< ಕೀರ್ತನೆಗಳು 99 >
1 ೧ ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ; ಜನಾಂಗಗಳು ನಡುಗಲಿ. ಕೆರೂಬಿಯರ ಮಧ್ಯದಲ್ಲಿ ಆಸೀನನಾಗಿರುವಾತನು ಆಳುತ್ತಾನೆ; ಭೂಮಿಯು ಕಂಪಿಸಲಿ.
Awurade di hene, momma amanaman no ho mpopo; ɔte nʼahengua so wɔ kerubim ntam, ma asase nwosow.
2 ೨ ಚೀಯೋನಿನಲ್ಲಿರುವ ಯೆಹೋವನು ದೊಡ್ಡವನು; ಆತನು ಎಲ್ಲಾ ಜನಾಂಗಗಳಲ್ಲಿ ಮಹೋನ್ನತನು.
Awurade a ɔwɔ Sion yɛ ɔkɛse; wɔama no so wɔ amanaman nyinaa mu.
3 ೩ ಅವರು ಯೆಹೋವನ ಭಯಂಕರವಾದ ಮಹಾನಾಮವನ್ನು ಕೊಂಡಾಡಲಿ; ಆತನು ಪರಿಶುದ್ಧನು.
Ma wɔnkamfo wo din a ɛso na ɛyɛ nwonwa no, ɔyɛ ɔkronkron.
4 ೪ ಪರಾಕ್ರಮಿಯಾದ ಅರಸನು ನೀತಿಯನ್ನು ಪ್ರೀತಿಸುತ್ತಾನೆ; ಯಥಾರ್ಥವಾದದ್ದನ್ನು ಸ್ಥಾಪಿಸಿದವನೂ, ಯಾಕೋಬ್ಯರಲ್ಲಿ ನ್ಯಾಯ, ನೀತಿಗಳನ್ನು ಸಿದ್ಧಿಗೆ ತಂದವನೂ ನೀನೇ.
Ɔhene no yɛ ɔkɛse, ɔdɔ atɛntrenee, woama pɛpɛyɛ atim; wayɛ nea eye na ɛteɛ wɔ Yakob mu.
5 ೫ ನಮ್ಮ ಯೆಹೋವ ದೇವರನ್ನು ಘನಪಡಿಸಿರಿ; ಆತನ ಪಾದಪೀಠದ ಮುಂದೆ ಅಡ್ಡಬೀಳಿರಿ. ಆತನು ಪರಿಶುದ್ಧನು.
Momma Awurade, yɛn Nyankopɔn so na monsɔre no wɔ ne nan ntiaso anim; ɔyɛ ɔkronkron.
6 ೬ ಆತನ ಯಾಜಕರಲ್ಲಿ ಮೋಶೆ ಮತ್ತು ಆರೋನರೂ, ಆತನ ಹೆಸರಿನಲ್ಲಿ ಪ್ರಾರ್ಥಿಸುವವರೊಳಗೆ ಸಮುವೇಲನೂ ಪ್ರಾರ್ಥಿಸಿದಾಗೆಲ್ಲ, ಯೆಹೋವನು ಅವರಿಗೆ ಸದುತ್ತರವನ್ನು ದಯಪಾಲಿಸುತ್ತಿದ್ದನು.
Na Mose ne Aaron ka nʼasɔfo no ho, na Samuel ka wɔn a wɔbɔɔ ne din no ho; wɔfrɛɛ Awurade, na ogyee wɔn so.
7 ೭ ಆತನು ಮೇಘಸ್ತಂಭದಲ್ಲಿದ್ದು ಅವರೊಡನೆ ಮಾತನಾಡುತ್ತಿದ್ದನು; ಅವರು ಆತನ ವಿಧಿನಿಯಮಗಳನ್ನು ಕೈಕೊಂಡವರು.
Ofi omununkum dum mu kasa kyerɛɛ wɔn; wodii mmara ne ahyɛde a ɔmaa wɔn no so.
8 ೮ ನಮ್ಮ ಯೆಹೋವ ದೇವರೇ, ಅವರಿಗೆ ಸದುತ್ತರ ಕೊಟ್ಟವನು ನೀನೇ. ನೀನು ದುಷ್ಕೃತ್ಯಗಳಿಗಾಗಿ ಅವರನ್ನು ದಂಡಿಸುತ್ತಿದ್ದರೂ, ಕ್ಷಮಿಸುವ ದೇವರಾಗಿದ್ದಿ.
Awurade, yɛn Nyankopɔn, wugyee wɔn so; woyɛɛ bɔnefakyɛ Nyankopɔn maa Israel, nanso wotwee wɔn aso wɔ wɔn nnebɔne ho.
9 ೯ ನಮ್ಮ ಯೆಹೋವ ದೇವರನ್ನು ಘನಪಡಿಸಿರಿ; ಆತನ ಪರಿಶುದ್ಧಪರ್ವತದ ಕಡೆಗೆ ಅಡ್ಡಬೀಳಿರಿ. ನಮ್ಮ ಯೆಹೋವ ದೇವರು ಪರಿಶುದ್ಧನು.
Momma Awurade yɛn Nyankopɔn so na monsɔre no wɔ ne bepɔw kronkron no so, na Awurade yɛn Nyankopɔn yɛ ɔkronkron.