< ಕೀರ್ತನೆಗಳು 137 >
1 ೧ ನಾವು ಬಾಬೆಲ್ ದೇಶದ ನದಿಗಳ ಬಳಿಯಲ್ಲಿ ಕುಳಿತುಕೊಂಡು, ಚೀಯೋನನ್ನು ನೆನಪುಮಾಡಿಕೊಂಡು ಅತ್ತೆವು.
Давида. При реках Вавилона, там сидели мы и плакали, когда вспоминали о Сионе;
2 ೨ ಆ ದೇಶದ ನೀರವಂಜಿ ಮರಗಳಿಗೆ ನಮ್ಮ ಕಿನ್ನರಿಗಳನ್ನು ತೂಗುಹಾಕಿದೆವು.
на вербах, посреди его, повесили мы наши арфы.
3 ೩ ನಮ್ಮನ್ನು ಸೆರೆಹಿಡಿದು ಪೀಡಿಸುತ್ತಿದ್ದವರು ನಮಗೆ, “ಚೀಯೋನಿನ ಗೀತೆಗಳಲ್ಲಿ ಒಂದನ್ನು ನಮ್ಮ ವಿನೋದಕ್ಕಾಗಿ ಹಾಡಿರಿ” ಎಂದು ಹೇಳುತ್ತಿದ್ದರು.
Там пленившие нас требовали от нас слов песней, и притеснители наши - веселья: “пропойте нам из песней Сионских”.
4 ೪ ನಾವು ಪರದೇಶದಲ್ಲಿ ಯೆಹೋವನ ಗೀತೆಗಳನ್ನು ಹಾಡುವುದು ಹೇಗೆ?
Как нам петь песнь Господню на земле чужой?
5 ೫ ಯೆರೂಸಲೇಮೇ, ನಾನು ನಿನ್ನನ್ನು ಮರೆತುಬಿಟ್ಟರೆ ನನ್ನ ಬಲಗೈಯು ತನ್ನ ಕೌಶಲ್ಯವನ್ನು ಮರೆತು ಹೋಗಲಿ.
Если я забуду тебя, Иерусалим, - забудь меня десница моя;
6 ೬ ಯೆರೂಸಲೇಮೇ, ನಾನು ನಿನ್ನನ್ನು ನೆನಪು ಮಾಡಿಕೊಳ್ಳದಿದ್ದರೆ, ಎಲ್ಲಾದಕ್ಕಿಂತ ಹೆಚ್ಚಾಗಿ ನಾನು ನಿನ್ನಲ್ಲಿ ಆನಂದಿಸದಿದ್ದರೆ, ನನ್ನ ನಾಲಿಗೆಯು ಸೇದಿಹೋಗಲಿ.
прилипни язык мой к гортани моей, если не буду помнить тебя, если не поставлю Иерусалима во главе веселия моего.
7 ೭ ಯೆಹೋವನೇ, ಎದೋಮ್ಯರ ಹಾನಿಗಾಗಿ, ಯೆರೂಸಲೇಮಿನ ನಾಶನದ ದಿನವನ್ನು ನೆನಪುಮಾಡಿಕೋ. ಅವರು, “ಅದನ್ನು ಹಾಳುಮಾಡಿರಿ, ಅಸ್ತಿವಾರ ಸಹಿತ ಹಾಳುಮಾಡಿರಿ” ಎಂದು ಹೇಳಿದರಲ್ಲಾ.
Припомни, Господи, сынам Едомовым день Иерусалима, когда они говорили: “разрушайте, разрушайте до основания его”.
8 ೮ ಹಾಳಾಗುವುದಕ್ಕಿರುವ ಬಾಬೆಲ್ ಪಟ್ಟಣವೇ, ನೀನು ನನಗೆ ಮಾಡಿದ್ದಕ್ಕೆ ಮುಯ್ಯಿ ತೀರಿಸುವವನು ಧನ್ಯನು.
Дочь Вавилона, опустошительница! блажен, кто воздаст тебе за то, что ты сделала нам!
9 ೯ ನಿನ್ನ ಮಕ್ಕಳನ್ನು ಹಿಡಿದು ಬಂಡೆಗೆ ಅಪ್ಪಳಿಸುವವನು ಭಾಗ್ಯಹೊಂದಲಿ.
Блажен, кто возьмет и разобьет младенцев твоих о камень!