< ರೋಮಾಪುರದವರಿಗೆ 11 >
1 ೧ ಹಾಗಾದರೆ ದೇವರು ತನ್ನ ಸ್ವಂತ ಜನರನ್ನು ಬೇಡವೆಂದು ತಿರಸ್ಕರಿಸಿದನೋ ಎಂದು ಕೇಳುತ್ತೇನೆ ಎಂದಿಗೂ ಇಲ್ಲ. ನಾನು ಸಹ ಇಸ್ರಾಯೇಲ್ಯನು, ಅಬ್ರಹಾಮನ ಸಂತತಿಯವನು, ಬೆನ್ಯಾಮೀನನ ಕುಲದವನು ಆಗಿದ್ದೇನಲ್ಲಾ.
ಈಶ್ವರೇಣ ಸ್ವೀಕೀಯಲೋಕಾ ಅಪಸಾರಿತಾ ಅಹಂ ಕಿಮ್ ಈದೃಶಂ ವಾಕ್ಯಂ ಬ್ರವೀಮಿ? ತನ್ನ ಭವತು ಯತೋಽಹಮಪಿ ಬಿನ್ಯಾಮೀನಗೋತ್ರೀಯ ಇಬ್ರಾಹೀಮವಂಶೀಯ ಇಸ್ರಾಯೇಲೀಯಲೋಕೋಽಸ್ಮಿ|
2 ೨ ದೇವರು ತಾನು ಮುಂದಾಗಿ ತನ್ನ ಜನರಾಗುವುದಕ್ಕೆ ಗೊತ್ತುಮಾಡಿಕೊಂಡಿದ್ದ ಪ್ರಜೆಗಳನ್ನು ತಳ್ಳಿಬಿಡಲಿಲ್ಲ. ಎಲೀಯನ ಬಗ್ಗೆ ಧರ್ಮಶಾಸ್ತ್ರವು ಹೇಳುವ ಮಾತು ನಿಮಗೆ ತಿಳಿಯದೋ?
ಈಶ್ವರೇಣ ಪೂರ್ವ್ವಂ ಯೇ ಪ್ರದೃಷ್ಟಾಸ್ತೇ ಸ್ವಕೀಯಲೋಕಾ ಅಪಸಾರಿತಾ ಇತಿ ನಹಿ| ಅಪರಮ್ ಏಲಿಯೋಪಾಖ್ಯಾನೇ ಶಾಸ್ತ್ರೇ ಯಲ್ಲಿಖಿತಮ್ ಆಸ್ತೇ ತದ್ ಯೂಯಂ ಕಿಂ ನ ಜಾನೀಥ?
3 ೩ ಅವನು ದೇವರ ಮುಂದೆ, “ಕರ್ತನೇ ಅವರು ನಿನ್ನ ಪ್ರವಾದಿಗಳನ್ನು ಸಂಹರಿಸಿದ್ದಾರೆ, ನಿನ್ನ ಯಜ್ಞವೇದಿಗಳನ್ನು ಒಡೆದು ಹಾಕಿದ್ದಾರೆ. ನಾನೊಬ್ಬನೇ ಉಳಿದಿದ್ದೇನೆ. ಅವರು ನನ್ನ ಪ್ರಾಣವನ್ನು ತೆಗೆಯಬೇಕೆಂದಿದ್ದಾರೆ” ಎಂದು ಇಸ್ರಾಯೇಲ್ಯರ ಮೇಲೆ ದೂರು ಹೇಳಿದ್ದಕ್ಕೆ.
ಹೇ ಪರಮೇಶ್ವರ ಲೋಕಾಸ್ತ್ವದೀಯಾಃ ಸರ್ವ್ವಾ ಯಜ್ಞವೇದೀರಭಞ್ಜನ್ ತಥಾ ತವ ಭವಿಷ್ಯದ್ವಾದಿನಃ ಸರ್ವ್ವಾನ್ ಅಘ್ನನ್ ಕೇವಲ ಏಕೋಽಹಮ್ ಅವಶಿಷ್ಟ ಆಸೇ ತೇ ಮಮಾಪಿ ಪ್ರಾಣಾನ್ ನಾಶಯಿತುಂ ಚೇಷ್ಟನತೇ, ಏತಾಂ ಕಥಾಮ್ ಇಸ್ರಾಯೇಲೀಯಲೋಕಾನಾಂ ವಿರುದ್ಧಮ್ ಏಲಿಯ ಈಶ್ವರಾಯ ನಿವೇದಯಾಮಾಸ|
4 ೪ ದೇವರ ಉತ್ತರವೇನೆಂದರೆ, “ಬಾಳನ ವಿಗ್ರಹಕ್ಕೆ ಅಡ್ಡಬೀಳದೆ ಇರುವ ಏಳುಸಾವಿರ ಪುರುಷರನ್ನು ನನಗಾಗಿ ಉಳಿಸಿಕೊಂಡಿದ್ದೇನೆ” ಎಂಬುದೇ.
ತತಸ್ತಂ ಪ್ರತೀಶ್ವರಸ್ಯೋತ್ತರಂ ಕಿಂ ಜಾತಂ? ಬಾಲ್ನಾಮ್ನೋ ದೇವಸ್ಯ ಸಾಕ್ಷಾತ್ ಯೈ ರ್ಜಾನೂನಿ ನ ಪಾತಿತಾನಿ ತಾದೃಶಾಃ ಸಪ್ತ ಸಹಸ್ರಾಣಿ ಲೋಕಾ ಅವಶೇಷಿತಾ ಮಯಾ|
5 ೫ ಅದರಂತೆ ಈಗಿನ ಕಾಲದಲ್ಲಿಯೂ ದೇವರ ಕೃಪೆಯಿಂದ ಆರಿಸಿಕೊಂಡವರಾದ ಒಂದು ಭಾಗವು ಉಳಿದಿದ್ದಾರೆ.
ತದ್ವದ್ ಏತಸ್ಮಿನ್ ವರ್ತ್ತಮಾನಕಾಲೇಽಪಿ ಅನುಗ್ರಹೇಣಾಭಿರುಚಿತಾಸ್ತೇಷಾಮ್ ಅವಶಿಷ್ಟಾಃ ಕತಿಪಯಾ ಲೋಕಾಃ ಸನ್ತಿ|
6 ೬ ಕೃಪೆಯಿಂದ ಆರಿಸಿಕೊಂಡನು ಅಂದ ಮೇಲೆ ಒಳ್ಳೆಯ ಕಾರ್ಯದಿಂದಲ್ಲ. ಹಾಗಲ್ಲದ ಪಕ್ಷಕ್ಕೆ ಕೃಪೆಯನ್ನು ಇನ್ನು ಕೃಪೆಯನ್ನುವುದಕ್ಕಾಗುವುದಿಲ್ಲ.
ಅತಏವ ತದ್ ಯದ್ಯನುಗ್ರಹೇಣ ಭವತಿ ತರ್ಹಿ ಕ್ರಿಯಯಾ ನ ಭವತಿ ನೋ ಚೇದ್ ಅನುಗ್ರಹೋಽನನುಗ್ರಹ ಏವ, ಯದಿ ವಾ ಕ್ರಿಯಯಾ ಭವತಿ ತರ್ಹ್ಯನುಗ್ರಹೇಣ ನ ಭವತಿ ನೋ ಚೇತ್ ಕ್ರಿಯಾ ಕ್ರಿಯೈವ ನ ಭವತಿ|
7 ೭ ಇದರಿಂದ ತಿಳಿಯತಕ್ಕದ್ದೇನು? ಇಸ್ರಾಯೇಲ್ಯರು ಹುಡುಕಿದ್ದನ್ನು ಅವರು ಹೊಂದಲಿಲ್ಲ. ಅವರೊಳಗೆ ಆರಿಸಲ್ಪಟ್ಟವರಿಗೆ ಅದು ದೊರೆಯಿತು. ಉಳಿದವರು ಮೊಂಡರಾದರು.
ತರ್ಹಿ ಕಿಂ? ಇಸ್ರಾಯೇಲೀಯಲೋಕಾ ಯದ್ ಅಮೃಗಯನ್ತ ತನ್ನ ಪ್ರಾಪುಃ| ಕಿನ್ತ್ವಭಿರುಚಿತಲೋಕಾಸ್ತತ್ ಪ್ರಾಪುಸ್ತದನ್ಯೇ ಸರ್ವ್ವ ಅನ್ಧೀಭೂತಾಃ|
8 ೮ “ದೇವರು ಅವರಿಗೆ ಮಂದಬುದ್ಧಿಯ ಆತ್ಮನನ್ನು, ಅಂದರೆ ಕಾಣದ ಕಣ್ಣುಗಳನ್ನೂ, ಕೇಳದ ಕಿವಿಗಳನ್ನೂ ಕೊಟ್ಟನು. ಈ ಭಾವವು ಈ ಹೊತ್ತಿನವರೆಗೂ ಹಾಗೆಯೇ ಇದೆ” ಎಂದು ಬರೆದ ಪ್ರಕಾರ ಅವರಿಗೆ ಆಯಿತು.
ಯಥಾ ಲಿಖಿತಮ್ ಆಸ್ತೇ, ಘೋರನಿದ್ರಾಲುತಾಭಾವಂ ದೃಷ್ಟಿಹೀನೇ ಚ ಲೋಚನೇ| ಕರ್ಣೌ ಶ್ರುತಿವಿಹೀನೌ ಚ ಪ್ರದದೌ ತೇಭ್ಯ ಈಶ್ವರಃ||
9 ೯ ಇದಲ್ಲದೆ “ಅವರ ಭೋಜನವೇ ಅವರಿಗೆ ಬಲೆಯೂ, ಜಾಲವೂ, ಅಡೆತಡೆಯೂ, ಪ್ರತಿಕಾರವೂ ಆಗಲಿ;
ಏತೇಸ್ಮಿನ್ ದಾಯೂದಪಿ ಲಿಖಿತವಾನ್ ಯಥಾ, ಅತೋ ಭುಕ್ತ್ಯಾಸನಂ ತೇಷಾಮ್ ಉನ್ಮಾಥವದ್ ಭವಿಷ್ಯತಿ| ವಾ ವಂಶಯನ್ತ್ರವದ್ ಬಾಧಾ ದಣ್ಡವದ್ ವಾ ಭವಿಷ್ಯತಿ||
10 ೧೦ ಅವರ ಕಣ್ಣು ಮೊಬ್ಬಾಗಿ ಕಾಣದೆಹೋಗಲಿ ಅವರ ಬೆನ್ನು ಯಾವಾಗಲೂ ಬೊಗ್ಗಿಕೊಂಡಿರುವಂತೆ ಮಾಡು” ಎಂದು ದಾವೀದನು ಹೇಳುತ್ತಾನೆ.
ಭವಿಷ್ಯನ್ತಿ ತಥಾನ್ಧಾಸ್ತೇ ನೇತ್ರೈಃ ಪಶ್ಯನ್ತಿ ನೋ ಯಥಾ| ವೇಪಥುಃ ಕಟಿದೇಶಸ್ಯ ತೇಷಾಂ ನಿತ್ಯಂ ಭವಿಷ್ಯತಿ||
11 ೧೧ ಹಾಗಾದರೆ “ಅವರು ಬಿದ್ದೇಹೋಗುವಂತೆ ಎಡವಿದರೇನು” ಎಂದು ಕೇಳುತ್ತೇನೆ. ಹಾಗೆ ಎಂದಿಗೂ ಆಗಬಾರದು ಅವರು ಬಿದ್ದುಹೋದದ್ದರಿಂದ ಕ್ರಿಸ್ತನಿಂದ ಉಂಟಾಗುವ ರಕ್ಷಣೆಯು ಅನ್ಯಜನರಿಗೆ ಉಂಟಾಯಿತು. ಇದರಿಂದ ದೇವರು ಅವರಲ್ಲಿ ಅಸೂಯೆ ಹುಟ್ಟಿಸುತ್ತಾನೆ.
ಪತನಾರ್ಥಂ ತೇ ಸ್ಖಲಿತವನ್ತ ಇತಿ ವಾಚಂ ಕಿಮಹಂ ವದಾಮಿ? ತನ್ನ ಭವತು ಕಿನ್ತು ತಾನ್ ಉದ್ಯೋಗಿನಃ ಕರ್ತ್ತುಂ ತೇಷಾಂ ಪತನಾದ್ ಇತರದೇಶೀಯಲೋಕೈಃ ಪರಿತ್ರಾಣಂ ಪ್ರಾಪ್ತಂ|
12 ೧೨ ಅವರು ಬಿದ್ದುಹೋದದ್ದು ಸರ್ವಲೋಕದ ಸೌಭಾಗ್ಯಕ್ಕೂ, ಅವರು ಸೋತುಹೋದದ್ದು ಅನ್ಯಜನಗಳ ಸಂಪತ್ತಿಗೂ ಮಾರ್ಗವಾಗಿರಲಾಗಿ ಅವರ ಪೂರ್ಣ ಪುನಃಸ್ಥಾಪನೆಯು ಪ್ರಪಂಚಕ್ಕೆ ಎಷ್ಟೋ ಹೆಚ್ಚಾದ ಭಾಗ್ಯಕ್ಕೆ ಕಾರಣವಾಗುವುದು.
ತೇಷಾಂ ಪತನಂ ಯದಿ ಜಗತೋ ಲೋಕಾನಾಂ ಲಾಭಜನಕಮ್ ಅಭವತ್ ತೇಷಾಂ ಹ್ರಾಸೋಽಪಿ ಯದಿ ಭಿನ್ನದೇಶಿನಾಂ ಲಾಭಜನಕೋಽಭವತ್ ತರ್ಹಿ ತೇಷಾಂ ವೃದ್ಧಿಃ ಕತಿ ಲಾಭಜನಿಕಾ ಭವಿಷ್ಯತಿ?
13 ೧೩ ಅನ್ಯಜನರಾಗಿರುವ ನಿಮಗೆ ನಾನು ಹೇಳುವುದೇನಂದರೆ, ನಾನು ಅನ್ಯಜನರಿಗೆ ಅಪೊಸ್ತಲನಾಗಿರಲಾಗಿ ನನ್ನ ಸೇವೆಯ ಬಗ್ಗೆ ಹೊಗಳಿಕೊಳ್ಳುತ್ತಿದ್ದೇನೆ.
ಅತೋ ಹೇ ಅನ್ಯದೇಶಿನೋ ಯುಷ್ಮಾನ್ ಸಮ್ಬೋಧ್ಯ ಕಥಯಾಮಿ ನಿಜಾನಾಂ ಜ್ಞಾತಿಬನ್ಧೂನಾಂ ಮನಃಸೂದ್ಯೋಗಂ ಜನಯನ್ ತೇಷಾಂ ಮಧ್ಯೇ ಕಿಯತಾಂ ಲೋಕಾನಾಂ ಯಥಾ ಪರಿತ್ರಾಣಂ ಸಾಧಯಾಮಿ
14 ೧೪ ಇದರಿಂದಾಗಿ ಸ್ವಜನರಲ್ಲಿ ಅಸೂಯೆಯನ್ನು ಕೆರಳಿಸಿ ಅವರಲ್ಲಿ ಕೆಲವರನ್ನು ರಕ್ಷಣೆಯ ಮಾರ್ಗಕ್ಕೆ ತಂದೇನು.
ತನ್ನಿಮಿತ್ತಮ್ ಅನ್ಯದೇಶಿನಾಂ ನಿಕಟೇ ಪ್ರೇರಿತಃ ಸನ್ ಅಹಂ ಸ್ವಪದಸ್ಯ ಮಹಿಮಾನಂ ಪ್ರಕಾಶಯಾಮಿ|
15 ೧೫ ಯಾಕೆಂದರೆ ಇಸ್ರಾಯೇಲ್ಯರನ್ನು ನಿರಾಕರಿಸುವುದರಿಂದ ಲೋಕವು ದೇವರ ಸಂಗಡ ಸಂಧಾನವಾಗುವುದಕ್ಕೆ ಮಾರ್ಗವಾದ ಮೇಲೆ ಅವರನ್ನು ಸೇರಿಸಿಕೊಳ್ಳುವುದರಿಂದ ಏನಾಗುವುದು? ಸತ್ತವರು ಜೀವಿತರಾಗಿ ಎದ್ದುಬಂದತಾಗುವುದಿಲ್ಲವೇ.
ತೇಷಾಂ ನಿಗ್ರಹೇಣ ಯದೀಶ್ವರೇಣ ಸಹ ಜಗತೋ ಜನಾನಾಂ ಮೇಲನಂ ಜಾತಂ ತರ್ಹಿ ತೇಷಾಮ್ ಅನುಗೃಹೀತತ್ವಂ ಮೃತದೇಹೇ ಯಥಾ ಜೀವನಲಾಭಸ್ತದ್ವತ್ ಕಿಂ ನ ಭವಿಷ್ಯತಿ?
16 ೧೬ ಕಣಕದಲ್ಲಿ ಪ್ರಥಮಫಲವನ್ನು ದೇವರಿಗರ್ಪಿಸಿದ ಮೇಲೆ ಕಣಕವೆಲ್ಲಾ ಪವಿತ್ರವಾಯಿತು. ಬೇರು ಶುದ್ಧವಾಗಿದ್ದ ಮೇಲೆ ಕೊಂಬೆಗಳೂ ಹಾಗೆಯೇ.
ಅಪರಂ ಪ್ರಥಮಜಾತಂ ಫಲಂ ಯದಿ ಪವಿತ್ರಂ ಭವತಿ ತರ್ಹಿ ಸರ್ವ್ವಮೇವ ಫಲಂ ಪವಿತ್ರಂ ಭವಿಷ್ಯತಿ; ತಥಾ ಮೂಲಂ ಯದಿ ಪವಿತ್ರಂ ಭವತಿ ತರ್ಹಿ ಶಾಖಾ ಅಪಿ ತಥೈವ ಭವಿಷ್ಯನ್ತಿ|
17 ೧೭ ಆದರೆ ಕೆಲವು ಕೊಂಬೆಗಳನ್ನು ಮುರಿದುಹಾಕಿ ಕಾಡೆಣ್ಣೆ ಮರದಂತಿರುವ ನಿನ್ನನ್ನು ಅವುಗಳ ಜಾಗದಲ್ಲಿ ಕಸಿಮಾಡಿರಲಾಗಿ ಊರೆಣ್ಣೇಮರದ ರಸವತ್ತಾದ ಬೇರಿನಲ್ಲಿ ಅದು ಪಾಲುಹೊಂದಿದ್ದರೂ ಆ ಕೊಂಬೆಗಳನ್ನು ಕಡೆಗಣಿಸಿ ನಿನ್ನನ್ನು ಅಂಟಿಸಿದ ಮೇಲೆ ನೀನು ಕೊಂಬೆಯ ಕುರಿತು ಹೆಚ್ಚಿಸಿಕೊಳ್ಳಬೇಡ.
ಕಿಯತೀನಾಂ ಶಾಖಾನಾಂ ಛೇದನೇ ಕೃತೇ ತ್ವಂ ವನ್ಯಜಿತವೃಕ್ಷಸ್ಯ ಶಾಖಾ ಭೂತ್ವಾ ಯದಿ ತಚ್ಛಾಖಾನಾಂ ಸ್ಥಾನೇ ರೋಪಿತಾ ಸತಿ ಜಿತವೃಕ್ಷೀಯಮೂಲಸ್ಯ ರಸಂ ಭುಂಕ್ಷೇ,
18 ೧೮ ಹೆಚ್ಚಿಸಿಕೊಂಡರೂ ಆ ಬೇರಿಗೆ ನೀನು ಆಧಾರವಲ್ಲ. ಅದು ನಿನಗೆ ಆಧಾರವಾಗಿದೆ.
ತರ್ಹಿ ತಾಸಾಂ ಭಿನ್ನಶಾಖಾನಾಂ ವಿರುದ್ಧಂ ಮಾಂ ಗರ್ವ್ವೀಃ; ಯದಿ ಗರ್ವ್ವಸಿ ತರ್ಹಿ ತ್ವಂ ಮೂಲಂ ಯನ್ನ ಧಾರಯಸಿ ಕಿನ್ತು ಮೂಲಂ ತ್ವಾಂ ಧಾರಯತೀತಿ ಸಂಸ್ಮರ|
19 ೧೯ ಈ ಮಾತಿಗೆ, “ನನ್ನನ್ನು ಕಸಿಮಾಡುವುದಕ್ಕಾಗಿ ಕೊಂಬೆಗಳು ಮುರಿದುಹಾಕಲ್ಪಟ್ಟವಲ್ಲಾ” ಎಂದು ನೀನು ಒಂದು ವೇಳೆ ಹೇಳಬಹುದು.
ಅಪರಞ್ಚ ಯದಿ ವದಸಿ ಮಾಂ ರೋಪಯಿತುಂ ತಾಃ ಶಾಖಾ ವಿಭನ್ನಾ ಅಭವನ್;
20 ೨೦ ನೀನು ಹೇಳುವುದು ನಿಜ. ಅವರು ನಂಬದೇ ಹೋದ್ದದರಿಂದ ಮುರಿದುಹಾಕಲ್ಪಟ್ಟರು. ನೀನು ನಿಂತಿರುವುದು ನಂಬಿಕೆಯಿಂದಲೇ.
ಭದ್ರಮ್, ಅಪ್ರತ್ಯಯಕಾರಣಾತ್ ತೇ ವಿಭಿನ್ನಾ ಜಾತಾಸ್ತಥಾ ವಿಶ್ವಾಸಕಾರಣಾತ್ ತ್ವಂ ರೋಪಿತೋ ಜಾತಸ್ತಸ್ಮಾದ್ ಅಹಙ್ಕಾರಮ್ ಅಕೃತ್ವಾ ಸಸಾಧ್ವಸೋ ಭವ|
21 ೨೧ ಗರ್ವಪಡಬೇಡ, ಭಯದಿಂದಿರು. ದೇವರು ಹುಟ್ಟುಕೊಂಬೆಗಳನ್ನು ಉಳಿಸದೆ ಇದ್ದ ಮೇಲೆ ನಿನ್ನನ್ನೂ ಉಳಿಸುವುದಿಲ್ಲ.
ಯತ ಈಶ್ವರೋ ಯದಿ ಸ್ವಾಭಾವಿಕೀಃ ಶಾಖಾ ನ ರಕ್ಷತಿ ತರ್ಹಿ ಸಾವಧಾನೋ ಭವ ಚೇತ್ ತ್ವಾಮಪಿ ನ ಸ್ಥಾಪಯತಿ|
22 ೨೨ ಆದ್ದರಿಂದ ದೇವರ ದಯೆಯನ್ನೂ, ದಂಡನೆಯನ್ನು ನೋಡು; ಬಿದ್ದವರಿಗೆ ದಂಡನೆಯನ್ನೂ, ನೀನು ದೇವರ ದಯೆಯನ್ನು ಆಶ್ರಯಿಸಿಕೊಂಡೇ ಇದ್ದರೆ ಆತನ ದಯೆಯನ್ನು ಹೊಂದುವಿ. ಇಲ್ಲವಾದರೆ ನಿನ್ನನ್ನೂ ಕಡಿದುಹಾಕುವನು.
ಇತ್ಯತ್ರೇಶ್ವರಸ್ಯ ಯಾದೃಶೀ ಕೃಪಾ ತಾದೃಶಂ ಭಯಾನಕತ್ವಮಪಿ ತ್ವಯಾ ದೃಶ್ಯತಾಂ; ಯೇ ಪತಿತಾಸ್ತಾನ್ ಪ್ರತಿ ತಸ್ಯ ಭಯಾನಕತ್ವಂ ದೃಶ್ಯತಾಂ, ತ್ವಞ್ಚ ಯದಿ ತತ್ಕೃಪಾಶ್ರಿತಸ್ತಿಷ್ಠಸಿ ತರ್ಹಿ ತ್ವಾಂ ಪ್ರತಿ ಕೃಪಾ ದ್ರಕ್ಷ್ಯತೇ; ನೋ ಚೇತ್ ತ್ವಮಪಿ ತದ್ವತ್ ಛಿನ್ನೋ ಭವಿಷ್ಯಸಿ|
23 ೨೩ ಇಸ್ರಾಯೇಲ್ಯರ ಕೂಡ ಇನ್ನು ಅಪನಂಬಿಕೆಯಲ್ಲಿ ನಿಲ್ಲದ ಪಕ್ಷಕ್ಕೆ ಅವರನ್ನೂ ಕಸಿಮಾಡುವನು. ದೇವರು ಅವರನ್ನು ತಿರುಗಿ ಕಸಿಕಟ್ಟುವುದಕ್ಕೆ ಸಮರ್ಥನಾಗಿದ್ದಾನೆ.
ಅಪರಞ್ಚ ತೇ ಯದ್ಯಪ್ರತ್ಯಯೇ ನ ತಿಷ್ಠನ್ತಿ ತರ್ಹಿ ಪುನರಪಿ ರೋಪಯಿಷ್ಯನ್ತೇ ಯಸ್ಮಾತ್ ತಾನ್ ಪುನರಪಿ ರೋಪಯಿತುಮ್ ಇಶ್ವರಸ್ಯ ಶಕ್ತಿರಾಸ್ತೇ|
24 ೨೪ ನೀನು ಹುಟ್ಟು ಕಾಡುಮರದಿಂದ ಕಡಿದು ತೆಗೆಯಲ್ಪಟ್ಟು ನಿನಗೆ ಸಂಬಂಧಪಡದ ಊರು ಮರದಲ್ಲಿ ಕಸಿಕಟ್ಟಿಸಿಕೊಂಡವನಾದ ಮೇಲೆ ಅದರಲ್ಲಿ ಹುಟ್ಟಿದ ಕೊಂಬೆಗಳಾಗಿರುವ ಅವರು ಸ್ವಂತ ಮರದಲ್ಲಿ ಕಸಿಕಟ್ಟಲ್ಪಡುವುದು ಎಷ್ಟೋ ಯುಕ್ತವಾಗಿದೆಯಲ್ಲವೇ.
ವನ್ಯಜಿತವೃಕ್ಷಸ್ಯ ಶಾಖಾ ಸನ್ ತ್ವಂ ಯದಿ ತತಶ್ಛಿನ್ನೋ ರೀತಿವ್ಯತ್ಯಯೇನೋತ್ತಮಜಿತವೃಕ್ಷೇ ರೋಪಿತೋಽಭವಸ್ತರ್ಹಿ ತಸ್ಯ ವೃಕ್ಷಸ್ಯ ಸ್ವೀಯಾ ಯಾಃ ಶಾಖಾಸ್ತಾಃ ಕಿಂ ಪುನಃ ಸ್ವವೃಕ್ಷೇ ಸಂಲಗಿತುಂ ನ ಶಕ್ನುವನ್ತಿ?
25 ೨೫ ಸಹೋದರರೇ, ನಿಮ್ಮನ್ನು ನೀವೇ ಬುದ್ಧಿವಂತರೆಂಬುದಾಗಿ ಎಣಿಸಿಕೊಳ್ಳದೆ ಇರಲು ಇದುವರೆಗೆ ಗುಪ್ತವಾಗಿದ್ದ ಒಂದು ಸಂಗತಿ ನಿಮಗೆ ತಿಳಿಸಬೇಕೆಂದು ಅಪೇಕ್ಷಿಸುತ್ತೇನೆ ಅದೇನೆಂದರೆ ಇಸ್ರಾಯೇಲ್ಯರಲ್ಲಿ ಒಂದು ಪಾಲು ಜನರಿಗೆ ಉಂಟಾದ ಮೊಂಡತನವು ಯಾವಾಗಲೂ ಇರದೆ ಅನ್ಯಜನಗಳ ಸಮುದಾಯವು ದೇವರ ರಾಜ್ಯದಲ್ಲಿ ಸೇರುವ ತನಕ ಮಾತ್ರ ಇರುವುದು.
ಹೇ ಭ್ರಾತರೋ ಯುಷ್ಮಾಕಮ್ ಆತ್ಮಾಭಿಮಾನೋ ಯನ್ನ ಜಾಯತೇ ತದರ್ಥಂ ಮಮೇದೃಶೀ ವಾಞ್ಛಾ ಭವತಿ ಯೂಯಂ ಏತನ್ನಿಗೂಢತತ್ತ್ವಮ್ ಅಜಾನನ್ತೋ ಯನ್ನ ತಿಷ್ಠಥ; ವಸ್ತುತೋ ಯಾವತ್ಕಾಲಂ ಸಮ್ಪೂರ್ಣರೂಪೇಣ ಭಿನ್ನದೇಶಿನಾಂ ಸಂಗ್ರಹೋ ನ ಭವಿಷ್ಯತಿ ತಾವತ್ಕಾಲಮ್ ಅಂಶತ್ವೇನ ಇಸ್ರಾಯೇಲೀಯಲೋಕಾನಾಮ್ ಅನ್ಧತಾ ಸ್ಥಾಸ್ಯತಿ;
26 ೨೬ ಆ ನಂತರ ಇಸ್ರಾಯೇಲ್ ಜನರೆಲ್ಲರೂ ರಕ್ಷಣೆಹೊಂದುವರು. ಇದಕ್ಕೆ ಆಧಾರವಾಗಿ ಧರ್ಮಶಾಸ್ತ್ರದಲ್ಲಿ ಬಿಡಿಸುವವನು “ಚೀಯೋನಿನೊಳಗಿಂದ ಹೊರಟು ಬಂದು ಯಾಕೋಬನಲ್ಲಿರುವ ಭಕ್ತಿಹೀನತೆಯನ್ನು ನಿವಾರಣೆಮಾಡುವನು.
ಪಶ್ಚಾತ್ ತೇ ಸರ್ವ್ವೇ ಪರಿತ್ರಾಸ್ಯನ್ತೇ; ಏತಾದೃಶಂ ಲಿಖಿತಮಪ್ಯಾಸ್ತೇ, ಆಗಮಿಷ್ಯತಿ ಸೀಯೋನಾದ್ ಏಕೋ ಯಸ್ತ್ರಾಣದಾಯಕಃ| ಅಧರ್ಮ್ಮಂ ಯಾಕುಬೋ ವಂಶಾತ್ ಸ ತು ದೂರೀಕರಿಷ್ಯತಿ|
27 ೨೭ ನಾನು ಅವರ ಸಂಗಡ ಮಾಡಿಕೊಂಡ ಈ ಒಡಂಬಡಿಕೆಯು ನಾನು ಅವರ ಪಾಪಗಳನ್ನು ಪರಿಹರಿಸುವಾಗ ನೆರವೇರುವುದು.” ಎಂದು ಬರೆದಿದೆ.
ತಥಾ ದೂರೀಕರಿಷ್ಯಾಮಿ ತೇಷಾಂ ಪಾಪಾನ್ಯಹಂ ಯದಾ| ತದಾ ತೈರೇವ ಸಾರ್ದ್ಧಂ ಮೇ ನಿಯಮೋಽಯಂ ಭವಿಷ್ಯತಿ|
28 ೨೮ ಅವರು ಸುವಾರ್ತೆಯನ್ನು ಬೇಡವೆಂದದ್ದರಿಂದ ದೇವರು ನಿಮಗೆ ಹಿತವನ್ನು ಉಂಟುಮಾಡಿ ಅವರನ್ನು ಶತ್ರುಗಳೆಂದೆಣಿಸಿದ್ದಾನೆ. ಆದರೂ ಅವರು ತಾನು ಆರಿಸಿಕೊಂಡ ಪೂರ್ವಿಕರ ವಂಶಸ್ಥರಾಗಿರುವುದರಿಂದ ಅವರನ್ನು ಪ್ರಿಯರೆಂದು ಎಣಿಸಿದ್ದಾನೆ.
ಸುಸಂವಾದಾತ್ ತೇ ಯುಷ್ಮಾಕಂ ವಿಪಕ್ಷಾ ಅಭವನ್ ಕಿನ್ತ್ವಭಿರುಚಿತತ್ವಾತ್ ತೇ ಪಿತೃಲೋಕಾನಾಂ ಕೃತೇ ಪ್ರಿಯಪಾತ್ರಾಣಿ ಭವನ್ತಿ|
29 ೨೯ ದೇವರು ವರಗಳನ್ನು ಅನುಗ್ರಹಿಸುವುದಕ್ಕೆ ಜನರನ್ನು ಕರೆಯುವುದ್ದಕ್ಕೂ ಮನಸ್ಸು ಬದಲಾಯಿಸುವವನಲ್ಲ.
ಯತ ಈಶ್ವರಸ್ಯ ದಾನಾದ್ ಆಹ್ವಾನಾಞ್ಚ ಪಶ್ಚಾತ್ತಾಪೋ ನ ಭವತಿ|
30 ೩೦ ಯಾವ ಪ್ರಕಾರ ನೀವು ಪೂರ್ವದಲ್ಲಿ ಅವಿಧೇಯರಾಗಿದ್ದರೂ ಈಗ ಅವರ ಅವಿಧೇಯತೆಯ ದೆಸೆಯಿಂದ ಕರುಣೆ ಹೊಂದಿದ್ದೀರೋ,
ಅತಏವ ಪೂರ್ವ್ವಮ್ ಈಶ್ವರೇಽವಿಶ್ವಾಸಿನಃ ಸನ್ತೋಽಪಿ ಯೂಯಂ ಯದ್ವತ್ ಸಮ್ಪ್ರತಿ ತೇಷಾಮ್ ಅವಿಶ್ವಾಸಕಾರಣಾದ್ ಈಶ್ವರಸ್ಯ ಕೃಪಾಪಾತ್ರಾಣಿ ಜಾತಾಸ್ತದ್ವದ್
31 ೩೧ ಅದೇ ಪ್ರಕಾರವಾಗಿ ಇಸ್ರಾಯೇಲ್ಯರೂ ಈಗ ಅವಿಧೇಯರಾಗಿದ್ದರೂ ನಿಮಗೆ ದೊರಕಿದ ಕರುಣೆಯನ್ನು ಅವರು ಹೊಂದುವರು.
ಇದಾನೀಂ ತೇಽವಿಶ್ವಾಸಿನಃ ಸನ್ತಿ ಕಿನ್ತು ಯುಷ್ಮಾಭಿ ರ್ಲಬ್ಧಕೃಪಾಕಾರಣಾತ್ ತೈರಪಿ ಕೃಪಾ ಲಪ್ಸ್ಯತೇ|
32 ೩೨ ಯಾಕೆಂದರೆ ದೇವರು ಎಲ್ಲರಿಗೂ ಕರುಣೆಯನ್ನು ತೋರಿಸಬೇಕೆಂಬ ಉದ್ದೇಶವುಳ್ಳವನಾಗಿದ್ದು ಎಲ್ಲರನ್ನೂ ಅವಿಧೇಯತೆಯೆಂಬ ದುಸ್ಥಿತಿಯಲ್ಲಿ ಮುಚ್ಚಿಹಾಕಿದ್ದಾನೆ. (eleēsē )
ಈಶ್ವರಃ ಸರ್ವ್ವಾನ್ ಪ್ರತಿ ಕೃಪಾಂ ಪ್ರಕಾಶಯಿತುಂ ಸರ್ವ್ವಾನ್ ಅವಿಶ್ವಾಸಿತ್ವೇನ ಗಣಯತಿ| (eleēsē )
33 ೩೩ ಆಹಾ ದೇವರ ಐಶ್ವರ್ಯವೂ, ಜ್ಞಾನವೂ, ವಿವೇಕವೂ ಅಗಾಧ. ಆತನ ನ್ಯಾಯತೀರ್ಪುಗಳು ಎಷ್ಟೋ ಆಗಮ್ಯವಾದದ್ದು. ಆತನ ಮಾರ್ಗಗಳು ಆಗೋಚರವಾದವುಗಳೂ ಆಗಿವೆ.
ಅಹೋ ಈಶ್ವರಸ್ಯ ಜ್ಞಾನಬುದ್ಧಿರೂಪಯೋ ರ್ಧನಯೋಃ ಕೀದೃಕ್ ಪ್ರಾಚುರ್ಯ್ಯಂ| ತಸ್ಯ ರಾಜಶಾಸನಸ್ಯ ತತ್ತ್ವಂ ಕೀದೃಗ್ ಅಪ್ರಾಪ್ಯಂ| ತಸ್ಯ ಮಾರ್ಗಾಶ್ಚ ಕೀದೃಗ್ ಅನುಪಲಕ್ಷ್ಯಾಃ|
34 ೩೪ “ಕರ್ತನ ಮನಸ್ಸನ್ನು ತಿಳಿದುಕೊಂಡವರಾರು? ಆತನಿಗೆ ಆಲೋಚನಾಕರ್ತನಾಗಿದ್ದವನು ಯಾರು?
ಪರಮೇಶ್ವರಸ್ಯ ಸಙ್ಕಲ್ಪಂ ಕೋ ಜ್ಞಾತವಾನ್? ತಸ್ಯ ಮನ್ತ್ರೀ ವಾ ಕೋಽಭವತ್?
35 ೩೫ ಮುಂಗಡವಾಗಿ ಆತನಿಗೆ ಕೊಟ್ಟು ಆನಂತರ ಪ್ರತಿಫಲವನ್ನು ತೆಗೆದುಕೊಳ್ಳುವವನು ಯಾರು?”
ಕೋ ವಾ ತಸ್ಯೋಪಕಾರೀ ಭೃತ್ವಾ ತತ್ಕೃತೇ ತೇನ ಪ್ರತ್ಯುಪಕರ್ತ್ತವ್ಯಃ?
36 ೩೬ ಸಮಸ್ತವೂ ಆತನಿಂದ ಉತ್ಪತ್ತಿಯಾಗಿ, ಆತನಿಂದ ನಡೆಯುತ್ತಾ, ಇರುವುದೆಲ್ಲವೂ ಅತನಿಗೋಸ್ಕರವೇ. ಆತನಿಗೇ ಸದಾಕಾಲವೂ ಮಹಿಮೆಯುಂಟಾಗಲಿ ಸ್ತೋತ್ರ. ಅಮೆನ್. (aiōn )
ಯತೋ ವಸ್ತುಮಾತ್ರಮೇವ ತಸ್ಮಾತ್ ತೇನ ತಸ್ಮೈ ಚಾಭವತ್ ತದೀಯೋ ಮಹಿಮಾ ಸರ್ವ್ವದಾ ಪ್ರಕಾಶಿತೋ ಭವತು| ಇತಿ| (aiōn )