< ಜ್ಞಾನೋಕ್ತಿಗಳು 6 >
1 ೧ ಮಗನೇ, ನೀನು ನೆರೆಯವನ ಸಾಲಕ್ಕೆ ಹೊಣೆಯಾಗಿದ್ದರೆ, ಪರನೊಂದಿಗೆ ಪ್ರಮಾಣ ಮಾಡಿಕೊಂಡಿದ್ದರೆ,
Yaa ilma ko, ati yoo ollaa keetiif wabii taatee harka dhooftee nama ormaatiif kakatte,
2 ೨ ನೀನು ಮಾತುಕೊಟ್ಟು ಪಾಶಕ್ಕೆ ಸಿಕ್ಕಿಕೊಂಡಿದ್ದೀ, ನಿನ್ನ ವಾಗ್ದಾನವು ನಿನ್ನನ್ನು ಹಿಡಿದಿದೆ.
yoo waanuma dubbatteen qabamtee dubbuma afaan keetiitiin kiyyoo seente,
3 ೩ ಹೀಗಿರಲು, ಮಗನೇ, ನೀನು ನೆರೆಯವನ ಕೈಗೆ ಸಿಕ್ಕಿಕೊಂಡದ್ದರಿಂದ ತಪ್ಪಿಸಿಕೊಳ್ಳುವ ಒಂದು ಕೆಲಸ ಮಾಡು, ನಡೆ, ತ್ವರೆಪಡು, ಆ ನೆರೆಯವನನ್ನು ಅಂಗಲಾಚಿ ಬೇಡಿಕೋ,
yoos yaa ilma ko, ati sababii harka ollaa keetii seentee jirtuuf ati of baasuudhaaf dafii dhaqiitii gad of qabii jabeessiitii ollaa kee kadhadhu!
4 ೪ ನಿನ್ನ ಕಣ್ಣುಗಳಿಗೆ ನಿದ್ರೆಕೊಡಬೇಡ, ನಿನ್ನ ರೆಪ್ಪೆಗಳನ್ನು ಮುಚ್ಚಬೇಡ;
Ija keetiif hirriba, baallee ija keetiitiif immoo mugaatii hin eeyyamin.
5 ೫ ಬೇಟೆಗಾರನ ಕೈಯಿಂದ ಜಿಂಕೆಯು ಓಡುವಂತೆಯೂ, ಪಕ್ಷಿಯು ಹಾರಿ ಹೋಗುವ ಹಾಗೂ ತಪ್ಪಿಸಿಕೋ.
Ati akkuma kuruphee harka adamsituutii baatuutti, akkuma simbirroo kiyyoo nama ishee qabuu jalaa baatuutti of oolchi.
6 ೬ ಸೋಮಾರಿಯೇ, ಇರುವೆಯ ಹತ್ತಿರ ಹೋಗಿ, ಅದರ ನಡವಳಿಕೆಯನ್ನು ನೋಡಿ ಜ್ಞಾನವನ್ನು ಪಡೆದುಕೋ.
Yaa dhibaaʼaa nana mee gara goondaa dhaqi; karaa ishee qalbeeffadhuutii ogeessa taʼi!
7 ೭ ಅದಕ್ಕೆ ನಾಯಕ, ಅಧಿಕಾರಿ ಹಾಗೂ ಪ್ರಭುಗಳಿಲ್ಲದಿದ್ದರೂ,
Inni ajajaa hin qabu; toʼataa yookaan bulchaa hin qabu;
8 ೮ ಬೇಸಿಗೆಯಲ್ಲಿ ತನ್ನ ತೀನಿಯನ್ನು ಸಿದ್ಧಮಾಡುವುದು, ಸುಗ್ಗಿಯ ಕಾಲದಲ್ಲಿ ತನಗೆ ಬೇಕಾದಷ್ಟು ಆಹಾರವನ್ನು ಸಂಗ್ರಹಿಸಿಟ್ಟುಕೊಳ್ಳುವುದು.
taʼu illee inni bona keessa nyaata isaa kuufata; yeroo midhaan galfamutti immoo nyaata isaa walitti qabata.
9 ೯ ಸೋಮಾರಿಯೇ, ಎಷ್ಟು ಹೊತ್ತು ನಿದ್ರೆ? ನಿದ್ರೆಯಿಂದ ಯಾವಾಗ ಎಚ್ಚರಗೊಳ್ಳುವಿ?
Yaa dhibaaʼaa nana, ati hamma yoomiitti ciifta? Ati yoomi hirriba keetii kaata?
10 ೧೦ “ಇನ್ನು ಸ್ವಲ್ಪ ನಿದ್ದೆ, ಇನ್ನು ಸ್ವಲ್ಪ ತೂಕಡಿಕೆ, ಇನ್ನೂ ಕೊಂಚ ನಿದ್ದೆಗಾಗಿ ಕೈಮುದುರಿಕೊಳ್ಳುವೆ” ಅಂದುಕೊಳ್ಳುವಿಯಾ?
Hirriba xinnaa, mugaatii xinnaa, xinnoo harka walitti marachuu,
11 ೧೧ ಬಡತನವು ದಾರಿಗಳ್ಳನ ಹಾಗೂ ಕೊರತೆಯು ಪಂಜುಗಳ್ಳನಂತೆಯೂ ನಿನ್ನ ಮೇಲೆ ಬೀಳುವವು.
hiyyummaanis akkuma hattuutti sitti dhufa; deegummaanis akkuma loltuu hidhateetti sitti dhufa.
12 ೧೨ ನೀಚನೂ, ದುಷ್ಟನೂ ಆಗಿರುವ ಮನುಷ್ಯನ ನಡತೆಯನ್ನು ನೋಡು, ಅವನು ವಕ್ರ ಮಾತಿನವನಾಗಿದ್ದಾನೆ,
Namni rakkisaan, namni hamaan, dubbii sobaatiin asii fi achi naannaʼa;
13 ೧೩ ಕಣ್ಣನ್ನು ಮಿಟಕಿಸುತ್ತಾನೆ, ಕಾಲಿನಿಂದ ಕೆರೆಯುತ್ತಾನೆ, ಬೆರಳ ಸನ್ನೆಮಾಡುತ್ತಾನೆ.
inni ijaan dhaʼa; miilla isaatiinis mallattoo kenna; quba isaatiin argisiisa;
14 ೧೪ ಅವನ ಮನಸ್ಸಿನಲ್ಲಿರುವುದು ದ್ರೋಹವೇ; ಯಾವಾಗಲೂ ಕೇಡನ್ನು ಕಲ್ಪಿಸುತ್ತಾನೆ, ಜಗಳದ ಬೀಜವನ್ನು ಬಿತ್ತುತ್ತಾನೆ.
inni garaa isaa isa sobaadhaan hammina yaada; yeroo hundas lola kakaasa.
15 ೧೫ ಆದಕಾರಣ ಅವನಿಗೆ ತಟ್ಟನೆ ವಿಪತ್ತು ಸಂಭವಿಸುವುದು, ಏಳದ ಹಾಗೆ ಫಕ್ಕನೆ ಮುರಿಯಲ್ಪಡುವನು.
Kanaafuu badiisni yommusuma isatti dhufa; inni akkuma tasaa caba; deebiʼees hin fayyu.
16 ೧೬ ಯೆಹೋವನು ಹಗೆಮಾಡುವ ವಿಷಯಗಳು ಆರು ಇವೆ, ಹೌದು, ಏಳು ಸಂಗತಿಗಳು ಆತನಿಗೆ ಅಸಹ್ಯವಾಗಿ ತೋರುತ್ತವೆ.
Waaqayyo waan jaʼa jibba; waan torba immoo ni xireeffata; isaanis:
17 ೧೭ ಅವು ಯಾವುವೆಂದರೆ, ಹೆಮ್ಮೆಯ ಕಣ್ಣು, ಸುಳ್ಳಿನ ನಾಲಿಗೆ, ನಿರ್ದೋಷಿಗಳ ರಕ್ತವನ್ನು ಸುರಿಸುವ ಕೈ,
Ija of tuulu, arraba sobu, harka dhiiga nama balleessaa hin qabnee dhangalaasu,
18 ೧೮ ದುರಾಲೋಚನೆಗಳನ್ನು ಕಲ್ಪಿಸುವ ಹೃದಯ, ಕೇಡುಮಾಡಲು ತ್ವರೆಪಡುವ ಕಾಲು,
garaa mala hamaa malu, miilla gara jalʼinaatti ariifatu,
19 ೧೯ ಅಸತ್ಯವಾಡುವ ಸುಳ್ಳುಸಾಕ್ಷಿ ಮತ್ತು ಒಡಹುಟ್ಟಿದವರಲ್ಲಿ ಜಗಳಗಳನ್ನು ಬಿತ್ತುವವನು ಇವುಗಳೇ.
dhuga baatuu sobaa kan soba dhangalaasu, nama obboloota gidduutti lola kakaasuu dha.
20 ೨೦ ಕಂದಾ, ತಂದೆಯ ಆಜ್ಞೆಯನ್ನು ಕೈಕೊಳ್ಳು, ತಾಯಿಯ ಉಪದೇಶವನ್ನು ಬಿಡಬೇಡ.
Yaa ilma ko, ajaja abbaa keetii eegi; barsiisa haadha keetii illee hin gatin.
21 ೨೧ ಅವುಗಳನ್ನು ಸದಾ ನಿನ್ನ ಹೃದಯದಲ್ಲಿ ಇಟ್ಟುಕೋ, ನಿನ್ನ ಕೊರಳಿಗೆ ಅವುಗಳನ್ನು ಧರಿಸಿಕೋ.
Bara baraan garaa keetti qabadhu; morma keettis hidhadhu.
22 ೨೨ ನೀನು ನಡೆಯುವಾಗ ಆ ಉಪದೇಶವು ನಿನ್ನನ್ನು ಮುನ್ನಡೆಸುವುದು, ಮಲಗಿಕೊಂಡಾಗ ಅದು ನಿನ್ನನ್ನು ಕಾಯುವುದು, ಎಚ್ಚರಗೊಂಡಾಗ ನಿನ್ನೊಂದಿಗೆ ಮಾತನಾಡುವುದು.
Yeroo ati deemtu isaan si qajeelchu; yeroo ati raftu si eegu; yeroo ati hirribaa kaatu illee si haasofsiisu.
23 ೨೩ ಆಜ್ಞೆಯೇ ದೀಪ, ಉಪದೇಶವೇ ಬೆಳಕು, ಶಿಕ್ಷಣಪೂರ್ವಕವಾದ ಬೋಧನೆಯೇ ಜೀವದ ಮಾರ್ಗ.
Ajajni kun ibsaadhaatii; barsiisni kunis ifa; sirreeffamni amalaa immoo karaa jireenyaa ti;
24 ೨೪ ಅದು ಕೆಟ್ಟ ಸ್ತ್ರೀಯಿಂದಲೂ, ವೇಶ್ಯೆಯ ಸಿಹಿನುಡಿಯಿಂದಲೂ ನಿನ್ನನ್ನು ರಕ್ಷಿಸತಕ್ಕದ್ದಾಗಿದೆ.
isaan dubartii hamtuu irraa, niitii kashlabbee afaan dammaa irraa si eegu.
25 ೨೫ ನಿನ್ನ ಹೃದಯವು ಅವಳ ಸೌಂದರ್ಯವನ್ನು ಮೋಹಿಸದಿರಲಿ, ಅವಳು ತನ್ನ ಕಣ್ಣುರೆಪ್ಪೆಗಳಿಂದ ನಿನ್ನನ್ನು ವಶಮಾಡಿಕೊಂಡಾಳು, ನೋಡಿಕೋ.
Garaa kee keessatti bareedina ishee hin dharraʼin; yookaan akka isheen ija isheetiin si boojitu hin godhin.
26 ೨೬ ವೇಶ್ಯೆಯಿಂದ ಯಾವನಿಗಾದರೂ ಒಂದು ರೊಟ್ಟಿ ಮಾತ್ರ ಗತಿಯಾಗುವುದು, ಪರಸ್ತ್ರೀಯೋ ಅಮೂಲ್ಯವಾದ ಜೀವವನ್ನು ಬೇಟೆಯಾಡುವಳು.
Sagaagaltuun buddeena tokkoon bitamtiitii; ejjituunis jireenyuma kee adamsiti.
27 ೨೭ ಮಡಿಲಲ್ಲಿ ಬೆಂಕಿಯನ್ನು ಇಟ್ಟುಕೊಂಡರೆ ಬಟ್ಟೆ ಸುಡುವುದಿಲ್ಲವೋ?
Namni bobaa jalatti ibidda baadhatee wayyaan isaa hin gubanne jiraa?
28 ೨೮ ಧಗಧಗಿಸುವ ಕೆಂಡದ ಮೇಲೆ ನಡೆದರೆ ಕಾಲು ಬೇಯುವುದಿಲ್ಲವೋ?
Namni ibidda cilee irra ejjetee miilli isaa hin gubanne jiraa?
29 ೨೯ ನೆರೆಯವನ ಹೆಂಡತಿಯ ಹತ್ತಿರ ಹೋಗುವವನಿಗೆ ಹೀಗೆಯೇ ಆಗುವುದು, ಯಾರು ಅವಳನ್ನು ಮುಟ್ಟುವನೋ ಅವನು ದಂಡನೆಯನ್ನು ಹೊಂದದೇ ಇರನು.
Namni niitii nama biraa wajjin ciisus akkasuma taʼa; namni ishee tuqu kam iyyuu utuu hin adabamin hin hafu.
30 ೩೦ ಕಳ್ಳನು ಹೊಟ್ಟೆಗಿಲ್ಲದೆ ಹಸಿವೆಯನ್ನು ನೀಗಿಸಲು ಕಳವು ಮಾಡಿದರೆ ಜನರು ಅಷ್ಟೇನೂ ಹೀಯಾಳಿಸರು.
Yoo hattuun tokko beela baʼuuf jedhee hate, namoonni hin tuffatan.
31 ೩೧ ಅವನ ತಪ್ಪು ಬಯಲಾದರೆ ಅವನು ಏಳರಷ್ಟು ಕೊಡಬೇಕಾಗುವುದು, ಅಥವಾ ತನ್ನ ಮನೆಯ ಆಸ್ತಿಯನ್ನೆಲ್ಲಾ ಕೊಟ್ಟು ತೀರಿಸಲೇಬೇಕು.
Garuu inni yoo qabame dachaa torba baasa; miʼa mana isaa hundas ni kenna.
32 ೩೨ ವ್ಯಭಿಚಾರಿಯೋ ಕೇವಲ ಬುದ್ಧಿಹೀನನು, ಇಂಥಾ ಕಾರ್ಯವನ್ನು ಮಾಡುವವನು ತನ್ನನ್ನೇ ನಾಶಪಡಿಸಿಕೊಳ್ಳುವನು.
Namni sagaagalu qalbii hin qabu; namni waan akkasii hojjetu ofuma galaafata.
33 ೩೩ ಅವನಿಗೆ ಗಾಯವೂ, ಅವಮಾನವೂ ಆಗುವವು, ಅವನ ಕೆಟ್ಟ ಹೆಸರು ಎಂದಿಗೂ ಅಳಿಸಲ್ಪಡದು.
Qoodni isaa dhaanamuu fi salphachuu dha; qaaniin isaa yoom iyyuu isa irraa hin haqamu.
34 ೩೪ ಏಕೆಂದರೆ ಮತ್ಸರವು ಪತಿಗೆ ಕ್ರೋಧವನ್ನು ಉಂಟುಮಾಡುತ್ತದೆ, ಅವನು ಮುಯ್ಯಿತೀರಿಸತಕ್ಕ ದಿನದಲ್ಲಿ ವ್ಯಭಿಚಾರಿಯನ್ನು ಉಳಿಸನು.
Hinaaffaan aarii dhirsaa kakaasaatii; inni yeroo haaloo baʼutti dhiifama tokko iyyuu hin godhu.
35 ೩೫ ಅವನು ಯಾವ ಈಡನ್ನೂ ಮುಟ್ಟನು; ಎಷ್ಟು ಲಂಚಕೊಟ್ಟರೂ ಒಪ್ಪನು.
Inni beenyaa tokko illee hin fudhatu; hammam baayʼatu iyyuu inni mattaʼaa ni dida.