< ಪ್ರಕಟಣೆ 4 >
1 ೧ ಆನಂತರ ನಾನು ನೋಡಿದಾಗ, ಪರಲೋಕದಲ್ಲಿ ತೆರೆದಿರುವ ಒಂದು ಬಾಗಿಲು ಕಾಣಿಸಿತು. ಮೊದಲು ನನ್ನೊಡನೆ ಮಾತನಾಡಿದ ವಾಣಿಯು ತುತ್ತೂರಿಯಂತೆ ಮಾತನಾಡುತ್ತದೋ ಎಂಬಂತೆ ನನಗೆ ಕೇಳಿಸಿತು. ಅದು, “ಇಲ್ಲಿಗೆ ಏರಿ ಬಾ, ಮುಂದೆ ಸಂಭವಿಸಬೇಕಾದವುಗಳನ್ನು ನಿನಗೆ ತೋರಿಸಿ ಕೊಡುವೆನು” ಎಂದು ಹೇಳಿತು.
ತತಃ ಪರಂ ಮಯಾ ದೃಷ್ಟಿಪಾತಂ ಕೃತ್ವಾ ಸ್ವರ್ಗೇ ಮುಕ್ತಂ ದ್ವಾರಮ್ ಏಕಂ ದೃಷ್ಟಂ ಮಯಾ ಸಹಭಾಷಮಾಣಸ್ಯ ಚ ಯಸ್ಯ ತೂರೀವಾದ್ಯತುಲ್ಯೋ ರವಃ ಪೂರ್ವ್ವಂ ಶ್ರುತಃ ಸ ಮಾಮ್ ಅವೋಚತ್ ಸ್ಥಾನಮೇತದ್ ಆರೋಹಯ, ಇತಃ ಪರಂ ಯೇನ ಯೇನ ಭವಿತವ್ಯಂ ತದಹಂ ತ್ವಾಂ ದರ್ಶಯಿಷ್ಯೇ|
2 ೨ ಕೂಡಲೆ ನಾನು ದೇವರಾತ್ಮವಶನಾದೆನು, ಆಗ ಇಗೋ ಪರಲೋಕದಲ್ಲಿ ಒಂದು ಸಿಂಹಾಸನವಿತ್ತು. ಸಿಂಹಾಸನದ ಮೇಲೆ ಒಬ್ಬನು ಕುಳಿತಿದ್ದನು.
ತೇನಾಹಂ ತತ್ಕ್ಷಣಾದ್ ಆತ್ಮಾವಿಷ್ಟೋ ಭೂತ್ವಾ ಽಪಶ್ಯಂ ಸ್ವರ್ಗೇ ಸಿಂಹಾಸನಮೇಕಂ ಸ್ಥಾಪಿತಂ ತತ್ರ ಸಿಂಹಾಸನೇ ಏಕೋ ಜನ ಉಪವಿಷ್ಟೋ ಽಸ್ತಿ|
3 ೩ ಕುಳಿತಿದ್ದವನು ಕಣ್ಣಿಗೆ ಸೂರ್ಯಕಾಂತಿ ಪದ್ಮರಾಗ ಮಣಿಗಳಂತೆ ಕಾಣುತ್ತಿದ್ದನು. ಸಿಂಹಾಸನದ ಸುತ್ತಲೂ ಪಚ್ಚೆಯಂತೆ ತೋರುತ್ತಿದ್ದ ಕಾಮನಬಿಲ್ಲು ಇತ್ತು.
ಸಿಂಹಾಸನೇ ಉಪವಿಷ್ಟಸ್ಯ ತಸ್ಯ ಜನಸ್ಯ ರೂಪಂ ಸೂರ್ಯ್ಯಕಾನ್ತಮಣೇಃ ಪ್ರವಾಲಸ್ಯ ಚ ತುಲ್ಯಂ ತತ್ ಸಿಂಹಾಸನಞ್ಚ ಮರಕತಮಣಿವದ್ರೂಪವಿಶಿಷ್ಟೇನ ಮೇಘಧನುಷಾ ವೇಷ್ಟಿತಂ|
4 ೪ ಇದಲ್ಲದೆ ಸಿಂಹಾಸನದ ಸುತ್ತಲೂ ಇಪ್ಪತ್ನಾಲ್ಕು ಸಿಂಹಾಸನಗಳಿದ್ದವು. ಆ ಸಿಂಹಾಸನಗಳ ಮೇಲೆ ಶುಭ್ರವಸ್ತ್ರ ಧರಿಸಿಕೊಂಡಿದ್ದ ಇಪ್ಪತ್ನಾಲ್ಕು ಮಂದಿ ಹಿರಿಯರು ಕುಳಿತಿದ್ದರು. ಅವರ ತಲೆಗಳ ಮೇಲೆ ಚಿನ್ನದ ಕಿರೀಟಗಳಿದ್ದವು.
ತಸ್ಯ ಸಿಂಹಾಸನೇ ಚತುರ್ದಿಕ್ಷು ಚತುರ್ವಿಂಶತಿಸಿಂಹಾಸನಾನಿ ತಿಷ್ಠನ್ತಿ ತೇಷು ಸಿಂಹಾಸನೇಷು ಚತುರ್ವಿಂಶತಿ ಪ್ರಾಚೀನಲೋಕಾ ಉಪವಿಷ್ಟಾಸ್ತೇ ಶುಭ್ರವಾಸಃಪರಿಹಿತಾಸ್ತೇಷಾಂ ಶಿರಾಂಸಿ ಚ ಸುವರ್ಣಕಿರೀಟೈ ರ್ಭೂಷಿತಾನಿ|
5 ೫ ಸಿಂಹಾಸನದಿಂದ ಮಿಂಚು, ಗುಡುಗು, ಗರ್ಜನೆಗಳು ಹೊರ ಹೊಮ್ಮುತ್ತಿದ್ದವು. ಆ ಸಿಂಹಾಸನ ಮುಂದೆ ದೇವರ ಏಳು ಆತ್ಮಗಳನ್ನು ಸೂಚಿಸುವ ಏಳು ದೀಪಗಳು ಉರಿಯುತ್ತಿದ್ದವು.
ತಸ್ಯ ಸಿಂಹಾಸನಸ್ಯ ಮಧ್ಯಾತ್ ತಡಿತೋ ರವಾಃ ಸ್ತನಿತಾನಿ ಚ ನಿರ್ಗಚ್ಛನ್ತಿ ಸಿಂಹಾಸನಸ್ಯಾನ್ತಿಕೇ ಚ ಸಪ್ತ ದೀಪಾ ಜ್ವಲನ್ತಿ ತ ಈಶ್ವರಸ್ಯ ಸಪ್ತಾತ್ಮಾನಃ|
6 ೬ ಇದಲ್ಲದೆ ಸಿಂಹಾಸನದ ಮುಂದೆ ಸ್ಫಟಿಕಕ್ಕೆ ಸಮಾನವಾದ ಗಾಜಿನ ಸಮುದ್ರವಿದ್ದ ಹಾಗೆ ಕಾಣಿಸಿತು. ಸಿಂಹಾಸನದ ಮಧ್ಯದಲ್ಲಿ ಅದರ ನಾಲ್ಕು ಕಡೆಗಳಲ್ಲಿ ನಾಲ್ಕು ಜೀವಿಗಳಿದ್ದವು. ಅವುಗಳಿಗೆ ಹಿಂದೆಯೂ ಮುಂದೆಯೂ ತುಂಬಾ ಕಣ್ಣುಗಳಿದ್ದವು.
ಅಪರಂ ಸಿಂಹಾಸನಸ್ಯಾನ್ತಿಕೇ ಸ್ಫಟಿಕತುಲ್ಯಃ ಕಾಚಮಯೋ ಜಲಾಶಯೋ ವಿದ್ಯತೇ, ಅಪರಮ್ ಅಗ್ರತಃ ಪಶ್ಚಾಚ್ಚ ಬಹುಚಕ್ಷುಷ್ಮನ್ತಶ್ಚತ್ವಾರಃ ಪ್ರಾಣಿನಃ ಸಿಂಹಸನಸ್ಯ ಮಧ್ಯೇ ಚತುರ್ದಿಕ್ಷು ಚ ವಿದ್ಯನ್ತೇ|
7 ೭ ಮೊದಲನೆಯ ಜೀವಿಯು ಸಿಂಹದಂತಿತ್ತು, ಎರಡನೆಯ ಜೀವಿಯು ಹೋರಿಯಂತಿತ್ತು, ಮೂರನೆಯ ಜೀವಿಯ ಮುಖವು ಮನುಷ್ಯನ ಮುಖದಂತಿತ್ತು, ನಾಲ್ಕನೆಯ ಜೀವಿಯು ಹಾರುವ ಹದ್ದಿನಂತಿತ್ತು.
ತೇಷಾಂ ಪ್ರಥಮಃ ಪ್ರಾಣೀ ಸಿಂಹಾಕಾರೋ ದ್ವಿತೀಯಃ ಪ್ರಾಣೀ ಗೋವಾತ್ಸಾಕಾರಸ್ತೃತೀಯಃ ಪ್ರಾಣೀ ಮನುಷ್ಯವದ್ವದನವಿಶಿಷ್ಟಶ್ಚತುರ್ಥಶ್ಚ ಪ್ರಾಣೀ ಉಡ್ಡೀಯಮಾನಕುರರೋಪಮಃ|
8 ೮ ಆ ನಾಲ್ಕು ಜೀವಿಗಳಿಗೆ ಒಂದೊಂದಕ್ಕೆ ಆರಾರು ರೆಕ್ಕೆಗಳಿದ್ದವು. ಸುತ್ತಲೂ ಒಳಗೂ ತುಂಬಾ ಕಣ್ಣುಗಳಿದ್ದವು. ಆ ಜೀವಿಗಳು ಹಗಲಿರುಳು ವಿಶ್ರಮಿಸಿಕೊಳ್ಳದೆ, “ದೇವರಾದ ಕರ್ತನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು, ಆತನು ಸರ್ವಶಕ್ತನು, ಇರುವಾತನು, ಇದ್ದಾತನು, ಬರುವಾತನು” ಎಂದು ಹೇಳುತ್ತಿದ್ದವು.
ತೇಷಾಂ ಚತುರ್ಣಾಮ್ ಏಕೈಕಸ್ಯ ಪ್ರಾಣಿನಃ ಷಟ್ ಪಕ್ಷಾಃ ಸನ್ತಿ ತೇ ಚ ಸರ್ವ್ವಾಙ್ಗೇಷ್ವಭ್ಯನ್ತರೇ ಚ ಬಹುಚಕ್ಷುರ್ವಿಶಿಷ್ಟಾಃ, ತೇ ದಿವಾನಿಶಂ ನ ವಿಶ್ರಾಮ್ಯ ಗದನ್ತಿ ಪವಿತ್ರಃ ಪವಿತ್ರಃ ಪವಿತ್ರಃ ಸರ್ವ್ವಶಕ್ತಿಮಾನ್ ವರ್ತ್ತಮಾನೋ ಭೂತೋ ಭವಿಷ್ಯಂಶ್ಚ ಪ್ರಭುಃ ಪರಮೇಶ್ವರಃ|
9 ೯ ಯುಗಯುಗಾಂತರಗಳಲ್ಲಿಯೂ ಜೀವಿಸುವವನಾಗಿ ಸಿಂಹಾಸನದ ಮೇಲೆ ಕುಳಿತಿರುವಾತನಿಗೆ ಆ ಜೀವಿಗಳು ಮಹಿಮೆ ಗೌರವ ಕೃತಜ್ಞತಾಸ್ತುತಿಗಳನ್ನು ಸಲ್ಲಿಸುತ್ತಿರುವಾಗ, (aiōn )
ಇತ್ಥಂ ತೈಃ ಪ್ರಾಣಿಭಿಸ್ತಸ್ಯಾನನ್ತಜೀವಿನಃ ಸಿಂಹಾಸನೋಪವಿಷ್ಟಸ್ಯ ಜನಸ್ಯ ಪ್ರಭಾವೇ ಗೌರವೇ ಧನ್ಯವಾದೇ ಚ ಪ್ರಕೀರ್ತ್ತಿತೇ (aiōn )
10 ೧೦ ಆ ಇಪ್ಪತ್ನಾಲ್ಕು ಮಂದಿ ಹಿರಿಯರು ಸಿಂಹಾಸನದ ಮೇಲೆ ಕುಳಿತಾತನ ಪಾದಕ್ಕೆ ಅಡ್ಡಬಿದ್ದು, ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ, “ಕರ್ತನೇ ನಮ್ಮ ದೇವರೇ ನೀನು ಮಹಿಮೆಯನ್ನು, ಗೌರವವನ್ನು, ಬಲವನ್ನು ಹೊಂದುವುದಕ್ಕೆ ಯೋಗ್ಯನಾಗಿದ್ದೀ, ಏಕೆಂದರೆ ಸಮಸ್ತವನ್ನು ಸೃಷ್ಟಿಸಿದಾತನು ನೀನೇ. ಎಲ್ಲವೂ ನಿನ್ನ ಚಿತ್ತದಿಂದಲೇ ಇದ್ದವು ಮತ್ತು ನಿನ್ನ ಚಿತ್ತದಿಂದಲೇ ನಿರ್ಮಿತವಾದವು” ಎಂದು ಹೇಳುತ್ತಾ ಯುಗಯುಗಾಂತರಗಳಲ್ಲಿಯೂ ಜೀವಿಸುವಾತನನ್ನು ಆರಾಧಿಸುತ್ತಿದ್ದರು. (aiōn )
ತೇ ಚತುರ್ವಿಂಶತಿಪ್ರಾಚೀನಾ ಅಪಿ ತಸ್ಯ ಸಿಂಹಾಸನೋಪವಿಷ್ಟಸ್ಯಾನ್ತಿಕೇ ಪ್ರಣಿನತ್ಯ ತಮ್ ಅನನ್ತಜೀವಿನಂ ಪ್ರಣಮನ್ತಿ ಸ್ವೀಯಕಿರೀಟಾಂಶ್ಚ ಸಿಂಹಾಸನಸ್ಯಾನ್ತಿಕೇ ನಿಕ್ಷಿಪ್ಯ ವದನ್ತಿ, (aiōn )
ಹೇ ಪ್ರಭೋ ಈಶ್ವರಾಸ್ಮಾಕಂ ಪ್ರಭಾವಂ ಗೌರವಂ ಬಲಂ| ತ್ವಮೇವಾರ್ಹಸಿ ಸಮ್ಪ್ರಾಪ್ತುಂ ಯತ್ ಸರ್ವ್ವಂ ಸಸೃಜೇ ತ್ವಯಾ| ತವಾಭಿಲಾಷತಶ್ಚೈವ ಸರ್ವ್ವಂ ಸಮ್ಭೂಯ ನಿರ್ಮ್ಮಮೇ||