< ಕೀರ್ತನೆಗಳು 46 >
1 ೧ ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ಆರಿಸಿಕೊಂಡದ್ದು; ಕೋರಹೀಯರ ಗೀತೆ; ತಾರಕಸ್ಥಾಯಿಯಲ್ಲಿ ಹಾಡತಕ್ಕದ್ದು. ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ; ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನು.
परमेश्वर हाम्रो शरणस्थान र बल, दुःखको समयमा तुरुन्तै पाउन सकिने मदत हुनुहुन्छ ।
2 ೨ ಆದುದರಿಂದ ಭೂಮಿಯು ಮಾರ್ಪಟ್ಟರೂ, ಬೆಟ್ಟಗಳು ಸಮುದ್ರದಲ್ಲಿ ಮುಳುಗಿಹೋದರೂ, ನಮಗೇನೂ ಭಯವಿಲ್ಲ.
यसकारण, पृथ्वी बद्लिए पनि, पर्वतहरू हल्लाएर समुद्रको पिंधमा खसाइए पनि, हामी डराउँनेछैनौं ।
3 ೩ ಸಮುದ್ರವು ಬೋರ್ಗರೆಯುತ್ತಾ ನೊರೆಯನ್ನು ಕಾರಿದರೇನು? ಅದರ ಅಲ್ಲಕಲ್ಲೋಲಗಳಿಂದ ಪರ್ವತಗಳು ಚಲಿಸಿದರು ಭಯವಿಲ್ಲ? (ಸೆಲಾ)
त्यसको पानीहरू गर्जेर उल्लिए पनि र त्यसको गर्जनले पर्वतहरू कामे पनि । सेला
4 ೪ ಒಂದು ನದಿ ಇದೆ; ಅದರ ಕಾಲುವೆಗಳು, ಪರಾತ್ಪರನಾದ ದೇವರ ಪರಿಶುದ್ಧ ನಿವಾಸಸ್ಥಾನವಾಗಿರುವ, ದೇವರ ನಗರವನ್ನು ಸಂತೋಷಪಡಿಸುತ್ತವೆ.
एउटा नदी छ जसका प्रावाहहरूले परमेश्वरको सहर अर्थात्, सर्वोच्चले वास गर्नुहुने एउटा पवित्र ठाउँलाई हर्षित तुल्याउँछ ।
5 ೫ ದೇವರು ಇದರಲ್ಲಿದ್ದಾನೆ; ಇದಕ್ಕೆ ಚಲನವೇ ಇಲ್ಲ. ಉದಯಕಾಲದಲ್ಲಿಯೇ ದೇವರು ಇದರ ಸಹಾಯಕ್ಕೆ ಬರುವನು.
परमेश्वर त्यसको बिचमा हुनुहुन्छ । त्यो डग्नेछैन । परमेश्वरले त्यसलाई सहायता गर्नुहुनेछ र उहाँले बिहानको झिसमिसेमा त्यसो गर्नुहुनेछ ।
6 ೬ ಜನಾಂಗಗಳು ಕಳವಳಗೊಂಡವು; ರಾಜ್ಯಗಳು ತತ್ತರಿಸಿದವು. ಆತನು ಗರ್ಜಿಸಲು ಭೂಲೋಕವೆಲ್ಲಾ ಕರಗಿ ಹೋಯಿತು.
जातिहरू क्रुद्ध भए र राज्यहरू हल्लिए । उहाँले आफ्नो सोर उचाल्नुभयो र पृथ्वी पग्लियो ।
7 ೭ ಸೇನಾಧೀಶ್ವರನಾದ ಯೆಹೋವನು ನಮ್ಮ ಸಂಗಡ ಇದ್ದಾನೆ; ಯಾಕೋಬ ವಂಶದವರ ದೇವರು ನಮಗೆ ಆಶ್ರಯ ದುರ್ಗವಾಗಿದ್ದಾನೆ. (ಸೆಲಾ)
सर्वशक्तिमान् परमप्रभु हामीसँग हुनुहुन्छ । याकूबका परमेश्वर हाम्रो शरण हुनुहुन्छ । सेला
8 ೮ ಬನ್ನಿರಿ, ಯೆಹೋವನ ಕಾರ್ಯವನ್ನು ನೋಡಿರಿ; ಆತನು ಭೂಲೋಕದಲ್ಲಿ ಎಂಥಾ ವಿನಾಶವನ್ನು ಉಂಟುಮಾಡಿದ್ದಾನೆ.
आओ, परमप्रभुको कामहरू, उहाँले पृथ्वीमा ल्याउनुभएको विनाशलाई हेर ।
9 ೯ ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ಸ್ಥಗಿತಗೊಳಿಸಿದ್ದಾನೆ; ಬಿಲ್ಲುಗಳನ್ನೂ, ಭಲ್ಲೆಯಗಳನ್ನೂ ಮುರಿದುಹಾಕಿದ್ದಾನೆ; ರಥಗಳನ್ನು ದಹಿಸಿಬಿಟ್ಟಿದ್ದಾನೆ.
उहाँले युद्धहरूलाई पृथ्वीको अन्तसम्म बन्द गराउनुहुन्छ । उहाँले धनुहरू भाँच्नुहुन्छ र भालाहरू काट्नुहुन्छ । उहाँले ढालहरूलाई जलाउनुहुन्छ ।
10 ೧೦ “ಕಾದಾಡುವುದನ್ನು ನಿಲ್ಲಿಸಿರಿ, ನಾನೇ ದೇವರು; ಲೋಕದ ಸಮಸ್ತ ಜನಗಳಿಗೂ ಸರ್ವಾಧಿಪತಿಯು ನಾನೇ ಎಂದು ತಿಳಿಯಿರಿ” ಎಂದು ಹೇಳಿದ್ದಾನೆ.
शान्त होओ र म नै परमेश्वर हुँ भनी जान । जातिहरूका माझमा म उचालिनेछु । पृथ्वीमा म उचालिनेछु ।
11 ೧೧ ಸೇನಾಧೀಶ್ವರನಾದ ಯೆಹೋವನು ನಮ್ಮ ಸಂಗಡ ಇದ್ದಾನೆ; ಯಾಕೋಬವಂಶದವರ ದೇವರು ನಮಗೆ ಆಶ್ರಯ ದುರ್ಗವಾಗಿದ್ದಾನೆ. (ಸೆಲಾ)
सर्वशक्तिमान् परमप्रभु हामीसँग हुनुहुन्छ । याकूबका परमेश्वर हाम्रो शरण हुनुहुन्छ । सेला