< ಕೀರ್ತನೆಗಳು 136 >
1 ೧ ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ, ಆತನು ಒಳ್ಳೆಯವನು. ಆತನ ಪ್ರೀತಿಯು ಶಾಶ್ವತವಾದದ್ದು.
Monna Awurade ase na oye.
2 ೨ ದೇವಾಧಿದೇವನಿಗೆ ಕೃತಜ್ಞತಾಸ್ತುತಿ ಮಾಡಿರಿ, ಆತನ ಪ್ರೀತಿಯು ಶಾಶ್ವತವಾದದ್ದು.
Monna anyame mu Nyankopɔn no ase.
3 ೩ ಕರ್ತರ ಕರ್ತನಿಗೆ ಕೃತಜ್ಞತಾಸ್ತುತಿ ಮಾಡಿರಿ, ಆತನ ಪ್ರೀತಿಯು ಶಾಶ್ವತವಾದದ್ದು.
Monna awuranom mu Awurade no ase.
4 ೪ ಮಹತ್ಕಾರ್ಯಗಳನ್ನು ನಡೆಸುವುದಕ್ಕೆ ಆತನೊಬ್ಬನೇ ಶಕ್ತನು, ಆತನ ಪ್ರೀತಿಯು ಶಾಶ್ವತವಾದದ್ದು.
Ɔno nko ara na ɔyɛ anwonwade akɛse.
5 ೫ ಆತನು ಆಕಾಶವನ್ನು ಜ್ಞಾನದಿಂದ ನಿರ್ಮಿಸಿದ್ದಾನೆ, ಆತನ ಪ್ರೀತಿಯು ಶಾಶ್ವತವಾದದ್ದು.
Ɔno na ofi ne ntease mu bɔɔ ɔsoro.
6 ೬ ಆತನು ಭೂಮಿಯನ್ನು ಜಲರಾಶಿಗಳ ಮೇಲೆ ಹಾಸಿದ್ದಾನೆ, ಆತನ ಪ್ರೀತಿಯು ಶಾಶ್ವತವಾದದ್ದು.
Ɔno na ɔtrɛw asase mu de kataa nsu so.
7 ೭ ಆತನು ಮಹಾ ಜ್ಯೋತಿರ್ಮಂಡಲಗಳನ್ನು ಸೃಷ್ಟಿಸಿದ್ದಾನೆ, ಆತನ ಪ್ರೀತಿಯು ಶಾಶ್ವತವಾದದ್ದು.
Ɔno na ɔbɔɔ akanea akɛse no.
8 ೮ ಸೂರ್ಯನು ಹಗಲನ್ನು ಆಳುತ್ತಾನೆ, ಆತನ ಪ್ರೀತಿಯು ಶಾಶ್ವತವಾದದ್ದು.
Ɔbɔɔ owia sɛ enni adekyee so.
9 ೯ ಚಂದ್ರ, ನಕ್ಷತ್ರಗಳು ರಾತ್ರಿಯನ್ನು ಆಳುತ್ತವೆ, ಆತನ ಪ್ರೀತಿಯು ಶಾಶ್ವತವಾದದ್ದು.
Ɔbɔɔ sram ne nsoromma sɛ wonni adesae so no.
10 ೧೦ ಆತನು ಐಗುಪ್ತ್ಯರ ಚೊಚ್ಚಲ ಮಕ್ಕಳನ್ನು ಸಂಹರಿಸಿದನು, ಆತನ ಪ್ರೀತಿಯು ಶಾಶ್ವತವಾದದ್ದು.
Ɔno na okunkum Misraimfo mmakan,
11 ೧೧ ಇಸ್ರಾಯೇಲರನ್ನು ಅವರ ಮಧ್ಯದಿಂದ ಹೊರಗೆ ತಂದನು, ಆತನ ಪ್ರೀತಿಯು ಶಾಶ್ವತವಾದದ್ದು.
na oyii Israelfo fii wɔn mu no.
12 ೧೨ ತನ್ನ ಭುಜಬಲ, ಶಿಕ್ಷಾಹಸ್ತ ಇವುಗಳಿಂದ ಅವರನ್ನು ಬಿಡಿಸಿದನು, ಆತನ ಪ್ರೀತಿಯು ಶಾಶ್ವತವಾದದ್ದು.
Ɔde nsa kɛse ne basa a wateɛ mu.
13 ೧೩ ಆತನು ಕೆಂಪು ಸಮುದ್ರವನ್ನು ವಿಭಾಗಿಸಿದನು, ಆತನ ಪ್ರೀತಿಯು ಶಾಶ್ವತವಾದದ್ದು.
Ɔno na ɔpaee Po Kɔkɔɔ no mu no,
14 ೧೪ ಇಸ್ರಾಯೇಲರನ್ನು ಅದರ ಮಧ್ಯದಲ್ಲಿಯೇ ನಡೆಸಿದನು, ಆತನ ಪ್ರೀತಿಯು ಶಾಶ್ವತವಾದದ್ದು.
na ɔde Israelfo faa mfimfini no.
15 ೧೫ ಫರೋಹನನ್ನೂ, ಅವನ ಸೈನ್ಯವನ್ನೂ ಕೆಂಪು ಸಮುದ್ರದಲ್ಲಿ ಕೆಡವಿಬಿಟ್ಟನು, ಆತನ ಪ್ರೀತಿಯು ಶಾಶ್ವತವಾದದ್ದು.
Nanso ɔpraa Farao ne nʼasraafo guu Po Kɔkɔɔ mu no.
16 ೧೬ ಆತನು ತನ್ನ ಪ್ರಜೆಯನ್ನು ಅರಣ್ಯದೊಳಗೆ ಕರೆತಂದನು, ಆತನ ಪ್ರೀತಿಯು ಶಾಶ್ವತವಾದದ್ದು.
Ɔno na odii ne nkurɔfo anim wɔ sare no so.
17 ೧೭ ದೊಡ್ಡ ಅರಸರನ್ನು ಹೊಡೆದನು, ಆತನ ಪ್ರೀತಿಯು ಶಾಶ್ವತವಾದದ್ದು.
Ɔno na okum ahemfo akɛse no,
18 ೧೮ ಶ್ರೇಷ್ಠ ರಾಜರನ್ನು ಸಂಹರಿಸಿದನು, ಆತನ ಪ್ರೀತಿಯು ಶಾಶ್ವತವಾದದ್ದು.
na okum ahemfo akunini no.
19 ೧೯ ಅಮೋರಿಯರ ಅರಸನಾದ ಸೀಹೋನನು ಅವರಲ್ಲೊಬ್ಬನು, ಆತನ ಪ್ರೀತಿಯು ಶಾಶ್ವತವಾದದ್ದು.
Okum Amorifo hene, Sihon,
20 ೨೦ ಬಾಷಾನಿನ ಅರಸನಾದ ಓಗನು ಇನ್ನೊಬ್ಬನು, ಆತನ ಪ್ರೀತಿಯು ಶಾಶ್ವತವಾದದ್ದು.
ne Basanhene, Og.
21 ೨೧ ಅವರ ದೇಶವನ್ನು ಇಸ್ರಾಯೇಲರಿಗೆ ಸ್ವತ್ತಾಗಿ ಕೊಟ್ಟನು, ಆತನ ಪ್ರೀತಿಯು ಶಾಶ್ವತವಾದದ್ದು.
Na ɔde wɔn nsase maa sɛ agyapade.
22 ೨೨ ಆತನ ಸೇವಕರಾದ ಇಸ್ರಾಯೇಲರಿಗೆ ಅದು ಸ್ವಾಸ್ತ್ಯವಾಯಿತು, ಆತನ ಪ್ರೀತಿಯು ಶಾಶ್ವತವಾದದ್ದು.
Ɔde maa ne somfo Israel sɛ agyapade.
23 ೨೩ ನಾವು ದೀನಾವಸ್ಥೆಯಲ್ಲಿ ಇದ್ದಾಗ ನಮ್ಮನ್ನು ನೆನಪುಮಾಡಿಕೊಂಡನು, ಆತನ ಪ್ರೀತಿಯು ಶಾಶ್ವತವಾದದ್ದು.
Ɔkaee yɛn, yɛn mmerɛwyɛ mu.
24 ೨೪ ನಮ್ಮ ಶತ್ರುಗಳಿಂದ ನಮ್ಮನ್ನು ಬಿಡಿಸಿದನು, ಆತನ ಪ್ರೀತಿಯು ಶಾಶ್ವತವಾದದ್ದು.
Na ogyee yɛn fii yɛn atamfo nsam.
25 ೨೫ ಎಲ್ಲಾ ಜೀವಿಗಳಿಗೂ ಆಹಾರ ಕೊಡುವವನು ಆತನೇ, ಆತನ ಪ್ರೀತಿಯು ಶಾಶ್ವತವಾದದ್ದು.
Ɔno na ɔma abɔde biara aduan.
26 ೨೬ ಪರಲೋಕದಲ್ಲಿರುವ ದೇವರಿಗೆ ಕೃತಜ್ಞತಾಸ್ತುತಿ ಮಾಡಿರಿ, ಆತನ ಪ್ರೀತಿಯು ಶಾಶ್ವತವಾದದ್ದು.
Monna ɔsorosoro Nyankopɔn no ase.