< ಕೀರ್ತನೆಗಳು 26 >
1 ೧ ದಾವೀದನ ಕೀರ್ತನೆ. ಯೆಹೋವನೇ, ನನಗೋಸ್ಕರ ನ್ಯಾಯವನ್ನು ನಿರ್ಣಯಿಸು. ನಾನಾದರೋ ನಿರ್ದೋಷಿಯಾಗಿಯೇ ನಡೆದುಕೊಂಡಿದ್ದೇನೆ. ನಾನು ಕದಲದೆ ಯೆಹೋವನಲ್ಲೇ ಭರವಸವಿಟ್ಟಿದ್ದೇನೆ.
[A Psalm] of David. Judge me, O LORD; for I have walked in my integrity: I have trusted also in the LORD; [therefore] I shall not slide.
2 ೨ ಯೆಹೋವನೇ, ನನ್ನನ್ನು ಪರೀಕ್ಷಿಸು, ಪರಿಶೀಲಿಸು; ನನ್ನ ಅಂತರಿಂದ್ರಿಯವನ್ನೂ, ಹೃದಯವನ್ನೂ ಪರಿಶೋಧಿಸು.
Examine me, O LORD, and prove me; try my reins and my heart.
3 ೩ ನಿನ್ನ ಶಾಶ್ವತವಾದ ಪ್ರೀತಿಯನ್ನು ನನ್ನ ದೃಷ್ಟಿಯಲ್ಲೇ ಇಟ್ಟುಕೊಂಡಿದ್ದೇನೆ; ನಿನಗೆ ನಂಬಿಗಸ್ತನಾಗಿ ನಡೆದುಕೊಂಡಿದ್ದೇನೆ.
For thy loving-kindness [is] before my eyes: and I have walked in thy truth.
4 ೪ ನಾನು ಮೋಸಗಾರರ ಸಹವಾಸ ಮಾಡುವವನಲ್ಲ; ಕಪಟಿಗಳನ್ನು ಸೇರುವವನಲ್ಲ.
I have not sat with vain persons, neither will I go in with dissemblers.
5 ೫ ನನಗೆ ದುರ್ಜನರ ಕೂಟವು ಅಸಹ್ಯ; ದುಷ್ಟರ ಸಂಗವು ಬೇಕಿಲ್ಲ.
I have hated the congregation of evil doers; and will not sit with the wicked.
6 ೬ ಯೆಹೋವನೇ, ನಾನು ನಿರ್ದೋಷಿ ಎಂದು, ಕೈಗಳನ್ನು ತೊಳೆದುಕೊಂಡವನಾಗಿ,
I will wash my hands in innocence: so will I compass thy altar, O LORD:
7 ೭ ನಿನ್ನ ಅದ್ಭುತಕೃತ್ಯಗಳ ವರ್ಣನೆಯ ಸ್ತೋತ್ರ ಮಾಡುತ್ತಾ, ನಿನ್ನ ಯಜ್ಞವೇದಿಯನ್ನು ಪ್ರದಕ್ಷಿಣೆಮಾಡುವೆನು.
That I may publish with the voice of thanksgiving, and tell of all thy wondrous works.
8 ೮ ಯೆಹೋವನೇ, ನಿನ್ನ ನಿವಾಸವು ನನಗೆ ಎಷ್ಟೋ ಪ್ರಿಯ; ನಿನ್ನ ಪ್ರಭಾವ ಸ್ಥಾನವು ನನಗೆ ಇಷ್ಟ.
LORD, I have loved the habitation of thy house, and the place where thy honor dwelleth.
9 ೯ ಪಾಪಿಷ್ಠರ ಪ್ರಾಣದ ಸಂಗಡ ನನ್ನ ಪ್ರಾಣವನ್ನೂ ತೆಗೆಯಬೇಡ; ಕೊಲೆಪಾತಕರ ಜೀವದೊಂದಿಗೆ ನನ್ನ ಜೀವವನ್ನೂ ತೆಗೆಯಬೇಡ.
Gather not my soul with sinners, nor my life with bloody men:
10 ೧೦ ಅವರ ಕೈಗಳು ಬಲಾತ್ಕಾರ ನಡೆಸುತ್ತವೆ; ಅವರ ಬಲಗೈ ಲಂಚದಿಂದ ತುಂಬಿದೆ.
In whose hands [is] mischief, and their right hand is full of bribes.
11 ೧೧ ನಾನಾದರೋ ನಿರ್ದೋಷಿಯಾಗಿಯೇ ನಡೆದುಕೊಳ್ಳುವವನು; ಯೆಹೋವನೇ, ಅವರಿಂದ ನನ್ನನ್ನು ವಿಮೋಚಿಸಿ ಪ್ರಸನ್ನನಾಗಿರು.
But as for me, I will walk in my integrity: redeem me, and be merciful to me.
12 ೧೨ ನನ್ನ ಪಾದವು ಸಮಭೂಮಿಯಲ್ಲಿ ನಿಂತಿದೆ; ಕೂಡಿದ ಸಭೆಯಲ್ಲಿ ಯೆಹೋವನನ್ನು ಕೊಂಡಾಡುವೆನು.
My foot standeth in an even place: in the congregations will I bless the LORD.