< ಕೀರ್ತನೆಗಳು 73 >
1 ೧ ದುಷ್ಟರ ಸೌಭಾಗ್ಯವನ್ನು ಕಂಡು ವಿಶ್ವಾಸಭ್ರಷ್ಟರಾಗಬಾರದೆಂಬ ಬೋಧನೆ ದೇವರು ನಿರ್ಮಲಚಿತ್ತರಾದ ಇಸ್ರಾಯೇಲರಿಗೆ ದಯಾಪರನೇ ಹೌದು.
Псалом Асафів. Який же добрий Бог до Ізраїля, до чистих серцем!
2 ೨ ನನ್ನ ಕಾಲುಗಳು ಜಾರಿದವುಗಳೇ; ನನ್ನ ಹೆಜ್ಜೆಗಳು ತಪ್ಪಿದವುಗಳೇ.
А в мене ледь не похитнулися мої ноги, мало не втратили опору мої стопи,
3 ೩ ಆದರೆ ನಾನು ದುಷ್ಟರ ಸೌಭಾಗ್ಯವನ್ನು ಕಂಡು ಸೊಕ್ಕಿನವರ ಮೇಲೆ ಉರಿಗೊಂಡೆನು.
коли я позаздрив нерозумним, побачивши добробут нечестивих!
4 ೪ ಅವರ ಮರಣವು ನಿರ್ಬಾಧಕವಾಗಿದೆ; ಅವರ ದೇಹವು ಕೊಬ್ಬಿದೆ.
Адже немає в них страждань до самої смерті й тіла їхні пашіють здоров’ям.
5 ೫ ಮನುಷ್ಯರ ಕಷ್ಟದಲ್ಲಿ ಅವರು ಭಾಗಿಗಳಾಗುವುದಿಲ್ಲ; ಇತರರಿಗೆ ತಗುಲುವಂತೆ ಅವರಿಗೆ ಅಂಟುರೋಗವೂ ತಗುಲುವುದಿಲ್ಲ.
Вони вільні від тягарів людських, і труднощі людські не торкаються їх.
6 ೬ ಆದುದರಿಂದ ಅವರಿಗೆ ಗರ್ವವು ಕಂಠಮಾಲೆಯಾಗಿದೆ; ಬಲಾತ್ಕಾರವು ಉಡುಪಾಗಿದೆ.
Тому пиха вкрила їм шию намистом, насильство вдягає їх неначе шати.
7 ೭ ಕೊಬ್ಬಿನಿಂದ ಅವರ ಕಣ್ಣುಗಳು ಉಬ್ಬಿಕೊಂಡಿವೆ; ಅವರ ದುಷ್ಕಲ್ಪನೆಗಳು ತುಂಬಿತುಳುಕುತ್ತವೆ.
Вирячилися від жиру їхні очі – збулися [в них] розбещені задуми серця.
8 ೮ ಹಾಸ್ಯಮಾಡುವವರಾಗಿ ಕೆಡುಕಿನ ವಿಷಯ ಮಾತನಾಡಿಕೊಳ್ಳುತ್ತಾರೆ; ಬಲಾತ್ಕಾರನಡಿಸಬೇಕೆಂದು ಹೆಮ್ಮೆಕೊಚ್ಚುತ್ತಾರೆ.
Глузують і говорять злісно, розмовляють зухвало про пригнічення.
9 ೯ ತಾವು ಮೇಲುಲೋಕದವರೋ ಎಂಬಂತೆ ದೊಡ್ಡ ಬಾಯಿಮಾಡುತ್ತಾರೆ. ಭೂಲೋಕದಲ್ಲೆಲ್ಲಾ ಅವರ ಮಾತೇ ಮುಂದು.
На небеса зазіхають вуста їхні, і язик їхній по землі походжає.
10 ೧೦ ಆದುದರಿಂದ ಜನರು ಅವರ ಪಕ್ಷವನ್ನು ಹಿಡಿಯುತ್ತಾರೆ; ಅವರು ಅವರಲ್ಲಿ ಯಾವುದೇ ತಪ್ಪನ್ನು ಕಂಡುಹಿಡಿಯಲಿಲ್ಲ.
Тому туди ж народ Його звертається, п’ють собі жадібно воду повною мірою.
11 ೧೧ ಅವರು “ದೇವರು ವಿಚಾರಿಸುವುದೆಲ್ಲಿ? ಪರಾತ್ಪರನಾದ ದೇವರು ಚಿಂತಿಸುವದುಂಟೋ” ಅಂದುಕೊಳ್ಳುತ್ತಾರೆ.
Вони говорять: «Як дізнається Бог? Хіба є знання у Всевишнього?
12 ೧೨ ನೋಡಿರಿ, ದುಷ್ಟರು ಇಂಥವರೇ; ಅವರು ಸದಾ ಸುಖದಿಂದಿದ್ದು ಸ್ಥಿತಿವಂತರಾಗಿ ಹೋಗುತ್ತಾರೆ.
Ось вони нечестиві, але завжди безтурботні й примножують статки!»
13 ೧೩ ನನ್ನ ಮನಸ್ಸನ್ನು ನಿರ್ಮಲಮಾಡಿಕೊಂಡಿದ್ದೂ, ಶುದ್ಧತ್ವದಲ್ಲಿ ಕೈತೊಳಕೊಂಡಿದ್ದೂ ವ್ಯರ್ಥವೇ ಸರಿ.
Так чи не дарма я тримав у чистоті моє серце й обмивав у невинності мої руки?
14 ೧೪ ನಾನು ಯಾವಾಗಲೂ ವ್ಯಾಧಿಪೀಡಿತನಾಗಿದ್ದು, ಪ್ರತಿದಿನವೂ ದಂಡಿಸಲ್ಪಡುತ್ತಾ ಇದ್ದೇನಲ್ಲಾ.
Я був уражений картанням цілий день і докорами сумління – щоранку.
15 ೧೫ ನಾನು ಈ ಪ್ರಕಾರ ಬಾಯಿಬಿಡುವುದಕ್ಕೆ ಮನಸ್ಸು ಮಾಡಿಕೊಂಡಿದ್ದರೆ, ನಿನ್ನ ಭಕ್ತಕುಲಕ್ಕೆ ದ್ರೋಹಿಯಾಗುತ್ತಿದ್ದೆನು.
Якби сказав я сам собі: «Буду міркувати, як вони!», то цим я зрадив би рід синів Твоїх.
16 ೧೬ ನಾನು ಇದನ್ನು ಗ್ರಹಿಸಿಕೊಳ್ಳಬೇಕೆಂದು ಎಷ್ಟು ಚಿಂತಿಸಿದರೂ ಅದು ಒಂದು ಕಷ್ಟಕರವಾದ ಮರ್ಮವೆಂದು ತೋಚಿತು.
І роздумував я, щоб пізнати це, але воно було тяжким в очах моїх.
17 ೧೭ ಆದರೆ ದೇವಾಲಯಕ್ಕೆ ಹೋಗಿ ಅವರ ಅಂತ್ಯಾವಸ್ಥೆಯನ್ನು ಆಲೋಚಿಸಿದಾಗ ನನಗೆ ಗೊತ್ತಾಯಿತು.
Аж поки не увійшов я до святилища Божого й не зрозумів, яким буде їхній кінець.
18 ೧೮ ಹೌದು, ನೀನು ಅವರನ್ನು ಅಪಾಯಕರ ಸ್ಥಳದಲ್ಲಿಟ್ಟು, ಬೀಳಿಸಿ, ನಾಶಮಾಡಿಬಿಡುತ್ತೀ.
Так, Ти ставиш їх на стежках слизьких і [потім] штовхаєш їх до загибелі.
19 ೧೯ ಅವರು ನಿಮಿಷಮಾತ್ರದಲ್ಲಿಯೇ ಹಾಳಾಗಿ ಹೋಗುತ್ತಾರೆ; ಭಯಂಕರ ರೀತಿಯಿಂದ ಸಂಹಾರವಾಗಿ ಮುಗಿದು ಹೋಗುತ್ತಾರೆ.
Як несподівано вони перетворилися на руїну, зникли, згинули від жаху!
20 ೨೦ ಎಚ್ಚರವಾದವನು ಕನಸ್ಸನ್ನು ಕಂಡ ಹಾಗೆ ಯೆಹೋವನೇ, ನೀನು ಏಳುವಾಗ ಅವರನ್ನು ಮಾಯಾರೂಪರೆಂದು ಭಾವಿಸುತ್ತೀ.
Як сновидіння [зникає] після пробудження, так і Ти, Владико, повставши, їхні мрії обернеш на сором.
21 ೨೧ ನನ್ನ ಮನಸ್ಸು ನೊಂದುಹೋಗಿತ್ತು; ಆಂತರ್ಯದಲ್ಲಿ ಅಲಗು ನೆಟ್ಟಂತಿತ್ತು.
Коли ж серце моє гарячилося й нутрощі мої терзалися,
22 ೨೨ ನಾನು ವಿವೇಕಹೀನ ತಿಳಿವಳಿಕೆ ಇಲ್ಲದವನಂತೆ, ನಿನ್ನ ದೃಷ್ಟಿಯಲ್ಲಿ ಕೇವಲ ಪಶುವೇ ಆಗಿದ್ದೆನು.
тоді я був невігласом і нерозумним, мов худоба, перед Тобою.
23 ೨೩ ಆದರೂ ಸದಾ ನಿನ್ನ ಸನ್ನಿಧಿಯಲ್ಲಿಯೇ ಇದ್ದೇನೆ. ನೀನು ನನ್ನ ಬಲಗೈಯನ್ನು ಹಿಡಿದು,
Та я завжди з Тобою: Ти тримаєш мою правицю у [Своїй] руці.
24 ೨೪ ನಿನ್ನ ಚಿತ್ತವನ್ನು ತಿಳಿಯಪಡಿಸಿ, ನನ್ನನ್ನು ನಡೆಸಿ ತರುವಾಯ ಮಹಿಮೆಗೆ ಸೇರಿಸಿಕೊಳ್ಳುವಿ.
Ти ведеш мене Своєю порадою, а потім приймеш мене у славу.
25 ೨೫ ಪರಲೋಕದಲ್ಲಿ ನನಗೆ ನೀನಲ್ಲದೆ ಮತ್ತಾರು ಅವಶ್ಯ? ಇಹಲೋಕದಲ್ಲಿ ನಿನ್ನನ್ನಲ್ಲದೆ ಇನ್ನಾರನ್ನೂ ಬಯಸುವುದಿಲ್ಲ.
Хто є в мене на небі, [крім Тебе]? Коли Ти зі мною, нічого на землі не хочу!
26 ೨೬ ತನುಮನಗಳು ಕ್ಷಯಿಸಿದರೂ ನನ್ನ ಆತ್ಮಕ್ಕೆ ಬಲವು ನನ್ನ ಶಾಶ್ವತವಾದ ಪಾಲೂ ದೇವರೇ.
Виснажилося моє тіло й моє серце, та скеля серця мого й доля моя навіки – Бог!
27 ೨೭ ಇಗೋ, ನಿನ್ನನ್ನು ಬಿಟ್ಟವರು ನಾಶವಾಗುವರು; ನಿನಗೆ ದ್ರೋಹ ಮಾಡಿದವರೆಲ್ಲರನ್ನು ನಿರ್ಮೂಲ ಮಾಡುತ್ತೀ.
Ось ті, хто далекий від Тебе, загинуть; Ти знищиш усіх, хто блукає [вдалині] від Тебе.
28 ೨೮ ನನಗಾದರೋ ದೇವರ ಸಾನ್ನಿಧ್ಯವೇ ಭಾಗ್ಯವು. ಕರ್ತನೇ, ಯೆಹೋವನೇ, ನಾನು ನಿನ್ನನ್ನು ಆಶ್ರಯಿಸಿಕೊಂಡವನಾಗಿ ನಿನ್ನ ಮಹತ್ಕಾರ್ಯಗಳನ್ನು ಪ್ರಕಟಿಸುವೆನು.
А щодо мене, то добре мені наближатися до Бога; у Володаря Господа мій притулок, щоб я міг звіщати Його діяння.