< ಕೀರ್ತನೆಗಳು 74 >
1 ೧ ಆಸಾಫನ ಪದ್ಯ. ದೇವರೇ, ನೀನು ನಮ್ಮನ್ನು ಸಂಪೂರ್ಣವಾಗಿ ತಳ್ಳಿಬಿಟ್ಟಿದ್ದೇಕೆ? ನೀನು ಪಾಲಿಸುವ ಹಿಂಡಿನ ಮೇಲೆ ನಿನ್ನ ಕೋಪಾಗ್ನಿಯ ಹೊಗೆ ಏರುವುದೇಕೆ?
Asaf yazƣan «Masⱪil»: — I Huda, Sǝn nemixⱪa mǝnggügǝ bizni taxliwǝtting? Nemixⱪa ƣǝzipingni tütün qiⱪarƣandǝk Ɵz yayliⱪingdiki ⱪoyliringƣa qiⱪirisǝn?
2 ೨ ನೀನು ಹಿಂದಿನ ಕಾಲದಲ್ಲಿ ಸ್ವಕುಲವಾಗಿರಬೇಕೆಂದು ಬಿಡುಗಡೆ ಮಾಡಿ ಸಂಪಾದಿಸಿಕೊಂಡ ನಿನ್ನ ಸಭಾಮಂಡಲಿಯನ್ನು ಜ್ಞಾಪಿಸಿಕೋ; ನಿನ್ನ ವಾಸಸ್ಥಾನವಾಗಿದ್ದ ಚೀಯೋನ್ ಪರ್ವತವನ್ನು ಮರೆಯಬೇಡ.
Ɵzüng rǝnǝ tɵlǝp azad ⱪilƣan jamaitingni, Yǝni Ɵz mirasing boluxⱪa ⱪǝdimdǝ ularƣa ⱨǝmjǝmǝt bolup ⱪutⱪuzƣan ⱪǝbilini, Ɵzüng makan ⱪilƣan Zion teƣini yadingƣa kǝltürgǝysǝn!
3 ೩ ಬಹುಕಾಲದಿಂದ ಹಾಳುಬಿದ್ದಿರುವ ಈ ಸ್ಥಾನದ ಕಡೆಗೆ ನೀನು ಹೆಜ್ಜೆ ಹಾಕು. ನೋಡು, ವೈರಿಯು ಪವಿತ್ರಾಲಯದಲ್ಲಿ ಎಲ್ಲವನ್ನು ಕೆಡವಿಬಿಟ್ಟಿದ್ದಾನೆ.
Ⱪǝdǝmliringni muxu mǝnggülük harabliⱪlarƣa ⱪaratⱪaysǝn, Düxmǝnlǝr muⱪǝddǝs jayingda gumran ⱪilƣan barliⱪ nǝrsilǝrgǝ [ⱪariƣaysǝn];
4 ೪ ನಿನ್ನ ದರ್ಶನಾಲಯದ ಮಧ್ಯದಲ್ಲಿ ನಿನ್ನ ವಿರೋಧಿಗಳು ಆರ್ಭಟಿಸುತ್ತಾರೆ; ನಮ್ಮ ಆರಾಧನಾ ಚಿಹ್ನೆಗಳನ್ನು ತೆಗೆದು ತಮ್ಮ ಚಿಹ್ನೆಗಳನ್ನು ಇಟ್ಟಿದ್ದಾರೆ.
Rǝⱪibliring jamaǝtgaⱨingning otturisida ⱨɵr-pɵr ⱪilidu; Mɵjizatlar saⱪlanƣan orunƣa ular ɵz tuƣlirini tikti.
5 ೫ ಮರಗಳ ಗುಂಪಿನಲ್ಲಿ ಕೊಡಲಿಗಳನ್ನು ಮೇಲೆತ್ತುವ ಜನರೋ ಎಂಬಂತಿದ್ದಾರೆ.
Ⱨǝrbiri ɵzlirini kɵrsitixip, palta oynitip orman kǝsküqidǝk,
6 ೬ ನೋಡು, ಅವರು ಈಗ ಕೈಕೊಡಲಿ ಮತ್ತು ಸುತ್ತಿಗೆಗಳಿಂದ, ದೇವಾಲಯದ ಕೆತ್ತನೆಯ ಕೆಲಸವನ್ನೆಲ್ಲಾ ಹೊಡೆದುಹಾಕುತ್ತಿದ್ದಾರೆ.
Ular ⱨazir [muⱪǝddǝs jayingdiki] nǝⱪixlǝrni ala ⱪoymay, palta-bolⱪilar bilǝn qeⱪiwǝtti;
7 ೭ ಅವರು ನಿನ್ನ ಪವಿತ್ರಾಲಯಕ್ಕೆ ಬೆಂಕಿ ಹಚ್ಚಿ, ನಿನ್ನ ನಾಮಕ್ಕೆ ಪ್ರತಿಷ್ಠಿತವಾದ ಮಂದಿರವನ್ನು ಹೊಲೆಮಾಡಿ, ನೆಲಸಮಗೊಳಿಸಿದ್ದಾರೆ.
Ular muⱪǝddǝs jayingƣa ot ⱪoydi; Ɵz namingdiki makanni bulƣap, yǝr bilǝn tǝng ⱪiliwǝtti.
8 ೮ “ನಾವು ಈ ಜನವನ್ನೆಲ್ಲಾ ಸಂಹರಿಸಿಬಿಡೋಣ” ಅಂದುಕೊಂಡಿದ್ದಾರೆ; ದೇಶದಲ್ಲಿರುವ ನಿನ್ನ ಎಲ್ಲಾ ಸಭಾಮಂದಿರಗಳನ್ನು ಸುಟ್ಟುಬಿಟ್ಟಿದ್ದಾರೆ.
Ular kɵnglidǝ: «Biz bularning ⱨǝmmisini yoⱪitayli» dǝp, Tǝngrining zemindiki jamaǝtgaⱨlirining ⱨǝrbirini kɵydürüwǝtti.
9 ೯ ನಮ್ಮ ಆರಾಧನಾ ಚಿಹ್ನೆಗಳು ಈಗ ಕಾಣುವುದಿಲ್ಲ. ಮುಂಚೆ ಇದ್ದಂತೆ ನಮಗೆ ಪ್ರವಾದಿಗಳು ಯಾರೂ ಇಲ್ಲ; ಇದು ಎಷ್ಟರವರೆಗೆ ಇರುವುದೆಂದು ಬಲ್ಲವರು ನಮ್ಮಲ್ಲಿ ಯಾರೂ ಇಲ್ಲ.
Bizgǝ ǝslǝtmǝ bolƣan mɵjizatlarni ⱨeq kɵrǝlmǝymiz; Pǝyƣǝmbǝrlǝrmu kǝlmǝskǝ kǝtti; Arimizdimu bu ixlarning ⱪaqanƣiqǝ bolidiƣanliⱪini bilidiƣan birsi yoⱪtur.
10 ೧೦ ದೇವರೇ, ವಿರೋಧಿಗಳು ಇನ್ನೆಲ್ಲಿಯ ತನಕ ನಿಂದಿಸುತ್ತಿರಬೇಕು? ವೈರಿಗಳು ನಿನ್ನ ನಾಮವನ್ನು ಸದಾಕಾಲವೂ ತಿರಸ್ಕರಿಸಬಹುದೋ?
Ⱪaqanƣiqǝ, i Huda, rǝⱪibing Seni mǝshirǝ ⱪilidu? Düxmǝn namingni mǝnggügǝ ⱨaⱪarǝtlǝmdu?
11 ೧೧ ಚಾಚಿದ ಬಲಗೈಯನ್ನು ಏಕೆ ಹಿಂದೆಗೆದಿದ್ದೀ? ಅದನ್ನು ಎದೆಯ ಮೇಲಿನಿಂದ ತೆಗೆದು ಅವರನ್ನು ಸಂಹರಿಸಿಬಿಡು.
Sǝn ⱪolungni, yǝni ong ⱪolungni nemixⱪa tartiwalisǝn? Ⱪolungni ⱪoynungdin elip, ularni yoⱪatⱪaysǝn!
12 ೧೨ ದೇವರೇ, ನೀನು ಮೊದಲಿನಿಂದಲೂ ನನ್ನ ಅರಸನೂ, ಲೋಕಮಧ್ಯದಲ್ಲಿ ರಕ್ಷಣೆಗಳನ್ನು ನಡೆಸಿದಾತನೂ ಆಗಿದ್ದೀಯಲ್ಲವೇ?
Biraⱪ Huda ⱪǝdimdin padixaⱨim bolup kǝlgǝn, Yǝr yüzining otturisida ⱪutⱪuzuxlarni elip barƣuqi Udur.
13 ೧೩ ಸ್ವಶಕ್ತಿಯಿಂದ ಸಮುದ್ರವನ್ನು ಭೇದಿಸಿದವನು ನೀನು; ಜಲರಾಶಿಯ ಮೇಲೆ ತಿಮಿಂಗಿಲಗಳ ತಲೆಗಳನ್ನು ಜಜ್ಜಿಬಿಟ್ಟವನು ನೀನು.
Sǝn dengiz süyini küqüng bilǝn bɵldung, Sulardiki ǝjdiⱨalarning baxlirini yarding.
14 ೧೪ ಲಿವ್ಯಾತಾನನ ಶಿರಚ್ಛೇದನೆಮಾಡಿ, ಅಡವಿಯ ಮೃಗಸಮುದಾಯಕ್ಕೆ ಆಹಾರ ಕೊಟ್ಟವನು ನೀನು.
Dengizdiki lewiatanning baxlirini qeⱪip, Uning gɵxini ozuⱪ ⱪilip qɵldiki yawayilarƣa bɵlüp bǝrding.
15 ೧೫ ಬುಗ್ಗೆಹಳ್ಳಗಳನ್ನು ಉಕ್ಕಿಸಿದವನು ನೀನು; ಮಹಾನದಿಗಳನ್ನು ಒಣಗಿಸಿಬಿಟ್ಟವನು ನೀನು.
Yǝrni yerip bulaⱪlarni, eriⱪlarni aⱪⱪuzdung, Sǝn tohtimay eⱪiwatⱪan dǝryalarni ⱪurutuwǝtting.
16 ೧೬ ಹಗಲಿರುಳುಗಳನ್ನು ನೇಮಿಸಿದವನು ನೀನು; ಸೂರ್ಯ ಮತ್ತು ಜ್ಯೋತಿರ್ಮಂಡಲಗಳ ನಿರ್ಮಾಪಕನು ನೀನು.
Kün Sening, tünmu Seningkidur; Ay bilǝn ⱪuyaxni orunlaxturdung.
17 ೧೭ ಭೂಮಿಯ ಎಲ್ಲಾ ಮೇರೆಗಳನ್ನು ಸ್ಥಾಪಿಸಿದವನು ನೀನು; ಬೇಸಿಗೆ ಮತ್ತು ಚಳಿಗಾಲಗಳನ್ನು ನೇಮಿಸಿದವನು ನೀನು.
Yǝr yüzining qegralirini bǝlgiliding; Yaz bilǝn ⱪixni — Sǝn xǝkillǝndürdüng.
18 ೧೮ ಯೆಹೋವನೇ, ವೈರಿಗಳು ನಿನ್ನನ್ನು ನಿಂದಿಸಿದ್ದನ್ನು, ದುರ್ಮತಿಗಳು ನಿನ್ನ ನಾಮವನ್ನು ತಿರಸ್ಕರಿಸಿದ್ದನ್ನು ಜ್ಞಾಪಿಸಿಕೋ.
Xuni esingdǝ tutⱪaysǝn, i Pǝrwǝrdigar: — Bir düxmǝn Seni mǝshirǝ ⱪildi, Ⱨamaⱪǝt bir hǝlⱪ namingni ⱨaⱪarǝtlidi.
19 ೧೯ ನಿನ್ನ ಬೆಳವಕ್ಕಿಯ ಜೀವವನ್ನು ಕಾಡುಮೃಗಕ್ಕೆ ಕೊಡಬೇಡ; ನಿನ್ನ ದೀನಮಂಡಲಿಯನ್ನು ಸದಾ ಮರೆಯಬೇಡ.
Pahtikingni yirtⱪuq ⱨaywanlarƣa tutup bǝrmigǝysǝn; Ezilgǝn mɵminliringning ⱨayatini mǝnggü untumiƣaysǝn.
20 ೨೦ ನಿನ್ನ ಒಡಂಬಡಿಕೆಯನ್ನು ಲಕ್ಷ್ಯಕ್ಕೆ ತಂದುಕೋ. ದೇಶದ ಅಂಧಕಾರ ಸ್ಥಾನಗಳಲ್ಲಿ ಬಲತ್ಕಾರವು ತುಂಬಿ ವಾಸಿಸುತ್ತದಲ್ಲಾ.
Ɵz ǝⱨdǝnggǝ ⱪariƣaysǝn, Qünki zemindiki ⱪarangƣu bulung-puqⱪaⱪlar zorluⱪ-zumbuluⱪning turalƣuliri bilǝn toldi.
21 ೨೧ ಕುಗ್ಗಿದವರು ಆಶಾಭಂಗದಿಂದ ಹಿಂದಿರುಗದಿರಲಿ; ದುಃಖಿತರೂ, ಬಡವರೂ ನಿನ್ನ ನಾಮವನ್ನು ಕೀರ್ತಿಸಲಿ.
Ezilgüqilǝrni nomus bilǝn yandurmiƣaysǝn; Ezilgǝnlǝr, yoⱪsullar namingni mǝdⱨiyiligǝy.
22 ೨೨ ದೇವರೇ, ಎದ್ದು ನಿನ್ನ ನ್ಯಾಯವನ್ನು ನಡೆಸುವವನಾಗು; ದುರ್ಮತಿಯು ಯಾವಾಗಲೂ ನಿನ್ನನ್ನು ನಿಂದಿಸುತ್ತಿರುವುದನ್ನು ಜ್ಞಾಪಿಸಿಕೋ.
Ornungdin turƣin, i Huda, Ɵz dǝwayingni soriƣaysǝn; Ⱨamaⱪǝt kixining Ɵzüngni kün boyi mǝshirǝ ⱪiliwatⱪinini esingdǝ tutⱪaysǝn.
23 ೨೩ ಮೇಲಣ ಲೋಕವನ್ನು ಎಡೆಬಿಡದೆ ಮುಟ್ಟುತ್ತಿರುವ, ನಿನ್ನ ವೈರಿಗಳ ಗದ್ದಲವನ್ನೂ ನಿನ್ನ ವಿರೋಧಿಗಳ ದೊಂಬಿಯನ್ನೂ ಮರೆಯದಿರು.
Düxmǝnliringning quⱪanlirini untumiƣaysǝn; Sanga ⱪarxi ⱪozƣalƣanlarning dawrangliri tohtimay kɵtürülmǝktǝ.