< ಕೀರ್ತನೆಗಳು 150 >
1 ೧ ಯೆಹೋವನಿಗೆ ಸ್ತೋತ್ರ! ದೇವರನ್ನು ಆತನ ಪರಿಶುದ್ಧ ಆಲಯದಲ್ಲಿ ಸ್ತುತಿಸಿರಿ; ಆತನ ಶಕ್ತಿಪ್ರದರ್ಶಕವಾದ ಆಕಾಶಮಂಡಲದಲ್ಲಿ ಆತನನ್ನು ಸ್ತುತಿಸಿರಿ.
Praise ye Jah! Praise ye God in His holy place, Praise Him in the expanse of His strength.
2 ೨ ಆತನ ಮಹತ್ಕಾರ್ಯಗಳಿಗಾಗಿ ಆತನನ್ನು ಸ್ತುತಿಸಿರಿ; ಆತನ ಮಹಾಪ್ರಭಾವಕ್ಕೆ ಸರಿಯಾಗಿ ಆತನನ್ನು ಸ್ತುತಿಸಿರಿ.
Praise Him in His mighty acts, Praise Him according to the abundance of His greatness.
3 ೩ ಕೊಂಬೂದುತ್ತಾ ಆತನನ್ನು ಸ್ತುತಿಸಿರಿ; ಸ್ವರಮಂಡಲ, ಕಿನ್ನರಿಗಳಿಂದ ಆತನನ್ನು ಸ್ತುತಿಸಿರಿ.
Praise Him with blowing of trumpet, Praise Him with psaltery and harp.
4 ೪ ದಮ್ಮಡಿಯನ್ನು ಬಡಿಯುತ್ತಾ, ಕುಣಿಯುತ್ತಾ ಆತನನ್ನು ಸ್ತುತಿಸಿರಿ; ತಂತಿವಾದ್ಯಗಳಿಂದಲೂ, ಕೊಳಲುಗಳಿಂದಲೂ ಆತನನ್ನು ಸ್ತುತಿಸಿರಿ.
Praise Him with timbrel and dance, Praise Him with stringed instruments and organ.
5 ೫ ತಾಳದಿಂದ ಆತನನ್ನು ಸ್ತುತಿಸಿರಿ; ಝಲ್ಲರಿಯಿಂದ ಆತನನ್ನು ಸ್ತುತಿಸಿರಿ.
Praise Him with cymbals of sounding, Praise Him with cymbals of shouting.
6 ೬ ಶ್ವಾಸವಿರುವ ಎಲ್ಲವೂ ಯೆಹೋವನನ್ನು ಸ್ತುತಿಸಲಿ; ಯೆಹೋವನಿಗೆ ಸ್ತೋತ್ರ!
All that doth breathe doth praise Jah! Praise ye Jah!