< ಪರಮಗೀತೆ 8 >
1 ೧ ನೀನು ನನ್ನ ತಾಯಿಯ ಹಾಲನ್ನು ಕುಡಿದ ನನ್ನ ಅಣ್ಣನ ಹಾಗಿದ್ದರೆ ಎಷ್ಟೋ ಚೆನ್ನಾಗಿತ್ತು! ನಾನು ನಿನ್ನನ್ನು ಹೊರಗೆ ಕಂಡೊಡನೆ ಮುದ್ದಿಟ್ಟರೂ ಯಾರೂ ಹೀನೈಸುತ್ತಿರಲಿಲ್ಲ.
ನೀನು ನನ್ನ ತಾಯಿಯ ಹಾಲು ಕುಡಿದ ನನ್ನ ಅಣ್ಣನಾಗಿದ್ದರೆ, ಎಷ್ಟೋ ಚೆನ್ನಾಗಿರುತ್ತಿತ್ತು! ನಾನು ನಿನ್ನನ್ನು ಕಂಡು ಹೊರಗೆಯೇ ನಿನಗೆ ಮುದ್ದಿಡುತ್ತಿದ್ದೆ. ಆಗ ಯಾರೂ ನನ್ನನ್ನು ನಿಂದಿಸುತ್ತಿರಲಿಲ್ಲ.
2 ೨ ನಿನ್ನನ್ನು ನನ್ನ ತಾಯಿಯ ಮನೆಗೆ ಕರೆದುಕೊಂಡು ಹೋಗುತ್ತಿದ್ದೆನು, ಅಲ್ಲಿ ಆಕೆಯು ನಿನಗೆ ಉಪದೇಶ ಮಾಡಬಹುದಾಗಿತ್ತು; ದ್ರಾಕ್ಷಿಯ ಮಿಶ್ರಪಾನವನ್ನು ಕೊಡುತ್ತಿದ್ದೆ, ನನ್ನ ದಾಳಿಂಬೆಯ ಸವಿರಸವನ್ನು ನಿನಗೆ ಕುಡಿಸುತ್ತಿದ್ದೆನು.
ನಿನ್ನನ್ನು ನನ್ನ ತಾಯಿಯ ಮನೆಗೆ ಕರೆದುಕೊಂಡು ಹೋಗುತ್ತಿದ್ದೆನು. ಅಲ್ಲಿ ನೀನು ನನಗೆ ಉಪದೇಶ ಮಾಡಬಹುದಾಗಿತ್ತು. ನಾನು ದ್ರಾಕ್ಷಿ ಮಿಶ್ರಪಾನಕವನ್ನು ಕೊಡುತ್ತಿದ್ದೆನು. ದಾಳಿಂಬೆ ರಸವನ್ನು ನಿನಗೆ ಕುಡಿಸುತ್ತಿದ್ದೆನು.
3 ೩ ಆಗ ನಿನ್ನ ಎಡಗೈ ನನಗೆ ತಲೆದಿಂಬಾಗಿ ಬಲಗೈ ನನ್ನನ್ನು ತಬ್ಬುತ್ತಿತ್ತು.
ನಿನ್ನ ಎಡಗೈ ನನ್ನ ತಲೆದಿಂಬಾಗಿರಲಿ. ನಿನ್ನ ಬಲಗೈ ನನ್ನನ್ನು ಅಪ್ಪಿಕೊಳ್ಳಲಿ.
4 ೪ ಯೆರೂಸಲೇಮಿನ ಮಹಿಳೆಯರೇ, ಆತನು ತಾನಾಗಿ ಎಚ್ಚರಗೊಳ್ಳುವವರೆಗೆ ಯಾರೂ ನನ್ನ ಪ್ರಿಯನನ್ನು ಎಚ್ಚರಿಸದಿರಿ, ಆತನ ವಿಶ್ರಾಂತಿಗೆ ಯಾರೂ ಭಂಗ ಮಾಡದಿರಿ ಎಂದು ವನದ ಜಿಂಕೆ ಹರಿಣಗಳ ಮೇಲೆ ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ.
ಯೆರೂಸಲೇಮಿನ ಪುತ್ರಿಯರೇ, ಮೆಚ್ಚುವ ಕಾಲಕ್ಕೆ ಮುಂಚೆ ನೀವು ಪ್ರೀತಿಯನ್ನು ಎಬ್ಬಿಸಬೇಡಿರಿ, ಎಚ್ಚರಿಸಲೂ ಬೇಡಿರಿ ಎಂದು ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ.
5 ೫ ನಲ್ಲನನ್ನು ಒರಗಿಕೊಂಡು ಅಡವಿಯಿಂದ ಬರುವ ಇವಳು ಯಾರು? ಎಬ್ಬಿಸಿದೆನಲ್ಲಾ ನಿನ್ನನ್ನು ಆ ಸೇಬಿನ ಮರದಡಿಯಲ್ಲಿ ಇಗೋ, ಅಲ್ಲಿ ನಿನ್ನ ತಾಯಿ ನಿನ್ನನ್ನು ಗರ್ಭಧರಿಸಿದ್ದು, ಅಲ್ಲೇ ನಿನ್ನನ್ನು ಪ್ರಸವವೇದನೆಯಿಂದ ಹೆತ್ತಳು.
ತನ್ನ ಪ್ರಿಯನನ್ನು ಒರಗಿಕೊಂಡು ಅಡವಿಯಿಂದ ಬರುವ ಇವಳು ಯಾರು? ಪ್ರಿಯತಮೆ ಸೇಬುಗಿಡದ ಕೆಳಗೆ ನಿನ್ನನ್ನು ಪ್ರೇರಿಸಿದೆನು. ಅದು ನಿನ್ನ ತಾಯಿ ನಿನ್ನನ್ನು ಗರ್ಭಧರಿಸಿದ ಸ್ಥಳ. ಅಲ್ಲಿ ನಿನ್ನ ತಾಯಿ ಪ್ರಸವವೇದನೆಯಿಂದ ನಿನ್ನನ್ನು ಹಡೆದಳು.
6 ೬ ನಿನ್ನ ಕೈಯಲ್ಲಿನ ಮುದ್ರೆಯ ಹಾಗೆ ನಿನ್ನ ಹೃದಯದ ಮೇಲೆ ನನ್ನನ್ನು ಧರಿಸಿಕೋ. ಪ್ರೀತಿ ಮೃತ್ಯುವಿನಷ್ಟು ಶಕ್ತಿಶಾಲಿ, ಪ್ರೀತಿದ್ರೋಹದಿಂದ ಹುಟ್ಟುವ ಮತ್ಸರವು ಪಾತಾಳದಷ್ಟು ಕ್ರೂರ, ಅದರ ಜ್ವಾಲೆಯು ಬೆಂಕಿಯ ಉರಿ, ಧಗಧಗಿಸುವ ಕೋಪಾಗ್ನಿ. (Sheol )
ನನ್ನನ್ನು ನಿನ್ನ ಹೃದಯದ ಮೇಲೆ ಒಂದು ಮುದ್ರೆಯಾಗಿ ಧರಿಸಿಕೋ. ನಾನು ನಿನ್ನ ಕೈಮೇಲೆ ಒಂದು ಮುದ್ರೆಯಾಗಿರುವೆ. ಪ್ರೀತಿಯು ಮರಣದಷ್ಟು ಬಲವಾಗಿದೆ. ಮತ್ಸರವು ಸಮಾಧಿಯಷ್ಟು ಕ್ರೂರ. ಪ್ರೀತಿಯು ಉರಿಯುವ ಬೆಂಕಿ ಪ್ರಜ್ವಲಿಸುವ ಜ್ವಾಲೆಯ ಹಾಗಿರುವುದು. (Sheol )
7 ೭ ನಂದಿಸಲಾರವು ಪ್ರೀತಿಯನ್ನು ಜಲರಾಶಿಗಳು, ಮುಣುಗಿಸಲಾರವು ಅದನ್ನು ಪ್ರವಾಹಗಳು. ಪ್ರೀತಿಯನ್ನು ಗಳಿಸಲು ಮನೆಮಾರುಗಳನ್ನು ಮಾರಿದರೂ ಸಿಗುವುದು ಅವನಿಗೆ ತಿರಸ್ಕಾರ.
ಜಲರಾಶಿಗಳು ಪ್ರೀತಿಯನ್ನು ನಂದಿಸಲಾರವು. ಪ್ರವಾಹಗಳು ಸಹ ಪ್ರೀತಿಯನ್ನು ಮುಳುಗಿಸಲಾರವು. ಒಬ್ಬನು ತನ್ನ ಆಸ್ತಿಯನ್ನೆಲ್ಲಾ ಪ್ರೀತಿಗೋಸ್ಕರ ಕೊಟ್ಟರೂ, ಆ ಪ್ರೀತಿಗೆ ಬದಲಾಗಿ ಅಂಥವನಿಗೆ ಸಂಪೂರ್ಣ ನಿಂದೆಯೇ ಸಿಗುವುದು.
8 ೮ ಸ್ತನಬಾರದ ತಂಗಿಯು ನಮಗುಂಟು; ಅವಳನ್ನು ವರಿಸಲು ಯಾರಾದರು ಬಂದರೆ ಅವಳ ಹಿತಕ್ಕೆ ಏನು ಮಾಡೋಣ?
ಪ್ರಾಯಕ್ಕೆ ಬಾರದ ತಂಗಿ ಒಬ್ಬಳು ನಮಗಿದ್ದಾಳೆ. ಅವಳನ್ನು ಮದುವೆಗಾಗಿ ಮಾತಾಡಲು ಯಾರಾದರೂ ಬಂದರೆ, ನಾವೇನು ಮಾಡೋಣ?
9 ೯ ಅವಳು ಕೋಟೆಯಾದರೆ ಅದರ ಮೇಲೆ ಬೆಳ್ಳಿಯ ಬುರುಜನ್ನು ಕಟ್ಟುವೆವು, ಬಾಗಿಲಾದರೆ ದೇವದಾರು ಹಲಗೆಗಳಿಂದ ಭದ್ರಪಡಿಸುವೆವು.
ಅವಳು ಗೋಡೆಯಾದರೆ, ನಾವು ಅವಳ ಮೇಲೆ ಬೆಳ್ಳಿಯ ಗೋಪುರವನ್ನು ಕಟ್ಟುವೆವು. ಅವಳು ಬಾಗಿಲಾದರೆ, ದೇವದಾರು ಹಲಿಗೆಗಳಿಂದ ಅವಳನ್ನು ಭದ್ರಪಡಿಸುವೆವು.
10 ೧೦ ನಾನು ಕೋಟೆ; ನನ್ನ ಸ್ತನಗಳು ಅದರ ಬುರುಜುಗಳು, ಹೀಗಿದ್ದು ಅವನ ದೃಷ್ಟಿಯಲ್ಲಿ ನನಗೆ ದಯೆ ದೊರಕಿತ್ತು.
ನಾನು ಗೋಡೆಯಂಥವಳೇ, ನನ್ನ ಯೌವನವು ಬುರುಜುಗಳು. ಹೀಗೆ ನಾನು ಅವನ ದೃಷ್ಟಿಯಲ್ಲಿ ಸಮಾಧಾನ ಹೊಂದುವೆನು.
11 ೧೧ ಸೊಲೊಮೋನನು ಬಾಲ್ಹಾಮೋನಿನಲ್ಲಿ ಇದ್ದ ತನ್ನ ದ್ರಾಕ್ಷಿ ತೋಟವನ್ನು ಗುತ್ತಿಗೆಗೆ ಕೊಟ್ಟನು, ಪ್ರತಿಯೊಬ್ಬ ಗುತ್ತಿಗೆದಾರ ತೆರಬೇಕಾಗಿತ್ತು ಸಾವಿರ ಬೆಳ್ಳಿ ನಾಣ್ಯಗಳನ್ನು.
ಸೊಲೊಮೋನನಿಗೆ ಬಾಳ್ ಹಾಮೋನಿನಲ್ಲಿ ಒಂದು ದ್ರಾಕ್ಷಿತೋಟ ಇತ್ತು. ಅವನು ಆ ದ್ರಾಕ್ಷಿತೋಟವನ್ನು ರೈತರಿಗೆ ಗುತ್ತಿಗೆಗೆ ಕೊಟ್ಟನು. ಪ್ರತಿಯೊಬ್ಬ ಗುತ್ತಿಗೆಗಾರನು ಅದರ ಫಲದಿಂದ ಸಾವಿರ ಬೆಳ್ಳಿಯ ನಾಣ್ಯಗಳನ್ನು ತರಬೇಕಾಗಿತ್ತು.
12 ೧೨ ಸೊಲೊಮೋನನೇ, ಆ ಸಾವಿರ ಬೆಳ್ಳಿ ನಾಣ್ಯ ನಿನಗಿರಲಿ, ಅದರ ಮೇಲ್ವಿಚಾರಕರಿಗೆ ಇನ್ನೂರು ನಾಣ್ಯ ಸೇರಲಿ; ನನ್ನದೇ ಆಗಿರುವ ನನ್ನ ತೋಟವು ನನ್ನ ವಶದಲ್ಲಿಯೇ ಇದೆ.
ಸೊಲೊಮೋನನೇ, ಆ ಸಾವಿರ ಬೆಳ್ಳಿ ನಾಣ್ಯಗಳು ನಿನಗೇ ಇರಲಿ. ತೋಟದ ಫಲವನ್ನು ಕಾಪಾಡುವವರಿಗೆ ಇನ್ನೂರು ಬೆಳ್ಳಿನಾಣ್ಯಗಳು ಸೇರಲಿ. ಆದರೆ ನನ್ನ ದ್ರಾಕ್ಷಿತೋಟ ನನಗೇ ಇರಲಿ.
13 ೧೩ ಉದ್ಯಾನದಲ್ಲಿ ವಾಸಿಸುವವಳೇ ಗೆಳೆಯರು ನಿನ್ನ ಧ್ವನಿ ಕೇಳಬೇಕೆಂದಿದ್ದಾರೆ, ನನಗೂ ಆ ಧ್ವನಿ ಕೇಳಿಸಲಿ.
ತೋಟಗಳಲ್ಲಿ ವಾಸವಾಗಿರುವಳೇ, ಸ್ನೇಹಿತರು ನನ್ನ ಸಂಗಡ ಇದ್ದಾರೆ. ನಾನು ನಿನ್ನ ಧ್ವನಿಯನ್ನು ಕೇಳ ಮಾಡು!
14 ೧೪ ಸುಗಂಧಸಸ್ಯದ ಪರ್ವತಗಳಲ್ಲಿ ಜಿಂಕೆಯಂತೆಯೂ, ಪ್ರಾಯದ ಹರಿಣದಂತೆಯೂ ತ್ವರೆಮಾಡಿ ಬಾ ನನ್ನಿನಿಯನೇ.
ನನ್ನ ಪ್ರಿಯನೇ, ಸುಗಂಧ ಸಸ್ಯ ಪರ್ವತಗಳ ಮೇಲಿರುವ ಜಿಂಕೆಯಂತೆಯೂ, ಪ್ರಾಯದ ಹುಲ್ಲೆಯಂತೆಯೂ ನೀನು ಬೇಗ ಬಾ.