< ಕೀರ್ತನೆಗಳು 120 >
1 ೧ ಯಾತ್ರಾಗೀತೆ. ನನ್ನ ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಟ್ಟೆನು; ಆತನು ಸದುತ್ತರವನ್ನು ದಯಪಾಲಿಸಿದನು.
«Yuqirigha chiqish naxshisi» Béshimgha kün chüshkende men Perwerdigargha nida qildim; U manga jawab berdi.
2 ೨ ಯೆಹೋವನೇ, ಸುಳ್ಳು ಬಾಯಿಯೂ, ವಂಚಿಸುವ ನಾಲಿಗೆ ಉಳ್ಳವರಿಂದ ನನ್ನನ್ನು ಬಿಡಿಸು.
I Perwerdigar, jénimni yalghan sözleydighan lewlerdin, Aldamchi tildin qutuldurghaysen.
3 ೩ ವಂಚಿಸುವ ನಾಲಿಗೆಯೇ, ದೇವರು ನಿನಗೇನು ಕೊಡಬೇಕು? ಯಾವ ಹೆಚ್ಚಿನ ಶಿಕ್ಷೆಯನ್ನು ಒದಗಿಸಬೇಕು?
Sanga néme bérilidu, Sanga néme qoshulushi kérek, Ey aldamchi til?
4 ೪ ಶೂರನ ಹದವಾದ ಬಾಣಗಳನ್ನೂ, ಜಾಲಿಯ ಕೆಂಡಗಳನ್ನೂ ನಿನಗೆ ಕೊಡುವರು.
— Palwan atqan ötkür oqlar, Archa choghliri sanga tegsun!
5 ೫ ಅಯ್ಯೋ, ನಾನು ಮೇಷೆಕಿನವರಲ್ಲಿ ತಂಗಬೇಕಲ್ಲಾ! ಕೇದಾರಿನವರ ಪಾಳೆಯಗಳಲ್ಲಿ ವಾಸಿಸಬೇಕಾಯಿತಲ್ಲಾ!
Meshek diyarida musapir bolup yashighinimgha, Kédar chédirliri arisida turghinimgha halimgha way!
6 ೬ ಸಮಾಧಾನವನ್ನು ದ್ವೇಷಿಸುವವರೊಳಗೆ, ಇದ್ದು ಇದ್ದು ಸಾಕಾಯಿತು.
Men tinchliqqa öchler arisida uzundin buyan turuwatimen;
7 ೭ ನಾನು ಸಮಾಧಾನಪ್ರಿಯನು; ಅವರೋ, ನಾನು ಮಾತನಾಡಿದರೆ ಯುದ್ಧಕ್ಕೆ ಬರುತ್ತಾರೆ.
Men tinchliqperwermen; Biraq gep qilsam, ular urushimizla, deydu.