< ಕೀರ್ತನೆಗಳು 3 >
1 ೧ ದಾವೀದನು ತನ್ನ ಮಗನಾದ ಅಬ್ಷಾಲೋಮನಿಂದ ಓಡಿಹೋದಾಗ ರಚಿಸಿದ ಕೀರ್ತನೆ. ಯೆಹೋವನೇ, ನನ್ನ ವಿರೋಧಿಗಳು ಎಷ್ಟೋ ಹೆಚ್ಚಾಗಿದ್ದಾರೆ; ನನಗೆ ವೈರಿಗಳಾಗಿ ನಿಂತ ಜನರು ಅತ್ಯಧಿಕವಾಗಿದ್ದಾರೆ.
Dawid dwom a ɔtoe bere a ɔreguan afi ne babarima Absalom anim. Awurade, hwɛ sɛnea mʼatamfo dɔɔso fa! dodow no ara na wɔsɔre tia me!
2 ೨ ಅನೇಕರು ನನ್ನ ವಿಷಯದಲ್ಲಿ, “ಅವನಿಗೆ ದೇವರಿಂದ ಸಹಾಯವು ಆಗುವುದೇ ಇಲ್ಲ” ಎಂದು ಹೇಳಿಕೊಳ್ಳುತ್ತಾರೆ. (ಸೆಲಾ)
Bebree no ara ka fa me ho se, “Onyankopɔn rennye no.”
3 ೩ ಆದರೂ ಯೆಹೋವನೇ, ನೀನು ನನ್ನನ್ನು ಕಾಯುವ ಗುರಾಣಿಯೂ; ನೀನು ನನ್ನ ಗೌರವಕ್ಕೆ ಆಧಾರನೂ, ನನ್ನ ತಲೆಯನ್ನು ಎತ್ತುವಂತೆ ಮಾಡುವವನೂ ಆಗಿದ್ದೀ.
Nanso wo, Awurade, woyɛ nkatabo a atwa me ho ahyia mʼanuonyam, nea Ɔpagyaw me ti.
4 ೪ ನಾನು ಸ್ವರವೆತ್ತಿ ಯೆಹೋವನಿಗೆ ಮೊರೆಯಿಡುವಾಗ, ಆತನು ತನ್ನ ಪರಿಶುದ್ಧ ಪರ್ವತದಿಂದ ಸದುತ್ತರವನ್ನು ಅನುಗ್ರಹಿಸುತ್ತಾನೆ. (ಸೆಲಾ)
Meteɛ mu su frɛ Awurade, na ogye me so fi ne bepɔw kronkron no so.
5 ೫ ಯೆಹೋವನು ನನ್ನನ್ನು ಕಾಪಾಡುವವನು, ಆದುದರಿಂದ ನಾನು ಮಲಗಿಕೊಂಡು ನಿದ್ದೆಮಾಡಿ ಸುಖವಾಗಿ ಎಚ್ಚರಗೊಂಡೆನು.
Metɔ hɔ na meda a, minyan bio, efisɛ Awurade ma migyina.
6 ೬ ನನ್ನ ಸುತ್ತಲು ಸನ್ನದ್ಧರಾಗಿ ನಿಂತಿರುವ ಸಾವಿರಾರು ವೈರಿಗಳಿಗಾದರೂ ನಾನು ಹೆದರೆನು.
Merensuro atamfo mpem mpem a wɔatwa me ho ahyia no.
7 ೭ ಯೆಹೋವನೇ, ನನ್ನ ದೇವರೇ, ನನ್ನ ಎಲ್ಲಾ ಶತ್ರುಗಳ ದವಡೆಯನ್ನು ಬಡಿದು ಅವರ ಹಲ್ಲುಗಳನ್ನು ಉದುರಿಸಿಬಿಟ್ಟವನೇ, ಎದ್ದು ಬಂದು ನನ್ನನ್ನು ರಕ್ಷಿಸು.
Sɔre, Awurade! Gye me, me Nyankopɔn! Bobɔ mʼatamfo nyinaa abogye; na tutu amumɔyɛfo se.
8 ೮ ಜಯವು ಯೆಹೋವನಿಂದಲೇ ಉಂಟಾಗುವುದು. ಯೆಹೋವನೇ, ನಿನ್ನ ಆಶೀರ್ವಾದವು ನಿನ್ನ ಜನರ ಮೇಲೆ ಇರಲಿ. (ಸೆಲಾ)
Awurade hɔ na ogye fi ba. Ma wo nhyira mmra wo nkurɔfo so.