< ಕೀರ್ತನೆಗಳು 28 >
1 ೧ ದಾವೀದನ ಕೀರ್ತನೆ. ಯೆಹೋವನೇ, ನನ್ನ ಶರಣನೇ, ನಿನಗೆ ಮೊರೆಯಿಡುತ್ತೇನೆ; ಕೇಳದೆ ಇರಬೇಡ. ನೀನು ಕಿವಿಗೊಡದೆ ಹೋದರೆ ನಾನು ಸತ್ತವರಿಗೆ ಸಮಾನನಾಗುವೆನಲ್ಲವೇ.
Давидов псалом. Към тебе ще извикам, Господи, канаро моя; Не замълчавай към мене, Да не би, ако останеш мълчалив към мене, Да се оприлича на ония, които слизат в рова.
2 ೨ ನೀನು ವಾಸಿಸುವ ಮಹಾಪರಿಶುದ್ಧಸ್ಥಾನದ ಕಡೆಗೆ ನಾನು ಕೈಯೆತ್ತಿ ಮೊರೆಯಿಡುತ್ತೇನಲ್ಲಾ; ನನ್ನ ವಿಜ್ಞಾಪನೆಯನ್ನು ಲಾಲಿಸು.
Послушай гласа на молбите ми, когато викам към Тебе, Когато дигам ръце към най-вътрешното на Твоето светилище.
3 ೩ ನೀನು ದುಷ್ಟರೊಡನೆಯೂ, ದುರ್ಜನಗಳ ಸಂಗಡಲೂ ನನ್ನನ್ನೂ ಎಳೆದುಕೊಂಡು ಹೋಗಬೇಡ. ಅವರು ಹೊರಗೆ ಒಳ್ಳೆಯದಾಗಲಿ ಎಂದು ಹೇಳಿದರೂ, ಒಳಗೆ ಕೇಡಾಗಲಿ ಎಂದು ಯೋಚಿಸುವವರು.
Не ме завличай с нечестивите И с ония, които вършат беззаконие, Които говорят мир с ближните си, А в чието сърце има злоба.
4 ೪ ಅವರ ದುಷ್ಕೃತ್ಯಗಳಿಗೂ, ಕೆಡುಕಗಳಿಗೂ ಸರಿಯಾದ ಪ್ರತಿಫಲವನ್ನು ಅವರಿಗೆ ಕೊಡು; ಅವರು ಮತ್ತೊಬ್ಬರಿಗೆ ಮಾಡಿದಂತೆಯೇ ಅವರಿಗೆ ಮಾಡು.
Въздай им според делата им И според нечестието на постъпките им; Въздай им според делата на ръцете им; Отдай им каквото заслужават.
5 ೫ ಅವರು ಯೆಹೋವನ ಕಾರ್ಯಗಳನ್ನೂ ಮತ್ತು ಆತನ ಕೈಕೆಲಸಗಳನ್ನೂ ವಿವೇಚಿಸಿ ತಿಳಿದುಕೊಳ್ಳದೆ ಹೋದರು; ಆದುದರಿಂದ ಆತನು ಅವರನ್ನು ಹಾಳುಮಾಡುವನೇ ಹೊರತು ವೃದ್ಧಿಪಡಿಸುವುದಿಲ್ಲ.
Понеже те не внимават на деянията на Господа Нито на делата на ръцете Му, Той ще ги събори, и няма да ги съгради.
6 ೬ ಯೆಹೋವನು ನನ್ನ ವಿಜ್ಞಾಪನೆಗಳನ್ನು ಕೇಳಿದ್ದಾನೆ; ಆತನಿಗೆ ಸ್ತೋತ್ರವಾಗಲಿ.
Благословен да е Господ, Защото послуша гласа на молбите ми
7 ೭ ಯೆಹೋವನು ನನಗೆ ಬಲವೂ, ಗುರಾಣಿಯೂ ಆಗಿದ್ದಾನೆ; ನಾನು ಆತನಲ್ಲಿ ಭರವಸವಿಟ್ಟೆನು, ನನಗೆ ಸಹಾಯವು ಉಂಟಾಯಿತು. ಆದಕಾರಣ ನನ್ನ ಹೃದಯವು ಹರ್ಷಿಸುವುದು; ಕೀರ್ತನಾರೂಪವಾಗಿ ಆತನನ್ನು ಸ್ತುತಿಸುವೆನು.
Господ е сила моя и щит мой; На него е уповало сърцето ми, и Той ми помага; Затова се развесели сърцето ми, И с песните си ще Го възхваля,
8 ೮ ಯೆಹೋವನು ತನ್ನ ಜನರಿಗೆ ಬಲವೂ, ತಾನು ಅಭಿಷೇಕಿಸಿದವನಿಗೆ ಆಶ್ರಯದುರ್ಗವೂ ಆಗಿದ್ದಾನೆ.
Господ е сила на людете Си; Той е крепост за избавление на помазаника Си.
9 ೯ ಯೆಹೋವನೇ, ನಿನ್ನ ಜನರನ್ನು ರಕ್ಷಿಸು; ನಿನ್ನ ಸ್ವಕೀಯ ಪ್ರಜೆಯನ್ನು ಆಶೀರ್ವದಿಸು. ನೀನು ಅವರ ಕುರುಬನಾಗಿರು; ಅವರನ್ನು ಯಾವಾಗಲೂ ಪರಿಪಾಲಿಸುತ್ತಾ ಆಧಾರವಾಗಿರು.
Избави людете Си и благослови наследството Си; Храни ги и носи ги да века.