< ಜ್ಞಾನೋಕ್ತಿಗಳು 29 >
1 ೧ ಬಹಳವಾಗಿ ಗದರಿಸಿದರೂ ತಗ್ಗದವನು, ಏಳದ ಹಾಗೆ ಫಕ್ಕನೆ ಮುರಿದು ಬೀಳುವನು.
धेरै पटक हप्की पाएर पनि हठी हुने मानिस निको नहुने गरी एकै क्षणमा नष्ट हुने छ ।
2 ೨ ಶಿಷ್ಟರ ವೃದ್ಧಿ ಜನರಿಗೆ ಉಲ್ಲಾಸ, ದುಷ್ಟನ ಆಳ್ವಿಕೆ ಜನರಿಗೆ ನರಳಾಟ.
धर्मात्माहरूको वृद्धि हुँदा मानिसहरूले आनन्द मनाउँछन्, तर दुष्ट मानिस शासक बन्दा मानिसहरूले सुस्केरा हाल्छन् ।
3 ೩ ಜ್ಞಾನವನ್ನು ಪ್ರೀತಿಸುವವನು ತಂದೆಯನ್ನು ಹರ್ಷಗೊಳಿಸುವನು, ವೇಶ್ಯೆಯ ಸಂಗಡಿಗನು ಆಸ್ತಿಯನ್ನು ಹಾಳುಮಾಡಿಕೊಳ್ಳುವನು.
बुद्धिलाई प्रेम गर्नेले आफ्नो बुबालाई प्रसन्न तुल्याउँछ, तर वेश्याहरूको सङ्गत गर्नेले आफ्नो सम्पत्ति नष्ट पार्छ ।
4 ೪ ನ್ಯಾಯಪಾಲಕನಾದ ರಾಜನು ದೇಶವನ್ನು ವೃದ್ಧಿಗೆ ತರುವನು, ಅನ್ಯಾಯವಾಗಿ ತೆರಿಗೆಯನ್ನು ಕಸಕೊಳ್ಳುವವನು ದೇಶವನ್ನು ನಾಶಮಾಡುವನು.
राजाले न्यायद्वारा देश सुदृढ बनाउँछ, तर घुस लिनले देशलाई तहसनहस पार्छ ।
5 ೫ ನೆರೆಯವನೊಂದಿಗೆ ವಂಚನೆಯ ಸವಿನುಡಿಗಳನ್ನು ಆಡುವವನು, ಅವನ ಹೆಜ್ಜೆಗೆ ಬಲೆಯನ್ನೊಡ್ಡುವನು.
आफ्नो छिमेकीलाई फुर्क्याउनेले त्यसका खुट्टाका लागि जाल फिजाइरहेको हुन्छ ।
6 ೬ ಕೆಟ್ಟವನ ದುರ್ಮಾರ್ಗದಲ್ಲಿ ಉರುಲುಂಟು, ಒಳ್ಳೆಯವನು ಉಲ್ಲಾಸಗೊಂಡು ಹರ್ಷಧ್ವನಿಗೈಯುವನು.
खराब मानिसको पापमा पासो हुन्छ, तर धर्मात्माले गाएर आनन्द मनाउँछ ।
7 ೭ ಶಿಷ್ಟನು ಬಡವರ ನ್ಯಾಯವನ್ನು ತಿಳಿದಿರುವನು, ದುಷ್ಟನಿಗೆ ಅದನ್ನು ಗ್ರಹಿಸುವಷ್ಟು ವಿವೇಕವಿಲ್ಲ.
धर्मात्मालाई गरिबका अधिकारहरू थाहा हुन्छ, तर दुष्टले यस्तो ज्ञान बुझ्दैन ।
8 ೮ ಧರ್ಮನಿಂದಕರು ಪಟ್ಟಣಕ್ಕೆ ಬೆಂಕಿಯನ್ನು ಹತ್ತಿಸುವರು, ಜ್ಞಾನಿಗಳೋ ರೋಷಾಗ್ನಿಯನ್ನು ಆರಿಸುವರು.
खिल्ली उडाउनेहरूले सहरमा आगो लगाउँछन्, तर बुद्धिमान्हरूले क्रोधलाई पाखा लगाउँछ ।
9 ೯ ಮೂರ್ಖನ ಸಂಗಡ ಜ್ಞಾನಿಯು ವ್ಯಾಜ್ಯವಾಡುವಾಗ, ರೇಗಿದರೂ, ನಕ್ಕರೂ ಜಗಳವು ತೀರುವುದಿಲ್ಲ.
बुद्धिमान् मानिसले मूर्खसित तर्क-वितर्क गर्दा मूर्खले रिस प्रकट गरेर गिल्ला गर्छ र त्यहाँ चैन हुँदैन ।
10 ೧೦ ಕೊಲೆಪಾತಕರು ನಿರ್ದೋಷಿಯನ್ನು ದ್ವೇಷಿಸುವರು, ಯಥಾರ್ಥವಂತನ ಪ್ರಾಣಕ್ಕೂ ಹೊಂಚುಹಾಕುವರು.
रक्तपात गर्नेले खोटरहित मानिसलाई घृणा गर्छ, र सोझाहरूको ज्यान लिन खोज्छ ।
11 ೧೧ ಮೂಢನು ತನ್ನ ಕೋಪವನ್ನೆಲ್ಲಾ ತೋರಿಸುವನು, ಜ್ಞಾನಿಯು ತನ್ನ ಕೋಪವನ್ನು ತಡೆದು ಶಮನಪಡಿಸಿಕೊಳ್ಳುವನು.
मूर्खले आफ्ना सबै रिस प्रकट गर्छ, तर बुद्धिमान् मानिसले त्यसलाई थामेर शान्त हुन्छ ।
12 ೧೨ ಸುಳ್ಳಿಗೆ ಕಿವಿಗೊಡುವ ಅಧಿಪತಿಯ ಸೇವಕರೆಲ್ಲಾ ದುಷ್ಟರೇ.
शासकले झुटो कुरोलाई ध्यान दियो भने त्यसका सबै कर्मचारी दुष्ट हुने छन् ।
13 ೧೩ ತಗ್ಗುವವನು, ತಗ್ಗಿಸುವವನು ಸ್ಥಿತಿಯಲ್ಲಿ ಎದುರುಬದುರಾಗಿದ್ದಾರೆ, ಯೆಹೋವನೇ ಅವರಿಬ್ಬರ ಕಣ್ಣುಗಳಿಗೆ ಕಳೆಕೊಟ್ಟವನು.
गरिब र थिचोमिचो गर्ने मानिस उस्तै हुन्, किनकि परमप्रभुले नै दुवैका आँखामा दृष्टि दिनुहुन्छ ।
14 ೧೪ ಬಡವರನ್ನು ನ್ಯಾಯವಾಗಿ ಆಳ್ವಿಕೆ ಮಾಡುವ ರಾಜನ ಸಿಂಹಾಸನವು ಶಾಶ್ವತವು.
राजाले सत्यताद्वारा गरिबको न्याय गर्यो भने तिनको सिंहासन सदाको लागि स्थिर रहने छ ।
15 ೧೫ ಬೆತ್ತ ಮತ್ತು ಬೆದರಿಕೆಗಳಿಂದ ಜ್ಞಾನವುಂಟಾಗುವುದು, ಶಿಕ್ಷಿಸದೆ ಬಿಟ್ಟ ಹುಡುಗನು ತಾಯಿಯ ಮಾನವನ್ನು ಕಳೆಯುವನು.
लट्ठी र सुधारले बुद्धि दिन्छन्, तर अनुशासनविनाको बालकले आफ्नी आमालाई लाजमा पार्छ ।
16 ೧೬ ದುಷ್ಟರ ವೃದ್ಧಿ ಪಾಪವೃದ್ಧಿ, ಶಿಷ್ಟರೋ ಅವರ ಬೀಳುವಿಕೆಯನ್ನು ಕಣ್ಣಾರೆ ನೋಡುವರು.
दुष्ट मानिसहरू शक्तिमा पुग्दा अधर्मको वृद्धि हुन्छ, तर धर्मी मानिसहरू ती दुष्ट मानिसहरूको पतन देख्ने छन् ।
17 ೧೭ ಮಗನನ್ನು ಶಿಕ್ಷಿಸು, ಅವನು ನಿನ್ನನ್ನು ಸಂತೋಷಪಡಿಸುವನು, ಅವನೇ ನಿನ್ನ ಆತ್ಮಕ್ಕೆ ಮೃಷ್ಟಾನ್ನವಾಗುವನು.
आफ्नो छोरोलाई अनुशासनमा राख्, र त्यसले तैलाई चैन दिने छ; त्यसले तेरो जीवनमा आनन्द ल्याउने छ ।
18 ೧೮ ದೇವದರ್ಶನ ಇಲ್ಲದಿರುವಲ್ಲಿ ಜನರು ನಾಶವಾಗುವರು, ಧರ್ಮೋಪದೇಶವನ್ನು ಕೈಕೊಳ್ಳುವವನೋ ಧನ್ಯನಾಗುವನು.
जहाँ अगमवाणीय दर्शन हुँदैन, त्यहाँ मानिसहरू भाँडिन्छन्, तर व्यवस्था पालन गर्नेचाहिँ धन्यको हो ।
19 ೧೯ ಆಳು ಮಾತಿನಿಂದ ಮಾತ್ರ ಶಿಕ್ಷಿತನಾಗಲಾರನು, ಅವನು ತಿಳಿದುಕೊಂಡರೂ ಗಮನಿಸನು.
कुराले मात्र नोकरलाई सुधार्न सकिँदैन, किनकि त्यसले बुझे तापनि त्यहाँ कुनै प्रतिक्रिया हुँदैन ।
20 ೨೦ ದುಡುಕಿ ಮಾತನಾಡುವವನನ್ನು ನೋಡು, ಅಂಥವನಿಗಿಂತಲೂ ಮೂಢನ ವಿಷಯದಲ್ಲಿ ಹೆಚ್ಚು ನಿರೀಕ್ಷೆಯನ್ನು ಇಡಬಹುದು.
के आफ्नो वचनमा हतारिएर बोल्ने मानिसलाई तँ देख्छस्? त्यसको लागि भन्दा त मूर्खको लागि बढी आशा हुन्छ ।
21 ೨೧ ಆಳನ್ನು ಬಾಲ್ಯದಿಂದ ಕೋಮಲವಾಗಿ ಸಾಕಿದರೆ, ತರುವಾಯ ಅವನು ಎದುರುಬೀಳುವನು.
जसले आफ्नो नोकरलाई आफ्नो बाल्यावस्थादेखि पुल्पुल्याउँछ, त्यसले अन्त्यमा कष्ट भोग्ने छ ।
22 ೨೨ ಕೋಪಿಷ್ಠನು ಜಗಳವನ್ನೆಬ್ಬಿಸುವನು, ಕ್ರೋಧಶೀಲನು ದೋಷಭರಿತನು.
रिसाएको मानिसले द्वन्द्व निम्त्याउँछ, र झोँकको मालिकले धेरै पाप गर्छ ।
23 ೨೩ ಗರ್ವವು ಮನುಷ್ಯನನ್ನು ದೀನಸ್ಥಿತಿಗೆ ತರುವುದು, ದೀನಮನಸ್ಸುಳ್ಳವನು ಮಾನವನ್ನು ಪಡೆಯುವನು.
मानिसले घमण्डले त्यसलाई तल खसाल्छ, तर विनम्र आत्मा भएको मानिसलाई आदर दिइने छ ।
24 ೨೪ ಕಳ್ಳನೊಂದಿಗೆ ಪಾಲುಗಾರನಾದವನು ತನಗೆ ತಾನೇ ಶತ್ರು, ಆಣೆಯಿಡುವುದನ್ನು ಕೇಳಿದರೂ ಸುಮ್ಮನಿರುವನು.
चोरसित बाँडचुँड गर्नेले आफ्नै जीवनलाई घृणा गर्छ । त्यसले श्राप सुन्छ र केही भन्दैन ।
25 ೨೫ ಮನುಷ್ಯನ ಭಯ ಉರುಲು, ಯೆಹೋವನ ಭರವಸ ಉದ್ಧಾರ.
मानिसको डर पासोजस्तै हो, तर परमप्रभुमाथि भरोसा गर्नेचाहिँ सुरक्षित हुने छ ।
26 ೨೬ ಅನೇಕರು ನ್ಯಾಯಾಧಿಪತಿಯ ಕಟಾಕ್ಷವನ್ನು ಕೋರುವರು, ನ್ಯಾಯತೀರ್ಪು ಯೆಹೋವನಿಂದಲೇ ಆಗುವುದು.
शासकको मुहार खोज्नेहरू धेरै छन्, तर मानिसको लागि न्याय परमप्रभुबाट नै आउँछ ।
27 ೨೭ ಶಿಷ್ಟರಿಗೆ ದುರ್ಮಾರ್ಗಿಯು ಅಸಹ್ಯನು, ದುಷ್ಟರಿಗೆ ಸರಳಮಾರ್ಗಿಯು ಅಸಹ್ಯನು.
अन्यायी मानिस धर्मात्माको लागि घृणित हुन्छ, र सोझो चाल भएको मानिस दुष्टको लागि घृणित हुन्छ ।