< ರೋಮಾಪುರದವರಿಗೆ 4 >

1 ಹಾಗಾದರೆ ವಂಶಾನುಕ್ರಮವಾಗಿ ನಮಗೆ ಮೂಲಪಿತೃವಾಗಿರುವ ಅಬ್ರಹಾಮನು ಈ ವಿಷಯದಲ್ಲಿ ಏನು ಪಡೆದುಕೊಂಡನೆಂದು ಹೇಳಬೇಕು?
অস্মাকং পূৰ্ৱ্ৱপুৰুষ ইব্ৰাহীম্ কাযিকক্ৰিযযা কিং লব্ধৱান্ এতদধি কিং ৱদিষ্যামঃ?
2 ಅಬ್ರಹಾಮನು ಪುಣ್ಯಕ್ರಿಯೆಯಿಂದಲೇ ನೀತಿವಂತನಾದ ಪಕ್ಷದಲ್ಲಿ ಹೊಗಳಿಕೊಳ್ಳುವುದಕ್ಕೆ ಅವನಿಗೆ ಆಸ್ಪದವಿರುವುದು; ಆದರೆ ದೇವರ ಮುಂದೆ ಹೊಗಳಿಕೊಳ್ಳುವುದಕ್ಕೆ ಆಸ್ಪದವಿರುವುದಿಲ್ಲ.
স যদি নিজক্ৰিযাভ্যঃ সপুণ্যো ভৱেৎ তৰ্হি তস্যাত্মশ্লাঘাং কৰ্ত্তুং পন্থা ভৱেদিতি সত্যং, কিন্ত্ৱীশ্ৱৰস্য সমীপে নহি|
3 ಇದರ ವಿಷಯದಲ್ಲಿ ಧರ್ಮಶಾಸ್ತ್ರವು ಹೇಳುವುದನ್ನು ಆಲೋಚಿಸಿರಿ, “ಅಬ್ರಹಾಮನು ದೇವರನ್ನು ನಂಬಿದನು; ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿ ಎಂದು ಎಣಿಸಲ್ಪಟ್ಟಿತು” ಎಂದು ಹೇಳುತ್ತದೆ.
শাস্ত্ৰে কিং লিখতি? ইব্ৰাহীম্ ঈশ্ৱৰে ৱিশ্ৱসনাৎ স ৱিশ্ৱাসস্তস্মৈ পুণ্যাৰ্থং গণিতো বভূৱ|
4 ಕೆಲಸ ಮಾಡಿದವನಿಗೆ ಬರುವ ಕೂಲಿಯು ಕೃಪೆಯಿಂದ ದೊರಕುವಂಥದೆಂದು ಎಣಿಕೆಯಾಗುವುದಿಲ್ಲ; ಅದು ಅವನಿಗೆ ಸಲ್ಲತಕ್ಕದ್ದೇ ಎಂದು ಎಣಿಕೆಯಾಗುವುದು.
কৰ্ম্মকাৰিণো যদ্ ৱেতনং তদ্ অনুগ্ৰহস্য ফলং নহি কিন্তু তেনোপাৰ্জিতং মন্তৱ্যম্|
5 ಆದರೆ ಯಾವನು ಪುಣ್ಯಕ್ರಿಯೆಗಳನ್ನು ಮಾಡಿದವನಾಗಿರದೆ ಪಾಪಾತ್ಮರನ್ನು ನೀತಿವಂತರೆಂದು ನಿರ್ಣಯಿಸುವಾತನಲ್ಲಿ ನಂಬಿಕೆಯಿಡುತ್ತಾನೋ ಅವನ ನಂಬಿಕೆಯೇ ನೀತಿ ಎಂದು ಎಣಿಸಲ್ಪಡುವುದು.
কিন্তু যঃ পাপিনং সপুণ্যীকৰোতি তস্মিন্ ৱিশ্ৱাসিনঃ কৰ্ম্মহীনস্য জনস্য যো ৱিশ্ৱাসঃ স পুণ্যাৰ্থং গণ্যো ভৱতি|
6 ದೇವರು ಯಾವನನ್ನು ಪುಣ್ಯಕ್ರಿಯೆಗಳಿಲ್ಲದೆ ನೀತಿವಂತನೆಂದು ಎಣಿಸುತ್ತಾನೋ ಅವನು ಧನ್ಯನೆಂದು ದಾವೀದನು ಸಹ ಹೇಳುತ್ತಾನೆ. ಹೇಗೆಂದರೆ,
অপৰং যং ক্ৰিযাহীনম্ ঈশ্ৱৰঃ সপুণ্যীকৰোতি তস্য ধন্যৱাদং দাযূদ্ ৱৰ্ণযামাস, যথা,
7 “ಯಾರ ಅಪರಾಧಗಳು ಪರಿಹಾರವಾಗಿದೆಯೋ, ಯಾರ ಪಾಪಗಳು ಕ್ಷಮಿಸಲ್ಪಟ್ಟಿವೆಯೋ ಅವರೇ ಧನ್ಯರು.
স ধন্যোঽঘানি মৃষ্টানি যস্যাগাংস্যাৱৃতানি চ|
8 ಕರ್ತನು ಯಾವನ ಪಾಪವನ್ನು ಲೆಕ್ಕಕ್ಕೆ ತರುವುದಿಲ್ಲವೋ ಆ ಮನುಷ್ಯನೇ ಧನ್ಯನು.”
স চ ধন্যঃ পৰেশেন পাপং যস্য ন গণ্যতে|
9 ಈ ಶುಭವು ಸುನ್ನತಿಯಾದವರಿಗೆ ಮಾತ್ರವೋ? ಅಥವಾ ಸುನ್ನತಿಯಿಲ್ಲದವರಿಗೆ ಸಹ ಉಂಟೋ? “ಅಬ್ರಹಾಮನ ಲೆಕ್ಕಕ್ಕೆ ಅವನ ನಂಬಿಕೆಯೇ ನೀತಿಯೆಂದು ಎಣಿಸಲ್ಪಟ್ಟಿತು” ಎಂಬುದಾಗಿ ನಾವು ಹೇಳುತ್ತೇವೆ.
এষ ধন্যৱাদস্ত্ৱক্ছেদিনম্ অৎৱক্ছেদিনং ৱা কং প্ৰতি ভৱতি? ইব্ৰাহীমো ৱিশ্ৱাসঃ পুণ্যাৰ্থং গণিত ইতি ৱযং ৱদামঃ|
10 ೧೦ ಅದು ಯಾವಾಗ ಎಣಿಸಲ್ಪಟ್ಟಿತು? ಅವನಿಗೆ ಸುನ್ನತಿಯಾದ ಮೇಲೆಯೋ? ಸುನ್ನತಿಯಾಗುವುದಕ್ಕೆ ಮೊದಲೋ? ಸುನ್ನತಿಯಾದ ಮೇಲೆ ಅಲ್ಲ, ಸುನ್ನತಿಯಾಗುವುದಕ್ಕೆ ಮೊದಲೇ ಎಣಿಸಲ್ಪಟ್ಟಿತು.
১০স ৱিশ্ৱাসস্তস্য ৎৱক্ছেদিৎৱাৱস্থাযাং কিম্ অৎৱক্ছেদিৎৱাৱস্থাযাং কস্মিন্ সমযে পুণ্যমিৱ গণিতঃ? ৎৱক্ছেদিৎৱাৱস্থাযাং নহি কিন্ত্ৱৎৱক্ছেদিৎৱাৱস্থাযাং|
11 ೧೧ ಅನಂತರ ಸುನ್ನತಿಯನ್ನು, ಮೊದಲೇ ಅವನಿಗಿದ್ದ ನಂಬಿಕೆಯ ಗುರುತಾಗಿಯೂ, ಮುದ್ರೆಯಾಗಿಯೂ ಹೊಂದಿದನು. ಹೀಗಿರುವುದರಿಂದ ಅವನು ನಂಬುವವರೆಲ್ಲರಿಗೂ, ಅವರು ಸುನ್ನತಿಯಿಲ್ಲದವರಾಗಿದಾಗ್ಯೂ ಮೂಲಪಿತೃವಾದನು; ಇದರಿಂದ ಅವರು ನೀತಿವಂತರೆಂದು ಎಣಿಸಲ್ಪಟ್ಟರು.
১১অপৰঞ্চ স যৎ সৰ্ৱ্ৱেষাম্ অৎৱক্ছেদিনাং ৱিশ্ৱাসিনাম্ আদিপুৰুষো ভৱেৎ, তে চ পুণ্যৱত্ত্ৱেন গণ্যেৰন্;
12 ೧೨ ಇದಲ್ಲದೆ ಸುನ್ನತಿಯವರಲ್ಲಿ ಸುನ್ನತಿಹೊಂದಿದ್ದವರಿಗೆ ಮಾತ್ರವಲ್ಲದೆ, ನಮ್ಮ ಪಿತೃವಾಗಿರುವ ಅಬ್ರಹಾಮನಿಗೆ ಸುನ್ನತಿಯಾಗುವುದಕ್ಕೂ ಮೊದಲೇ ಇದ್ದ ನಂಬಿಕೆಯ ಕ್ರಮವನ್ನು ಅನುಸರಿಸಿ ನಡೆಯುತ್ತಾರೋ ಅವರಿಗೆ ಸಹ ಮೂಲ ತಂದೆಯಾಗಿದ್ದಾನೆ.
১২যে চ লোকাঃ কেৱলং ছিন্নৎৱচো ন সন্তো ঽস্মৎপূৰ্ৱ্ৱপুৰুষ ইব্ৰাহীম্ অছিন্নৎৱক্ সন্ যেন ৱিশ্ৱাসমাৰ্গেণ গতৱান্ তেনৈৱ তস্য পাদচিহ্নেন গচ্ছন্তি তেষাং ৎৱক্ছেদিনামপ্যাদিপুৰুষো ভৱেৎ তদৰ্থম্ অৎৱক্ছেদিনো মানৱস্য ৱিশ্ৱাসাৎ পুণ্যম্ উৎপদ্যত ইতি প্ৰমাণস্ৱৰূপং ৎৱক্ছেদচিহ্নং স প্ৰাপ্নোৎ|
13 ೧೩ ನೀನು ಲೋಕಕ್ಕೆ ಬಾಧ್ಯನಾಗುವಿ ಎಂಬ ವಾಗ್ದಾನವು ಅಬ್ರಹಾಮನಿಗಾಗಲಿ ಅವನ ಸಂತತಿಯವರಿಗಾಗಲಿ ಧರ್ಮಶಾಸ್ತ್ರದಿಂದ ಆದದ್ದಲ್ಲ; ನಂಬಿಕೆಯಿಂದ ಬರುವ ನೀತಿಯಾಗಿದೆ.
১৩ইব্ৰাহীম্ জগতোঽধিকাৰী ভৱিষ্যতি যৈষা প্ৰতিজ্ঞা তং তস্য ৱংশঞ্চ প্ৰতি পূৰ্ৱ্ৱম্ অক্ৰিযত সা ৱ্যৱস্থামূলিকা নহি কিন্তু ৱিশ্ৱাসজন্যপুণ্যমূলিকা|
14 ೧೪ ಧರ್ಮಶಾಸ್ತ್ರವನ್ನು ಅನುಸರಿಸುವವರು ಲೋಕಕ್ಕೆ ಬಾಧ್ಯರಾಗಿದ್ದರೆ ನಂಬಿಕೆಯು ವ್ಯರ್ಥವಾಯಿತು, ವಾಗ್ದಾನವು ನಿರರ್ಥಕವಾಯಿತು.
১৪যতো ৱ্যৱস্থাৱলম্বিনো যদ্যধিকাৰিণো ভৱন্তি তৰ্হি ৱিশ্ৱাসো ৱিফলো জাযতে সা প্ৰতিজ্ঞাপি লুপ্তৈৱ|
15 ೧೫ ಯಾಕೆಂದರೆ ಧರ್ಮಶಾಸ್ತ್ರವು ಜನರನ್ನು ದೇವರ ಕೋಪಕ್ಕೆ ಗುರಿಮಾಡುವಂಥದ್ದು, ಆದರೆ ಧರ್ಮಶಾಸ್ತ್ರವಿಲ್ಲದ ಪಕ್ಷದಲ್ಲಿ ಅದರ ಉಲ್ಲಂಘನೆಯೂ ಇಲ್ಲ.
১৫অধিকন্তু ৱ্যৱস্থা কোপং জনযতি যতো ঽৱিদ্যমানাযাং ৱ্যৱস্থাযাম্ আজ্ঞালঙ্ঘনং ন সম্ভৱতি|
16 ೧೬ ಆದಕಾರಣ ಆ ಬಾಧ್ಯತೆಯು ಕೃಪೆಯಿಂದಲೇ ದೊರೆಯುವಂಥದ್ದಾಗಿದೆ, ಅದು ನಂಬಿಕೆಯ ಮೂಲಕವೇ ಸಿಕ್ಕುತ್ತದೆ, ಹೀಗೆ ಆ ವಾಗ್ದಾನವು ನಮ್ಮೆಲ್ಲರ ತಂದೆಯಾದಅಬ್ರಹಾಮನ ಸಂತತಿಯವರೆಲ್ಲರಿಗೂ, ಅಂದರೆ ಧರ್ಮಶಾಸ್ತ್ರವನ್ನು ಆಧಾರ ಮಾಡಿಕೊಂಡವರಿಗೆ ಮಾತ್ರವಲ್ಲದೆ, ಅಬ್ರಹಾಮನಂಥ ನಂಬಿಕೆ ಇರುವವರೆಲ್ಲರಿಗೂ ಸಹ ಸ್ಥಿರವಾಗಿದೆ.
১৬অতএৱ সা প্ৰতিজ্ঞা যদ্ অনুগ্ৰহস্য ফলং ভৱেৎ তদৰ্থং ৱিশ্ৱাসমূলিকা যতস্তথাৎৱে তদ্ৱংশসমুদাযং প্ৰতি অৰ্থতো যে ৱ্যৱস্থযা তদ্ৱংশসম্ভৱাঃ কেৱলং তান্ প্ৰতি নহি কিন্তু য ইব্ৰাহীমীযৱিশ্ৱাসেন তৎসম্ভৱাস্তানপি প্ৰতি সা প্ৰতিজ্ঞা স্থাস্নুৰ্ভৱতি|
17 ೧೭ “ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ಪಿತನಾಗಿ ನೇಮಿಸಿದ್ದೇನೆಂದು” ಶಾಸ್ತ್ರದಲ್ಲಿ ಬರೆದಿದೆಯಲ್ಲ. ದೇವರು ಸತ್ತವರನ್ನು ಬದುಕಿಸುವವನಾಗಿಯೂ ಮತ್ತು ಅಸ್ತಿತ್ವದಲ್ಲಿ ಇಲ್ಲದ್ದನ್ನು ಅಸ್ತಿತ್ವಕ್ಕೆ ತರುವಂಥವನೂ ಆದ ದೇವರಲ್ಲಿ ಅಬ್ರಹಾಮನು ನಂಬಿಕೆಯಿಟ್ಟನು.
১৭যো নিৰ্জীৱান্ সজীৱান্ অৱিদ্যমানানি ৱস্তূনি চ ৱিদ্যমানানি কৰোতি ইব্ৰাহীমো ৱিশ্ৱাসভূমেস্তস্যেশ্ৱৰস্য সাক্ষাৎ সোঽস্মাকং সৰ্ৱ্ৱেষাম্ আদিপুৰুষ আস্তে, যথা লিখিতং ৱিদ্যতে, অহং ৎৱাং বহুজাতীনাম্ আদিপুৰুষং কৃৎৱা নিযুক্তৱান্|
18 ೧೮ “ನಿನ್ನ ಸಂತಾನವು ನಕ್ಷತ್ರಗಳಷ್ಟಾಗುವುದು” ಎಂಬುದಾಗಿ ತನಗೆ ಹೇಳಲ್ಪಟ್ಟ ಆ ನಿರೀಕ್ಷೆಗೆ ಆಸ್ಪದವಿಲ್ಲದಿರುವಾಗಲೂ ಅಬ್ರಹಾಮನು ತಾನು ಬಹು ಜನಾಂಗಗಳಿಗೆ ಪಿತನಾಗುವೆನೆಂದು ನಿರೀಕ್ಷೆಗೆ ವಿರುದ್ಧವಾಗಿ ನಿರೀಕ್ಷಿಸಿ ನಂಬಿದನು.
১৮ৎৱদীযস্তাদৃশো ৱংশো জনিষ্যতে যদিদং ৱাক্যং প্ৰতিশ্ৰুতং তদনুসাৰাদ্ ইব্ৰাহীম্ বহুদেশীযলোকানাম্ আদিপুৰুষো যদ্ ভৱতি তদৰ্থং সোঽনপেক্ষিতৱ্যমপ্যপেক্ষমাণো ৱিশ্ৱাসং কৃতৱান্|
19 ೧೯ ಅವನು ಹೆಚ್ಚು ಕಡಿಮೆ ನೂರು ವರ್ಷದವನಾಗಿದ್ದು ತನ್ನ ದೇಹವು ಆಗಲೇ ಮೃತಪ್ರಾಯವಾಯಿತೆಂದೂ ಸಾರಳಿಗೆ ಗರ್ಭಕಾಲ ಕಳೆದು ಹೋಯಿತೆಂದು ಪರಿಗಣಿಸಿದ್ದಾಗ್ಯೂ ಅವನ ನಂಬಿಕೆಯು ಕುಂದಲಿಲ್ಲ.
১৯অপৰঞ্চ ক্ষীণৱিশ্ৱাসো ন ভূৎৱা শতৱৎসৰৱযস্কৎৱাৎ স্ৱশৰীৰস্য জৰাং সাৰানাম্নঃ স্ৱভাৰ্য্যাযা ৰজোনিৱৃত্তিঞ্চ তৃণায ন মেনে|
20 ೨೦ ದೇವರು ಮಾಡಿದ ವಾಗ್ದಾನದ ವಿಷಯದಲ್ಲಿ ಅವನು ಅಪನಂಬಿಕೆಯಿಂದ ಚಂಚಲಚಿತ್ತನಾಗಲಿಲ್ಲ.
২০অপৰম্ অৱিশ্ৱাসাদ্ ঈশ্ৱৰস্য প্ৰতিজ্ঞাৱচনে কমপি সংশযং ন চকাৰ;
21 ೨೧ ದೇವರನ್ನು ಘನಪಡಿಸುವವನಾಗಿ ಆತನು ತನ್ನ ವಾಗ್ದಾನವನ್ನು ನೆರವೇರಿಸುವುದಕ್ಕೆ ಸಮರ್ಥನೆಂದು ಪೂರ್ಣದೃಢತೆಯುಳ್ಳವನಾದನು.
২১কিন্ত্ৱীশ্ৱৰেণ যৎ প্ৰতিশ্ৰুতং তৎ সাধযিতুং শক্যত ইতি নিশ্চিতং ৱিজ্ঞায দৃঢৱিশ্ৱাসঃ সন্ ঈশ্ৱৰস্য মহিমানং প্ৰকাশযাঞ্চকাৰ|
22 ೨೨ ಆದ್ದರಿಂದ ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು.
২২ইতি হেতোস্তস্য স ৱিশ্ৱাসস্তদীযপুণ্যমিৱ গণযাঞ্চক্ৰে|
23 ೨೩ ಆದರೆ ಅದು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತೆಂಬುದು ಅವನಿಗೋಸ್ಕರ ಮಾತ್ರವಲ್ಲದೆ ನಮಗೋಸ್ಕರವೂ ಬರೆದಿರುವುದು.
২৩পুণ্যমিৱাগণ্যত তৎ কেৱলস্য তস্য নিমিত্তং লিখিতং নহি, অস্মাকং নিমিত্তমপি,
24 ೨೪ ನಮ್ಮ ಕರ್ತನಾದ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದ ದೇವರನ್ನು ನಂಬುವ ನಮಗೂ ಆ ನಂಬಿಕೆಯು ನೀತಿಯೆಂದು ಎಣಿಸಲ್ಪಡುವುದು.
২৪যতোঽস্মাকং পাপনাশাৰ্থং সমৰ্পিতোঽস্মাকং পুণ্যপ্ৰাপ্ত্যৰ্থঞ্চোত্থাপিতোঽভৱৎ যোঽস্মাকং প্ৰভু ৰ্যীশুস্তস্যোত্থাপযিতৰীশ্ৱৰে
25 ೨೫ ದೇವರು ಯೇಸುವನ್ನು ನಮ್ಮ ಅಪರಾಧಗಳ ನಿಮಿತ್ತ ಮರಣಕ್ಕೆ ಒಪ್ಪಿಸಿಕೊಟ್ಟು ನಮಗೆ ನೀತಿವಂತರೆಂಬ ನಿರ್ಣಯವು ಉಂಟಾಗುವುದಕ್ಕಾಗಿಯೇ ಜೀವದಿಂದ ಎಬ್ಬಿಸಲ್ಪಟ್ಟನು.
২৫যদি ৱযং ৱিশ্ৱসামস্তৰ্হ্যস্মাকমপি সএৱ ৱিশ্ৱাসঃ পুণ্যমিৱ গণযিষ্যতে|

< ರೋಮಾಪುರದವರಿಗೆ 4 >