< ಕೀರ್ತನೆಗಳು 105 >
1 ೧ ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ; ಆತನ ನಾಮದ ಮಹತ್ವವನ್ನು ವರ್ಣಿಸಿರಿ; ಜನಾಂಗಗಳಲ್ಲಿ ಆತನ ಕೃತ್ಯಗಳನ್ನು ಪ್ರಸಿದ್ಧಪಡಿಸಿರಿ.
Þakkið Drottni fyrir öll hans undursamlegu verk og segið frá þeim meðal þjóðanna.
2 ೨ ಆತನನ್ನು ಕೀರ್ತಿಸಿರಿ, ಭಜಿಸಿರಿ; ಆತನ ಅದ್ಭುತಕೃತ್ಯಗಳನ್ನೆಲ್ಲಾ ಧ್ಯಾನಿಸಿರಿ.
Syngið fyrir hann, leikið fyrir hann og segið öllum frá máttarverkum hans.
3 ೩ ಆತನ ಪರಿಶುದ್ಧ ನಾಮದಲ್ಲಿ ಹಿಗ್ಗಿರಿ; ಯೆಹೋವನ ದರ್ಶನವನ್ನು ಕೋರುವವರ ಹೃದಯವು ಹರ್ಷಿಸಲಿ.
Lofið og vegsamið hans heilaga nafn. Þið sem tilbiðjið Drottin, fagnið!
4 ೪ ಯೆಹೋವನನ್ನೂ, ಆತನ ಬಲವನ್ನೂ ಆಶ್ರಯಿಸಿರಿ; ನಿತ್ಯವೂ ಆತನ ದರ್ಶನವನ್ನು ಅಪೇಕ್ಷಿಸಿರಿ.
Leitið hans og máttar hans, og keppið eftir að kynnast honum!
5 ೫ ಆತನು ಮಾಡಿದ ಅದ್ಭುತಕೃತ್ಯ, ಆತನ ಮಹತ್ಕಾರ್ಯ, ಆತನ ಬಾಯಿಂದ ಹೊರಟ ನ್ಯಾಯನಿರ್ಣಯ ಇವುಗಳನ್ನು,
Minnist dásemdarverkanna sem hann vann fyrir okkur, sína útvöldu þjóð,
6 ೬ ಆತನ ಸೇವಕನಾದ ಅಬ್ರಹಾಮನ ಸಂತತಿಯವರೇ, ಆತನು ಆರಿಸಿಕೊಂಡ ಯಾಕೋಬನ ವಂಶದವರೇ, ನೀವು ನೆನಪುಮಾಡಿಕೊಳ್ಳಿರಿ.
afkomendur Abrahams og Jakobs, þjóna hans. Munið þið hvernig hann útrýmdi óvinum okkar?
7 ೭ ಯೆಹೋವನೆಂಬಾತನೇ ನಮ್ಮ ದೇವರು; ಆತನ ನ್ಯಾಯವಿಧಿಗಳು ಭೂಲೋಕದಲ್ಲೆಲ್ಲಾ ಇವೆ.
Hann er Drottinn, Guð okkar. Elska hans blasir við hvar sem er í landinu.
8 ೮ ಆತನು ತನ್ನ ವಾಗ್ದಾನವನ್ನು ಸಾವಿರ ತಲೆಗಳವರೆಗೂ, ತನ್ನ ಒಡಂಬಡಿಕೆಯನ್ನು ನಿತ್ಯವೂ ನೆನಪಿನಲ್ಲಿಟ್ಟುಕೊಳ್ಳುತ್ತಾನೆ.
Þótt þúsund kynslóðir líði, þá gleymir hann ekki loforði sínu,
9 ೯ ಆತನು ಆ ಒಡಂಬಡಿಕೆಯನ್ನು ಅಬ್ರಹಾಮನ ಸಂಗಡ ಮಾಡಿಕೊಂಡನು; ಇಸಾಕನಿಗೆ ತನ್ನ ವಾಗ್ದಾನಗಳನ್ನು ಕೊಟ್ಟನು.
sáttmála sínum við Abraham og Ísak.
10 ೧೦ ಅದು ರಾಜಶಾಸನದಂತೆ ಇರುವುದೆಂದು ಇಸ್ರಾಯೇಲನಿಗೂ ಮಾತುಕೊಟ್ಟನು.
Þennan sáttmála endurnýjaði hann við Jakob. Þetta er hans eilífi sáttmáli við Ísrael:
11 ೧೧ ಅವರಲ್ಲಿ ಸ್ವಲ್ಪ ಜನರು ಕಾನಾನ್ ದೇಶದಲ್ಲಿ ಪ್ರವಾಸಿಗಳಾಗಿ ಇರುವಾಗಲೇ,
„Ég mun gefa ykkur Kanaansland að erfð.“
12 ೧೨ ಆತನು, “ನಿಮಗೆ ಈ ದೇಶವನ್ನು ಕೊಡುವೆನು; ಅದು ನಿಮ್ಮ ಸಂತತಿಯವರಿಗೆ ಸ್ವತ್ತಾಗಿರುವುದು” ಎಂದು ಹೇಳಿದನು.
Þetta sagði hann meðan þeir voru enn fámennir, já mjög fáir, og bjuggu sem útlendingar í landinu.
13 ೧೩ ಅವರು ದೇಶದಿಂದ ದೇಶಕ್ಕೂ, ರಾಜ್ಯದಿಂದ ರಾಜ್ಯಕ್ಕೂ ಹೋಗುತ್ತಿರುವಾಗ,
Síðar dreifðust þeir meðal þjóðanna og hröktust úr einu landinu í annað.
14 ೧೪ ಅವರಿಗೆ ಯಾರಿಂದಲೂ ಅನ್ಯಾಯವಾಗಗೊಡಿಸಲಿಲ್ಲ. ಆತನು ಅವರ ವಿಷಯದಲ್ಲಿ ಅರಸರನ್ನೂ ಗದರಿಸಿ,
Samt leyfði hann engum að kúga þá og refsaði konungum sem það reyndu.
15 ೧೫ “ನಾನು ಅಭಿಷೇಕಿಸಿದವರನ್ನು ಮುಟ್ಟಬಾರದು, ನನ್ನ ಪ್ರವಾದಿಗಳಿಗೆ ಯಾವ ಕೇಡನ್ನೂ ಮಾಡಬಾರದು” ಎಂದು ಹೇಳಿದನು.
„Snertið ekki við mínum útvöldu og gerið spámönnum mínum ekkert mein.“sagði hann.
16 ೧೬ ಅನಂತರ ಆತನು ಐಗುಪ್ತ ದೇಶದಲ್ಲಿ ಕ್ಷಾಮವನ್ನು ಬರಮಾಡಿ, ಆಹಾರವನ್ನು ನಾಶಮಾಡಿಬಿಟ್ಟನು.
Og hann lét hungursneyð koma yfir Kanaansland og allur matur gekk til þurrðar.
17 ೧೭ ಆತನು ಅವರ ಮುಂದಾಗಿ ಒಬ್ಬನನ್ನು ಕಳುಹಿಸಿದನು; ದಾಸತ್ವಕ್ಕೆ ಮಾರಲ್ಪಟ್ಟ ಯೋಸೇಫನೇ ಅವನು.
Þá sendi hann Jósef í ánauð til Egyptalands, þjóð sinni til bjargar.
18 ೧೮ ಅವನ ಕಾಲುಗಳು ಬೇಡಿಗಳಿಂದ ಕಟ್ಟಲ್ಪಟ್ಟವು; ಕಬ್ಬಿಣದ ಕೊರಳಪಟ್ಟಿಯಿಂದ ಅವನು ಬಂಧಿತನಾದನು.
Þeir hlekkjuðu hann og þjáðu,
19 ೧೯ ಅವನು ತನ್ನ ಮಾತು ನೆರವೇರುವ ತನಕ ಯೆಹೋವನ ವಾಕ್ಯದಿಂದ ಶೋಧಿತನಾದನು.
en Guð lét hann þola eldraunina og batt að lokum enda á fangavist hans.
20 ೨೦ ಅರಸನು ಅಪ್ಪಣೆಮಾಡಿ ಅವನನ್ನು ತಪ್ಪಿಸಿದನು; ಜನಾಧಿಪತಿಯು ಅವನನ್ನು ಬಿಡಿಸಿದನು.
Og faraó sendi eftir Jósef og lét hann lausan,
21 ೨೧ ಅವನನ್ನು ತನ್ನ ಮನೆಗೆ ಯಜಮಾನನನ್ನಾಗಿಯೂ, ತನ್ನ ಆಸ್ತಿಗೆಲ್ಲಾ ಅಧಿಕಾರಿಯನ್ನಾಗಿಯೂ ಮಾಡಿದನು.
og setti hann svo yfir allar eigur sínar.
22 ೨೨ ತನ್ನ ಪ್ರಧಾನರನ್ನು ಇಷ್ಟಾನುಸಾರವಾಗಿ ಬಂಧಿಸುವುದಕ್ಕೂ, ತನ್ನ ಮಂತ್ರಿಗಳಿಗೆ ಬುದ್ಧಿಕಲಿಸುವುದಕ್ಕೂ ಅವನಿಗೆ ಅಧಿಕಾರಕೊಟ್ಟನು.
Þá hafði Jósef vald til að fangelsa höfðingja og segja ráðgjöfum konungs til.
23 ೨೩ ಆಗ ಇಸ್ರಾಯೇಲನು ಐಗುಪ್ತಕ್ಕೆ ಬಂದನು; ಯಾಕೋಬನು ಹಾಮನ ದೇಶದಲ್ಲಿ ಪ್ರವಾಸಿಯಾದನು.
Síðar kom Jakob (Ísrael) til Egyptalands og settist þar að með sonum sínum.
24 ೨೪ ದೇವರು ತನ್ನ ಜನರನ್ನು ಬಹಳವಾಗಿ ವೃದ್ಧಿಮಾಡಿ, ಅವರು ಶತ್ರುಗಳಿಗಿಂತ ಬಲಿಷ್ಠರಾಗುವಂತೆ ಮಾಡಿದನು.
Þau ár fjölgaði Ísrael mjög, já svo mjög að þeir urðu fjölmennari en Egyptar, sem réðu landinu.
25 ೨೫ ಆತನು ಆ ದೇಶದವರ ಹೃದಯವನ್ನು ಮಾರ್ಪಡಿಸಿದ್ದರಿಂದ, ಅವರು ಆತನ ಜನರನ್ನು ದ್ವೇಷಿಸಿ, ಆತನ ಸೇವಕರನ್ನು ಕುಯುಕ್ತಿಯಿಂದ ನಡೆಸಿದರು.
En Guð sneri hjörtum Egypta gegn Ísrael, þeir hötuðu þá og hnepptu í þrældóm.
26 ೨೬ ಆಗ ಆತನು ತನ್ನ ಸೇವಕನಾದ ಮೋಶೆಯನ್ನೂ, ತಾನು ಆರಿಸಿಕೊಂಡ ಆರೋನನನ್ನೂ ಕಳುಹಿಸಿದನು.
Þá útvaldi Guð Móse sem fulltrúa sinn og Aron honum til hjálpar.
27 ೨೭ ಅವರು ಹಾಮನ ದೇಶದವರ ಮಧ್ಯದಲ್ಲಿ, ಆತನು ಆಜ್ಞಾಪಿಸಿದ ವಿವಿಧ ಮಹತ್ಕಾರ್ಯಗಳನ್ನೂ, ಅದ್ಭುತಗಳನ್ನೂ ನಡೆಸಿದರು.
Hann gjörði tákn meðal Egypta og vakti þannig ótta hjá þeim.
28 ೨೮ ಆತನು ಕತ್ತಲೆಯನ್ನು ಕಳುಹಿಸಲು ಕತ್ತಲೆಯಾಯಿತು. ಐಗುಪ್ತ್ಯರು ಆತನ ಆಜ್ಞೆಗಳನ್ನು ಅನುಸರಿಸಲಿಲ್ಲ.
Þeir fóru að skipun Drottins og hann sendi myrkur yfir landið,
29 ೨೯ ಆತನು ಐಗುಪ್ತ್ಯರ ನೀರನ್ನು ರಕ್ತಮಾಡಿ, ಮೀನುಗಳನ್ನು ಸಾಯಿಸಿದನು.
breytti ám og vötnum í blóð svo að fiskurinn dó.
30 ೩೦ ಅವರ ದೇಶದಲ್ಲೆಲ್ಲಾ ಕಪ್ಪೆಗಳು ತುಂಬಿಕೊಂಡವು; ಅರಮನೆಯಲ್ಲಿಯೂ ವ್ಯಾಪಿಸಿಕೊಂಡವು.
Þá kom flóðbylgja af froskum – þeir voru um allt, jafnvel í svefnherbergi konungs!
31 ೩೧ ಆತನು ಆಜ್ಞಾಪಿಸಲು ಅವರ ಎಲ್ಲಾ ಪ್ರಾಂತ್ಯಗಳಲ್ಲಿ, ವಿಷದ ಹುಳಗಳೂ, ಹೇನುಗಳೂ ಉಂಟಾದವು.
Að skipun Móse fylltist landið af mývargi og flugum.
32 ೩೨ ಆತನು ಅವರ ದೇಶದಲ್ಲಿ ಕಲ್ಮಳೆಯನ್ನು, ಅಗ್ನಿಜ್ವಾಲೆಯನ್ನು ಬರಮಾಡಿ,
Í stað regns dundi banvænt hagl yfir landið og eldingar skelfdu íbúana.
33 ೩೩ ಅವರ ದ್ರಾಕ್ಷಾಲತೆಗಳನ್ನು, ಅಂಜೂರದ ಗಿಡಗಳನ್ನು ನಾಶಮಾಡಿ, ಅವರ ಪ್ರಾಂತ್ಯಗಳಲ್ಲಿದ್ದ ಮರಗಳನ್ನು ಮುರಿದುಬಿಟ್ಟನು.
Vínviður þeirra og fíkjutré drápust, féllu brotin til jarðar.
34 ೩೪ ಆತನು ಆಜ್ಞಾಪಿಸಲು ಮಿಡತೆಗಳೂ, ಲೆಕ್ಕವಿಲ್ಲದಷ್ಟು ಜಿಟ್ಟೆಹುಳಗಳೂ ಬಂದು,
Þá bauð hann engisprettum að naga allan grænan gróður
35 ೩೫ ಅವರ ದೇಶದಲ್ಲಿದ್ದ ಎಲ್ಲಾ ಪೈರುಗಳನ್ನು, ಭೂಮಿಯ ಬೆಳೆಗಳನ್ನು ತಿಂದುಬಿಟ್ಟವು.
og eyðileggja uppskeruna, – hvílík plága!
36 ೩೬ ಅವನು ಆ ದೇಶದವರ ವೀರ್ಯಕ್ಕೆ ಪ್ರಥಮಫಲವಾಗಿದ್ದ, ಚೊಚ್ಚಲ ಮಕ್ಕಳನ್ನು ಸಂಹರಿಸಿದನು.
Þá deyddi hann frumburðina, – elsta barn í hverri egypskri fjölskyldu – þar fór framtíðarvonin.
37 ೩೭ ಇಸ್ರಾಯೇಲರನ್ನು ಬೆಳ್ಳಿ, ಬಂಗಾರಗಳ ಸಹಿತವಾಗಿ ಹೊರಗೆ ಬರಮಾಡಿದನು; ಅವರ ಕುಲಗಳಲ್ಲಿ ಎಡವುವವನು ಒಬ್ಬನಾದರೂ ಇರಲಿಲ್ಲ.
Og Drottinn leiddi sitt fólk heilu og höldnu út úr Egyptalandi, hlaðið gulli og silfri. Ekkert þeirra var veikt eða vanmáttugt.
38 ೩೮ ಐಗುಪ್ತ್ಯರು ಅವರ ವಿಷಯದಲ್ಲಿ ಹೆದರಿಕೆಯುಳ್ಳವರಾದ್ದರಿಂದ, ಅವರು ಹೊರಟು ಹೋದದ್ದಕ್ಕೆ ಸಂತೋಷಿಸಿದರು.
Og Egyptar voru því fegnastir þegar Ísraelsmenn héldu á brott, því að þeir óttuðust þá.
39 ೩೯ ಅವರಿಗೆ ಹಗಲಲ್ಲಿ ನೆರಳಿಗೋಸ್ಕರ ಮೋಡವನ್ನು, ಇರುಳಲ್ಲಿ ಬೆಳಕಿಗೋಸ್ಕರ ಬೆಂಕಿಯನ್ನು ಮೇಲೆ ಹರಡಿದನು.
Um daga breiddi Guð út ský og hlífði þeim gegn brennheitri sólinni og um nætur lýsti hann þeim leiðina með eldstólpa.
40 ೪೦ ಅವರು ಬೇಡಿಕೊಳ್ಳಲು ಲಾವಕ್ಕಿಗಳನ್ನು ಬರಮಾಡಿದನು; ದಿವ್ಯ ಆಹಾರದಿಂದ ಅವರನ್ನು ತೃಪ್ತಿಗೊಳಿಸಿದನು.
Þeir báðu um kjöt og hann sendi þeim lynghænsni og brauð gaf hann þeim – manna, brauð frá himni.
41 ೪೧ ಆತನು ಬಂಡೆಯನ್ನು ಸೀಳಲು ನೀರು ಚಿಮ್ಮಿ ಬಂದು, ಅರಣ್ಯದಲ್ಲಿ ನದಿಯಾಗಿ ಹರಿಯಿತು.
Hann opnaði klettinn og vatnið spratt fram og varð að læk í eyðimörkinni.
42 ೪೨ ಹೀಗೆ ಆತನು ತನ್ನ ಪರಿಶುದ್ಧ ವಚನವನ್ನೂ, ತನ್ನ ಸೇವಕನಾದ ಅಬ್ರಹಾಮನನ್ನೂ ನೆನಪುಮಾಡಿಕೊಂಡು
Hann minntist loforðs síns til Abrahams, þjóns síns,
43 ೪೩ ತನ್ನ ಪ್ರಜೆಯು ಉಲ್ಲಾಸದಿಂದಲೂ, ತಾನು ಆರಿಸಿಕೊಂಡವರು ಉತ್ಸಾಹಧ್ವನಿಯಿಂದಲೂ ಹೊರಗೆ ಬರುವಂತೆ ಮಾಡಿದನು.
og leiddi sitt útvalda fólk fagnandi út úr Egyptalandi.
44 ೪೪ ಆತನು ಅವರಿಗೆ ಪರಜನಾಂಗಗಳ ದೇಶವನ್ನು ಕೊಟ್ಟನು; ಅನ್ಯಜನಾಂಗಗಳ ಕಷ್ಟಾರ್ಜಿತವು ಅವರ ಕೈ ಸೇರಿತು.
Og hann gaf þeim lönd heiðingjanna, sem stóðu í fullum blóma með þroskaða uppskeru og þeir átu það sem aðrir höfðu sáð til.
45 ೪೫ ಅವರು ತನ್ನ ವಿಧಿಗಳನ್ನು ಕೈಕೊಂಡು, ತನ್ನ ಧರ್ಮಶಾಸ್ತ್ರವನ್ನು ಅನುಸರಿಸಬೇಕೆಂಬುದೇ ಆತನ ಉದ್ದೇಶವಾಗಿತ್ತು. ಯೆಹೋವನಿಗೆ ಸ್ತೋತ್ರ!
Allt skyldi þetta hvetja Ísrael til trúfesti og hlýðni við lög Drottins. Hallelúja!