< ಕೀರ್ತನೆಗಳು 129 >
1 ೧ ಯಾತ್ರಾಗೀತೆ. “ನಮ್ಮ ಯೌವನ ಕಾಲದಿಂದ ಶತ್ರುಗಳು ನಮ್ಮನ್ನು ಹಲವು ಸಾರಿ ಬಾಧಿಸಿದ್ದಾರೆ” ಎಂದು ಇಸ್ರಾಯೇಲರು ಹೇಳಲಿ.
都もうでの歌 今イスラエルは言え、「彼らはわたしの若い時から、ひどくわたしを悩ました。
2 ೨ “ನಾವು ಯೌವನ ಕಾಲದಿಂದ ಎಷ್ಟೋ ಸಾರಿ ಬಾಧೆ ಹೊಂದಿದರೂ, ಅವರು ನಮ್ಮನ್ನು ಜಯಿಸಲಿಲ್ಲ.
彼らはわたしの若い時から、ひどくわたしを悩ました。しかしわたしに勝つことができなかった。
3 ೩ ಉಳುವವರು ನಮ್ಮ ಬೆನ್ನಿನ ಮೇಲೆ ಉಳುತ್ತಾ, ಉದ್ದವಾದ ಗೆರೆಗಳನ್ನು ಹಾಕಿದರು.”
耕す者はわたしの背の上をたがやして、そのうねみぞを長くした」と。
4 ೪ ಆದರೆ ನೀತಿಸ್ವರೂಪನಾದ ಯೆಹೋವನು, ದುಷ್ಟರು ಹಾಕಿದ ಬಂಧನಗಳನ್ನು ಛೇದಿಸಿಬಿಟ್ಟನು.
主は正しくいらせられ、悪しき者のなわを断ち切られた。
5 ೫ ಚೀಯೋನನ್ನು ದ್ವೇಷಿಸುವವರೆಲ್ಲರೂ ಅವಮಾನದಿಂದ ಹಿಂದಿರುಗಲಿ.
シオンを憎む者はみな、恥を得て、退くように。
6 ೬ ಅವರು ಮಾಳಿಗೆಯ ಮೇಲಣ ಹುಲ್ಲಿನಂತಾಗಲಿ; ಅದು ಹೂವು ಬಿಡುವುದಕ್ಕೆ ಮೊದಲೇ ಒಣಗಿಹೋಗುತ್ತದೆ;
彼らを、育たないさきに枯れる屋根の草のようにしてください。
7 ೭ ಅದನ್ನು ಕೊಯ್ಯುವವನ ಹಿಡಿಯೂ, ಸಿವುಡು ಕಟ್ಟುವವನ ಉಡಿಲೂ ತುಂಬುವುದಿಲ್ಲ.
これを刈る者はその手に満たず、これをたばねる者はそのふところに満たない。
8 ೮ ಹಾದುಹೋಗುವವರು, “ಯೆಹೋವನು ನಿಮ್ಮನ್ನು ಆಶೀರ್ವದಿಸಲಿ ಎಂದು, ಯೆಹೋವನ ನಾಮದಲ್ಲಿ ನಿಮ್ಮನ್ನು ಆಶೀರ್ವದಿಸುತ್ತೇವೆ” ಎಂದೂ ಹೇಳುವುದಿಲ್ಲ.
かたわらを過ぎる者は、「主の恵みがあなたの上にあるように。われらは主のみ名によってあなたがたを祝福する」と言わない。