< ಕೀರ್ತನೆಗಳು 102 >
1 ೧ ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳು; ನನ್ನ ಕೂಗು ನಿನಗೆ ಮುಟ್ಟಲಿ.
Àdúrà olùpọ́njú tí àárẹ̀ mú, tí ó sí ọkàn rẹ̀ payá níwájú Olúwa. Gbọ́ àdúrà mi, Olúwa, jẹ́ kí igbe ẹ̀bẹ̀ mi kí ó wá sí ọ̀dọ̀ rẹ.
2 ೨ ನನ್ನ ಕಷ್ಟದಲ್ಲಿ ವಿಮುಖನಾಗಬೇಡ; ನನ್ನ ಮೊರೆಗೆ ಕಿವಿಗೊಡು; ನಾನು ಕೂಗಿಕೊಳ್ಳುವ ದಿನದಲ್ಲಿ ಬೇಗನೆ ಸದುತ್ತರವನ್ನು ದಯಪಾಲಿಸು.
Má ṣe pa ojú rẹ mọ́ kúrò lọ́dọ̀ mi ní ọjọ́ tí èmi wà nínú ìpọ́njú. Dẹ etí rẹ sí mi; nígbà tí mo bá pè, dá mi lóhùn kíákíá.
3 ೩ ನನ್ನ ಜೀವಮಾನವು ಹೊಗೆಯಂತೆ ಮಾಯವಾಗುತ್ತದೆ; ನನ್ನ ಎಲುಬುಗಳು ಕೊಳ್ಳಿಯಂತೆ ಸುಟ್ಟುಹೋಗುತ್ತವೆ.
Nítorí tí ọjọ́ mi run bí èéfín; egungun mi sì jóná bí ààrò.
4 ೪ ನನ್ನ ಹೃದಯವು ಬಿಸಿಲಿನಿಂದ ಬಾಡಿಹೋದ ಹುಲ್ಲಿನಂತಿದೆ; ಊಟವನ್ನು ಮರೆತೆನು.
Àyà mi lù, ó sì rọ bí i koríko; mo gbàgbé láti jẹ oúnjẹ mi.
5 ೫ ನಿಟ್ಟುಸಿರಿನಿಂದ ನನ್ನಲ್ಲಿ ಎಲುಬು, ತೊಗಲು ಮಾತ್ರ ಉಳಿದಿರುತ್ತವೆ.
Nítorí ohùn ìkérora mi, egungun mi lẹ̀ mọ́ ẹran-ara mi.
6 ೬ ಅಡವಿಯ ಬಕಪಕ್ಷಿಯಂತಿದ್ದೇನೆ; ಹಾಳೂರಿನ ಗೂಬೆಯಂತಿದ್ದೇನೆ.
Èmi dàbí ẹyẹ igún ní ijù: èmi dàbí òwìwí ibi ahoro.
7 ೭ ನಿದ್ರೆಯಿಲ್ಲದವನಾಗಿ ಮನೆಮಾಳಿಗೆಯ ಮೇಲಿರುವ, ಒಂಟಿಯಾದ ಪಕ್ಷಿಯಂತಿದ್ದೇನೆ.
Èmi dìde; èmi dàbí ẹyẹ lórí ilé.
8 ೮ ವೈರಿಗಳು ಹಗಲೆಲ್ಲಾ ನನ್ನನ್ನು ನಿಂದಿಸುತ್ತಾರೆ; ನನ್ನ ಮೇಲೆ ಕೋಪಾವೇಶವುಳ್ಳವರು ಯಾರನ್ನಾದರೂ ಶಪಿಸುವಾಗ, ನನ್ನನ್ನು ದೃಷ್ಟಾಂತಮಾಡಿ ಶಪಿಸುತ್ತಾರೆ.
Ní ọjọ́ gbogbo, àwọn ọ̀tá ológoṣẹ́ mi ń gàn mí; àwọn tí ń ṣe ìkanra sí mi ń fi orúkọ mi bú.
9 ೯ ಬೂದಿಯೇ ನನಗೆ ಆಹಾರವಾಯಿತು; ನನ್ನ ಪಾನದಲ್ಲಿ ಕಣ್ಣೀರು ಮಿಶ್ರವಾಯಿತು.
Èmi jẹ eérú gẹ́gẹ́ bí oúnjẹ mi, èmi sì da ohun mímu mi pọ̀ pẹ̀lú omijé.
10 ೧೦ ಇದಕ್ಕೆಲ್ಲಾ ನಿನ್ನ ಕೋಪ, ರೌದ್ರಗಳೇ ಕಾರಣ, ನೀನು ನನ್ನನ್ನು ಎತ್ತಿ ಒಗೆದುಬಿಟ್ಟಿದ್ದಿಯಲ್ಲಾ!
Nítorí ìbínú ríru rẹ, nítorí ìwọ ti gbé mi sókè, ìwọ sì gbé mi ṣánlẹ̀.
11 ೧೧ ನನ್ನ ಜೀವಮಾನವು ಸಂಜೆಯ ನೆರಳಿನಂತಿದೆ; ನಾನು ಬಾಡಿಹೋದ ಹುಲ್ಲಿನಂತಿದ್ದೇನೆ.
Ọjọ́ mi dàbí òjìji àṣálẹ́ èmi sì rọ bí koríko.
12 ೧೨ ಯೆಹೋವನೇ, ನೀನಾದರೋ ಸದಾ ಸಿಂಹಾಸನಾರೂಢನಾಗಿರುವಿ; ನಿನ್ನ ನಾಮವು ತಲತಲಾಂತರಕ್ಕೂ ಸ್ಮರಿಸಲ್ಪಡುವುದು.
Ṣùgbọ́n ìwọ, Olúwa, ni yóò dúró láéláé; ìrántí rẹ láti ìran dé ìran.
13 ೧೩ ನೀನು ಎದ್ದು ಚೀಯೋನನ್ನು ಕರುಣಿಸುವಿ. ಅದಕ್ಕೆ ಕೃಪೆತೋರಿಸುವ ಸಮಯ ಇದೇ; ನಿಯಮಿತ ಕಾಲವು ಬಂದಿದೆ.
Ìwọ ó dìde ìwọ ó sì ṣàánú fún Sioni, nítorí ìgbà àti ṣe ojúrere sí i; àkókò náà ti dé.
14 ೧೪ ಅದು ಕಲ್ಲುಕುಪ್ಪೆಯಾಗಿ ಹೋಗಿದ್ದರೂ, ಅದು ನಿನ್ನ ಸೇವಕರಿಗೆ ಅತಿಪ್ರಿಯವಾಗಿದೆ; ಅದರ ಧೂಳಿಗೆ ಅವರು ಮರಗುತ್ತಾರೆ.
Nítorí tí àwọn òkúta jẹ́ inú dídùn sí àwọn ìránṣẹ́ rẹ; wọ́n sì káàánú erùpẹ̀ rẹ.
15 ೧೫ ಯೆಹೋವನು ಗತಿಹೀನರ ಮೊರೆಯನ್ನು ತಿರಸ್ಕರಿಸದೆ ನೆರವೇರಿಸಿದನೆಂದೂ,
Àwọn kèfèrí yóò bẹ̀rù orúkọ Olúwa, gbogbo ọba ayé yóò máa bẹ̀rù ògo rẹ.
16 ೧೬ ಆತನು ಮಹಿಮೆಯಲ್ಲಿ ಬಂದು ಚೀಯೋನನ್ನು ತಿರುಗಿ ಕಟ್ಟಿಸಿದನೆಂದೂ,
Torí tí Olúwa yóò gbé Sioni ró, yóò farahàn nínú ògo rẹ̀.
17 ೧೭ ಜನಾಂಗಗಳು ಯೆಹೋವ ಎಂಬ ನಿನ್ನ ನಾಮಕ್ಕೂ, ಭೂರಾಜರು ನಿನ್ನ ಪ್ರತಾಪಕ್ಕೂ ಭಯಪಡುವರು.
Yóò dáhùn àdúrà àwọn aláìní; kì yóò sì gan ẹ̀bẹ̀ wọn.
18 ೧೮ ಇದು ಮುಂದಣ ಸಂತಾನದವರಿಗೋಸ್ಕರ ಶಾಸನವಾಗಿರಲಿ, ಮುಂದೆ ಹುಟ್ಟುವ ಪ್ರಜೆಯು ಯೆಹೋವನನ್ನು ಕೊಂಡಾಡುತ್ತಾ,
Jẹ́ kí a kọ èyí fún ìran tí ń bọ̀, àwọn ènìyàn tí a kò tí ì dá yóò yin Olúwa:
19 ೧೯ “ಯೆಹೋವನು ತನ್ನ ಮಹೋನ್ನತವಾದ ಪವಿತ್ರಸ್ಥಾನದಿಂದ ಕೆಳಕ್ಕೆ ನೋಡಿದ್ದಾನೆ; ಆತನು ಪರಲೋಕದಿಂದ ಭೂಮಿಯನ್ನು ದೃಷ್ಟಿಸಿದ್ದಾನೆ.
“Olúwa wo ilẹ̀ láti òkè mímọ́ rẹ̀ wá láti ọ̀run wá ni ó bojú wo ayé,
20 ೨೦ ಸೆರೆಯವರ ಗೋಳಾಟವನ್ನು ಪರಿಗಣಿಸಿ, ಮರಣಪಾತ್ರರನ್ನು ಬಿಡಿಸಿ,
láti gbọ́ ìrora ará túbú, láti tú àwọn tí a yàn sí ikú sílẹ̀.”
21 ೨೧ ಅವರು ಚೀಯೋನಿನಲ್ಲಿ ಯೆಹೋವನ ನಾಮವನ್ನು ವರ್ಣಿಸುವಂತೆಯೂ, ಯೆರೂಸಲೇಮಿನಲ್ಲಿ ತನ್ನ ಕೀರ್ತನೆಯನ್ನು ಹಾಡುವಂತೆಯೂ ಮಾಡಿದ್ದಾನೆ.
Kí a lè sọ orúkọ Olúwa ní Sioni àti ìyìn rẹ̀ ní Jerusalẹmu.
22 ೨೨ ಜನಾಂಗಗಳೂ, ರಾಜ್ಯಗಳೂ ಕೂಡಿಬಂದು ಇವರೊಡನೆ ಯೆಹೋವನನ್ನು ಸೇವಿಸುತ್ತವೆ” ಎಂದು ಹೇಳುವುದು.
Ní ìgbà tí a kó àwọn ènìyàn àti ìjọba pọ̀ láti máa sìn Olúwa.
23 ೨೩ ಆತನು ಯೌವನಪ್ರಾಯದಲ್ಲಿಯೇ ನನ್ನ ಬಲವನ್ನು ಕುಂದಿಸಿದ್ದಾನೆ;
Ní ipa ọ̀nà mi, ó rẹ agbára mi sílẹ̀, ó gé ọjọ́ mi kúrú.
24 ೨೪ ನನ್ನ ಆಯುಷ್ಯವನ್ನು ಕಡಿಮೆ ಮಾಡಿಬಿಟ್ಟಿದ್ದಾನೆ. ಆದುದರಿಂದ, “ನನ್ನ ದೇವರೇ, ಅರ್ಧಾಯುಷ್ಯದಲ್ಲಿಯೇ ನನ್ನನ್ನು ಒಯ್ಯಬೇಡ; ನಿನ್ನ ವರ್ಷಗಳು ತಲತಲಾಂತರಕ್ಕೂ ಇರುತ್ತವೆ.
Èmi sì wí pé: “Ọlọ́run mi, má ṣe mú mi kúrò ní agbede-méjì ọjọ́ mi; ọdún rẹ̀ ń lọ láti ìran dé ìran.
25 ೨೫ ಆದಿಯಲ್ಲಿ ನೀನು ಭೂಮಿಗೆ ಅಸ್ತಿವಾರವನ್ನು ಹಾಕಿದಿ; ಗಗನಮಂಡಲವು ನಿನ್ನ ಕೈಕೆಲಸವಾಗಿದೆ.
Ní ìbẹ̀rẹ̀ ní ìwọ fi ìpìlẹ̀ ayé sọlẹ̀, ọ̀run sì jẹ́ iṣẹ́ ọwọ́ rẹ.
26 ೨೬ ಅವು ನಾಶವಾಗುವವು; ಆದರೆ ನೀನು ಶಾಶ್ವತವಾಗಿರುತ್ತಿ. ಅವೆಲ್ಲವೂ ವಸ್ತ್ರದಂತೆ ಹಳೆಯದಾಗುವವು. ಉಡುಪಿನಂತೆ ಅವುಗಳನ್ನು ಬದಲಿಸುತ್ತಿ; ಅವು ಮಾರ್ಪಡುವವು.
Wọn yóò ṣègbé, wọn yóò parun, ṣùgbọ́n ìwọ yóò wà; gbogbo wọn ni yóò gbó bí aṣọ. Bí ẹ̀wù ni ìwọ yóò pààrọ̀ wọn wọn yóò sì di àpatì.
27 ೨೭ ನೀನಾದರೋ ಏಕರೀತಿಯಾಗಿರುತ್ತಿ; ನಿನ್ನ ವರ್ಷಗಳು ಮುಗಿದುಹೋಗುವುದಿಲ್ಲ.
Ṣùgbọ́n ìwọ wà digbí síbẹ̀, ọdún rẹ kò sì ní òpin.
28 ೨೮ ನಿನ್ನ ಸೇವಕರ ಮಕ್ಕಳು ಬಾಳುವರು. ಅವರ ಸಂತತಿಯವರು ನಿನ್ನ ಸನ್ನಿಧಿಯಲ್ಲಿ ಸ್ಥಿರವಾಗಿರುವರು” ಎಂದು ಮೊರೆಯಿಡುತ್ತೇನೆ.
Àwọn ọmọ ìránṣẹ́ rẹ̀ yóò dúró ní iwájú rẹ pẹ́; a ó sì fi ẹsẹ̀ irú-ọmọ wọn sọlẹ̀ ní iwájú rẹ.”