< ಕೀರ್ತನೆಗಳು 38 >
1 ೧ ದಾವೀದನ ಕೀರ್ತನೆ; ಜ್ಞಾಪಕಾರ್ಥ ನೈವೇದ್ಯಸಮರ್ಪಣೆಯಲ್ಲಿ ಹಾಡತಕ್ಕದ್ದು. ಯೆಹೋವನೇ, ಕೋಪದಿಂದ ನನ್ನನ್ನು ಶಿಕ್ಷಿಸಬೇಡ; ರೋಷದಿಂದ ನನ್ನನ್ನು ದಂಡಿಸಬೇಡ.
Dawid dwom. Adesrɛ. Awurade, nka mʼanim wɔ wʼabufuw mu na ntwe mʼaso wɔ wʼabufuwhyew mu.
2 ೨ ನಿನ್ನ ಬಾಣಗಳು ನನ್ನೊಳಗೆ ಹೊಕ್ಕಿವೆ; ನಿನ್ನ ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿದೆ.
Wo bɛmma hwirew me mu, na wo nsa adwerɛw me.
3 ೩ ನಿನ್ನ ಸಿಟ್ಟಿನಿಂದ ನನ್ನ ಶರೀರದಲ್ಲಿ ಸ್ವಸ್ಥತೆ ತಪ್ಪಿ ಹೋಗಿದೆ; ನನ್ನ ಪಾಪದಿಂದ ನನ್ನ ಎಲುಬುಗಳಲ್ಲಿ ಸ್ವಲ್ಪವೂ ಕ್ಷೇಮವಿಲ್ಲ.
Wʼabufuwhyew no nti ahoɔden biara nni me mu; me bɔne nti, me nnompe ahodwow.
4 ೪ ನನ್ನ ಅಪರಾಧಗಳು ನನ್ನನ್ನು ಮುಳುಗಿಸಿಬಿಟ್ಟಿವೆ; ಅವು ಹೊರಲಾರದಷ್ಟು ಭಾರವಾದ ಹೊರೆಯಂತಿವೆ.
Mʼafɔdi amene me te sɛ adesoa a mu yɛ duru dodo.
5 ೫ ನನ್ನ ಮೂರ್ಖತನದ ಫಲವಾದ ಬಾಸುಂಡೆಗಳು, ಕೀವು ಸೋರಿ ದುರ್ವಾಸನೆಯಿಂದ ನಾರುತ್ತಿದೆ.
Mʼakuru bɔn na aporɔw esiane me bɔne mu agyimisɛm nti.
6 ೬ ನಾನು ಬಹಳವಾಗಿ ಬಾಗಿ ಕುಗ್ಗಿದ್ದೇನೆ; ಯಾವಾಗಲೂ ದುಃಖದಿಂದ ವಿಕಾರಿಯಾಗಿ ಅಲೆಯುತ್ತೇನೆ.
Makotow na wɔabrɛ me ase; da mu nyinaa menantenantew twa agyaadwo.
7 ೭ ನನ್ನ ಸೊಂಟಕ್ಕೆ ಉರಿಬಡಿದಂತಿದೆ; ನನ್ನ ದೇಹದಲ್ಲಿ ಸ್ವಲ್ಪವಾದರೂ ಕ್ಷೇಮವಿಲ್ಲ.
Mʼakyi dompe mu yaw boro so: ahoɔden biara nni me nipadua mu.
8 ೮ ನನಗೆ ಜೋಮುಹಿಡಿದಂತಿದೆ; ಬಹಳ ಮನಗುಂದಿದವನಾದೆನು. ಹೃದಯದ ಸಂಕಟದ ದೆಸೆಯಿಂದ ಅರಚಿಕೊಳ್ಳುತ್ತಾ ಇದ್ದೇನೆ.
Mabrɛ na mapɛtɛw koraa. Me koma mu yaw ma misi apini.
9 ೯ ಕರ್ತನೇ, ನನ್ನ ಅಪೇಕ್ಷೆ ನಿನಗೆ ಗೊತ್ತುಂಟು; ನನ್ನ ನಿಟ್ಟುಸಿರು ನಿನಗೆ ಮರೆಯಾಗಿಲ್ಲ.
Awurade, nea merehwɛ anim nyinaa da wʼanim; mʼapinisi nhintaw wo.
10 ೧೦ ನನ್ನ ಹೃದಯವು ಬಡಿದುಕೊಳ್ಳುತ್ತಿದೆ; ನನ್ನ ಚೈತನ್ಯವು ಕುಗ್ಗಿಹೋಯಿತು; ನನ್ನ ಕಣ್ಣುಗಳೂ ಮೊಬ್ಬಾಗಿ ಹೋದವು.
Me koma bɔ kitirikitiri, na mʼahoɔden asa mpo mʼaniwa aduru sum.
11 ೧೧ ನನ್ನ ಆಪ್ತಸ್ನೇಹಿತರು ಮತ್ತು ಜೊತೆಗಾರರು, ನನ್ನ ರೋಗವನ್ನು ನೋಡಿ ಓರೆಯಾಗಿ ಹೋಗುತ್ತಾರೆ; ನನ್ನ ಬಂಧುಗಳು ದೂರ ನಿಲ್ಲುತ್ತಾರೆ.
Mʼapirakuru nti me nnamfonom ne me yɔnkonom mmɛn me; mʼafipamfo twe wɔn ho fi me ho.
12 ೧೨ ನನ್ನ ಪ್ರಾಣವನ್ನು ತೆಗೆಯಬೇಕೆನ್ನುವವರು ನನಗೆ ಉರುಲುಗಳನ್ನು ಒಡ್ಡಿದ್ದಾರೆ; ನನ್ನ ವಿಪತ್ತನ್ನು ಕೋರುವವರು ನನಗೆ ನಾಶನವನ್ನೇ ನಿಶ್ಚಯಿಸಿಕೊಂಡು, ಯಾವಾಗಲೂ ಮೋಸವನ್ನು ಕಲ್ಪಿಸುತ್ತಿದ್ದಾರೆ.
Wɔn a wɔpɛ sɛ wokum me no sum me mfiri, wɔn a wɔpɛ sɛ wɔhaw me no di me sɛe ho nkɔmmɔ da mu nyinaa wodwen nnaadaasɛm ho.
13 ೧೩ ನಾನಂತೂ ಕಿವುಡನಂತೆ ಕೇಳದವನಾಗಿದ್ದೇನೆ; ಮೂಕನಂತೆ ಬಾಯಿ ತೆರೆಯುವುದೇ ಇಲ್ಲ.
Mete sɛ ɔsotifo a ɔnte asɛm, mete sɛ mum a ontumi nkasa.
14 ೧೪ ನಾನು ಕಿವಿ ಕೇಳಿಸದವನಂತೆಯೂ, ಪ್ರತ್ಯುತ್ತರ ಕೊಡಲಾರದವನಂತೆಯೂ ಆದೆನು.
Mayɛ sɛ obi a ɔnte asɛm, nea nʼano ntumi mma mmuae.
15 ೧೫ ಯೆಹೋವನೇ, ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇನೆ; ನನ್ನ ಕರ್ತನೇ, ನನ್ನ ದೇವರೇ, ನೀನೇ ಸದುತ್ತರವನ್ನು ಕೊಡುವವನು.
Awurade, meretwɛn wo; Awurade me Nyankopɔn, wubegye me so.
16 ೧೬ “ನನ್ನ ವಿಷಯದಲ್ಲಿ ಶತ್ರುಗಳಿಗೆ ಸಂತೋಷವಾಗಬಾರದು; ನಾನು ಜಾರಿಬಿದ್ದರೆ ಹಿಗ್ಗಬಾರದು” ಅಂದುಕೊಂಡೆನು.
Mekae se, “Mma wɔn ani nnye; anaa wɔmma wɔn ho so bere a mʼanan awatiri no.”
17 ೧೭ ನನಗೆ ಆಪತ್ತೇ ಸಿದ್ಧವಾಗಿದೆ; ಯಾವಾಗಲೂ ನನಗೆ ಸಂಕಟವಿದೆ.
Mereyɛ mahwe ase, na me yaw da so wɔ me mu.
18 ೧೮ ನಾನು ಅಪರಾಧಿಯೇ ಎಂದು ಒಪ್ಪಿಕೊಳ್ಳುತ್ತೇನೆ; ನನ್ನ ಪಾಪದ ದೆಸೆಯಿಂದಲೇ ನನಗೆ ವ್ಯಸನವುಂಟಾಯಿತು.
Meka me mfomso kyerɛ; me bɔne hyɛ me so.
19 ೧೯ ನನ್ನ ಶತ್ರುಗಳು ಚುರುಕಾದವರೂ, ಬಲಿಷ್ಠರೂ ಆಗಿದ್ದಾರೆ; ನನ್ನನ್ನು ಅನ್ಯಾಯವಾಗಿ ದ್ವೇಷಿಸುವವರು ಬಹು ಜನ.
Bebree na wɔyɛ mʼatamfo; wɔn a wɔtan me kwa no dɔɔso.
20 ೨೦ ನಾನು ಒಳ್ಳೆಯದನ್ನು ಅನುಸರಿಸುವುದರಿಂದ, ನನ್ನ ಎದುರಾಳಿಗಳು ಉಪಕಾರಕ್ಕೆ ಪ್ರತಿಯಾಗಿ ಅಪಕಾರವನ್ನೇ ಸಲ್ಲಿಸುವರು.
Wɔn a wɔde bɔne tua me papa so ka no, bɔ me ahohora bere a mereyɛ papa.
21 ೨೧ ಯೆಹೋವನೇ, ಕೈ ಬಿಡಬೇಡ; ನನ್ನ ದೇವರೇ, ದೂರವಾಗಿರಬೇಡ.
Awurade nnyaw me. Me Nyankopɔn, nkɔ akyiri!
22 ೨೨ ನನ್ನ ಕರ್ತನೇ, ನನ್ನ ರಕ್ಷಕನೇ, ಬೇಗ ಬಂದು ಸಹಾಯಮಾಡು.
Bra ntɛm bɛboa me, Awurade, mʼAgyenkwa.