< ಕೀರ್ತನೆಗಳು 110 >

1 ದಾವೀದನ ಕೀರ್ತನೆ. ಯೆಹೋವನು ನನ್ನ ಒಡೆಯನಿಗೆ, “ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಪೀಠವಾಗುವಂತೆ ಮಾಡುವ ತನಕ, ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು” ಎಂದು ನುಡಿದನು.
The Lord said to my Lord: Sit thou at my right hand: Until I make thy enemies thy footstool.
2 ಯೆಹೋವನು ನಿನ್ನ ರಾಜದಂಡದ ಆಳ್ವಿಕೆಯನ್ನು ಚೀಯೋನಿನ ಹೊರಗೂ ಹಬ್ಬಿಸುವನು; ನಿನ್ನ ವೈರಿಗಳ ಮಧ್ಯದಲ್ಲಿ ದೊರೆತನ ಮಾಡು.
The Lord will send forth the sceptre of thy power out of Sion: rule thou in the midst of thy enemies.
3 ನೀನು ಸೈನ್ಯವನ್ನು ಕೂಡಿಸುವ ದಿನದಲ್ಲಿ, ನಿನ್ನ ಪ್ರಜೆಗಳು ಸಂತೋಷದಿಂದ ತಾವಾಗಿಯೇ ಸೇರಿಕೊಳ್ಳುವರು. ಪರಿಶುದ್ಧ ವಸ್ತ್ರಭೂಷಿತರಾದ ನಿನ್ನ ಯುವ ಸೈನಿಕರು, ಉದಯಕಾಲದ ಇಬ್ಬನಿಯಂತಿರುವರು.
With thee is the principality in the day of thy strength: in the brightness of the saints: from the womb before the day star I begot thee.
4 “ನೀನು ಸದಾಕಾಲವೂ ಮೆಲ್ಕಿಜೆದೇಕನ ತರಹ ಯಾಜಕನಾಗಿರುವೆ” ಎಂದು ಯೆಹೋವನು ಆಣೆಯಿಟ್ಟು ನುಡಿದಿದ್ದಾನೆ; ಪಶ್ಚಾತ್ತಾಪಡುವುದಿಲ್ಲ.
The Lord hath sworn, and he will not repent: Thou art a priest for ever according to the order of Melchisedech.
5 ನಿನ್ನ ಬಲಗಡೆಯಲ್ಲಿರುವ ಕರ್ತನು ತನ್ನ ಕೋಪದ ದಿನದಲ್ಲಿ ರಾಜರನ್ನು ಖಂಡಿಸುವನು.
The Lord at thy right hand hath broken kings in the day of his wrath.
6 ಆತನು ಜನಾಂಗಗಳಲ್ಲಿ ನ್ಯಾಯಸ್ಥಾಪಿಸುವಾಗ, ವಿಸ್ತಾರವಾದ ರಣರಂಗದಲ್ಲಿ ಶತ್ರುಗಳ ಶಿರಸ್ಸನ್ನು ಛೇದಿಸಿ, ಹೆಣಗಳಿಂದ ಅದನ್ನು ತುಂಬಿಸುವನು.
He shall judge among nations, he shall fill ruins: he shall crush the heads in the land of the many.
7 ಒಡೆಯನು ದಾರಿಯಲ್ಲಿ ಹಳ್ಳದ ನೀರನ್ನು ಕುಡಿದು ತಲೆಯೆತ್ತುವನು.
He shall drink of the torrent in the way: therefore shall he lift up the head.

< ಕೀರ್ತನೆಗಳು 110 >