< ಪ್ರಕಟಣೆ 13 >
1 ೧ ಸಮುದ್ರ ತೀರದ ಮರಳಿನ ಮೇಲೆ ನಿಂತನು. ಸಮುದ್ರದಿಂದ ಒಂದು ಮೃಗವು ಏರಿಬರುವುದನ್ನು ಕಂಡೆನು. ಅದಕ್ಕೆ ಏಳು ತಲೆಗಳೂ, ಹತ್ತು ಕೊಂಬುಗಳೂ, ಕೊಂಬುಗಳ ಮೇಲೆ ಹತ್ತು ಕಿರೀಟಗಳೂ, ಹಣೆಗಳ ಮೇಲೆ ದೇವದೂಷಣೆಯ ನಾಮಗಳೂ ಇದ್ದವು.
那時龍就站在海邊的沙上。 我又看見一個獸從海中上來,有十角七頭,在十角上戴着十個冠冕,七頭上有褻瀆的名號。
2 ೨ ನಾನು ಕಂಡ ಮೃಗವು ಚಿರತೆಯಂತಿತ್ತು ಅದರ ಕಾಲುಗಳು ಕರಡಿಯ ಕಾಲುಗಳಂತೆಯೂ ಅದರ ಬಾಯಿ ಸಿಂಹದ ಬಾಯಿಯಂತೆಯೂ ಇದ್ದವು. ಅದಕ್ಕೆ ಘಟಸರ್ಪನು ಶಕ್ತಿಯನ್ನೂ, ಸಿಂಹಾಸನವನ್ನೂ, ಮಹಾ ಅಧಿಕಾರವನ್ನೂ ಕೊಟ್ಟನು.
我所看見的獸,形狀像豹,腳像熊的腳,口像獅子的口。那龍將自己的能力、座位,和大權柄都給了牠。
3 ೩ ಅದರ ತಲೆಗಳಲ್ಲಿ ಒಂದು ತಲೆ ಗಾಯಹೊಂದಿ ಸಾಯುವ ಹಾಗಿರುವುದನ್ನು ಕಂಡೆನು. ಆ ಮರಣಕರವಾದ ಗಾಯವು ವಾಸಿಯಾಯಿತು, ಭೂಲೋಕದವರೆಲ್ಲರು ಆ ಮೃಗವನ್ನು ನೋಡುತ್ತಾ ಆಶ್ಚರ್ಯಪಟ್ಟರು.
我看見獸的七頭中,有一個似乎受了死傷,那死傷卻醫好了。全地的人都希奇跟從那獸,
4 ೪ ಘಟಸರ್ಪನು ಆ ಮೃಗಕ್ಕೆ ಅಧಿಕಾರವನ್ನು ಕೊಟ್ಟವನಾದ್ದರಿಂದ ಅವರು ಆ ಘಟಸರ್ಪನಿಗೆ ಆರಾಧನೆ ಮಾಡಿದರು. ಇದಲ್ಲದೆ ಆ ಮೃಗಕ್ಕೂ ಆರಾಧನೆ ಮಾಡಿ, “ಈ ಮೃಗಕ್ಕೆ ಸಮಾನರು ಯಾರು? ಇದರ ವಿರುದ್ಧ ಯುದ್ಧ ಮಾಡುವುದಕ್ಕೆ ಯಾರು ಶಕ್ತರು?” ಎಂದರು.
又拜那龍-因為牠將自己的權柄給了獸,也拜獸,說:「誰能比這獸,誰能與牠交戰呢?」
5 ೫ ಬಡಾಯಿಮಾತುಗಳನ್ನೂ ದೂಷಣೆಯ ಮಾತುಗಳನ್ನೂ ಆಡುವ ಬಾಯಿ ಅದಕ್ಕೆ ಕೊಡಲ್ಪಟ್ಟಿತು ಮತ್ತು ನಲವತ್ತೆರಡು ತಿಂಗಳ ಪರ್ಯಂತರ ತನ್ನ ಕಾರ್ಯಗಳನ್ನು ನಡಿಸುವ ಅಧಿಕಾರವೂ ಅದಕ್ಕೆ ಕೊಡಲ್ಪಟ್ಟಿತು.
又賜給牠說誇大褻瀆話的口,又有權柄賜給牠,可以任意而行四十二個月。
6 ೬ ಆ ಮೃಗವು ಬಾಯಿದೆರೆದು ದೇವರನ್ನು ದೂಷಿಸಿದ್ದಲ್ಲದೆ ಆತನ ನಾಮವನ್ನೂ, ಆತನು ವಾಸಿಸುವ ನಿವಾಸವನ್ನೂ, ಪರಲೋಕ ನಿವಾಸಿಗಳನ್ನೂ ದೂಷಿಸಿತು.
獸就開口向上帝說褻瀆的話,褻瀆上帝的名並他的帳幕,以及那些住在天上的。
7 ೭ ಇದಲ್ಲದೆ ದೇವಜನರ ಮೇಲೆ ಯುದ್ಧ ಮಾಡಿ ಅವರನ್ನು ಜಯಿಸುವುದಕ್ಕೆ ಅದಕ್ಕೆ ಅಧಿಕಾರ ಕೊಡಲ್ಪಟ್ಟಿತು ಮತ್ತು ಸಕಲ ಕುಲ, ಜನ, ಭಾಷೆ, ಜನಾಂಗಗಳ ಮೇಲೆ ಅದಕ್ಕೆ ಅಧಿಕಾರವು ಕೊಡಲ್ಪಟ್ಟಿತು.
又任憑牠與聖徒爭戰,並且得勝;也把權柄賜給牠,制伏各族、各民、各方、各國。
8 ೮ ಜಗದುತ್ಪತ್ತಿಗೆ ಮೊದಲೇ ಕೊಯ್ಯಲ್ಪಟ್ಟ ಕುರಿಮರಿಯಾದಾತನ ಬಳಿಯಲ್ಲಿರುವ ಜೀವಬಾಧ್ಯರ ಪುಸ್ತಕದಲ್ಲಿ ಯಾರಾರ ಹೆಸರುಗಳು ಬರೆದಿರುವುದಿಲ್ಲವೋ ಆ ಭೂನಿವಾಸಿಗಳೆಲ್ಲರೂ ಅದಕ್ಕೆ ಆರಾಧನೆ ಮಾಡುವರು.
凡住在地上、名字從創世以來沒有記在被殺之羔羊生命冊上的人,都要拜牠。
10 ೧೦ ಸೆರೆಹಿಡಿಯುವವನು ತಾನೇ ಸೆರೆಗೆ ಹೋಗುವನು, ಕತ್ತಿಯಿಂದ ಕೊಲ್ಲುವವನು ಕತ್ತಿಯಿಂದಲೇ ಸಾಯುವನು. ಇದರಲ್ಲಿ ದೇವಜನರಿಗೆ ತಾಳ್ಮೆಯೂ ನಂಬಿಕೆಯೂ ಅಗತ್ಯವಾಗಿರಬೇಕಾಗಿದೆ.
擄掠人的,必被擄掠; 用刀殺人的,必被刀殺。 聖徒的忍耐和信心就是在此。
11 ೧೧ ಮತ್ತೊಂದು ಮೃಗವು ಭೂಮಿಯೊಳಗಿಂದ ಬರುವುದನ್ನು ಕಂಡೆನು. ಇದಕ್ಕೆ ಕುರಿಮರಿಗಿರುವಂತೆ ಎರಡು ಕೊಂಬುಗಳಿದ್ದವು, ಅದು ಘಟಸರ್ಪದಂತೆ ಮಾತನಾಡಿತು.
我又看見另有一個獸從地中上來,有兩角如同羊羔,說話好像龍。
12 ೧೨ ಈ ಮೃಗವು ಮೊದಲನೆಯ ಮೃಗದ ಎದುರು ತನ್ನ ಅಧಿಕಾರವನ್ನೆಲ್ಲಾ ನಡೆಸಿ, ಮರಣಕರವಾದ ಗಾಯ ವಾಸಿಯಾದ ಮೊದಲನೆಯ ಮೃಗಕ್ಕೆ ಭೂಲೋಕವೂ ಭೂನಿವಾಸಿಗಳೂ ಆರಾಧಿಸುವಂತೆ ಮಾಡಿತು.
牠在頭一個獸面前,施行頭一個獸所有的權柄,並且叫地和住在地上的人拜那死傷醫好的頭一個獸。
13 ೧೩ ಇದು ಜನರ ಮುಂದೆ ಬೆಂಕಿ ಆಕಾಶದಿಂದ ಭೂಮಿಗೆ ಇಳಿದುಬರುವಂತಹ ಅದ್ಭುತಕಾರ್ಯಗಳನ್ನು ಮಾಡುತ್ತಾ,
又行大奇事,甚至在人面前,叫火從天降在地上。
14 ೧೪ ಆ ಮೊದಲನೆಯ ಮೃಗದ ಸನ್ನಿಧಿಯಲ್ಲಿ ಮಹತ್ಕಾರ್ಯಗಳನ್ನು ಮಾಡುವ ಅಧಿಕಾರವಿರುವುದರಿಂದ ಭೂನಿವಾಸಿಗಳನ್ನು ಮರಳುಗೊಳಿಸಿತ್ತು. ಅವರಿಗೆ, ಕತ್ತಿಯಿಂದ ಗಾಯಹೊಂದಿ ಸಾಯದೆ ಬದುಕಿದ ಮೃಗದ ಘನಕ್ಕಾಗಿ ವಿಗ್ರಹವನ್ನು ಮಾಡಿಸಿಕೊಳ್ಳಬೇಕೆಂದು ಬೋಧಿಸಿತು.
牠因賜給牠權柄在獸面前能行奇事,就迷惑住在地上的人,說:「要給那受刀傷還活着的獸作個像。」
15 ೧೫ ಇದಲ್ಲದೆ ಆ ಮೃಗದ ವಿಗ್ರಹಕ್ಕೆ ಜೀವಕೊಡುವ ಸಾಮರ್ಥ್ಯವು ಇದಕ್ಕೆ ದೊರೆಯಿತು. ಆ ಮೃಗದ ವಿಗ್ರಹವು ಮಾತನಾಡುವುದಲ್ಲದೆ, ತನ್ನನ್ನು ಆರಾಧಿಸದವರೆಲ್ಲರಿಗೂ ಮರಣದಂಡನೆಯಾಗುವಂತೆ ಮಾಡುವ ಶಕ್ತಿಯು ಆದಕ್ಕಿತ್ತು.
又有權柄賜給牠,叫獸像有生氣,並且能說話,又叫所有不拜獸像的人都被殺害。
16 ೧೬ ಈ ಎರಡನೆಯ ಮೃಗವು, ದೊಡ್ಡವರು, ಚಿಕ್ಕವರು, ಐಶ್ವರ್ಯವಂತರು, ಬಡವರು, ಸ್ವತಂತ್ರರು, ದಾಸರು ಎಲ್ಲರೂ ತಮ್ಮತಮ್ಮ ಬಲಗೈಯ ಮೇಲಾಗಲಿ, ಹಣೆಯ ಮೇಲಾಗಲಿ ಗುರುತನ್ನು ಹೊಂದಬೇಕೆಂದು ಒತ್ತಾಯ ಮಾಡಿತ್ತು.
牠又叫眾人,無論大小、貧富、自主的、為奴的,都在右手上或是在額上受一個印記。
17 ೧೭ ಆ ಗುರುತು ಯಾರಿಗಿಲ್ಲವೋ ಅವರು ಕ್ರಯ ವಿಕ್ರಯಗಳನ್ನು ನಡೆಸಲು ಸಾಧ್ಯವಿರಲಿಲ್ಲ. ಆ ಗುರುತು ಯಾವುದೆಂದರೆ ಮೊದಲನೆಯ ಮೃಗದ ಹೆಸರು ಅಥವಾ ಅದರ ಹೆಸರನ್ನು ಸೂಚಿಸುವ ಸಂಖ್ಯೆ.
除了那受印記、有了獸名或有獸名數目的,都不得做買賣。
18 ೧೮ ಇದನ್ನು ಗ್ರಹಿಸಲು ಜ್ಞಾನವು ಅಗತ್ಯವಾಗಿದೆ. ಬುದ್ಧಿವಂತನು ಆ ಮೃಗದ ಸಂಖ್ಯೆಯನ್ನು ಎಣಿಸಲಿ, ಅದು ಒಬ್ಬ ಮನುಷ್ಯನನ್ನು ಸೂಚಿಸುವ ಸಂಖ್ಯೆಯಾಗಿದೆ. ಅದರ ಸಂಖ್ಯೆಯು 666.
在這裏有智慧:凡有聰明的,可以算計獸的數目;因為這是人的數目,它的數目是六百六十六。