< ಕೀರ್ತನೆಗಳು 147 >
1 ೧ ಯೆಹೋವನಿಗೆ ಸ್ತೋತ್ರ! ನಮ್ಮ ದೇವರನ್ನು ಸ್ತುತಿಸುವುದು ಒಳ್ಳೆಯದೂ, ಸಂತೋಷಕರವೂ ಆಗಿದೆ, ಆತನನ್ನು ಕೀರ್ತಿಸುವುದು ಯುಕ್ತವಾಗಿದೆ.
Lobet Jah! / Denn köstlich ist's, unsern Gott zu preisen; / Ja, lieblich ist's, es ziemt sich Lobgesang.
2 ೨ ಯೆಹೋವನು ಯೆರೂಸಲೇಮನ್ನು ಕಟ್ಟಿಸುತ್ತಿದ್ದಾನೆ, ಚದರಿಹೋಗಿದ್ದ ಇಸ್ರಾಯೇಲರನ್ನು ಕೂಡಿಸುತ್ತಿದ್ದಾನೆ,
Jahwe bauet Jerusalem, / Die Vertriebnen Israels sammelt er wieder.
3 ೩ ಮುರಿದ ಮನಸ್ಸುಳ್ಳವರನ್ನು ವಾಸಿಮಾಡುತ್ತಾನೆ, ಅವರ ಗಾಯಗಳನ್ನು ಕಟ್ಟುತ್ತಾನೆ.
Er heilt die zerbrochnen Herzen, / Und ihre Wunden verbindet er.
4 ೪ ಅವನು ನಕ್ಷತ್ರಗಳ ಸಂಖ್ಯೆಯನ್ನು ಗೊತ್ತುಮಾಡಿ, ಪ್ರತಿಯೊಂದಕ್ಕೂ ಹೆಸರಿಟ್ಟಿದ್ದಾನೆ.
Er bestimmt den Sternen ihre Zahl, / Sie alle ruft er bei Namen.
5 ೫ ನಮ್ಮ ಕರ್ತನು ದೊಡ್ಡವನೂ, ಪರಾಕ್ರಮಿಯೂ ಆಗಿದ್ದಾನೆ, ಆತನ ಜ್ಞಾನವು ಅಪರಿಮಿತವಾಗಿದೆ.
Groß ist unser Herr und reich an Kraft, / Seine Einsicht ist unermeßlich.
6 ೬ ಯೆಹೋವನು ದೀನರಿಗೆ ಆಧಾರವಾಗಿದ್ದಾನೆ, ದುಷ್ಟರನ್ನು ನೆಲಕ್ಕೆ ಹಾಕಿ ತುಳಿದುಬಿಡುತ್ತಾನೆ.
Den Duldern hilft Jahwe auf, / Aber Frevler erniedrigt er tief zu Boden.
7 ೭ ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ, ಕಿನ್ನರಿಯೊಡನೆ ನಮ್ಮ ದೇವರನ್ನು ಕೊಂಡಾಡಿರಿ.
Stimmt für Jahwe ein Danklied an, / Spielt unserm Gott auf der Zither!
8 ೮ ಆತನು ಆಕಾಶದಲ್ಲಿ ಮೋಡಗಳನ್ನು ಕವಿಸುತ್ತಾನೆ, ಭೂಮಿಗೋಸ್ಕರ ಮಳೆಯನ್ನು ಸಿದ್ಧಮಾಡುತ್ತಾನೆ, ಬೆಟ್ಟಗಳಲ್ಲಿ ಹುಲ್ಲನ್ನು ಬೆಳೆಸುತ್ತಾನೆ.
Er bedeckt den Himmel mit Wolken, / Er spendet Regen der Erde, / Läßt Gras auf den Bergen sprossen.
9 ೯ ಆತನು ಪಶುಗಳಿಗೂ, ಕೂಗುತ್ತಿರುವ ಕಾಗೆಮರಿಗಳಿಗೂ ಬೇಕಾದ ಆಹಾರಕೊಡುತ್ತಾನೆ.
Er gibt dem Vieh sein Futter, / Den jungen Raben, wenn sie schrein.
10 ೧೦ ಕುದುರೆಯ ಶಕ್ತಿಯಲ್ಲಿ ಆತನಿಗೆ ಇಷ್ಟವಿಲ್ಲ, ಆಳಿನ ತೊಡೆಯ ಬಲವನ್ನು ಆತನು ಮೆಚ್ಚುವುದಿಲ್ಲ.
Nicht an des Rosses Stärke hat er Gefallen, / Er hat nicht Lust an des Mannes Beinen.
11 ೧೧ ಯೆಹೋವನು ಆನಂದಿಸುವುದು ತನ್ನ ಕೃಪೆಯನ್ನು ನಿರೀಕ್ಷಿಸುವ ಭಕ್ತರಲ್ಲೇ.
Lust hat Jahwe an seinen Frommen, / Die da harren auf seine Huld.
12 ೧೨ ಯೆರೂಸಲೇಮೇ, ಯೆಹೋವನನ್ನು ಕೀರ್ತಿಸು, ಚೀಯೋನೇ, ನಿನ್ನ ದೇವರನ್ನು ಸ್ತುತಿಸು.
Preise, Jerusalem, Jahwe, / Lobe, Zion, deinen Gott!
13 ೧೩ ಆತನು ನಿನ್ನ ಹೆಬ್ಬಾಗಿಲುಗಳ ಅಗುಳಿಗಳನ್ನು ಬಲಪಡಿಸಿದ್ದಾನೆ, ನಿನ್ನ ಮಕ್ಕಳನ್ನು ಆಶೀರ್ವದಿಸಿದ್ದಾನೆ.
Denn er hat deiner Tore Riegel gestärkt, / Hat deine Kinder gesegnet in dir.
14 ೧೪ ಆತನು ನಿನ್ನ ಪ್ರಾಂತ್ಯದೊಳಗೆ ಸೌಭಾಗ್ಯವನ್ನು ಉಂಟುಮಾಡುತ್ತಾನೆ, ಶ್ರೇಷ್ಠವಾದ ಗೋದಿಯಿಂದ ನಿನ್ನನ್ನು ತೃಪ್ತಿಗೊಳಿಸುತ್ತಾನೆ.
Er hat deinem Lande Frieden geschenkt, / Dich mit dem besten Weizen gesättigt.
15 ೧೫ ತನ್ನ ನುಡಿಯನ್ನು ಭೂಲೋಕಕ್ಕೆ ಕಳುಹಿಸುತ್ತಾನೆ, ಆತನ ವಾಕ್ಯವು ಬಹು ವೇಗಶಾಲಿಯಾಗಿದೆ.
Er sendet sein Machtwort nieder zur Erde, / Eilend läuft sein Gebot.
16 ೧೬ ಉಣ್ಣೆಯಂತಿರುವ ಹಿಮವನ್ನು ಬೀಳಿಸುತ್ತಾನೆ, ಇಬ್ಬನಿಯನ್ನು ಬೂದಿಯಂತೆ ಹರವುತ್ತಾನೆ.
Er gibt Schnee wie Wolle, / Streut Reif wie Asche aus.
17 ೧೭ ರೊಟ್ಟಿ ತುಂಡುಗಳಂತಿರುವ ಆನೆಕಲ್ಲುಗಳನ್ನು ಸುರಿಸುತ್ತಾನೆ, ಆತನು ಚಳಿಯನ್ನು ಬರಮಾಡಲು ಅದನ್ನು ಸಹಿಸುವವರು ಯಾರು?
Er wirft seinen Hagel herab in Stücken: / Wer hält vor seiner Kälte stand?
18 ೧೮ ಆತನು ಅಪ್ಪಣೆಕೊಡಲು ಅವು ಕರಗುತ್ತವೆ, ತನ್ನ ಗಾಳಿಯನ್ನು ಬೀಸಮಾಡಲು ನೀರು ಹರಿಯುತ್ತದೆ.
Sendet er aber sein Wort, so zerschmelzt er sie. / Er läßt seinen Tauwind wehn, so rinnen Gewässer.
19 ೧೯ ಆತನು ತನ್ನ ವಾಕ್ಯವನ್ನು ಯಾಕೋಬ್ಯರಿಗೆ ತಿಳಿಸುತ್ತಾನೆ, ತನ್ನ ನಿಯಮವಿಧಿಗಳನ್ನು ಇಸ್ರಾಯೇಲರಿಗೆ ಪ್ರಕಟಿಸುತ್ತಾನೆ.
Er hat für Jakob sein Wort verkündet, / Seine Satzungen und Rechte für Israel.
20 ೨೦ ಬೇರೆ ಯಾವ ಜನಾಂಗದವರಿಗೂ ಆತನು ಹೀಗೆ ಮಾಡಲಿಲ್ಲ, ಆತನ ನ್ಯಾಯವಿಧಿಗಳನ್ನು ಅವರು ಅರಿಯರು. ಯೆಹೋವನಿಗೆ ಸ್ತೋತ್ರ!
So hat er sonst keinem Volke getan; / Drum kennen sie auch seine Rechte nicht. / Lobt Jah!