< ಕೀರ್ತನೆಗಳು 147 >

1 ಯೆಹೋವನಿಗೆ ಸ್ತೋತ್ರ! ನಮ್ಮ ದೇವರನ್ನು ಸ್ತುತಿಸುವುದು ಒಳ್ಳೆಯದೂ, ಸಂತೋಷಕರವೂ ಆಗಿದೆ, ಆತನನ್ನು ಕೀರ್ತಿಸುವುದು ಯುಕ್ತವಾಗಿದೆ.
Ẹ fi ìyìn fún Olúwa. Nítorí ohun rere ni láti máa kọrin ìyìn sí Ọlọ́run wa, ó yẹ láti kọrin ìyìn sí i!
2 ಯೆಹೋವನು ಯೆರೂಸಲೇಮನ್ನು ಕಟ್ಟಿಸುತ್ತಿದ್ದಾನೆ, ಚದರಿಹೋಗಿದ್ದ ಇಸ್ರಾಯೇಲರನ್ನು ಕೂಡಿಸುತ್ತಿದ್ದಾನೆ,
Olúwa kọ́ Jerusalẹmu; Ó kó àwọn Israẹli tí a lé sọnù jọ.
3 ಮುರಿದ ಮನಸ್ಸುಳ್ಳವರನ್ನು ವಾಸಿಮಾಡುತ್ತಾನೆ, ಅವರ ಗಾಯಗಳನ್ನು ಕಟ್ಟುತ್ತಾನೆ.
Ó wo àwọn tí ọkàn wọ́n bàjẹ́ sàn ó sì di ọgbẹ́ wọ́n.
4 ಅವನು ನಕ್ಷತ್ರಗಳ ಸಂಖ್ಯೆಯನ್ನು ಗೊತ್ತುಮಾಡಿ, ಪ್ರತಿಯೊಂದಕ್ಕೂ ಹೆಸರಿಟ್ಟಿದ್ದಾನೆ.
Ó ka iye àwọn ìràwọ̀ ó sì pe ọ̀kọ̀ọ̀kan wọn ní orúkọ.
5 ನಮ್ಮ ಕರ್ತನು ದೊಡ್ಡವನೂ, ಪರಾಕ್ರಮಿಯೂ ಆಗಿದ್ದಾನೆ, ಆತನ ಜ್ಞಾನವು ಅಪರಿಮಿತವಾಗಿದೆ.
Títóbi ni Olúwa wa ó sì pọ̀ ní agbára òye rẹ̀ kò sì ní òpin.
6 ಯೆಹೋವನು ದೀನರಿಗೆ ಆಧಾರವಾಗಿದ್ದಾನೆ, ದುಷ್ಟರನ್ನು ನೆಲಕ್ಕೆ ಹಾಕಿ ತುಳಿದುಬಿಡುತ್ತಾನೆ.
Olúwa wa pẹ̀lú àwọn onírẹ̀lẹ̀ bẹ́ẹ̀ ni ó rẹ̀ àwọn ènìyàn búburú sílẹ̀.
7 ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ, ಕಿನ್ನರಿಯೊಡನೆ ನಮ್ಮ ದೇವರನ್ನು ಕೊಂಡಾಡಿರಿ.
Fi ọpẹ́ kọrin sí Olúwa fi ohun èlò orin olókùn yin Ọlọ́run.
8 ಆತನು ಆಕಾಶದಲ್ಲಿ ಮೋಡಗಳನ್ನು ಕವಿಸುತ್ತಾನೆ, ಭೂಮಿಗೋಸ್ಕರ ಮಳೆಯನ್ನು ಸಿದ್ಧಮಾಡುತ್ತಾನೆ, ಬೆಟ್ಟಗಳಲ್ಲಿ ಹುಲ್ಲನ್ನು ಬೆಳೆಸುತ್ತಾನೆ.
Ó fi ìkùùkuu bo àwọ̀ sánmọ̀ ó rọ òjò sí orílẹ̀ ayé ó mú kí koríko hù lórí àwọn òkè
9 ಆತನು ಪಶುಗಳಿಗೂ, ಕೂಗುತ್ತಿರುವ ಕಾಗೆಮರಿಗಳಿಗೂ ಬೇಕಾದ ಆಹಾರಕೊಡುತ್ತಾನೆ.
Ó pèsè oúnjẹ fún àwọn ẹranko àti fún àwọn ọmọ ẹyẹ ìwò ní ìgbà tí wọ́n bá ń ké.
10 ೧೦ ಕುದುರೆಯ ಶಕ್ತಿಯಲ್ಲಿ ಆತನಿಗೆ ಇಷ್ಟವಿಲ್ಲ, ಆಳಿನ ತೊಡೆಯ ಬಲವನ್ನು ಆತನು ಮೆಚ್ಚುವುದಿಲ್ಲ.
Òun kò ní inú dídùn nínú agbára ẹṣin, bẹ́ẹ̀ ni Òun kò ní ayọ̀ sí ẹ̀ṣẹ̀ ọkùnrin
11 ೧೧ ಯೆಹೋವನು ಆನಂದಿಸುವುದು ತನ್ನ ಕೃಪೆಯನ್ನು ನಿರೀಕ್ಷಿಸುವ ಭಕ್ತರಲ್ಲೇ.
Olúwa ni ayọ̀ nínú àwọn tí ó bẹ̀rù rẹ̀, sí àwọn tí ó ní ìrètí nínú àánú rẹ̀.
12 ೧೨ ಯೆರೂಸಲೇಮೇ, ಯೆಹೋವನನ್ನು ಕೀರ್ತಿಸು, ಚೀಯೋನೇ, ನಿನ್ನ ದೇವರನ್ನು ಸ್ತುತಿಸು.
Yin Olúwa, ìwọ Jerusalẹmu; yin Ọlọ́run rẹ, ìwọ Sioni.
13 ೧೩ ಆತನು ನಿನ್ನ ಹೆಬ್ಬಾಗಿಲುಗಳ ಅಗುಳಿಗಳನ್ನು ಬಲಪಡಿಸಿದ್ದಾನೆ, ನಿನ್ನ ಮಕ್ಕಳನ್ನು ಆಶೀರ್ವದಿಸಿದ್ದಾನೆ.
Nítorí tí ó ti mú ọ̀pá ìdábùú ibodè rẹ̀ lágbára, Òun sì ti bùkún fún àwọn ọmọ rẹ̀ nínú rẹ
14 ೧೪ ಆತನು ನಿನ್ನ ಪ್ರಾಂತ್ಯದೊಳಗೆ ಸೌಭಾಗ್ಯವನ್ನು ಉಂಟುಮಾಡುತ್ತಾನೆ, ಶ್ರೇಷ್ಠವಾದ ಗೋದಿಯಿಂದ ನಿನ್ನನ್ನು ತೃಪ್ತಿಗೊಳಿಸುತ್ತಾನೆ.
Òun jẹ́ kí àlàáfíà wà ní àwọn ẹnu ibodè rẹ̀, òun sì fi jéró dáradára tẹ́ ọ lọ́rùn.
15 ೧೫ ತನ್ನ ನುಡಿಯನ್ನು ಭೂಲೋಕಕ್ಕೆ ಕಳುಹಿಸುತ್ತಾನೆ, ಆತನ ವಾಕ್ಯವು ಬಹು ವೇಗಶಾಲಿಯಾಗಿದೆ.
Òun sì rán àṣẹ rẹ̀ sí ayé ọ̀rọ̀ rẹ̀ sáré tete.
16 ೧೬ ಉಣ್ಣೆಯಂತಿರುವ ಹಿಮವನ್ನು ಬೀಳಿಸುತ್ತಾನೆ, ಇಬ್ಬನಿಯನ್ನು ಬೂದಿಯಂತೆ ಹರವುತ್ತಾನೆ.
Ó fi yìnyín fún ni bi irun àgùntàn ó sì fọ́n ìrì dídì ká bí eérú
17 ೧೭ ರೊಟ್ಟಿ ತುಂಡುಗಳಂತಿರುವ ಆನೆಕಲ್ಲುಗಳನ್ನು ಸುರಿಸುತ್ತಾನೆ, ಆತನು ಚಳಿಯನ್ನು ಬರಮಾಡಲು ಅದನ್ನು ಸಹಿಸುವವರು ಯಾರು?
Ó rọ òjò yìnyín rẹ̀ bí òkúta wẹ́wẹ́ ta ni ó lè dúró níwájú òtútù rẹ̀
18 ೧೮ ಆತನು ಅಪ್ಪಣೆಕೊಡಲು ಅವು ಕರಗುತ್ತವೆ, ತನ್ನ ಗಾಳಿಯನ್ನು ಬೀಸಮಾಡಲು ನೀರು ಹರಿಯುತ್ತದೆ.
Ó rán ọ̀rọ̀ rẹ̀ jáde ó sì mú wọn yọ̀ ó mú kí afẹ́fẹ́ rẹ̀ fẹ́ ó sì mú odò rẹ̀ sàn.
19 ೧೯ ಆತನು ತನ್ನ ವಾಕ್ಯವನ್ನು ಯಾಕೋಬ್ಯರಿಗೆ ತಿಳಿಸುತ್ತಾನೆ, ತನ್ನ ನಿಯಮವಿಧಿಗಳನ್ನು ಇಸ್ರಾಯೇಲರಿಗೆ ಪ್ರಕಟಿಸುತ್ತಾನೆ.
Ó sọ ọ̀rọ̀ rẹ̀ di mí mọ̀ fún Jakọbu àwọn òfin àti ìlànà rẹ̀ fún Israẹli.
20 ೨೦ ಬೇರೆ ಯಾವ ಜನಾಂಗದವರಿಗೂ ಆತನು ಹೀಗೆ ಮಾಡಲಿಲ್ಲ, ಆತನ ನ್ಯಾಯವಿಧಿಗಳನ್ನು ಅವರು ಅರಿಯರು. ಯೆಹೋವನಿಗೆ ಸ್ತೋತ್ರ!
Òun kó tí ṣe irú èyí sí orílẹ̀-èdè kan rí, bí ó ṣe ti ìdájọ́ rẹ̀ wọn ko mọ òfin rẹ̀. Ẹ fi ìyìn fún Olúwa.

< ಕೀರ್ತನೆಗಳು 147 >