< ರೋಮಾಪುರದವರಿಗೆ 2 >
1 ೧ ಆದ್ದರಿಂದ ಎಲೈ ಮನುಷ್ಯನೇ, ಮತ್ತೊಬ್ಬರಲ್ಲಿ ದೋಷ ಹುಡುಕುವ ನೀನು ಯಾವನಾದರೂ ಸರಿಯೇ, ನಿನಗೆ ಅದರಿಂದ ಕ್ಷಮೆಯಿಲ್ಲ. ಯಾಕೆಂದರೆ, ಮತ್ತೊಬ್ಬರಲ್ಲಿ ದೋಷ ಹುಡುಕುವುದರಿಂದ ನಿನ್ನನ್ನು ನೀನೇ ದೋಷಿಯೆಂದು ತೀರ್ಪುಮಾಡಿಕೊಂಡ ಹಾಗಾಯಿತು. ಮತ್ತೊಬ್ಬರಲ್ಲಿ ದೋಷವೆಣಿಸುವ ನೀನು ಆ ದೋಷಗಳನ್ನೇ ಮಾಡುತ್ತೀಯಲ್ಲಾ.
हे परदूषक मनुष्य यः कश्चन त्वं भवसि तवोत्तरदानाय पन्था नास्ति यतो यस्मात् कर्म्मणः परस्त्वया दूष्यते तस्मात् त्वमपि दूष्यसे, यतस्तं दूषयन्नपि त्वं तद्वद् आचरसि।
2 ೨ ಅಂಥವುಗಳನ್ನು ಅನುಸರಿಸುವವರ ವಿಷಯದಲ್ಲಿ ದೇವರು ಕೊಡುವ ತೀರ್ಪು ಸತ್ಯಕ್ಕನುಸಾರವಾಗಿಯೇ ಇರುವುದೆಂದು ನಾವು ಬಲ್ಲೆವು.
किन्त्वेतादृगाचारिभ्यो यं दण्डम् ईश्वरो निश्चिनोति स यथार्थ इति वयं जानीमः।
3 ೩ ಇದನ್ನು ಪರಿಗಣಿಸು ಎಲೈ ಮನುಷ್ಯನೇ, ಅಂಥವುಗಳನ್ನು ಅನುಸರಿಸುವವರಲ್ಲಿ ದೋಷಹುಡುಕಿ, ನೀನು ಅವುಗಳನ್ನೇ ಮಾಡುತ್ತಿರುವಲ್ಲಿ ದೇವರ ದಂಡನೆಯ ತೀರ್ಪನ್ನು ತಪ್ಪಿಸಿಕೊಂಡೇನೆಂದು ಯೋಚಿಸುತ್ತೀಯೋ?
अतएव हे मानुष त्वं यादृगाचारिणो दूषयसि स्वयं यदि तादृगाचरसि तर्हि त्वम् ईश्वरदण्डात् पलायितुं शक्ष्यसीति किं बुध्यसे?
4 ೪ ಅಥವಾ ಆತನ ಅಪಾರವಾದ ದಯೆ, ಸಹನೆ, ದೀರ್ಘಶಾಂತಿಗಳನ್ನು ಕೇವಲವಾಗಿ ಯೋಚಿಸಿ, ನಿನ್ನ ಮನಸ್ಸು ಮಾರ್ಪಡಿಸಿಕೊಳ್ಳುವಂತೆ ಪ್ರೆರೇಪಿಸುವ ದೇವರ ಒಳ್ಳೆತನದ ಅರಿವು ನಿನಗಿಲ್ಲವೋ?
अपरं तव मनसः परिवर्त्तनं कर्त्तुम् इश्वरस्यानुग्रहो भवति तन्न बुद्ध्वा त्वं किं तदीयानुग्रहक्षमाचिरसहिष्णुत्वनिधिं तुच्छीकरोषि?
5 ೫ ನೀನು ನಿನ್ನ ಮೊಂಡತನವನ್ನೂ, ಪಶ್ಚಾತ್ತಾಪವಿಲ್ಲದ ಮನಸ್ಸನ್ನೂ ಅನುಸರಿಸಿ ನ್ಯಾಯತೀರ್ಪಿನ ದಿನದವರೆಗೂ ನಿನಗಾಗಿ ದೇವರ ಕೋಪವನ್ನು ಸಂಗ್ರಹಿಸಿಕೊಳ್ಳುತ್ತಾ ಇದ್ದೀ.
तथा स्वान्तःकरणस्य कठोरत्वात् खेदराहित्याच्चेश्वरस्य न्याय्यविचारप्रकाशनस्य क्रोधस्य च दिनं यावत् किं स्वार्थं कोपं सञ्चिनोषि?
6 ೬ ದೇವರು ಪ್ರತಿಯೊಬ್ಬರಿಗೆ ಅವರವರ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವನು,
किन्तु स एकैकमनुजाय तत्कर्म्मानुसारेण प्रतिफलं दास्यति;
7 ೭ ಯಾರು ಪ್ರಶಂಸೆ, ಗೌರವ, ಮತ್ತು ಭ್ರಷ್ಟರಹಿತ ಜೀವನ ಹೊಂದಬೇಕೆಂದು ಒಳ್ಳೆಯದನ್ನು ಬೇಸರಗೊಳ್ಳದೆ ಮಾಡುತ್ತಾರೋ, ಅವರಿಗೆ ನಿತ್ಯಜೀವವನ್ನು ಕೊಡುವನು. (aiōnios )
वस्तुतस्तु ये जना धैर्य्यं धृत्वा सत्कर्म्म कुर्व्वन्तो महिमा सत्कारोऽमरत्वञ्चैतानि मृगयन्ते तेभ्योऽनन्तायु र्दास्यति। (aiōnios )
8 ೮ ಯಾರು ಸ್ವಾರ್ಥಸಾಧಕರಾಗಿದ್ದು, ಸತ್ಯವನ್ನು ಅನುಸರಿಸದೆ ಅನ್ಯಾಯವನ್ನು ಅನುಸರಿಸುತ್ತಾರೋ, ಅವರ ಮೇಲೆ ದೇವರ ಕೋಪ ಮತ್ತು ರೌದ್ರಗಳು ಬರುವವು.
अपरं ये जनाः सत्यधर्म्मम् अगृहीत्वा विपरीतधर्म्मम् गृह्लन्ति तादृशा विरोधिजनाः कोपं क्रोधञ्च भोक्ष्यन्ते।
9 ೯ ಯೆಹೂದ್ಯರಿಗೆ ಮೊದಲು ಅನಂತರ ಗ್ರೀಕರಿಗೆ, ಕೆಟ್ಟದ್ದನ್ನು ಅನುಸರಿಸುವ ಪ್ರತಿಯೊಬ್ಬ ಮನುಷ್ಯನ ಮೇಲೂ ಸಂಕಟವೂ, ಯಾತನೆಯೂ ಬರುವವು.
आ यिहूदिनोऽन्यदेशिनः पर्य्यन्तं यावन्तः कुकर्म्मकारिणः प्राणिनः सन्ति ते सर्व्वे दुःखं यातनाञ्च गमिष्यन्ति;
10 ೧೦ ಯೆಹೂದ್ಯರಿಗೆ ಮೊದಲು, ಅನಂತರ ಗ್ರೀಕರಿಗೆ, ಒಳ್ಳೆಯದನ್ನು ಅನುಸರಿಸುವ ಪ್ರತಿಯೊಬ್ಬನಿಗೆ ಗೌರವವೂ, ಮಾನವೂ, ಮನಶಾಂತಿಯೂ ಉಂಟಾಗುವವು.
किन्तु आ यिहूदिनो भिन्नदेशिपर्य्यन्ता यावन्तः सत्कर्म्मकारिणो लोकाः सन्ति तान् प्रति महिमा सत्कारः शान्तिश्च भविष्यन्ति।
11 ೧೧ ದೇವರಲ್ಲಿ ಪಕ್ಷಪಾತವಿಲ್ಲ.
ईश्वरस्य विचारे पक्षपातो नास्ति।
12 ೧೨ ಧರ್ಮಶಾಸ್ತ್ರವಿಲ್ಲದೆ ಪಾಪಮಾಡಿದವರು ಧರ್ಮಶಾಸ್ತ್ರವಿಲ್ಲದವರಾಗಿ ನಾಶಹೊಂದುವರು; ಮತ್ತು ಧರ್ಮಶಾಸ್ತ್ರಕ್ಕನುಸಾರವಾಗಿದ್ದು ಪಾಪಮಾಡಿದವರು ಧರ್ಮಶಾಸ್ತ್ರಕ್ಕನುಸಾರವಾಗಿ ತೀರ್ಪನ್ನು ಹೊಂದುವರು.
अलब्धव्यवस्थाशास्त्रै र्यैः पापानि कृतानि व्यवस्थाशास्त्रालब्धत्वानुरूपस्तेषां विनाशो भविष्यति; किन्तु लब्धव्यवस्थाशास्त्रा ये पापान्यकुर्व्वन् व्यवस्थानुसारादेव तेषां विचारो भविष्यति।
13 ೧೩ ಧರ್ಮಶಾಸ್ತ್ರವನ್ನು ಕೇಳಿದ ಮಾತ್ರದಿಂದಲೇ ಯಾರೂ ದೇವರ ಸನ್ನಿಧಿಯಲ್ಲಿ ನೀತಿವಂತರಾಗುವುದಿಲ್ಲ; ಅದನ್ನು ಅನುಸರಿಸುವವರೇ ನೀತಿವಂತರೆಂದು ನಿರ್ಣಯಿಸಲ್ಪಡುವರು.
व्यवस्थाश्रोतार ईश्वरस्य समीपे निष्पापा भविष्यन्तीति नहि किन्तु व्यवस्थाचारिण एव सपुण्या भविष्यन्ति।
14 ೧೪ ಧರ್ಮಶಾಸ್ತ್ರವಿಲ್ಲದ ಅನ್ಯಜನರು ಸ್ವಾಭಾವಿಕವಾಗಿ ಧರ್ಮಶಾಸ್ತ್ರದಲ್ಲಿ ಹೇಳಿದಂತೆ ನಡೆದುಕೊಂಡರೆ ಅವರು ಧರ್ಮಶಾಸ್ತ್ರವಿಲ್ಲದವರಾಗಿದ್ದರೂ, ತಮಗೆ ತಾವೇ ಧರ್ಮಶಾಸ್ತ್ರವಾಗಿದ್ದಾರೆ.
यतो ऽलब्धव्यवस्थाशास्त्रा भिन्नदेशीयलोका यदि स्वभावतो व्यवस्थानुरूपान् आचारान् कुर्व्वन्ति तर्ह्यलब्धशास्त्राः सन्तोऽपि ते स्वेषां व्यवस्थाशास्त्रमिव स्वयमेव भवन्ति।
15 ೧೫ ಇದರಿಂದ ಅವರು ಧರ್ಮಶಾಸ್ತ್ರದ ಮುಖ್ಯ ತಾತ್ಪರ್ಯ ತಮ್ಮ ಹೃದಯದಲ್ಲಿ ಬರೆದಿದೆ ಎಂಬುದನ್ನು ತೋರ್ಪಡಿಸುತ್ತಾರೆ. ಇದಕ್ಕೆ ಅವರ ಮನಸ್ಸು ಸಹ ಸಾಕ್ಷಿ ನುಡಿಯುತ್ತದೆ; ಅವರ ಆಲೋಚನೆಗಳು ವಾದಿಪ್ರತಿವಾದಿಗಳಂತೆ, ಇದು ತಪ್ಪೆಂದು ಅದು ತಪ್ಪಲ್ಲವೆಂದು ಹೇಳುತ್ತದೆ.
तेषां मनसि साक्षिस्वरूपे सति तेषां वितर्केषु च कदा तान् दोषिणः कदा वा निर्दोषान् कृतवत्सु ते स्वान्तर्लिखितस्य व्यवस्थाशास्त्रस्य प्रमाणं स्वयमेव ददति।
16 ೧೬ ನಾನು ಸಾರುವ ಸುವಾರ್ತೆಯಲ್ಲಿ ಬೋಧಿಸಿರುವ ಪ್ರಕಾರ ದೇವರು ಯೇಸು ಕ್ರಿಸ್ತನ ಮೂಲಕವಾಗಿ ಮನುಷ್ಯರ ಗುಟ್ಟುಗಳನ್ನು ಹಿಡಿದು ವಿಚಾರಿಸುವ ದಿನದಂದು ಸೂಚಿಸುತ್ತದೆ. ಆ ದಿನದಲ್ಲಿ ಇದೆಲ್ಲಾ ತಿಳಿದು ಬರುವುದು.
यस्मिन् दिने मया प्रकाशितस्य सुसंवादस्यानुसाराद् ईश्वरो यीशुख्रीष्टेन मानुषाणाम् अन्तःकरणानां गूढाभिप्रायान् धृत्वा विचारयिष्यति तस्मिन् विचारदिने तत् प्रकाशिष्यते।
17 ೧೭ ನೀನು ಯೆಹೂದ್ಯನೆನಸಿಕೊಂಡು, ಧರ್ಮಶಾಸ್ತ್ರದಲ್ಲಿ ಭರವಸವಿಟ್ಟು, ದೇವರಲ್ಲಿ ಹೆಮ್ಮೆಯಿಂದ ಸಂತೋಷಿಸಿ,
पश्य त्वं स्वयं यिहूदीति विख्यातो व्यवस्थोपरि विश्वासं करोषि,
18 ೧೮ ಧರ್ಮಶಾಸ್ತ್ರದಿಂದ ಉಪದೇಶವನ್ನು ಹೊಂದಿ, ಆತನ ಚಿತ್ತವನ್ನು ಬಲ್ಲವನೂ, ಇದು ತಕ್ಕದ್ದು ಅದು ತಕ್ಕದ್ದಲ್ಲವೆಂದು ವಿವೇಚಿಸುವವನೂ ಆಗಿದ್ದೀಯೆ.
ईश्वरमुद्दिश्य स्वं श्लाघसे, तथा व्यवस्थया शिक्षितो भूत्वा तस्याभिमतं जानासि, सर्व्वासां कथानां सारं विविंक्षे,
19 ೧೯ ಧರ್ಮಶಾಸ್ತ್ರದಲ್ಲಿ ಜ್ಞಾನಸತ್ಯಗಳ ಸ್ವರೂಪವೇ ನಿನಗೆ ತಿಳಿದಿರುವುದರಿಂದ ಕುರುಡರಿಗೆ ದಾರಿತೋರಿಸುವವನೂ, ಕತ್ತಲೆಯಲ್ಲಿರುವವರಿಗೆ ಬೆಳಕೂ,
अपरं ज्ञानस्य सत्यतायाश्चाकरस्वरूपं शास्त्रं मम समीपे विद्यत अतो ऽन्धलोकानां मार्गदर्शयिता
20 ೨೦ ತಿಳಿವಳಿಕೆಯಿಲ್ಲದವರಿಗೆ ಶಿಕ್ಷಕನೂ, ಬಾಲಕರಿಗೆ ಉಪಾಧ್ಯಾಯನೂ, ಆಗಿದ್ದೇನೆಂದು ನಂಬಿಕೊಂಡಿದ್ದಿಯೇ,
तिमिरस्थितलोकानां मध्ये दीप्तिस्वरूपोऽज्ञानलोकेभ्यो ज्ञानदाता शिशूनां शिक्षयिताहमेवेति मन्यसे।
21 ೨೧ ಮತ್ತೊಬ್ಬನಿಗೆ ಉಪದೇಶ ಮಾಡುವ ನಿನಗೆ ನೀನೇ ಉಪದೇಶಮಾಡಿಕೊಳ್ಳದೆ ಇದ್ದೀಯೋ? ಕದಿಯಬಾರದೆಂದು ಬೋಧಿಸುವ ನೀನೇ ಕಳ್ಳತನ ಮಾಡುತ್ತಿಯೇನು?
परान् शिक्षयन् स्वयं स्वं किं न शिक्षयसि? वस्तुतश्चौर्य्यनिषेधव्यवस्थां प्रचारयन् त्वं किं स्वयमेव चोरयसि?
22 ೨೨ ಹಾದರ ಮಾಡಬಾರದೆಂದು ಹೇಳುವ ನೀನೇ ವ್ಯಭಿಚಾರ ಮಾಡುತ್ತೀಯೋ? ವಿಗ್ರಹಗಳನ್ನು ವಿರೋಧಿಸುವ ನೀನು ದೇವಾಲಯವನ್ನೇ ದೋಚುತ್ತಿಯೇನು?
तथा परदारगमनं प्रतिषेधन् स्वयं किं परदारान् गच्छसि? तथा त्वं स्वयं प्रतिमाद्वेषी सन् किं मन्दिरस्य द्रव्याणि हरसि?
23 ೨೩ ಧರ್ಮಶಾಸ್ತ್ರದಲ್ಲಿ ಹೆಮ್ಮೆಯಿಂದ ಹೆಚ್ಚಳಪಡುವ ನೀನು ಧರ್ಮಶಾಸ್ತ್ರವನ್ನು ಮೀರಿ ನಡೆದು ದೇವರನ್ನು ಅವಮಾನಪಡಿಸುತ್ತೀಯೋ?
यस्त्वं व्यवस्थां श्लाघसे स त्वं किं व्यवस्थाम् अवमत्य नेश्वरं सम्मन्यसे?
24 ೨೪ “ನಿಮ್ಮ ದೆಸೆಯಿಂದ ಅನ್ಯಜನರ ಮಧ್ಯದಲ್ಲಿ ದೇವರ ನಾಮವು ದೂಷಣೆಗೆ ಗುರಿಯಾಗುತ್ತಿದೆಂದು” ಬರೆದಿದೆಯಲ್ಲಾ.
शास्त्रे यथा लिखति "भिन्नदेशिनां समीपे युष्माकं दोषाद् ईश्वरस्य नाम्नो निन्दा भवति।"
25 ೨೫ ನೀನು ಧರ್ಮಶಾಸ್ತ್ರಕ್ಕನುಸಾರವಾಗಿ ನಡೆಯುವವನಾದರೆ ಸುನ್ನತಿಯೆಂಬ ಸಂಸ್ಕಾರವು ನಿನಗೆ ಪ್ರಯೋಜನಕರವಾಗಿದೆ; ಆದರೆ ನೀನು ಧರ್ಮಶಾಸ್ತ್ರವನ್ನು ಮೀರಿ ನಡೆಯುವವನಾಗಿದ್ದರೆ ನಿನಗೆ ಸುನ್ನತಿಯಿದ್ದರೂ ಇಲ್ಲದಂತಾಯಿತು.
यदि व्यवस्थां पालयसि तर्हि तव त्वक्छेदक्रिया सफला भवति; यति व्यवस्थां लङ्घसे तर्हि तव त्वक्छेदोऽत्वक्छेदो भविष्यति।
26 ೨೬ ಹೀಗಿರಲಾಗಿ ಸುನ್ನತಿಯಿಲ್ಲದವನು ಧರ್ಮಶಾಸ್ತ್ರದ ನೇಮಗಳ ಪ್ರಕಾರ ನಡೆದರೆ ಸುನ್ನತಿಯಿಲ್ಲದವನಾಗಿದ್ದರೂ ಸುನ್ನತಿಯಿದ್ದವನಂತೆ ಎಣಿಸಲ್ಪಡುವುದಿಲ್ಲವೇ?
यतो व्यवस्थाशास्त्रादिष्टधर्म्मकर्म्माचारी पुमान् अत्वक्छेदी सन्नपि किं त्वक्छेदिनां मध्ये न गणयिष्यते?
27 ೨೭ ನೀವು ಸುನ್ನತಿ ಮಾಡಿಸಿಕೊಂಡಿದ್ದಿರಿ; ಧರ್ಮಶಾಸ್ತ್ರವನ್ನು ಇಟ್ಟುಕೊಂಡಿದ್ದೀರಿ; ಆದರೂ ಅದನ್ನು ಮೀರಿ ನಡೆಯುತ್ತೀರಿ. ಹೀಗಿರಲಾಗಿ, ಶಾರೀರಿಕವಾಗಿ ಸುನ್ನತಿಯನ್ನು ಮಾಡಿಸಿಕೊಳ್ಳದಿದ್ದರೂ ಸ್ವಾಭಾವಿಕವಾಗಿ ಧರ್ಮಶಾಸ್ತ್ರವನ್ನು ಅನುಸರಿಸಿ ನಡೆಯುವವರು ಸುನ್ನತಿ ಮಾಡಿಸಿಕೊಂಡಿರುವ ನಿಮಗೆ ತೀರ್ಪುಕೊಡುತ್ತಾರೆ.
किन्तु लब्धशास्त्रश्छिन्नत्वक् च त्वं यदि व्यवस्थालङ्घनं करोषि तर्हि व्यवस्थापालकाः स्वाभाविकाच्छिन्नत्वचो लोकास्त्वां किं न दूषयिष्यन्ति?
28 ೨೮ ಹೊರಗೆ ಮಾತ್ರ ಯೆಹೂದ್ಯನಾಗಿರುವವನು ಯೆಹೂದ್ಯನಲ್ಲ; ಮತ್ತು ಹೊರಗೆ ಶರೀರದಲ್ಲಿ ಮಾತ್ರ ಮಾಡಿರುವ ಸುನ್ನತಿಯು ಸುನ್ನತಿಯಲ್ಲ.
तस्माद् यो बाह्ये यिहूदी स यिहूदी नहि तथाङ्गस्य यस्त्वक्छेदः स त्वक्छेदो नहि;
29 ೨೯ ಆದರೆ ಆಂತರಿಕವಾಗಿ ಯೆಹೂದ್ಯನಾಗಿರುವವನೇ ಯೆಹೂದ್ಯನು; ಮತ್ತು ಸುನ್ನತಿಯನ್ನು ಹೃದಯದಲ್ಲಿ ಹೊಂದಿರುವವನೇ ಸುನ್ನತಿಯುಳ್ಳವನು. ಇದು ಬಾಹ್ಯಾಚಾರಕ್ಕೆ ಸಂಬಂಧಪಟ್ಟದ್ದಲ್ಲ, ಆತ್ಮಸಂಬಂಧಪಟ್ಟದ್ದೇ; ಇಂಥ ಮನುಷ್ಯನಿಗೆ ಬರುವ ಪ್ರಶಂಸೆಯು, ದೇವರಿಂದಲೇ ಹೊರತು ಮನುಷ್ಯರಿಂದ ಬರುವುದಿಲ್ಲ.
किन्तु यो जन आन्तरिको यिहूदी स एव यिहूदी अपरञ्च केवललिखितया व्यवस्थया न किन्तु मानसिको यस्त्वक्छेदो यस्य च प्रशंसा मनुष्येभ्यो न भूत्वा ईश्वराद् भवति स एव त्वक्छेदः।