಲನು, ನಮ್ಮೆಲ್ಲರಿಗೆ ಹುದುವಾದ ನಂಬಿಕೆಯಲ್ಲಿ ನಿಜಕುಮಾರನಾಗಿರುವ ತೀತನಿಗೆ ಬರೆಯುವ ಪತ್ರ.
ಅನನ್ತಜೀವನಸ್ಯಾಶಾತೋ ಜಾತಾಯಾ ಈಶ್ವರಭಕ್ತೇ ರ್ಯೋಗ್ಯಸ್ಯ ಸತ್ಯಮತಸ್ಯ ಯತ್ ತತ್ವಜ್ಞಾನಂ ಯಶ್ಚ ವಿಶ್ವಾಸ ಈಶ್ವರಸ್ಯಾಭಿರುಚಿತಲೋಕೈ ರ್ಲಭ್ಯತೇ ತದರ್ಥಂ (aiōnios )
2 ೨ ತಂದೆಯಾದ ದೇವರಿಂದ ಮತ್ತು ನಮ್ಮ ರಕ್ಷಕನಾದ ಯೇಸು ಕ್ರಿಸ್ತನಿಂದ ನಿನಗೆ ಕೃಪೆ, ಕರುಣೆ ಮತ್ತು ಶಾಂತಿ ದೊರಕಲಿ.
ಯೀಶುಖ್ರೀಷ್ಟಸ್ಯ ಪ್ರೇರಿತ ಈಶ್ವರಸ್ಯ ದಾಸಃ ಪೌಲೋಽಹಂ ಸಾಧಾರಣವಿಶ್ವಾಸಾತ್ ಮಮ ಪ್ರಕೃತಂ ಧರ್ಮ್ಮಪುತ್ರಂ ತೀತಂ ಪ್ರತಿ ಲಿಖಮಿ|
3 ೩ ಸುಳ್ಳಾಡದ ದೇವರು, ಅನಾದಿಕಾಲದಲ್ಲಿಯೇ ವಾಗ್ದಾನ ಮಾಡಿದ ನಿತ್ಯಜೀವದ ನಿರೀಕ್ಷೆಯನ್ನು, ತಾನು ಆರಿಸಿಕೊಂಡವರ ನಂಬಿಕೆಯನ್ನು ಮತ್ತು ದೈವ ಭಕ್ತಿಯನ್ನು ಸತ್ಯದ ಜ್ಞಾನಕ್ಕನುಸಾರವಾಗಿ ದೃಢಪಡಿಸಲು ನಾನು ಕಾರ್ಯ ನಿರ್ವಹಿಸುತ್ತೇನೆ. (aiōnios )
ನಿಷ್ಕಪಟ ಈಶ್ವರ ಆದಿಕಾಲಾತ್ ಪೂರ್ವ್ವಂ ತತ್ ಜೀವನಂ ಪ್ರತಿಜ್ಞಾತವಾನ್ ಸ್ವನಿರೂಪಿತಸಮಯೇ ಚ ಘೋಷಣಯಾ ತತ್ ಪ್ರಕಾಶಿತವಾನ್|
4 ೪ ಹಾಗು, ಆ ಸಂದೇಶವನ್ನು ಸಾರುವ ಜವಾಬ್ದಾರಿಯು ನಮ್ಮ ರಕ್ಷಕನಾದ ದೇವರ ಆಜ್ಞೆಯ ಅನುಸಾರವಾಗಿ ನನಗೆ ಒಪ್ಪಿಸಲ್ಪಟ್ಟಿದೆ ಹಾಗು ಸೂಕ್ತ ಕಾಲದಲ್ಲಿ ಸಂದೇಶವನ್ನು ಸಾರುವುದರ ಮೂಲಕ ತನ್ನ ವಾಕ್ಯವನ್ನು ನನಗೆ ಪ್ರಕಟಪಡಿಸಿದ್ದಾನೆ.
ಮಮ ತ್ರಾತುರೀಶ್ವರಸ್ಯಾಜ್ಞಯಾ ಚ ತಸ್ಯ ಘೋಷಣಂ ಮಯಿ ಸಮರ್ಪಿತಮ್ ಅಭೂತ್| ಅಸ್ಮಾಕಂ ತಾತ ಈಶ್ವರಃ ಪರಿತ್ರಾತಾ ಪ್ರಭು ರ್ಯೀಶುಖ್ರೀಷ್ಟಶ್ಚ ತುಭ್ಯಮ್ ಅನುಗ್ರಹಂ ದಯಾಂ ಶಾನ್ತಿಞ್ಚ ವಿತರತು|
5 ೫ ಕ್ರೇತ್ ದ್ವೀಪದಲ್ಲಿ ಇನ್ನೂ ಕ್ರಮಕ್ಕೆ ಬಾರದಿರುವ ಕಾರ್ಯಗಳನ್ನು ಕ್ರಮಪಡಿಸಿ, ಪಟ್ಟಣ ಪಟ್ಟಣಗಳಲ್ಲಿ ಹಿರಿಯರನ್ನು ನೇಮಿಸಬೇಕೆಂದು ನಾನು ನಿನಗೆ ಅಪ್ಪಣೆಕೊಟ್ಟು ನಿನ್ನನ್ನು ಅಲ್ಲಿ ಬಿಟ್ಟು ಬಂದೆ.
ತ್ವಂ ಯದ್ ಅಸಮ್ಪೂರ್ಣಕಾರ್ಯ್ಯಾಣಿ ಸಮ್ಪೂರಯೇ ರ್ಮದೀಯಾದೇಶಾಚ್ಚ ಪ್ರತಿನಗರಂ ಪ್ರಾಚೀನಗಣಾನ್ ನಿಯೋಜಯೇಸ್ತದರ್ಥಮಹಂ ತ್ವಾಂ ಕ್ರೀತ್ಯುಪದ್ವೀಪೇ ಸ್ಥಾಪಯಿತ್ವಾ ಗತವಾನ್|
6 ೬ ಸಭೆಯ ಹಿರಿಯನು ದೋಷರಹಿತನೂ, ಏಕಪತ್ನಿಯುಳ್ಳವನೂ ಆಗಿರಬೇಕು; ಆತನ ಮಕ್ಕಳು ಕರ್ತನನ್ನು ನಂಬಿದವರಾಗಿರಬೇಕು; ಅವರ ಮಕ್ಕಳು ದುರ್ಮಾರ್ಗಿಗಳೂ ಮತ್ತು ಅವಿಧೇಯತೆಯ ಆರೋಪವಿಲ್ಲದವರು ಆಗಿರಬೇಕು.
ತಸ್ಮಾದ್ ಯೋ ನರೋ ಽನಿನ್ದಿತ ಏಕಸ್ಯಾ ಯೋಷಿತಃ ಸ್ವಾಮೀ ವಿಶ್ವಾಸಿನಾಮ್ ಅಪಚಯಸ್ಯಾವಾಧ್ಯತ್ವಸ್ಯ ವಾ ದೋಷೇಣಾಲಿಪ್ತಾನಾಞ್ಚ ಸನ್ತಾನಾನಾಂ ಜನಕೋ ಭವತಿ ಸ ಏವ ಯೋಗ್ಯಃ|
7 ೭ ಏಕೆಂದರೆ, ಸಭಾಧ್ಯಕ್ಷನು ದೇವರ ಮೇಲ್ವಿಚಾರಕನಾಗಿರುವುದರಿಂದ ದೋಷರಹಿತನಾಗಿರಬೇಕು; ಅವನು ಸ್ವೇಚ್ಛೆಯಾಗಿ ನಡೆಯುವವನೂ, ಮುಂಗೋಪಿಯೂ, ಕುಡುಕನೂ, ಜಗಳಗಂಟನೂ, ಅತಿಲಾಭವನ್ನು ಅಪೇಕ್ಷಿಸುವವನೂ ಆಗಿರದೆ,
ಯತೋ ಹೇತೋರದ್ಯಕ್ಷೇಣೇಶ್ವರಸ್ಯ ಗೃಹಾದ್ಯಕ್ಷೇಣೇವಾನಿನ್ದನೀಯೇನ ಭವಿತವ್ಯಂ| ತೇನ ಸ್ವೇಚ್ಛಾಚಾರಿಣಾ ಕ್ರೋಧಿನಾ ಪಾನಾಸಕ್ತೇನ ಪ್ರಹಾರಕೇಣ ಲೋಭಿನಾ ವಾ ನ ಭವಿತವ್ಯಂ
8 ೮ ಅತಿಥಿಸತ್ಕಾರಮಾಡುವವನೂ, ಒಳ್ಳೆಯದನ್ನು ಪ್ರೀತಿಸುವವನೂ, ವಿವೇಕಿಯು, ನೀತಿವಂತನೂ, ದೈವಭಕ್ತನು, ಜಿತೇಂದ್ರಿಯನೂ ಆಗಿದ್ದು,
ಕಿನ್ತ್ವತಿಥಿಸೇವಕೇನ ಸಲ್ಲೋಕಾನುರಾಗಿಣಾ ವಿನೀತೇನ ನ್ಯಾಯ್ಯೇನ ಧಾರ್ಮ್ಮಿಕೇಣ ಜಿತೇನ್ದ್ರಿಯೇಣ ಚ ಭವಿತವ್ಯಂ,
9 ೯ ತಾನು ಸ್ವಸ್ಥಬೋಧನೆಯಿಂದ ಜನರನ್ನು ಎಚ್ಚರಿಸುವುದಕ್ಕೂ, ಸುವಾರ್ತಾ ವಿರೋಧಿಗಳ ಬಾಯಿ ಕಟ್ಟುವುದಕ್ಕೂ ಶಕ್ತನಾಗಿರುವಂತೆ, ಕ್ರಿಸ್ತನ ಉಪದೇಶಕ್ಕೆ ಅನುಸಾರವಾಗಿ ನಂಬತಕ್ಕ ವಚನಗಳನ್ನು, ದೃಢವಾಗಿ ಅವಲಂಬಿಸಿದವನಾಗಿರಬೇಕು.
ಉಪದೇಶೇ ಚ ವಿಶ್ವಸ್ತಂ ವಾಕ್ಯಂ ತೇನ ಧಾರಿತವ್ಯಂ ಯತಃ ಸ ಯದ್ ಯಥಾರ್ಥೇನೋಪದೇಶೇನ ಲೋಕಾನ್ ವಿನೇತುಂ ವಿಘ್ನಕಾರಿಣಶ್ಚ ನಿರುತ್ತರಾನ್ ಕರ್ತ್ತುಂ ಶಕ್ನುಯಾತ್ ತದ್ ಆವಶ್ಯಕಂ|
10 ೧೦ ಅನೇಕರು, ಪ್ರಮುಖವಾಗಿ ಸುನ್ನತಿಹೊಂದಿದವರು, ಬರೀ ಮಾತುಗಾರರೂ, ಮೋಸಗಾರರೂ, ಅಧಿಕಾರಕ್ಕೆ ಒಳಪಡದವರು ಆಗಿದ್ದಾರೆ.
ಯತಸ್ತೇ ಬಹವೋ ಽವಾಧ್ಯಾ ಅನರ್ಥಕವಾಕ್ಯವಾದಿನಃ ಪ್ರವಞ್ಚಕಾಶ್ಚ ಸನ್ತಿ ವಿಶೇಷತಶ್ಛಿನ್ನತ್ವಚಾಂ ಮಧ್ಯೇ ಕೇಚಿತ್ ತಾದೃಶಾ ಲೋಕಾಃ ಸನ್ತಿ|
11 ೧೧ ಅವರು ಅತಿಲಾಭವನ್ನು ಪಡೆದುಕೊಳ್ಳುವುದಕ್ಕಾಗಿ ಮಾಡಬಾರದ ಉಪದೇಶವನ್ನು ಮಾಡಿ ಕುಟುಂಬ ಕುಟುಂಬಗಳನ್ನೇ ಹಾಳುಮಾಡುತ್ತಾರಾದ್ದರಿಂದ ಅವರ ಬಾಯಿ ಮುಚ್ಚಿಸಬೇಕಾಗಿದೆ.
ತೇಷಾಞ್ಚ ವಾಗ್ರೋಧ ಆವಶ್ಯಕೋ ಯತಸ್ತೇ ಕುತ್ಸಿತಲಾಭಸ್ಯಾಶಯಾನುಚಿತಾನಿ ವಾಕ್ಯಾನಿ ಶಿಕ್ಷಯನ್ತೋ ನಿಖಿಲಪರಿವಾರಾಣಾಂ ಸುಮತಿಂ ನಾಶಯನ್ತಿ|
12 ೧೨ “ಕ್ರೇತ್ ದ್ವೀಪದವರು ಯಾವಾಗಲೂ ಸುಳ್ಳುಗಾರರೂ, ದುಷ್ಟಮೃಗಗಳೂ, ಸೋಮಾರಿಗಳಾದ ಹೊಟ್ಟೆಬಾಕರೂ” ಆಗಿದ್ದಾರೆಂದು ಅವರ ಸ್ವಂತ ಪ್ರವಾದಿಗಳಲ್ಲಿಯೇ ಒಬ್ಬ ಪ್ರವಾದಿಯು ಹೇಳಿದ್ದಾನೆ.
ತೇಷಾಂ ಸ್ವದೇಶೀಯ ಏಕೋ ಭವಿಷ್ಯದ್ವಾದೀ ವಚನಮಿದಮುಕ್ತವಾನ್, ಯಥಾ, ಕ್ರೀತೀಯಮಾನವಾಃ ಸರ್ವ್ವೇ ಸದಾ ಕಾಪಟ್ಯವಾದಿನಃ| ಹಿಂಸ್ರಜನ್ತುಸಮಾನಾಸ್ತೇ ಽಲಸಾಶ್ಚೋದರಭಾರತಃ||
13 ೧೩ ಈ ಸಾಕ್ಷಿಯು ನಿಜವೇ ಆಗಿದೆ; ಆದಕಾರಣ ಅವರು ಯೆಹೂದ್ಯರ ಕಟ್ಟುಕಥೆಗಳಿಗೂ, ಸತ್ಯಭ್ರಷ್ಟರಾದ ಮನುಷ್ಯರ ವಿಧಿಗಳಿಗೂ ಲಕ್ಷ್ಯಕೊಡದೆ,
ಸಾಕ್ಷ್ಯಮೇತತ್ ತಥ್ಯಂ, ಅತೋ ಹೇತೋಸ್ತ್ವಂ ತಾನ್ ಗಾಢಂ ಭರ್ತ್ಸಯ ತೇ ಚ ಯಥಾ ವಿಶ್ವಾಸೇ ಸ್ವಸ್ಥಾ ಭವೇಯು
14 ೧೪ ನಂಬಿಕೆಯಲ್ಲಿ ಸ್ವಸ್ಥಚಿತ್ತರಾಗಿರುವಂತೆ ಅವರನ್ನು ಕಠಿಣವಾಗಿ ಖಂಡಿಸಿ ತಿಳಿಸು.
ರ್ಯಿಹೂದೀಯೋಪಾಖ್ಯಾನೇಷು ಸತ್ಯಮತಭ್ರಷ್ಟಾನಾಂ ಮಾನವಾನಾಮ್ ಆಜ್ಞಾಸು ಚ ಮನಾಂಸಿ ನ ನಿವೇಶಯೇಯುಸ್ತಥಾದಿಶ|
15 ೧೫ ಶುದ್ಧರಿಗೆ ಎಲ್ಲವೂ ಶುದ್ಧವೇ; ಆದರೆ ಅಶುದ್ಧರಿಗೂ, ನಂಬಿಕೆಯಿಲ್ಲದವರಿಗೂ ಯಾವುದೂ ಶುದ್ಧವಲ್ಲ; ಅವರ ಬುದ್ಧಿಯೂ ಮನಸ್ಸಾಕ್ಷಿಯೂ ಎರಡೂ ಅಶುದ್ಧವಾಗಿವೆ.
ಶುಚೀನಾಂ ಕೃತೇ ಸರ್ವ್ವಾಣ್ಯೇವ ಶುಚೀನಿ ಭವನ್ತಿ ಕಿನ್ತು ಕಲಙ್ಕಿತಾನಾಮ್ ಅವಿಶ್ವಾಸಿನಾಞ್ಚ ಕೃತೇ ಶುಚಿ ಕಿಮಪಿ ನ ಭವತಿ ಯತಸ್ತೇಷಾಂ ಬುದ್ಧಯಃ ಸಂವೇದಾಶ್ಚ ಕಲಙ್ಕಿತಾಃ ಸನ್ತಿ|
16 ೧೬ ಅವರು ತಾವು ದೇವರನ್ನು ಅರಿತವರೆಂದು ಹೇಳಿಕೊಳ್ಳುತ್ತಾರೆ; ಆದರೆ ಅವರ ನಡತೆ ತದ್ವಿರುದ್ಧವಾಗಿರುತ್ತದೆ. ಅವರು ಅಸಹ್ಯ ಕೃತ್ಯಗಳಲ್ಲಿ ಭಾಗವಹಿಸುವವರೂ, ದೇವರಿಗೆ ಅವಿಧೇಯರೂ ಆಗಿರುವುದರಿಂದ ದೇವರನ್ನು ತಮ್ಮ ಕೃತ್ಯಗಳಿಂದಲೇ ಅಲ್ಲಗಳೆಯುತ್ತಾರೆ ಹಾಗು ಸತ್ಕಾರ್ಯವನ್ನು ಮಾಡಲು ಅಯೋಗ್ಯರಾಗಿದ್ದಾರೆಂದು ಸಾಬಿತುಪಡಿಸುತ್ತಾರೆ.
ಈಶ್ವರಸ್ಯ ಜ್ಞಾನಂ ತೇ ಪ್ರತಿಜಾನನ್ತಿ ಕಿನ್ತು ಕರ್ಮ್ಮಭಿಸ್ತದ್ ಅನಙ್ಗೀಕುರ್ವ್ವತೇ ಯತಸ್ತೇ ಗರ್ಹಿತಾ ಅನಾಜ್ಞಾಗ್ರಾಹಿಣಃ ಸರ್ವ್ವಸತ್ಕರ್ಮ್ಮಣಶ್ಚಾಯೋಗ್ಯಾಃ ಸನ್ತಿ|