< ಕೀರ್ತನೆಗಳು 140 >
1 ೧ ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು, ದಾವೀದನ ಕೀರ್ತನೆ. ಯೆಹೋವನೇ, ಕೆಡುಕರಿಂದ ನನ್ನನ್ನು ಬಿಡಿಸು, ಬಲಾತ್ಕಾರಿಗಳಿಂದ ತಪ್ಪಿಸಿ ಕಾಪಾಡು.
Yahwe, uniokoe dhidi ya waovu; unikinge dhidi ya watu wenye vurugu.
2 ೨ ಅವರು ಕೇಡು ಕಲ್ಪಿಸುತ್ತಾರೆ, ಯಾವಾಗಲೂ ಜಗಳವೆಬ್ಬಿಸುತ್ತಾರೆ.
Wao wanapanga uovu mioyoni mwao; wanasababisha mapigano kila siku.
3 ೩ ತಮ್ಮ ನಾಲಿಗೆಯನ್ನು ಸರ್ಪದಂತೆ ಹದಮಾಡಿದ್ದಾರೆ, ಅವರ ತುಟಿಗಳ ಹಿಂದೆ ಹಾವಿನ ವಿಷವಿದೆ. (ಸೆಲಾ)
Ndimi zao zinajeruhi kama nyoka; sumu ya fira imo midomoni mwao. (Selah)
4 ೪ ಯೆಹೋವನೇ, ದುಷ್ಟರ ಕೈಗೆ ಸಿಕ್ಕದಂತೆ ನನ್ನನ್ನು ಕಾಪಾಡು, ಬಲಾತ್ಕಾರಿಗಳಿಂದ ತಪ್ಪಿಸಿ ರಕ್ಷಿಸು. ಅವರು ನನ್ನ ಕಾಲುಗಳನ್ನು ಎಡವಿಸಿಬಿಡಬೇಕೆಂದು ಯೋಚಿಸಿದ್ದಾರೆ.
Ee Yahwe, unilinde dhidi ya mikono ya waovu; unikinge na vurugu za watu wanaopanga kuniangusha.
5 ೫ ಗರ್ವಿಷ್ಠರು ನನಗೋಸ್ಕರ ಗುಪ್ತಸ್ಥಳದಲ್ಲಿ ಉರುಲನ್ನೂ, ಪಾಶಗಳನ್ನೂ ಒಡ್ಡಿದ್ದಾರೆ, ದಾರಿಯ ಮಗ್ಗುಲಲ್ಲಿ ಬಲೆಹಾಸಿದ್ದಾರೆ, ನನಗಾಗಿ ಬಲೆಬೀಸಿಟ್ಟಿದ್ದಾರೆ. (ಸೆಲಾ)
Wenye majivuno wameweka mtego kwa ajili yangu; wameeneza nyavu; wameweka kitanzi kwa ajili yangu. (Selah)
6 ೬ ನಾನು ಯೆಹೋವನಿಗೆ, “ನೀನೇ ನನ್ನ ದೇವರು, ಯೆಹೋವನೇ, ನನ್ನ ವಿಜ್ಞಾಪನೆಗೆ ಕಿವಿಗೊಡು,
Nilimwambia Yahwe, “Wewe ni Mungu wangu; usikie kilio changu unihurumie.”
7 ೭ ಕರ್ತನೇ, ಯೆಹೋವನೇ, ನನ್ನ ಆಶ್ರಯದುರ್ಗವೇ, ಯುದ್ಧ ಸಮಯದಲ್ಲಿ ನೀನೇ ನನ್ನ ಶಿರಸ್ತ್ರಾಣ,
Ee Yahwe, Bwana wangu, wewe ni mwenye nguvu uwezaye kuniokoa; hunifunika ngao kichwa changu siku ya vita.
8 ೮ ಯೆಹೋವನೇ, ದುಷ್ಟರು ತಮ್ಮನ್ನು ಹೆಚ್ಚಿಸಿಕೊಳ್ಳದಂತೆ, ಅವರ ಆಶೆಗಳನ್ನು ನೆರವೇರಿಸಬೇಡ, ಅವರ ಕುಯುಕ್ತಿಯನ್ನು ಸಾಗಗೊಡಿಸಬೇಡ” ಎಂದು ಹೇಳುತ್ತೇನೆ. (ಸೆಲಾ)
Ee Yahwe, usiyatimize matakwa ya waovu; usiruhusu njama zao kufanikiwa. (Selah)
9 ೯ ನನ್ನನ್ನು ಸುತ್ತಿಕೊಂಡಿರುವವರ ತುಟಿಗಳ ಕೇಡು ಅವರ ತಲೆಯ ಮೇಲೆಯೇ ಬರಲಿ,
Wale wanao nizunguka huinua vichwa vyao; madhara ya midomo yao wenyewe na yawafunike.
10 ೧೦ ಅವರ ಮೇಲೆ ಕೆಂಡಗಳು ಸುರಿಯಲಿ, ಅವರು ಅಗ್ನಿಕುಂಡದೊಳಕ್ಕೂ, ಆಳವಾದ ತಗ್ಗಿನೊಳಕ್ಕೂ ದೊಬ್ಬಲ್ಪಟ್ಟು ತಿರುಗಿ ಏಳದಿರಲಿ.
Makaa ya moto na yawaangukie; uwatupe motoni, kwenye shimo refu, wasiweze kuinuka tena.
11 ೧೧ ಚಾಡಿಗಾರನು ದೇಶದಲ್ಲಿ ಉಳಿಯನು, ಕೇಡು ಬಲಾತ್ಕಾರಿಯನ್ನು ಹಿಂದಟ್ಟಿ ಕೆಡವಿಬಿಡುವುದು.
Watu wenye ndimi na wasifanywe salama juu ya nchi; na uovu umuwinde kumpiga mtu mwenye vurugu mpaka afe.
12 ೧೨ ಯೆಹೋವನು ದೀನರ ವ್ಯಾಜ್ಯವನ್ನು ನಡೆಸುವನೆಂತಲೂ, ಬಡವರ ನ್ಯಾಯವನ್ನು ಸ್ಥಾಪಿಸುವನೆಂತಲೂ ಬಲ್ಲೆನು.
Ninajua kuwa Yahwe atahukumu kwa haki walioteswa, na kuwa atawapa haki wahitaji.
13 ೧೩ ನಿಶ್ಚಯವಾಗಿ ನೀತಿವಂತರು ನಿನ್ನ ಹೆಸರನ್ನು ಕೊಂಡಾಡುವರು, ಯಥಾರ್ಥರು ನಿನ್ನ ಸನ್ನಿಧಿಯಲ್ಲಿ ಬದುಕುವರು.
Hakika watu wenye haki watalishukuru jina lako; watu wanyoofu wataishi uweponi mwako.