< ಕೀರ್ತನೆಗಳು 125 >
1 ೧ ಯಾತ್ರಾಗೀತೆ. ಯೆಹೋವನಲ್ಲಿ ಭರವಸೆ ಇಡುವವರು, ಚೀಯೋನ್ ಪರ್ವತದ ಹಾಗೆ ಇದ್ದಾರೆ; ಅದು ಕದಲುವುದಿಲ್ಲ, ಸದಾ ಸ್ಥಿರವಾಗಿರುತ್ತದೆ.
Þeir sem treysta Drottni eru eins og Síonfjall, þeir haggast ekki.
2 ೨ ಪರ್ವತಗಳು ಯೆರೂಸಲೇಮಿನ ಸುತ್ತಲೂ ಹೇಗೋ ಹಾಗೆಯೇ, ಯೆಹೋವನು ಈಗಿನಿಂದ ಸದಾಕಾಲವೂ ತನ್ನ ಜನರ ಸುತ್ತಲೂ ಇರುವನು.
Fjöllin umhverfis Jerúsalem eru henni til verndar, eins er Drottinn, hann umlykur og verndar sitt fólk.
3 ೩ ದುಷ್ಟರ ದಂಡಾಧಿಕಾರವು ನೀತಿವಂತರ ಸ್ವತ್ತಿನಲ್ಲಿ ಉಳಿಯುವುದೇ ಇಲ್ಲ; ಉಳಿದರೆ ನೀತಿವಂತರೂ ಅಕ್ರಮಕ್ಕೆ ಕೈ ಹಾಕಬಹುದು.
Ekki skulu óguðlegir drottna yfir trúuðum, né réttlátir þvingaðir til illverka.
4 ೪ ಯೆಹೋವನೇ, ಒಳ್ಳೆಯವರೂ, ಯಥಾರ್ಥಚಿತ್ತರೂ, ಆಗಿರುವವರಿಗೆ ಉಪಕಾರಮಾಡು.
Ó, Drottinn, gerðu vel við þá sem góðir eru, þá sem leitast við að gera vilja þinn,
5 ೫ ಯೆಹೋವನು ಡೊಂಕುದಾರಿ ಹಿಡಿದವರನ್ನು, ಪಾತಕಿಗಳು ಹೋಗುವ ಸ್ಥಳಕ್ಕೆ ನಡೆಸುವನು. ಇಸ್ರಾಯೇಲರಿಗೆ ಶುಭವುಂಟಾಗಲಿ.
en útrýmdu illgjörðamönnum. Láttu frið og velgengni ríkja í Ísrael.