< ಕೀರ್ತನೆಗಳು 14 >
1 ೧ ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನದು. ದುರ್ಮತಿಗಳು ತಮ್ಮ ಮನಸ್ಸಿನಲ್ಲಿ, “ದೇವರೇ ಇಲ್ಲ” ಎಂದು ಅಂದುಕೊಳ್ಳುತ್ತಾರೆ; ಅವರು ಕೆಟ್ಟುಹೋದವರು; ಹೇಯವಾದ ಅಕ್ರಮಗಳನ್ನು ನಡೆಸುತ್ತಾರೆ. ಅವರಲ್ಲಿ ಒಳ್ಳೆಯದನ್ನು ಮಾಡುವವರೇ ಇಲ್ಲ.
За първият певец. Давидов псалом. Безумният рече в сърцето си: Няма Бог. Поквариха се; сториха развалени дела; Няма кой да прави добро.
2 ೨ ಮನುಷ್ಯರಲ್ಲಿ ತನ್ನ ಸಾನ್ನಿಧ್ಯವನ್ನು ಅಪೇಕ್ಷಿಸುವ ಬುದ್ಧಿವಂತರು ಇದ್ದಾರೋ, ಎಂದು ಯೆಹೋವನು ಆಕಾಶದಿಂದ ಮನುಷ್ಯರನ್ನು ನೋಡಲಾಗಿ,
Господ надникна от небесата над човешките чада За да види има ли някой разумен, Който да търси Бога.
3 ೩ ಒಳ್ಳೆಯದನ್ನು ಮಾಡುವವನು ಇಲ್ಲ, ಒಬ್ಬನಾದರೂ ಇಲ್ಲ. ಪ್ರತಿಯೊಬ್ಬನೂ ದಾರಿತಪ್ಪಿದವನು, ಎಲ್ಲರೂ ಕೆಟ್ಟು ಹೋದವರೇ.
Всички се отбиха от пътя, заедно се развратиха; Няма кой да прави добро, няма ни един.
4 ೪ ದುಷ್ಟತ್ವವನ್ನು ನಡೆಸುವವರೆಲ್ಲರು ತಿಳಿಯುವುದಿಲ್ಲವೋ? ಅವರು ನನ್ನ ಜನರನ್ನು ಆಹಾರವನ್ನೋ ಎಂಬಂತೆ ನುಂಗಿಬಿಡುತ್ತಾರೆ; ಯೆಹೋವನನ್ನು ಸ್ಮರಿಸುವುದಿಲ್ಲ.
Без разум ли са всички, които беззаконствуват, Които изпояждат людете ми както ядат хляб, И не призовават Господа?
5 ೫ ಅವರು ಫಕ್ಕನೆ ಭಯಭ್ರಾಂತರಾಗುವರು; ಏಕೆಂದರೆ ದೇವರು ನೀತಿವಂತರ ಪಕ್ಷದಲ್ಲಿದ್ದಾನೆ.
Тогава Ги нападна голям страх; Защото Бог е в поколението на праведните.
6 ೬ ನೀವು ಕುಗ್ಗಿದವರ ಸಂಕಲ್ಪವನ್ನು ಭಂಗಪಡಿಸಿದರೂ ಯೆಹೋವನು ಅವರ ಆಶ್ರಯವಲ್ಲವೇ.
Посрамихте намеренията на бедния; Господ, обаче, му е прибежище.
7 ೭ ಚೀಯೋನಿನಿಂದ ಇಸ್ರಾಯೇಲರಿಗೆ ರಕ್ಷಣೆಯು ಬೇಗನೆ ಬರಲಿ. ಯೆಹೋವನು ತನ್ನ ಜನರನ್ನು ದುರವಸ್ಥೆಯಿಂದ ತಪ್ಪಿಸಿದಾಗ, ಆತನ ಪ್ರಜೆಗಳಾಗಿರುವ ಯಾಕೋಬವಂಶದವರು ಉಲ್ಲಾಸಗೊಳ್ಳುವರು, ಇಸ್ರಾಯೇಲರು ಹರ್ಷಿಸುವರು.
Дано дойде от Сион избавление на Израиля! Когато Господ върне своите люде от плен, Тогава ще се зарадва Яков, ще се развесели Израил.