< ಕೀರ್ತನೆಗಳು 10 >
1 ೧ ಯೆಹೋವನೇ, ನೀನು ಏಕೆ ದೂರವಾಗಿ ನಿಂತಿದ್ದೀ? ಕಷ್ಟಕಾಲದಲ್ಲಿ ಏಕೆ ಮರೆಯಾಗುತ್ತೀ?
Немишкә, и Пәрвәрдигар, жирақта турисән? Немишкә азаплиқ күнләрдә өзүңни йошурисән?
2 ೨ ದುಷ್ಟರು ಅಹಂಕಾರದಿಂದ ದೀನರನ್ನು ಬಹಳವಾಗಿ ಹಿಂಸಿಸುತ್ತಾರೆ; ಅವರು ಕಲ್ಪಿಸಿದ ಕುಯುಕ್ತಿಯಲ್ಲಿ ತಾವೇ ಸಿಕ್ಕಿ ಬೀಳಲಿ.
Рәзил адәмләр тәкәббурлуғи билән аҗиз мөминләрни тап бастуруп қоғлап жүриду; Улар өзлири тапқан һейлиләр билән илинип, баблиниду.
3 ೩ ದುಷ್ಟನು ತನ್ನ ಹೃದಯದ ಸಂಕಲ್ಪಗಳು ನೆರವೇರಿತೆಂದು ಕೊಚ್ಚಿಕೊಳ್ಳುತ್ತಾನೆ; ಲಾಭಬಡುಕನು ಯೆಹೋವನನ್ನು ದೂಷಿಸಿ ತಿರಸ್ಕರಿಸುತ್ತಾನೆ.
Чүнки рәзилләр өз арзу-һәвәслири билән махтиниду; Ач көзләр үчүн бәхит тиләйду; Пәрвәрдигарни болса көзигә илмайду.
4 ೪ ದುಷ್ಟನು ಸೊಕ್ಕಿನ ಮುಖದಿಂದ, “ಯೆಹೋವನು ವಿಚಾರಿಸುವುದಿಲ್ಲ” ಎಂದು ಹೇಳಿಕೊಂಡು, ದೇವರಿಲ್ಲ ಎಂಬುದಾಗಿ ಸದಾ ಯೋಚಿಸುತ್ತಾನೆ.
Улар чирайидин һакавурлуқ яғдуруп, Худани издимәйду; Улар барлиқ хияллирида: «Һеч бир Худа йоқтур!» дәйду.
5 ೫ ಅವನ ಪ್ರಯತ್ನಗಳು ಯಾವಾಗಲೂ ಕೈಗೂಡುತ್ತವೆ; ಆದರೆ ನಿನ್ನ ನ್ಯಾಯತೀರ್ಪು ಮಹೋನ್ನತವಾಗಿರುವುದರಿಂದ ಅದು ಅವನ ಗ್ರಹಿಕೆಗೆ ಬರುವುದಿಲ್ಲ; ವೈರಿಗಳ ಗುಂಪನ್ನಾದರೋ ತಾತ್ಸಾರಮಾಡುತ್ತಾನೆ.
Уларниң йоллири һемишә раван болиду; Сениң һөкүмлириң уларниң нәзиридин жирақ вә үстүн туриду; Уларниң рәқиплири болса, уларға қарап «түфи!» дәп мазақ қилиду.
6 ೬ ಅವನು, “ನಾನು ಕದಲುವುದೇ ಇಲ್ಲ; ನನಗೆ ವಿಪತ್ತು ಎಂದೆಂದಿಗೂ ಸಂಭವಿಸುವುದಿಲ್ಲ” ಅಂದುಕೊಂಡಿದ್ದಾನೆ.
[Рәзил адәм] көңлидә: «Мән һеч тәврәнмәй туриверимән! Дәвирдин-дәвиргә һеч мушәққәткә учримаймән» — дәйду.
7 ೭ ಅವನ ಬಾಯಿಯು ಶಾಪ, ಬಲಾತ್ಕಾರ ಮತ್ತು ವಂಚನೆಗಳಿಂದ ತುಂಬಿದೆ; ಅವನ ನಾಲಿಗೆಯ ಕೆಳಗೆ ಹಾನಿಯೂ, ನಾಶನವೂ ಇವೆ.
Униң ағзи қарғаш, алдамчилиқ һәм зулумға толған; Тили астида әскилик вә қәбиһлик ятиду.
8 ೮ ಅವನು ಗ್ರಾಮಗಳ ಸಂದುಗೊಂದುಗಳಲ್ಲಿ ಹೊಂಚಿಕೊಂಡಿದ್ದು, ಮರೆಯಾದ ಸ್ಥಳಗಳಲ್ಲಿ ನಿರಪರಾಧಿಗಳನ್ನು ಕೊಲ್ಲುತ್ತಾನೆ. ಅವನು ಗತಿಹೀನನನ್ನು ಹಿಡಿಯುವುದಕ್ಕೆ ಸಮಯ ನೋಡುತ್ತಾನೆ.
У мәһәллиләрдә йошурунчә марап олтириду; У пинһан җайларда гунасизларни өлтүрүветиду; Көзлири йоқсулларни көзләйду;
9 ೯ ಗವಿಯಲ್ಲಿ ಅಡಗಿಕೊಂಡಿರುವ ಸಿಂಹದಂತೆ ಅವನು ಮರೆಯಾಗಿ ಹೊಂಚಿಕೊಂಡಿರುವನು. ಅವನು ಬಲೆಯೊಡ್ಡಿ ಕಾದಿದ್ದು, ಕುಗ್ಗಿದವನನ್ನು ಹಿಡಿದು ಎಳೆದುಕೊಂಡು ಹೋಗುತ್ತಾನೆ.
У чатқаллиғида ятқан ширдәк йошурунчә пайлап ятиду; У мөминләрни тутувелиш үчүн йошурунчә марап ятиду; Мөминләрни тутувелип, уларни өз ториға чүшүриду.
10 ೧೦ ಕುಗ್ಗಿದವನು ಜಜ್ಜಲ್ಪಟ್ಟು ಉರುಳಿಕೊಳ್ಳುತ್ತಾನೆ, ಗತಿಯಿಲ್ಲದವನು ಅವನ ಬಲಾತ್ಕಾರದಿಂದ ಬಿದ್ದು ಹೋಗುತ್ತಾನೆ.
[Йоқсуллар] езилиду, пүкүлиду; Дәрдмәнләр униң явузлуқлири билән жиқилиду.
11 ೧೧ ಆ ದುಷ್ಟನು ತನ್ನೊಳಗೆ, “ದೇವರು ಇವನನ್ನು ಬಿಟ್ಟು ವಿಮುಖನಾಗಿದ್ದಾನೆ; ಆತನು ನೋಡುವುದೇ ಇಲ್ಲ” ಅಂದುಕೊಳ್ಳುತ್ತಾನೆ.
У көңлидә: «Тәңри буни унтуп қалди, У йүзини йепивелип, қаримайду; Буни һәргиз көрмәйду» — дәйду.
12 ೧೨ ಯೆಹೋವನೇ, ಏಳು; ದೇವರೇ, ಕುಗ್ಗಿದವನನ್ನು ಮರೆಯಬೇಡ; ಅವನನ್ನು ರಕ್ಷಿಸುವುದಕ್ಕೆ ಕೈಚಾಚು.
Орнуңдин турғин, и Пәрвәрдигар; И Тәңрим, қолуңни көтәргин; Езилгән мөминләрни унтума!
13 ೧೩ “ದೇವರು ವಿಚಾರಿಸುವುದೇ ಇಲ್ಲ” ಎಂದು ಹೇಳುತ್ತಾ, ದುಷ್ಟನು ನಿನ್ನನ್ನು ಏಕೆ ಅಲಕ್ಷ್ಯಮಾಡಬೇಕು?
Рәзил адәм немишкә [Сән] Худани көзигә илмайду? У көңлидә: «[Худа] буни сүрүштүрмәйду!» — дәйду.
14 ೧೪ ನೀನು ಅವರ ಅನ್ಯಾಯ ಹಾಗು ಬಲಾತ್ಕಾರಗಳನ್ನು ನೋಡಿದ್ದಿ; ಅವುಗಳನ್ನು ವಿಚಾರಿಸುತ್ತೀ, ಗತಿಯಿಲ್ಲದವನು ತನ್ನನ್ನು ನಿನಗೇ ಒಪ್ಪಿಸುವನು; ದಿಕ್ಕಿಲ್ಲದವನಿಗೆ ನೀನೇ ದಿಕ್ಕು.
Сән буни көргәнсән; Сән Өз қолуң билән яманлиқ һәм зулумни өзлиригә қайтуруш үчүн, Өзүң буларни көзләп жүрисән; Дәрдмәнләр өзлирини Саңа аманәт қилиду; Чүнки Сән житим-йесирләргә яр-йөләк болуп кәлгәнсән;
15 ೧೫ ದುಷ್ಟನ ಭುಜಬಲವನ್ನು ಮುರಿದುಹಾಕು, ಕೆಡುಕನ ದುಷ್ಟತ್ವವನ್ನು ಶೋಧಿಸಿ ನಿರ್ಮೂಲಮಾಡಿಬಿಡು.
Рәзил, яман адәмниң билигини сундурувәткәйсән; Униң рәзиллигини бирмубир сүрүштүрүп, үзүл-кесил йоқатқайсән.
16 ೧೬ ಯೆಹೋವನು ಯುಗಯುಗಾಂತರಗಳಲ್ಲಿಯೂ ಅರಸನಾಗಿರುವನು; ಆತನ ದೇಶದಲ್ಲಿ ಅನ್ಯಜನಗಳು ನಿಶ್ಶೇಷರಾದರು.
Пәрвәрдигар әбәдил-әбәткичә падишадур; [Имансиз] әлләр болса [Пәрвәрдигарниң] зиминидин йоқилар.
17 ೧೭ ಯೆಹೋವನೇ, ನೀನು ದೀನರ ಕೋರಿಕೆಯನ್ನು ನೆರವೇರಿಸುವವನೇ ಆಗಿದ್ದಿ; ಅವರ ಹೃದಯವನ್ನು ಧೈರ್ಯಪಡಿಸುತ್ತಿ; ಅವರ ಮೊರೆಗೆ ಕಿವಿಗೊಡುತ್ತಿ.
Пәрвәрдигар, Сән аҗиз мөминләрниң арманлирини аңлайсән; Уларниң дилини тоқ қилисән;
18 ೧೮ ನೀನು ದಿಕ್ಕಿಲ್ಲದವರ ಮತ್ತು ಕುಗ್ಗಿದವರ ನ್ಯಾಯವನ್ನು ವಿಚಾರಿಸುತ್ತಿ. ಹೀಗಿರುವಲ್ಲಿ ಇನ್ನು ಮುಂದೆ ಮಣ್ಣಿನಿಂದಾದ ಮನುಷ್ಯರಿಂದ ಅವರಿಗೆ ಹೆದರಿಕೆ ಉಂಟಾಗುವುದಿಲ್ಲ.
Житим-йесирлар вә езилгүчиләр үчүн адаләтни яқлап, Йәр йүзидики инсанларниң [аҗиз-мөминләргә] қайтидин вәһимә салғучи болмаслиғи үчүн, Қулиқиңни диң тутисән.