< ಕೀರ್ತನೆಗಳು 121 >
1 ೧ ಯಾತ್ರಾಗೀತೆ. ನಾನು ಕಣ್ಣೆತ್ತಿ ಪರ್ವತಗಳ ಕಡೆಗೆ ನೋಡುತ್ತೇನೆ; ನನ್ನ ಸಹಾಯವು ಎಲ್ಲಿಂದ ಬರುವುದು?
ᾠδὴ τῶν ἀναβαθμῶν ἦρα τοὺς ὀφθαλμούς μου εἰς τὰ ὄρη πόθεν ἥξει ἡ βοήθειά μου
2 ೨ ಭೂಮಿ, ಆಕಾಶಗಳನ್ನು ನಿರ್ಮಿಸಿದ ಯೆಹೋವನಿಂದಲೇ, ನನ್ನ ಸಹಾಯವು ಬರುತ್ತದೆ.
ἡ βοήθειά μου παρὰ κυρίου τοῦ ποιήσαντος τὸν οὐρανὸν καὶ τὴν γῆν
3 ೩ ಆತನು ನಿನ್ನ ಪಾದಗಳನ್ನು ಕದಲಗೊಡಿಸುವುದಿಲ್ಲ; ನಿನ್ನನ್ನು ಕಾಯುವವನು ತೂಕಡಿಸದಿರಲಿ.
μὴ δῷς εἰς σάλον τὸν πόδα σου μηδὲ νυστάξῃ ὁ φυλάσσων σε
4 ೪ ಇಗೋ, ಇಸ್ರಾಯೇಲರನ್ನು ಕಾಯುವಾತನು, ತೂಕಡಿಸುವುದೂ ಇಲ್ಲ, ನಿದ್ರಿಸುವುದೂ ಇಲ್ಲ.
ἰδοὺ οὐ νυστάξει οὐδὲ ὑπνώσει ὁ φυλάσσων τὸν Ισραηλ
5 ೫ ನಿನ್ನನ್ನು ಕಾಯುವವನು ಯೆಹೋವನೇ; ನಿನ್ನ ಬಲಗಡೆಯಲ್ಲಿ ನೆರಳಿನಂತೆ ನಿಂತಿರುವಾತನು ಯೆಹೋವನೇ.
κύριος φυλάξει σε κύριος σκέπη σου ἐπὶ χεῖρα δεξιάν σου
6 ೬ ಹಗಲಿನಲ್ಲಿ ಸೂರ್ಯನೂ, ಇರುಳಿನಲ್ಲಿ ಚಂದ್ರನೂ, ನಿನ್ನನ್ನು ಬಾಧಿಸುವುದಿಲ್ಲ.
ἡμέρας ὁ ἥλιος οὐ συγκαύσει σε οὐδὲ ἡ σελήνη τὴν νύκτα
7 ೭ ಯೆಹೋವನು ನಿನ್ನನ್ನು ಎಲ್ಲಾ ಕೇಡಿನಿಂದ ತಪ್ಪಿಸುವನು; ನಿನ್ನ ಪ್ರಾಣವನ್ನು ಕಾಯುವನು.
κύριος φυλάξει σε ἀπὸ παντὸς κακοῦ φυλάξει τὴν ψυχήν σου
8 ೮ ನೀನು ಹೋಗುವಾಗಲೂ, ಬರುವಾಗಲೂ, ಈಗಿನಿಂದ ಸದಾಕಾಲವೂ ಯೆಹೋವನು ನಿನ್ನನ್ನು ಕಾಪಾಡುವನು.
κύριος φυλάξει τὴν εἴσοδόν σου καὶ τὴν ἔξοδόν σου ἀπὸ τοῦ νῦν καὶ ἕως τοῦ αἰῶνος