< ಕೀರ್ತನೆಗಳು 79 >
1 ೧ ಆಸಾಫನ ಕೀರ್ತನೆ. ದೇವರೇ, ಮ್ಲೇಚ್ಛರು ನಿನ್ನ ಸ್ವತ್ತನ್ನು ಹೊಕ್ಕು, ನಿನ್ನ ಪರಿಶುದ್ಧಾಲಯವನ್ನು ಹೊಲೆಮಾಡಿದರು; ಯೆರೂಸಲೇಮ್ ಪಟ್ಟಣವನ್ನು ಹಾಳು ದಿಬ್ಬಗಳನ್ನಾಗಿ ಮಾಡಿಬಿಟ್ಟರು.
Asaf dwom. Ao Onyankopɔn, amanaman no atow ahyɛ wʼagyapade so; wɔagu wʼasɔredan kronkron no ho fi, wɔama Yerusalem adan nnwiriwii.
2 ೨ ಅವರು ನಿನ್ನ ಸೇವಕರ ಹೆಣಗಳನ್ನು ಆಕಾಶದ ಪಕ್ಷಿಗಳಿಗೆ ಆಹಾರಮಾಡಿದರು; ನಿನ್ನ ಭಕ್ತರ ದೇಹವನ್ನು ಕಾಡುಮೃಗಗಳಿಗೆ ಹಾಕಿದರು.
Wɔde wʼasomfo afunu ayɛ aduan ama wim nnomaa, na wɔde wʼahotefo nam ama asase so mmoa.
3 ೩ ಯೆರೂಸಲೇಮಿನ ಸುತ್ತಲೂ ಅವರ ರಕ್ತವನ್ನು ನೀರಿನ ಹಾಗೆ ಚೆಲ್ಲಿದರು; ಅವರನ್ನು ಹೂಣಿಡುವವರು ಯಾರೂ ಇರಲಿಲ್ಲ.
Wɔahwie mogya agu te sɛ nsu wɔ Yerusalem ho nyinaa, na obiara nni hɔ a obesie awufo no.
4 ೪ ನಾವು ನಮ್ಮ ನೆರೆಹೊರೆಯ ಜನಾಂಗಗಳಿಗೆ ನಿಂದಾಸ್ಪದರಾದೆವು; ಸುತ್ತಣ ಜನರ ಪರಿಹಾಸ್ಯ ಮತ್ತು ತಿರಸ್ಕಾರಕ್ಕೆ ಗುರಿಯಾದೆವು.
Yɛayɛ animtiaabude ama yɛn mfɛfo, fɛwdi ne nsopa ama wɔn a wɔatwa yɛn ho ahyia.
5 ೫ ಯೆಹೋವನೇ, ಇನ್ನೆಷ್ಟರವರೆಗೆ ಕೋಪವುಳ್ಳವನಾಗಿರುವಿ? ನಿನ್ನ ರೋಷಾಗ್ನಿಯು ಸದಾಕಾಲವೂ ಉರಿಯುತ್ತಲಿರಬೇಕೋ?
Awurade, enkosi da bɛn? Wo bo befuw afebɔɔ ana? Wo ninkunu bɛdɛw sɛ ogya akosi da bɛn?
6 ೬ ನಿನ್ನನ್ನು ಅರಿಯದ ಮ್ಲೇಚ್ಛರ ಮೇಲೆಯೂ, ನಿನ್ನ ನಾಮವನ್ನು ಉಚ್ಚರಿಸದ ರಾಜ್ಯಗಳ ಮೇಲೆಯೂ, ನಿನ್ನ ರೌದ್ರವನ್ನು ಸುರಿದುಬಿಡು.
Hwie wʼabufuw gu amanaman a wonnye wo nto mu no so, ahenni a wɔmmɔ wo din no;
7 ೭ ಅವರು ಯಾಕೋಬ್ ವಂಶದವರನ್ನು ನುಂಗಿಬಿಟ್ಟು, ಅವರ ವಾಸಸ್ಥಳಗಳನ್ನು ಹಾಳುಮಾಡಿದ್ದಾರೆ.
efisɛ wɔakum Yakob na wɔasɛe nʼatenae.
8 ೮ ಪೂರ್ವಿಕರ ಅಪರಾಧಗಳನ್ನು ನಮ್ಮ ಹಾನಿಗಾಗಿ ನೆನಪಿಸಿಕೊಳ್ಳಬೇಡ. ಬೇಗನೆ ನಿನ್ನ ಕನಿಕರವು ನಮ್ಮನ್ನು ಎದುರುಗೊಳ್ಳಲಿ; ಬಹಳವಾಗಿ ಕುಗ್ಗಿಹೋಗಿದ್ದೇವೆ.
Mfa yɛn agyanom bɔne so asotwe mma yɛn; ma wo mmɔborɔhunu mmra yɛn so ntɛm, na yɛwɔ ahohiahia mu.
9 ೯ ನಮ್ಮನ್ನು ರಕ್ಷಿಸುವ ದೇವರೇ, ನಿನ್ನ ನಾಮದ ಘನತೆಗೋಸ್ಕರ ಸಹಾಯಮಾಡು; ನಿನ್ನ ಹೆಸರಿಗೆ ತಕ್ಕಂತೆ ರಕ್ಷಿಸಿ ನಮ್ಮ ಪಾಪಗಳನ್ನು ಅಳಿಸಿಬಿಡು.
Onyankopɔn yɛn Agyenkwa, boa yɛn, wo din no anuonyam nti; gye yɛn na fa yɛn bɔne kyɛ yɛn wo din nti.
10 ೧೦ ಮ್ಲೇಚ್ಛರು, “ಅವರ ದೇವರು ಎಲ್ಲಿ?” ಎಂದು ಕೇಳುವುದೇಕೆ? ನಿನ್ನ ಸೇವಕರ ರಕ್ತವನ್ನು ಸುರಿಸಿದವರಿಗೆ ನಮ್ಮ ಮುಂದೆಯೇ ದಂಡನೆಯಾದದ್ದು, ಜನಾಂಗಗಳಿಗೆ ಗೊತ್ತಾಗಲಿ.
Adɛn nti na ɛsɛ sɛ amanaman ka se, “Wɔn Nyankopɔn wɔ he?” Yɛn anim ha ara, ma wonhu wɔ amanaman mu sɛ wotɔ wʼasomfo mogya a wɔahwie agu no so werɛ.
11 ೧೧ ಸೆರೆಹೋದವರ ನರಳುವಿಕೆಯು ನಿನ್ನ ಲಕ್ಷ್ಯಕ್ಕೆ ಬರಲಿ; ಸಾಯಲಿರುವವರನ್ನು ನಿನ್ನ ಭುಜಮಹತ್ತಿನಿಂದ ಉಳಿಸು.
Ma nneduafo no apinisi nnu wʼanim; fa wo basa ahoɔden no kora wɔn a wɔabu wɔn kumfɔ no.
12 ೧೨ ಸ್ವಾಮಿಯೇ, ನಿನ್ನನ್ನು ನಿಂದಿಸಿದ ಸುತ್ತಣ ಜನಾಂಗಗಳ ಉಡಿಲಲ್ಲಿ, ಏಳರಷ್ಟು ನಿಂದನೆ ತುಂಬಿರುವಂತೆ ಮಾಡು.
Awurade, ahohora a yɛn mfɛfo asum agu wo so no, tua wɔn so ka mpɛn ason.
13 ೧೩ ನಿನ್ನ ಪ್ರಜೆಯೂ, ನೀನು ಪಾಲಿಸುವ ಮಂದೆಯೂ ಆಗಿರುವ ನಾವಾದರೋ, ಸದಾ ನಿನ್ನನ್ನು ಸ್ತುತಿಸುವವರಾಗಿ, ಮುಂದಣ ಸಂತಾನದವರೆಲ್ಲರಿಗೂ ನಿನ್ನ ಮಹತ್ತನ್ನು ವರ್ಣಿಸುತ್ತಾ ಹೋಗುವೆವು.
Na yɛn a yɛyɛ wo nkurɔfo, wʼadidibea nguan no, beyi wo ayɛ daa nyinaa; efi awo ntoatoaso kosi awo ntoatoaso, yɛbɛkɔ so aka wʼayeyi akyerɛ.