< ಕೀರ್ತನೆಗಳು 124 >
1 ೧ ಯಾತ್ರಾಗೀತೆ; ದಾವೀದನದು. “ಯೆಹೋವನು ನಮಗಿಲ್ಲದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?”, ಎಂದು ಇಸ್ರಾಯೇಲರೇ ಹೇಳಲಿ.
若不是上主保佑我們,唯願以色列子民再說:
2 ೨ ನರ ಮನುಷ್ಯರು ನಮಗೆ ವಿರುದ್ಧವಾಗಿ ಎದ್ದಾಗ, ಯೆಹೋವನು ನಮಗಿಲ್ಲದಿದ್ದರೆ,
若不是上主保佑我們,當世人起來攻擊我們,
3 ೩ “ನಿಶ್ಚಯವಾಗಿ ಅವರು ಕೋಪದಿಂದ ಉರಿಗೊಂಡು, ನಮ್ಮನ್ನು ಜೀವಸಹಿತ ನುಂಗಿಬಿಡುತ್ತಿದ್ದರು;
並向我們發洩怒火時,必會活活將我們舌食。
4 ೪ ನಿಶ್ಚಯವಾಗಿ ಪ್ರವಾಹವು ನಮ್ಮನ್ನು ಬಡಿದುಕೊಂಡು ಹೋಗುತ್ತಿತ್ತು; ನದಿಯು ನಮ್ಮನ್ನು ಕೊಚ್ಚಿಕೊಂಡು ಹೋಗುತ್ತಿತ್ತು;
就像淹沒我們的水禍,流過我們頭頸的洪波。
5 ೫ ಮೀರಿದ ಪ್ರವಾಹವು ನಮ್ಮನ್ನು ಮುಳುಗಿಸಿಬಿಡುತ್ತಿತ್ತು.”
又像洶湧澎湃的狂浪,早已將我們淹沒滅亡。
6 ೬ ಯೆಹೋವನಿಗೆ ಕೊಂಡಾಟವಾಗಲಿ; ಆತನು ನಮ್ಮನ್ನು ಅವರ ಹಲ್ಲುಗಳಿಗೆ ಸೀಳಿಬಿಡಲು ಕೊಡಲಿಲ್ಲ.
讚美上主,他沒有將我們拋出,使我們做成他爪牙的獵物;
7 ೭ ನಮ್ಮ ಜೀವವು ಬೇಟೆಗಾರನ ಬಲೆಯಿಂದ ತಪ್ಪಿಸಿಕೊಂಡ ಪಕ್ಷಿಯಂತಿದೆ; ಬಲೆಯು ಹರಿದುಹೋಯಿತು, ನಾವು ತಪ್ಪಿಸಿಕೊಂಡೆವು.
我們像掙脫獵人羅網的小鳥,羅網扯破了,我們自然逃掉。
8 ೮ ಭೂಮಿ, ಆಕಾಶಗಳನ್ನು ಉಂಟುಮಾಡಿದ, ಯೆಹೋವನ ನಾಮದಲ್ಲಿ ನಮಗೆ ರಕ್ಷಣೆಯಾಗುವುದು.
我們的救助是仰賴上主的名,上天和下地都是由他所造成。