< ರೋಮಾಪುರದವರಿಗೆ 13 >
1 ೧ ಪ್ರತಿ ಮನುಷ್ಯನು ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಲಿ. ಯಾಕೆಂದರೆ ದೇವರಿಂದ ಹೊರತು ಒಬ್ಬರಿಗೂ ಅಧಿಕಾರವು ದೊರೆತಿರುವುದಿಲ್ಲ. ಇರುವ ಅಧಿಕಾರಿಗಳಾದರೋ ದೇವರಿಂದ ನೇಮಿಸಲ್ಪಟ್ಟವರು.
యుష్మాకమ్ ఏకైకజనః శాసనపదస్య నిఘ్నో భవతు యతో యాని శాసనపదాని సన్తి తాని సర్వ్వాణీశ్వరేణ స్థాపితాని; ఈశ్వరం వినా పదస్థాపనం న భవతి|
2 ೨ ಆದುದರಿಂದ ಅಧಿಕಾರಕ್ಕೆ ಎದುರುಬೀಳುವವನು ದೇವರ ನೇಮವನ್ನು ಎದುರಿಸುತ್ತಾನೆ. ಎದುರಿಸುವವರು ಶಿಕ್ಷೆಗೊಳಗಾಗುವರು.
ఇతి హేతోః శాసనపదస్య యత్ ప్రాతికూల్యం తద్ ఈశ్వరీయనిరూపణస్య ప్రాతికూల్యమేవ; అపరం యే ప్రాతికూల్యమ్ ఆచరన్తి తే స్వేషాం సముచితం దణ్డం స్వయమేవ ఘటయన్తే|
3 ೩ ಕೆಟ್ಟಕೆಲಸ ಮಾಡುವವನಿಗೆ ಅಧಿಪತಿಯಿಂದ ಭಯವಿರುವುದೇ ಹೊರತು ಒಳ್ಳೆಕೆಲಸ ಮಾಡುವವನಿಗೆ ಭಯವೇನೂ ಇರುವುದಿಲ್ಲ. ನೀನು ಅಧಿಕಾರಿಗೆ ಭಯಪಡದೇ ಇರಬೇಕೆಂದು ಅಪೇಕ್ಷಿಸುತ್ತೀಯೋ ಒಳ್ಳೆಯದನ್ನು ಮಾಡು. ಆಗ ಆ ಅಧಿಕಾರಿಯೇ ನಿನ್ನನ್ನು ಹೊಗಳುವನು.
శాస్తా సదాచారిణాం భయప్రదో నహి దురాచారిణామేవ భయప్రదో భవతి; త్వం కిం తస్మాన్ నిర్భయో భవితుమ్ ఇచ్ఛసి? తర్హి సత్కర్మ్మాచర, తస్మాద్ యశో లప్స్యసే,
4 ೪ ಅವನು ನಿನ್ನ ಹಿತಕ್ಕೋಸ್ಕರ ದೇವರ ಸೇವಕನಾಗಿದ್ದಾನಲ್ಲಾ. ಆದರೆ ನೀನು ಕೆಟ್ಟದ್ದನ್ನು ಮಾಡಿದರೆ ಭಯಪಡಬೇಕು. ಅವನು ಸುಮ್ಮನೆ ಕೈಯಲ್ಲಿ ಅಧಿಕಾರದ ದಂಡವನ್ನು ಹಿಡಿದಿಲ್ಲ. ಅವನು ದೇವರ ಸೇವಕನಾಗಿದ್ದು ಕೆಟ್ಟದ್ದನ್ನು ಮಾಡುವವನಿಗೆ ದೇವರ ದಂಡನೆಯನ್ನು ವಿಧಿಸುತ್ತಾನೆ.
యతస్తవ సదాచరణాయ స ఈశ్వరస్య భృత్యోఽస్తి| కిన్తు యది కుకర్మ్మాచరసి తర్హి త్వం శఙ్కస్వ యతః స నిరర్థకం ఖఙ్గం న ధారయతి; కుకర్మ్మాచారిణం సముచితం దణ్డయితుమ్ స ఈశ్వరస్య దణ్డదభృత్య ఏవ|
5 ೫ ಆದಕಾರಣ ದಂಡನೆಯಾದೀತೆಂದು ಮಾತ್ರವಲ್ಲದೆ ಮನಸ್ಸಾಕ್ಷಿಗೆ ಒಪ್ಪುವಂತೆಯು ಅವನಿಗೆ ಅಧೀನನಾಗಿರು.
అతఏవ కేవలదణ్డభయాన్నహి కిన్తు సదసద్బోధాదపి తస్య వశ్యేన భవితవ్యం|
6 ೬ ಈ ಕಾರಣದಿಂದಲೇ ನೀವು ಕಂದಾಯವನ್ನು ಕೂಡ ಕೊಡುತ್ತೀರಿ. ಯಾಕೆಂದರೆ ಕಂದಾಯ ಸಂಗ್ರಹಿಸುವವರು ದೇವರ ಸೇವಕರಾಗಿದ್ದು ಆ ಕೆಲಸದಲ್ಲಿಯೇ ನಿರತರಾಗಿರುತ್ತಾರೆ.
ఏతస్మాద్ యుష్మాకం రాజకరదానమప్యుచితం యస్మాద్ యే కరం గృహ్లన్తి త ఈశ్వరస్య కిఙ్కరా భూత్వా సతతమ్ ఏతస్మిన్ కర్మ్మణి నివిష్టాస్తిష్ఠన్తి|
7 ೭ ಅವರವರಿಗೆ ಸಲ್ಲಿಸತಕ್ಕದ್ದನ್ನು ಸಲ್ಲಿಸಿರಿ. ಯಾರಿಗೆ ಕಂದಾಯವೋ ಅವರಿಗೆ ಕಂದಾಯವನ್ನು ಯಾರಿಗೆ ಸುಂಕವೋ ಅವರಿಗೆ ಸುಂಕವನ್ನು ಸಲ್ಲಿಸಿರಿ. ಯಾರಿಗೆ ಭಯಪಡಬೇಕೋ ಅವರಿಗೆ ಭಯಪಡಿರಿ ಯಾರಿಗೆ ಮರ್ಯಾದೆ ತೋರಿಸಬೇಕೋ ಅವರಿಗೆ ಗೌರವವನ್ನು ಸಲ್ಲಿಸಿರಿ.
అస్మాత్ కరగ్రాహిణే కరం దత్త, తథా శుల్కగ్రాహిణే శుల్కం దత్త, అపరం యస్మాద్ భేతవ్యం తస్మాద్ బిభీత, యశ్చ సమాదరణీయస్తం సమాద్రియధ్వమ్; ఇత్థం యస్య యత్ ప్రాప్యం తత్ తస్మై దత్త|
8 ೮ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಋಣವೇ ಹೊರತು ಬೇರೆ ಯಾವ ಸಾಲವೂ ನಿಮ್ಮ ಮೇಲೆ ಇರಬಾರದು. ತನ್ನ ನೆರೆಹೊರೆಯವರನ್ನು ಪ್ರೀತಿಸುವವನು ಧರ್ಮಶಾಸ್ತ್ರವನ್ನೆಲ್ಲಾ ನೆರವೇರಿಸಿದ್ದಾನೆ.
యుష్మాకం పరస్పరం ప్రేమ వినా ఽన్యత్ కిమపి దేయమ్ ఋణం న భవతు, యతో యః పరస్మిన్ ప్రేమ కరోతి తేన వ్యవస్థా సిధ్యతి|
9 ೯ ಹೇಗೆಂದರೆ “ವ್ಯಭಿಚಾರ ಮಾಡಬಾರದು, ನರಹತ್ಯ ಮಾಡಬಾರದು, ಕದಿಯಬಾರದು, ಪರರ ಸೊತ್ತನ್ನು ಆಶಿಸಬಾರದು.” ಈ ಮೊದಲಾದ ಎಲ್ಲಾ ಕಟ್ಟಳೆಗಳು “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂಬ ಒಂದೇ ಮಾತಿನಲ್ಲಿ ಅಡಕವಾಗಿದೆ.
వస్తుతః పరదారాన్ మా గచ్ఛ, నరహత్యాం మా కార్షీః, చైర్య్యం మా కార్షీః, మిథ్యాసాక్ష్యం మా దేహి, లోభం మా కార్షీః, ఏతాః సర్వ్వా ఆజ్ఞా ఏతాభ్యో భిన్నా యా కాచిద్ ఆజ్ఞాస్తి సాపి స్వసమీపవాసిని స్వవత్ ప్రేమ కుర్వ్విత్యనేన వచనేన వేదితా|
10 ೧೦ ಪ್ರೀತಿಯು ಮತ್ತೊಬ್ಬರಿಗೆ ಯಾವ ಕೇಡನ್ನೂ ಮಾಡುವುದಿಲ್ಲ. ಆದಕಾರಣ ಪ್ರೀತಿಯಿಂದಲೇ ಧರ್ಮಶಾಸ್ತ್ರವು ನೆರವೇರುತ್ತದೆ.
యతః ప్రేమ సమీపవాసినోఽశుభం న జనయతి తస్మాత్ ప్రేమ్నా సర్వ్వా వ్యవస్థా పాల్యతే|
11 ೧೧ ಈಗಿನ ಕಾಲವು ನಿದ್ದೆಯಿಂದ ಎಚ್ಚರವಾಗಿರತಕ್ಕ ಕಾಲವೆಂದು ಅರಿತು ಇದನ್ನೆಲ್ಲಾ ಮಾಡಿರಿ. ನಾವು ಕ್ರಿಸ್ತನನ್ನು ಮೊದಲು ನಂಬಿದ ಕಾಲದಲ್ಲಿ ಇದ್ದುದಕ್ಕಿಂತ ಈಗ ನಮ್ಮ ವಿಮೋಚನೆಯ ಕಾಲವು ಹತ್ತಿರವಾಗಿದೆ.
ప్రత్యయీభవనకాలేఽస్మాకం పరిత్రాణస్య సామీప్యాద్ ఇదానీం తస్య సామీప్యమ్ అవ్యవహితం; అతః సమయం వివిచ్యాస్మాభిః సామ్ప్రతమ్ అవశ్యమేవ నిద్రాతో జాగర్త్తవ్యం|
12 ೧೨ ಇರುಳು ಬಹಳ ಮಟ್ಟಿಗೆ ಕಳೆಯಿತು; ಹಗಲು ಸಮೀಪವಾಯಿತು. ಕತ್ತಲೆಗೆ ಅನುಗುಣವಾದ ಕೃತ್ಯಗಳನ್ನು ಬಿಟ್ಟು ಬೆಳಕಿಗೆ ಅನುಗುಣವಾದ ರಕ್ಷಣೆಯ ಆಯುಧಗಳನ್ನು ಧರಿಸಿಕೊಳ್ಳೋಣ.
బహుతరా యామినీ గతా ప్రభాతం సన్నిధిం ప్రాప్తం తస్మాత్ తామసీయాః క్రియాః పరిత్యజ్యాస్మాభి ర్వాసరీయా సజ్జా పరిధాతవ్యా|
13 ೧೩ ದುಂದೌತಣ ಕುಡಿಕತನಗಳಲ್ಲಾಗಲಿ, ಕಾಮವಿಲಾಸ, ನಿರ್ಲಜ್ಜಾಕೃತ್ಯಗಳಲ್ಲಿಯಾಗಲಿ ಜಗಳ ಹೊಟ್ಟೆಕಿಚ್ಚುಗಳಲ್ಲಿಯಾಗಲಿ ಕಾಲ ಕಳೆಯದೆ ಹಗಲಿನಲ್ಲಿರ ತಕ್ಕ ಹಾಗೆ ಮಾನಸ್ಥರಾಗಿ ನಡೆದುಕೊಳ್ಳೋಣ.
అతో హేతో ర్వయం దివా విహితం సదాచరణమ్ ఆచరిష్యామః| రఙ్గరసో మత్తత్వం లమ్పటత్వం కాముకత్వం వివాద ఈర్ష్యా చైతాని పరిత్యక్ష్యామః|
14 ೧೪ ದೇಹದ ಆಸೆಗಳನ್ನು ಪೂರೈಸುವುದಕ್ಕಾಗಿ ಚಿಂತಿಸದೇ ಕರ್ತನಾದ ಯೇಸು ಕ್ರಿಸ್ತನನ್ನು ಧರಿಸಿಕೊಳ್ಳಿರಿ.
యూయం ప్రభుయీశుఖ్రీష్టరూపం పరిచ్ఛదం పరిధద్ధ్వం సుఖాభిలాషపూరణాయ శారీరికాచరణం మాచరత|