< ಜ್ಞಾನೋಕ್ತಿಗಳು 30 >
1 ೧ ದೈವೋಕ್ತಿ. ಯಾಕೆ ಎಂಬುವವನ ಮಗನಾದ ಆಗೂರನ ಮಾತುಗಳು. ಇವನು ಇಥಿಯೇಲನಿಗೆ, ಇಥಿಯೇಲನಿಗೂ ಉಕ್ಕಾಲನಿಗೂ ಹೀಗೆ ಹೇಳಿದನು.
The words of Agur the son of Yakeh, even the prophecy: the man said unto Ithiel, even unto Ithiel and Ukkal,
2 ೨ ಮನುಷ್ಯರಲ್ಲಿ ನನ್ನಂಥ ಪಶುಪ್ರಾಯನು ಇಲ್ಲವಷ್ಟೆ, ಮಾನುಷ ವಿವೇಕವು ನನಗಿಲ್ಲ.
“Surely I am more brutish than any man, and have not the understanding of a common man.
3 ೩ ನಾನು ಜ್ಞಾನವನ್ನು ಪಡೆದುಕೊಂಡಿಲ್ಲ, ಪರಿಶುದ್ಧನ ವಿಷಯವಾದ ತಿಳಿವಳಿಕೆಯನ್ನು ಹೊಂದಿಲ್ಲ.
Nor have I learned wisdom, so that I should have knowledge of the Holy One.
4 ೪ ಆಕಾಶಕ್ಕೆ ಏರಿ ಇಳಿದಿರುವವನಾರು? ಮುಷ್ಠಿಯಲ್ಲಿ ಗಾಳಿಯನ್ನು ಕೂಡಿಸಿರುವವರು ಯಾರು? ತನ್ನ ಬಟ್ಟೆಯಲ್ಲಿ ನೀರನ್ನು ಮೂಟೆಕಟ್ಟಿರುವವರು ಯಾರು? ಭೂಮಿಯ ಎಲ್ಲೆಗಳನ್ನೆಲ್ಲಾ ಸ್ಥಾಪಿಸಿರುವವರು ಯಾರು? ಅವನ ಹೆಸರೇನು? ಅವನ ಮಗನ ಹೆಸರೇನು? ನೀನೇ ಬಲ್ಲವನು.
Who was it that ascended into heaven, and came down again? who gathered the wind in his fists? who bound the waters in a garment? who set up all the ends of the earth? what is his name, and what is his son's name, if thou knowest it?”
5 ೫ ದೇವರ ಪ್ರತಿಯೊಂದು ಮಾತು ಶುದ್ಧವಾದದ್ದು, ಆತನು ಶರಣಾಗತರಿಗೆ ಗುರಾಣಿಯಾಗಿದ್ದಾನೆ.
Every saying of God is purified: he is a shield unto those that put their trust in him.
6 ೬ ಆತನ ಮಾತುಗಳಿಗೆ ಯಾವುದನ್ನೂ ಸೇರಿಸಬೇಡ, ಆತನು ನಿನ್ನನ್ನು ಖಂಡಿಸುವಾಗ ನೀನು ಸುಳ್ಳುಗಾರನೆಂದು ತೋರಿಬಂದೀಯೆ.
Do not add aught unto his words: lest he reprove thee, and thou be found a liar.
7 ೭ ನಿನ್ನಿಂದ ಎರಡು ವರಗಳನ್ನು ಬೇಡಿಕೊಂಡಿದ್ದೇನೆ, ಅನುಗ್ರಹಿಸದಿರಬೇಡ, ನಾನು ಸಾಯುವುದರೊಳಗಾಗಿ ಅವುಗಳನ್ನು ಕೈಗೂಡಿಸು.
Two things do I request of thee: deny them not to me before I die.
8 ೮ ನನ್ನಿಂದ ಕಪಟವನ್ನೂ, ಸುಳ್ಳುಮಾತನ್ನೂ ತೊಲಗಿಸು, ಬಡತನವನ್ನಾಗಲಿ, ಐಶ್ವರ್ಯವನ್ನಾಗಲಿ ಕೊಡದೆ ನನಗೆ ತಕ್ಕಷ್ಟು ಆಹಾರವನ್ನು ಭೋಜನಮಾಡಿಸು.
Vanity and lying words do thou remove far from me: neither poverty nor riches give thou unto me; let me eat the bread appointed unto me:
9 ೯ ಹಾಗಾಗದೆ ಹೊಟ್ಟೆತುಂಬಿದವನಾದರೆ, “ಯೆಹೋವನು ಯಾರೋ?” ಎಂದು ನಿನ್ನನ್ನು ತಿರಸ್ಕರಿಸೇನು, ಬಡವನಾದರೆ ಕಳ್ಳತನಮಾಡಿ ನನ್ನ ದೇವರಾದ ನಿನ್ನ ಹೆಸರನ್ನು ಅಯೋಗ್ಯವಾಗಿ ಎತ್ತೆನು.
Lest I become over-full, and deny thee, and say, Who is the Lord? or lest I become poor, and steal, and trespass against the name of my God.
10 ೧೦ ಆಳಿನ ಮೇಲೆ ದಣಿಗೆ ದೂರನ್ನು ಹೇಳಬೇಡ, ಅವನು ಶಪಿಸಾನು, ನಿನ್ನಲ್ಲೇ ದೋಷವು ಕಂಡು ಬಂದೀತು.
Do not calumniate a servant unto his master: lest he curse thee, and thou incur guilt.
11 ೧೧ ತಾಯಿಗೆ ಶುಭವನ್ನು ಕೋರದೆ, ತಂದೆಯನ್ನು ಶಪಿಸುವ ಒಂದು ತರದವರು ಉಂಟು.
There is a generation that curseth its father, and doth not bless its mother.
12 ೧೨ ತಮ್ಮ ಕೊಳೆಯನ್ನು ತೊಳಕೊಳ್ಳದೆ ತಾವೇ ಶುದ್ಧರೆಂದು, ಎಣಿಸಿಕೊಳ್ಳುವ ಬೇರೊಂದು ತರದವರು ಉಂಟು.
There is a generation that is pure in its own eyes, and yet is not washed [clean] of its filthiness.
13 ೧೩ ಕಣ್ಣುರೆಪ್ಪೆಗಳನ್ನೆತ್ತಿಕೊಂಡು, ಎಷ್ಟೋ ಮೇಲೆ ಎಷ್ಟೋ ಮೇಲೆ ಮೇಲೆಯೇ ನೋಡುತ್ತಿರುವ ಇನ್ನೊಂದು ತರದವರು ಉಂಟು.
There is a generation—O how lofty are its eyes! and its eyelids are so lifted up.
14 ೧೪ ಖಡ್ಗದಂತಿರುವ ಹಲ್ಲುಗಳೂ ಕತ್ತಿಯಂತಿರುವ ಕೋರೆಗಳೂ ಉಳ್ಳವರಾಗಿ ಭೂಮಿಯೊಳಗಿಂದ ಬಡವರನ್ನೂ, ಮನುಷ್ಯರ ಮಧ್ಯದೊಳಗಿಂದ ದಿಕ್ಕಿಲ್ಲದವರನ್ನೂ, ಅಗೆದು ನುಂಗಿಬಿಡುವ ಮತ್ತೊಂದು ತರದವರು ಉಂಟು.
There is a generation, whose teeth are as swords, and whose string teeth are as knives, to devour the poor from off the earth, and the needy from among men.
15 ೧೫ ಕೊಡು, ಕೊಡು ಅನ್ನುವ ಎರಡು ಹೆಣ್ಣು ಮಕ್ಕಳು ಜಿಗಣೆಗೆ ಉಂಟು. ತೃಪ್ತಿಪಡದವುಗಳು ಮೂರು ಉಂಟು, ಹೌದು, ಸಾಕೆನ್ನದವುಗಳು ನಾಲ್ಕು ಉಂಟು.
Insatiability hath two daughters, [crying, ] Give, give. There are three things that are never satisfied, yea, four things which never say, Enough:
16 ೧೬ ಯಾವುವೆಂದರೆ, ಪಾತಾಳ, ಹೆರದ ಗರ್ಭ, ನೀರಿನಿಂದ ತೃಪ್ತಿಪಡದ ಭೂಮಿ, ಸಾಕಾಯಿತೆಂದು ಹೇಳದ ಬೆಂಕಿ, ಇವೇ. (Sheol )
The nether world; and a barren womb; the earth which is not satisfied with water; and the fire which never saith, Enough. (Sheol )
17 ೧೭ ತಂದೆಯನ್ನು ಹಾಸ್ಯಮಾಡಿ ತಾಯಿಯ ಅಪ್ಪಣೆಯನ್ನು, ಧಿಕ್ಕರಿಸುವವನ ಕಣ್ಣನ್ನು, ಹಳ್ಳಕೊಳ್ಳದ ಕಾಗೆಗಳು ಕುಕ್ಕುವವು, ರಣಹದ್ದುಗಳು ತಿಂದುಬಿಡುವವು.
The eye that mocketh at his father, and despiseth to obey his mother, this shall the ravens of the valley pick out; and the young eagles shall eat it.
18 ೧೮ ಮೂರು ವಿಷಯಗಳು ನನ್ನ ಬುದ್ಧಿಯನ್ನು ಮೀರಿವೆ, ಹೌದು, ನಾಲ್ಕನ್ನು ಗ್ರಹಿಸಲಾರೆನು;
Three things there are which are too wonderful for me; and four, which I know not:
19 ೧೯ ಯಾವುವೆಂದರೆ, ಆಕಾಶದಲ್ಲಿ ಹದ್ದಿನ ಹಾದಿ, ಬಂಡೆಯ ಮೇಲೆ ಸರ್ಪದ ಸರಣಿ, ಸಾಗರದ ನಡುವೆ ಹಡಗಿನ ಮಾರ್ಗ, ಸ್ತ್ರೀಯಲ್ಲಿ ಪುರುಷನ ಪದ್ಧತಿ, ಇವೇ.
The way of the eagle in the air; the way of a serpent upon a rock; the way of a ship in the heart of the sea; and the way of a man with a young woman.
20 ೨೦ ಜಾರಳ ನಡತೆಯು ಹೀಗೆಯೇ ಸರಿ, ಅವಳು ತಿಂದು ಬಾಯಿ ಒರೆಸಿಕೊಂಡು, “ನಾನು ತಪ್ಪುಮಾಡಲಿಲ್ಲವಲ್ಲವೆ” ಅಂದುಕೊಳ್ಳುವಳು.
Such is the way of an adulterous woman: she eateth, and wipeth her mouth, and saith, I have done no wrong.
21 ೨೧ ಮೂರರ ಭಾರದಿಂದ ಭೂಮಿಯು ಕಂಪಿಸುತ್ತದೆ, ಹೌದು, ನಾಲ್ಕರ ಹೊರೆಯನ್ನು ತಾಳಲಾರದು.
Under three things the earth trembleth, and under four which she cannot bear:
22 ೨೨ ಯಾವುವೆಂದರೆ, ಪಟ್ಟಕ್ಕೆ ಬಂದ ದಾಸನು, ಹೊಟ್ಟೆತುಂಬಿದ ನೀಚನು,
Under a servant when he becometh king, and a worthless fool when he hath eaten enough bread;
23 ೨೩ ಮದುವೆಯಾದ ಚಂಡಿಯು, ಸವತಿಯಾದ ತೊತ್ತು, ಇವೇ.
Under an odious woman when she is married, and a bond-woman when she dispossesseth her mistress.
24 ೨೪ ಭೂಮಿಯ ಮೇಲೆ ಅಧಿಕ ಜ್ಞಾನವುಳ್ಳ ನಾಲ್ಕು ಸಣ್ಣ ಜಂತುಗಳುಂಟು.
There are four which are the little ones of the earth, and they are nevertheless exceedingly wise:
25 ೨೫ ಇರುವೆಗಳು ದುರ್ಬಲಜಾತಿಯಾವಾದರೂ, ಸುಗ್ಗಿಯಲ್ಲಿ ತಮ್ಮ ಆಹಾರವನ್ನು ಸಿದ್ಧಮಾಡಿಕೊಳ್ಳುವವು.
The ants are a people not strong, therefore do they prepare in the summer their food;
26 ೨೬ ಬೆಟ್ಟದ ಮೊಲಗಳು ದೊಡ್ಡ ಜಾತಿಯಲ್ಲದಿದ್ದರೂ, ಬಂಡೆಗಳಲ್ಲಿ ತಮ್ಮ ಮನೆಗಳನ್ನು ಮಾಡಿಕೊಳ್ಳುವವು.
The conies are but a feeble people, therefore do they place on the rocks their houses;
27 ೨೭ ಮಿಡತೆಗಳಿಗೆ ಅರಸನಿಲ್ಲ, ಆದರೂ ಅವೆಲ್ಲಾ ದಂಡುದಂಡಾಗಿ ಹೊರಡುವವು.
The locusts have no king, and yet they go forth in troops altogether;
28 ೨೮ ಹಲ್ಲಿಯನ್ನು ಅಂಗೈಯಿಂದ ಹಿಡಿಯಬಹುದಾದರೂ, ಅದು ಅರಮನೆಗಳಲ್ಲಿ ವಾಸಮಾಡುವುದು.
The spider thou canst catch with [thy] hands, and yet she is in the palaces of a king.
29 ೨೯ ಗಂಭೀರಾಗಮನದ ಮೂರು ಪ್ರಾಣಿಗಳುಂಟು, ಹೌದು, ಗಂಭೀರಗತಿಯ ನಾಲ್ಕುಂಟು.
Three there are that have a stately step, and four, that are stately in going:
30 ೩೦ ಯಾವುದಕ್ಕೂ ಹೆದರಿ ಓರೆಯಾಗದ, ಮೃಗರಾಜನಾದ ಸಿಂಹ,
The lion, the mightiest among beasts, who turneth not round from before any one;
31 ೩೧ ಹೆಮ್ಮೆಯಿಂದ ನಡೆಯುವ ಹುಂಜ, ಹೋತವು ಸಹ, ಸೈನ್ಯಸಮೇತನಾದ ರಾಜ.
The light-legged greyhound, and the he-goat; and a king, against whom there is no rising up.
32 ೩೨ ನೀನು ಉಬ್ಬಿಕೊಂಡು ಮೂರ್ಖನಾಗಿ ನಡೆದಿದ್ದರೆ, ಅಥವಾ ದುರಾಲೋಚನೆಮಾಡಿದ್ದರೆ ಬಾಯಿಯ ಮೇಲೆ ಕೈಯಿಟ್ಟುಕೋ.
If thou hast become degraded by lifting up thyself, or if thou hast devised evil, put thy hand to thy mouth:
33 ೩೩ ಹಾಲು ಕಡೆಯುವುದರಿಂದ ಬೆಣ್ಣೆ, ಮೂಗು ಹಿಂಡುವುದರಿಂದ ರಕ್ತ, ಕೋಪಕಲಕುವುದರಿಂದ ಜಗಳ.
For the pressure of milk bringeth forth butter, and the pressure of the nose bringeth forth blood: so the pressure of wrath bringeth forth strife.