< ರೂತಳು 1 >
1 ೧ ನ್ಯಾಯಸ್ಥಾಪಕರು ಆಳುತ್ತಿದ್ದ ಕಾಲದಲ್ಲಿ ಒಮ್ಮೆ ದೇಶದಲ್ಲಿ ಬರ ಬಂದಿದ್ದರಿಂದ ಯೆಹೂದ ಪ್ರಾಂತ್ಯದ ಬೇತ್ಲೆಹೇಮಿನವನೊಬ್ಬನು ತನ್ನ ಹೆಂಡತಿ, ಇಬ್ಬರು ಪುತ್ರರ ಸಹಿತವಾಗಿ ಮೋವಾಬ್ ದೇಶದಲ್ಲಿ ವಾಸಮಾಡುವುದಕ್ಕಾಗಿ ಹೊರಟುಹೋದನು.
၁ရှေးအခါကဣသရေလနိုင်ငံတွင် ဘုရင် မရှိသေးမီအချိန်၌ငတ်မွတ်ခေါင်းပါးခြင်း ဘေးဆိုက်ရောက်သဖြင့် ယုဒပြည်ဗက်လင်မြို့ သားဧလိမလက်သည် မိမိ၏ဇနီးနှင့်သား နှစ်ယောက်တို့ကိုခေါ်၍မောဘပြည်တွင်ခေတ္တ သွားရောက်နေထိုင်လေသည်။ သားနှစ်ယောက် တို့၏နာမည်များမှာမဟာလုန်နှင့်ခိလျှုန် ဖြစ်၏။ သူတို့သည်ဧဖရတ်သားချင်းစု ဝင်များတည်း။ မောဘပြည်တွင်သူတို့နေ ထိုင်လျက်ရှိစဉ်၊-
2 ೨ ಆ ಮನುಷ್ಯನ ಹೆಸರು ಎಲೀಮೆಲೆಕ, ಅವನ ಹೆಂಡತಿ ನವೊಮಿ. ಅವನ ಇಬ್ಬರು ಮಕ್ಕಳ ಹೆಸರು ಮಹ್ಲೋನ್ ಮತ್ತು ಕಿಲ್ಯೋನ್. ಯೆಹೂದ ದೇಶಕ್ಕೆ ಸೇರಿದ ಎಫ್ರಾತದಲ್ಲಿರುವ ಬೇತ್ಲೆಹೇಮಿನವರಾದ ಇವರು ಮೋವಾಬ್ ದೇಶದಲ್ಲಿ ಬಂದು ವಾಸವಾಗಿದ್ದಾಗ
၂
3 ೩ ನವೊಮಿಯ ಗಂಡನಾದ ಎಲೀಮೆಲೆಕನು ಮರಣ ಹೊಂದಿದನು. ಆಕೆಯು ಇಬ್ಬರು ಮಕ್ಕಳೊಡನೆ ಅಲ್ಲಿಯೇ ಉಳಿದಳು.
၃ဧလိမလက်ကွယ်လွန်သွားသဖြင့် နောမိ သည်သားနှစ်ယောက်နှင့်ကျန်ရစ်လေသည်။-
4 ೪ ಈ ಮಕ್ಕಳು ಒರ್ಫಾ, ರೂತ್ ಎಂಬ ಹೆಸರಿನ ಮೋವಾಬ್ ಸ್ತ್ರೀಯರನ್ನು ಮದುವೆಮಾಡಿಕೊಂಡು ಸುಮಾರು ಹತ್ತು ವರ್ಷಗಳ ಕಾಲ ಅಲ್ಲಿ ವಾಸವಾಗಿದ್ದರು.
၄ထိုသားတို့သည်မောဘအမျိုးသမီးများ ဖြစ်ကြသောသြရပ၊ ရုသတို့နှင့်အိမ်ထောင် ကျကြ၏။ သူတို့သည်ထိုပြည်တွင်ဆယ်နှစ် ခန့်နေထိုင်ကြပြီးနောက်၊-
5 ೫ ಅವರು ಅಲ್ಲಿದ್ದಾಗ ನವೊಮಿಯ ಮಕ್ಕಳಾದ ಮಹ್ಲೋನ್ ಮತ್ತು ಕಿಲ್ಯೋನ್ ಇಬ್ಬರೂ ತೀರಿಹೋದರು. ಹೀಗೆ ನವೊಮಿ ಗಂಡನನ್ನೂ, ಇಬ್ಬರು ಮಕ್ಕಳನ್ನೂ ಕಳೆದುಕೊಂಡು ಸೊಸೆಯರೊಂದಿಗೆ ಅಲ್ಲೇ ಉಳಿದಳು.
၅မဟာလုန်နှင့်ခိလျှုန်တို့သည်လည်းကွယ်လွန် သွားကြပြန်၏။ သို့ဖြစ်၍နောမိသည်လင် သားမဲ့အထီးကျန်ဖြစ်လေတော့၏။
6 ೬ ಯೆಹೋವನು ತನ್ನ ಜನರನ್ನು ಸಂದರ್ಶಿಸಿ ಅವರಿಗೆ ಆಹಾರವನ್ನು ಅನುಗ್ರಹಿಸಿದ್ದಾನೆಂಬ ವರ್ತಮಾನವನ್ನು ಕೇಳಿದ ನವೊಮಿಯು ತನ್ನ ಸೊಸೆಯರೊಡನೆ ಮೋವಾಬ್ ದೇಶದಿಂದ ಯೆಹೂದ ದೇಶಕ್ಕೆ ಹೋಗಬೇಕೆಂದು ನಿರ್ಧರಿಸಿದಳು.
၆ကာလအတန်ကြာသောအခါ ထာဝရဘုရား သည်ကောက်ပဲသီးနှံအထွက်များစေခြင်းအား ဖြင့် မိမိ၏လူစုအားကောင်းချီးပေးတော်မူ ကြောင်းသတင်းကိုနောမိကြားရလေသည်။ သို့ ဖြစ်၍သူသည်မိမိ၏ချွေးမများနှင့်အတူ မောဘပြည်မှထွက်ခွာရန်အသင့်ပြင်လေ၏။-
7 ೭ ಆಕೆಯು ಇಬ್ಬರು ಸೊಸೆಯರೊಡನೆ ತಾನಿದ್ದ ಸ್ಥಳದಿಂದ ಯೆಹೂದ ದೇಶಕ್ಕೆ ಹೋಗುವ ದಾರಿಯಲ್ಲಿ ಹೋಗುತ್ತಿರುವಾಗ
၇ယုဒပြည်သို့စတင်ထွက်ခွာလာကြစဉ်၊-
8 ೮ ಅವರಿಗೆ, “ನೀವು ತಿರುಗಿ ನಿಮ್ಮ ನಿಮ್ಮ ತವರುಮನೆಗಳಿಗೆ ಹೋಗಿರಿ, ನೀವು ನನ್ನನ್ನೂ, ಮರಣಹೊಂದಿದ ನನ್ನ ಮಕ್ಕಳನ್ನು ಪ್ರೀತಿಸಿದಂತೆ ಯೆಹೋವನು ನಿಮ್ಮನ್ನು ಪ್ರೀತಿಸಿ ನಿಮಗೆ ಕೃಪೆತೋರಿಸಲಿ.
၈နောမိကချွေးမများအား``သင်တို့သည် ကိုယ့်မိခင်များအိမ်သို့ပြန်ကြလော့။ သင်တို့သည်ငါ၏အပေါ်၌သော်လည်းကောင်း၊ ကွယ်လွန်သွားသူတို့၏အပေါ်၌လည်းကောင်း ကျေးဇူးပြုခဲ့ကြသည်နည်းတူ ထာဝရဘုရားသည် သင်တို့အားကျေးဇူးပြုတော်မူပါစေသော။-
9 ೯ ನೀವಿಬ್ಬರೂ ಮದುವೆಯಾಗಿ ಗಂಡನ ಮನೆಯಲ್ಲಿ ಸುಖವಾಗಿರುವಂತೆ ಯೆಹೋವನು ಅನುಗ್ರಹಿಸಲಿ” ಎಂದು ಹೇಳಿ ಅವರಿಗೆ ಮುದ್ದಿಟ್ಟಳು.
၉ထာဝရဘုရားသည်သင်တို့နှစ်ယောက် စလုံးအား နောက်အိမ်ထောင်နှင့်ပျော်ရွှင်စွာ နေထိုင်ခွင့်ကိုပေးသနားတော်မူပါစေ သော'' ဟုဆို၏။ ဤသို့ဆိုပြီးလျှင်နောမိသည် သူတို့အား နမ်းရှုတ်နှုတ်ဆက်လေ၏။ သို့ရာတွင်သူတို့ သည်ငိုကြွေးလျက်၊-
10 ೧೦ ಆಗ ಅವರು ಬಹಳ ದುಃಖದಿಂದ ಗಟ್ಟಿಯಾಗಿ ಅತ್ತು ನಾವೂ ನಿನ್ನ ಜೊತೆಯಲ್ಲೇ ನಿನ್ನ ಸ್ವಜನರ ಬಳಿಗೆ ಬರುತ್ತೇವೆ ಅನ್ನಲು,
၁၀``ကျွန်မတို့သည်အိမ်သို့မပြန်လိုပါ။ မိခင် နှင့်အတူ မိခင်၏အမျိုးသားများထံသို့ လိုက်ပါမည်'' ဟုဆိုကြ၏။
11 ೧೧ ಆಕೆಯು, “ನನ್ನ ಮಕ್ಕಳೇ, ನೀವು ನನ್ನೊಡನೆ ಬರುವುದೇಕೆ? ಹಿಂದಿರುಗಿ ಹೋಗಿರಿ. ನಿಮಗೆ ಗಂಡಂದಿರನ್ನು ಕೊಡುವುದಕ್ಕೆ ನನ್ನ ಗರ್ಭದಲ್ಲಿ ಬೇರೆ ಮಕ್ಕಳಿಲ್ಲವಲ್ಲಾ.
၁၁နောမိကလည်း``ငါ့သမီးတို့၊ ပြန်သွားကြ လော့။ အဘယ်ကြောင့်ငါနှင့်လိုက်လိုကြပါ သနည်း။ သင်တို့နှင့်လက်ထပ်ထိမ်းမြားရန် အတွက် ငါသည်နောက်ထပ်သားများကို မွေးဖွားပေးနိုင်ပါသလော။-
12 ೧೨ ನಾನು ಮತ್ತೊಬ್ಬನನ್ನು ಪುನಃ ಮದುವೆಮಾಡಿಕೊಳ್ಳುವ ಪ್ರಾಯವೂ ನನಗೆ ದಾಟಿಹೋಗಿದೆ. ಆದುದರಿಂದ ನನ್ನ ಮಕ್ಕಳೇ, ನೀವು ಹಿಂದಿರುಗಿ ಹೋಗಿರಿ. ಒಂದು ವೇಳೆ ಆ ನಿರೀಕ್ಷೆಯಿಂದ ಈ ಹೊತ್ತೇ ನಾನು ಪುನಃ ಮದುವೆಯಾಗಿ ಮಕ್ಕಳನ್ನು ಹೆತ್ತರೂ,
၁၂အိမ်သို့ပြန်ကြလော့။ ငါသည်နောက်ထပ်အိမ် ထောင်ပြုရန်အရွယ်လွန်လေပြီ။ အကယ်၍ ငါ့မှာမျှော်လင့်စရာရှိသေးသဖြင့် ယခု ပင်အိမ်ထောင်ကျ၍သားများကိုရရှိသည် ဟုဆိုစေကာမူ၊-
13 ೧೩ ಅವರು ದೊಡ್ಡವರಾಗುವ ತನಕ ನೀವು ಕಾದಿರುವಿರೋ? ಅಲ್ಲಿಯ ವರೆಗೂ ಗಂಡಂದಿರಿಲ್ಲದೆ ಇರುವಿರೋ? ನನ್ನ ಮಕ್ಕಳೇ, ಹಾಗೆ ಮಾಡಬೇಡಿರಿ; ಯೆಹೋವನ ಹಸ್ತವು ನನ್ನಿಂದ ದೂರವಾಗಿರುವುದರಿಂದ ನಾನು ನಿಮಗಿಂತ ಹೆಚ್ಚಾಗಿ ದುಃಖಪಡುತ್ತೇನೆ” ಅಂದಳು.
၁၃သင်တို့သည်ထိုသားများကြီးပြင်းလာသည် တိုင်အောင် စောင့်ဆိုင်းနေကြပါမည်လော။ ယင်း သို့စောင့်ဆိုင်းကာနောက်အိမ်ထောင်မပြုဘဲနေ ကြပါမည်လော။ ငါ့သမီးတို့ဤသို့မဖြစ်နိုင် ကြောင်းကိုသင်တို့သိပါ၏။ ထာဝရဘုရား သည်ငါ့ကိုဒဏ်ခတ်တော်မူပြီဖြစ်၍ ငါသည် သင်တို့အတွက်အလွန်ဝမ်းနည်းပါ၏'' ဟု ဆို၏။
14 ೧೪ ಆಗ ಅವರು ಬಹಳವಾಗಿ ದುಃಖಿಸಿ ಗಟ್ಟಿಯಾಗಿ ಅತ್ತರು. ಒರ್ಫಳು ಅತ್ತೆಯನ್ನು ಮುದ್ದಿಟ್ಟು ಹೊರಟು ತನ್ನ ತವರಿಗೆ ಹೋದಳು; ರೂತಳಾದರೋ ಅತ್ತೆಯನ್ನು ತೊರೆದುಹೋಗದೆ ಅವಳೊಂದಿಗೆ ಇದ್ದಳು.
၁၄သူတို့သည်လည်းတစ်ဖန်ငိုကြွေးကြ၏။ ထို နောက်သြရပသည် မိမိ၏ယောက္ခမအား နမ်းရှုတ်နှုတ်ဆက်ပြီးလျှင်အိမ်သို့ပြန်လေ၏။ ရုသမူကားမပြန်ဘဲနေ၏။-
15 ೧೫ ನವೊಮಿಯು ರೂತಳಿಗೆ, ಇಗೋ, ನಿನ್ನ ಓರಗಿತ್ತಿಯು ತಿರುಗಿ ತನ್ನ ಜನರ ಬಳಿಗೂ, ತನ್ನ ಕುಲ ದೇವರುಗಳ ಬಳಿಗೂ ಹೋಗಿದ್ದಾಳೆ. ನೀನೂ ಆಕೆಯಂತೆ ನಿನ್ನ ಜನರ ಬಳಿಗೆ ಹೋಗು ಅಂದಾಗ,
၁၅သို့ဖြစ်၍နောမိက``ရုသ၊ သင့်အစ်မသည် မိမိအမျိုးသားများ၊ မိမိ၏ဘုရားထံ သို့ပြန်သွားလေပြီ။ သင်သည်လည်းသူ နှင့်အတူပြန်သွားပါလော့'' ဟုပြော၏။
16 ೧೬ ಆಕೆಯು, “ನಿನ್ನನ್ನು ಬಿಟ್ಟು ಹಿಂದಿರುಗಿ ಹೋಗಬೇಕೆಂದು ನನ್ನನ್ನು ಒತ್ತಾಯಪಡಿಸಬೇಡ. ನೀನು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುವೆನು; ನೀನು ವಾಸಿಸುವಲ್ಲೇ ನಾನೂ ವಾಸಿಸುವೆನು; ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು.
၁၆သို့ရာတွင်ရုသက``မိခင်ကိုစွန့်ခွာရန် ကျွန်မ အားမတိုက်တွန်းပါနှင့်။ မိခင်နှင့်လိုက်ခွင့်ပြု ပါ။ ကျွန်မသည်မိခင်သွားရာသို့သွားပါ မည်။ မိခင်နေထိုင်ရာတွင်နေထိုင်ပါမည်။ မိခင်၏အမျိုးသားများသည်ကျွန်မ၏ အမျိုးသားများ၊ မိခင်၏ဘုရားသည် ကျွန်မ၏ဘုရားဖြစ်ပါမည်။-
17 ೧೭ ನೀನು ಸಾಯುವಲ್ಲೇ ನಾನೂ ಸಾಯುವೆನು; ಅಲ್ಲೇ ನನಗೆ ಸಮಾಧಿಯಾಗಬೇಕು. ಮರಣದಿಂದಲ್ಲದೆ ನಾನು ನಿನ್ನನ್ನು ಅಗಲಿದರೆ ಯೆಹೋವನು ನನ್ನನ್ನು ಹೆಚ್ಚಾಗಿ ಶಿಕ್ಷಿಸಲಿ” ಎಂದಳು.
၁၇မိခင်သေရာအရပ်တွင်ကျွန်မသေပါ မည်။ ထိုအရပ်တွင်သင်္ဂြိုဟ်ခြင်းကိုခံပါမည်။ အကယ်၍ကျွန်မသည် သေခြင်းမှတစ်ပါး အခြားအကြောင်းတစ်ခုခုကြောင့် မိခင်နှင့် ခွဲခွာခဲ့လျှင်ဘုရားသခင်သည် ကျွန်မအား အဆိုးရွားဆုံးသောအပြစ်ဒဏ်ကိုပေး တော်မူပါစေသော'' ဟုပြန်ပြောလေသည်။
18 ೧೮ ಆಕೆಯು ತನ್ನ ಜೊತೆಯಲ್ಲಿ ಬರುವುದಕ್ಕೆ ನಿರ್ಧರಿಸಿದ್ದಾಳೆಂದು ನವೊಮಿಯು ತಿಳಿದು ಸುಮ್ಮನಾದಳು.
၁၈မိမိနှင့်အတူလိုက်ရန် ရုသစိတ်ပိုင်းဖြတ် ထားကြောင်းနောမိသိသောအခါ ထပ်မံ မတိုက်တွန်းဘဲနေ၏။
19 ೧೯ ಹಾಗೆಯೇ ಪ್ರಯಾಣಮಾಡಿಕೊಂಡು ಅವರಿಬ್ಬರೂ ಬೇತ್ಲೆಹೇಮಿಗೆ ಬಂದು ಊರೊಳಕ್ಕೆ ಹೋದಾಗ ಅಲ್ಲಿಯ ಜನರಲ್ಲಿ ಕುತೂಹಲ ಮೂಡಿತು. ಸ್ತ್ರೀಯರು, “ಈಕೆಯು ನವೊಮಿಯಲ್ಲವೇ?” ಎಂದು ವಿಚಾರಿಸಲು
၁၉သူတို့သည်ဗက်လင်မြို့သို့ရောက်သည်တိုင် အောင် ဆက်လက်သွားကြ၏။ သူတို့ရောက်ရှိ ကြသောအခါ တစ်မြို့လုံးလှုပ်လှုပ်ရှားရှား ဖြစ်လျက်အမျိုးသမီးများက``ဤသူ သည်အကယ်ပင်နောမိပေလော'' ဟုမေး မြန်းကြ၏။
20 ೨೦ ಆಕೆಯು ಅವರಿಗೆ, “ನನ್ನನ್ನು ನವೊಮಿಯೆಂದು ಕರೆಯಬೇಡಿರಿ; ನನ್ನನ್ನು ‘ಮಾರಾ’ (ಕಹಿ) ಎಂದು ಕರೆಯಿರಿ. ಏಕೆಂದರೆ, ಸರ್ವಶಕ್ತನಾದ ದೇವರು ಬಹಳ ತೀಕ್ಷ್ಣವಾಗಿ ನನ್ನ ಜೀವಿತವನ್ನು ಮಾರ್ಪಡಿಸಿದ್ದಾನೆ.
၂၀နောမိကလည်း ``ငါ့ကို နောမိ'' ဟုသင်တို့ မခေါ်ကြပါနှင့်။ အနန္တတန်ခိုးရှင်ဘုရားသခင်သည် ငါ့အားခါးသီးစွာပြုတော်မူ ပြီဖြစ်၍ငါ့ကို`မာရ' ဟုခေါ်ကြပါလော့။-
21 ೨೧ ಸಿರಿವಂತಳಾಗಿ ಹೋದೆನು; ಯೆಹೋವನು ನನ್ನನ್ನು ಗತಿಹೀನಳನ್ನಾಗಿ ಹಿಂತಿರುಗುವಂತೆ ಮಾಡಿದನು. ಯೆಹೋವನು ನನಗೆ ವಿರೋಧವಾಗಿದ್ದಾನೆ, ಸರ್ವಶಕ್ತನು ನನ್ನನ್ನು ಬಾಧಿಸಿದ್ದಾನೆ. ಹೀಗಿರುವಾಗ ನೀವು ನನ್ನನ್ನು ನವೊಮಿಯೆಂದು ಕರೆಯುವುದು ಸರಿಯೇ” ಅಂದಳು.
၂၁ဤမြို့မှထွက်ခွာသွားစဉ်အခါက ငါ့မှာ အစုံအလင်ရှိသော်လည်း ယခုထာဝရ ဘုရားသည် ငါ့အားလက်ချည်းသက်သက် ပြန်လည်ပို့ဆောင်တော်မူလေပြီ။ အနန္တ တန်ခိုးရှင်ထာဝရဘုရားသည် အပြစ်ဒဏ် စီရင်တော်မူလျက်ဒုက္ခရောက်စေတော်မူ ပြီဖြစ်၍ ငါ့ကိုအဘယ်ကြောင့် `နောမိ' ဟု ခေါ်ကြပါသနည်း'' ဟုပြန်ပြောလေ၏။
22 ೨೨ ಹೀಗೆ, ನವೊಮಿಯು ಮೋವಾಬ್ಯಳಾದ ತನ್ನ ಸೊಸೆ ರೂತಳೊಡನೆ ಬೇತ್ಲೆಹೇಮಿಗೆ ಬಂದಳು. ಆಗ ಜವೆಗೋದಿಯ ಸುಗ್ಗಿಯು ಪ್ರಾರಂಭವಾಗಿತ್ತು.
၂၂ဤကားနောမိသည် ချွေးမဖြစ်သူမောဘ အမျိုးသမီးရုသနှင့်အတူ မောဘပြည် မှပြန်လည်ရောက်ရှိလာပုံဖြစ်ပေသည်။ သူ တို့နှစ်ယောက်သည်မုယောစပါးရိတ်သိမ်း စအချိန်၌ ဗက်လင်မြို့သို့ရောက်ရှိလာ ကြသတည်း။