< ಕೀರ್ತನೆಗಳು 114 >
1 ೧ ಇಸ್ರಾಯೇಲರು ಐಗುಪ್ತ ದೇಶವನ್ನೂ, ಯಾಕೋಬನ ಮನೆತನದವರು ಅನ್ಯಜನಾಂಗವನ್ನು ಬಿಟ್ಟ ಮೇಲೆ,
이스라엘이 애굽에서 나오며 야곱의 집이 방언 다른 민족에게서 나올 때에
2 ೨ ಯೆಹೂದವು ದೇವರ ಪರಿಶುದ್ಧ ವಾಸಸ್ಥಾನವೂ, ಇಸ್ರಾಯೇಲ್ ಆತನ ರಾಜ್ಯವೂ ಆಯಿತು.
유다는 여호와의 성소가 되고 이스라엘은 그의 영토가 되었도다
3 ೩ ಸಮುದ್ರವು ಕಂಡು ಓಡಿಹೋಯಿತು; ಯೊರ್ದನ್ ಹೊಳೆಯು ಹಿಂದಿರುಗಿತು.
바다는 이를 보고 도망하며 요단은 물러갔으며
4 ೪ ಪರ್ವತಗಳು ಟಗರುಗಳಂತೆಯೂ, ಗುಡ್ಡಗಳು ಕುರಿಮರಿಗಳಂತೆಯೂ ಹಾರಾಡಿದವು.
산들은 수양 같이 뛰놀며 작은 산들은 어린 양 같이 뛰었도다
5 ೫ ಸಮುದ್ರವೇ, ನಿನಗೇನಾಯಿತು? ಏಕೆ ಓಡಿ ಹೋಗುತ್ತೀ? ಯೊರ್ದನೇ, ಏಕೆ ಹಿಂದಿರುಗುತ್ತೀ?
바다야 네가 도망함은 어찜이며 요단아 네가 물러감은 어찜인고
6 ೬ ಪರ್ವತಗಳೇ, ನೀವು ಟಗರುಗಳಂತೆಯೂ, ಗುಡ್ಡಗಳೇ, ನೀವು ಕುರಿಮರಿಗಳಂತೆಯೂ ಏಕೆ ಹಾರಾಡುತ್ತೀರಿ?
너희 산들아 수양 같이 뛰놀며 작은 산들아 어린 양 같이 뛰놂은 어찜인고
7 ೭ ಭೂಲೋಕವೇ, ಕರ್ತನು ಪ್ರತ್ಯಕ್ಷನಾಗಿದ್ದಾನೆ, ಯಾಕೋಬನ ದೇವರು ನಿನ್ನ ಮುಂದೆ ಇದ್ದಾನೆ, ಕಂಪಿಸು.
땅이여 너는 주 앞 곧 야곱의 하나님 앞에서 떨지어다
8 ೮ ಆತನು ಬಂಡೆಯನ್ನು ಕೆರೆಯನ್ನಾಗಿಯೂ, ಶಿಲೆಯನ್ನು ಬುಗ್ಗೆಯನ್ನಾಗಿಯೂ ಮಾರ್ಪಡಿಸುತ್ತಾನೆ.
저가 반석을 변하여 못이 되게 하시며 차돌로 샘물이 되게 하셨도다