< ಜ್ಞಾನೋಕ್ತಿಗಳು 22 >
1 ೧ ಬಹುಧನಕ್ಕಿಂತಲೂ ಒಳ್ಳೆಯ ಹೆಸರು ಉತ್ತಮ, ಬೆಳ್ಳಿ, ಬಂಗಾರಕ್ಕಿಂತಲೂ ಸತ್ಕೀರ್ತಿಯು ಅಮೂಲ್ಯ.
Mbiri yabwino ndi yofunika kuposa chuma chambiri; kupeza kuyanja nʼkwabwino kuposa siliva kapena golide.
2 ೨ ಬಡವರು ಮತ್ತು ಸಿರಿವಂತರು ಸ್ಥಿತಿಯಲ್ಲಿ ಎದುರುಬದುರಾಗಿದ್ದಾರೆ, ಯೆಹೋವನೇ ಅವರನ್ನೆಲ್ಲಾ ಸೃಷ್ಟಿಸಿದನು.
Wolemera ndi wosauka ndi ofanana; onsewa anawalenga ndi Yehova.
3 ೩ ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು, ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.
Munthu wochenjera akaona choopsa amabisala, koma munthu wopusa amangopitirira ndipo amadzanongʼoneza bondo.
4 ೪ ಧನ, ಮಾನ ಮತ್ತು ಜೀವಗಳು ದೀನಭಾವಕ್ಕೂ, ಯೆಹೋವನ ಭಯಕ್ಕೂ ಫಲ.
Mphotho ya munthu wodzichepetsa ndi woopa Yehova ndi chuma, ulemu ndi moyo.
5 ೫ ವಕ್ರಬುದ್ಧಿಯುಳ್ಳವನ ಮಾರ್ಗದಲ್ಲಿ ಮುಳ್ಳುಗಳೂ, ಉರುಲುಗಳೂ ತುಂಬಿವೆ, ತನ್ನನ್ನು ರಕ್ಷಿಸಿಕೊಳ್ಳುವವನು ಅವುಗಳಿಗೆ ದೂರವಾಗಿರುವನು.
Mʼnjira za anthu oyipa muli minga ndi misampha, koma amene amasala moyo wake adzazipewa zonsezo.
6 ೬ ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಮಕ್ಕಳನ್ನು ಶಿಕ್ಷಿಸು, ಮುಪ್ಪಿನಲ್ಲಿಯೂ ಓರೆಯಾಗರು.
Mwana muzimuphunzitsa njira yake, ndipo akadzakalamba sadzachokamo.
7 ೭ ಬಲ್ಲಿದನು ಬಡವನಿಗೆ ಒಡೆಯ, ಸಾಲಗಾರನು ಸಾಲಕೊಟ್ಟವನಿಗೆ ಸೇವಕ.
Wolemera amalamulira wosauka, ndipo wokongola zinthu amakhala kapolo wa womukongozayo.
8 ೮ ಕೆಟ್ಟತನವನ್ನು ಬಿತ್ತುವವನು ಕೇಡನ್ನೇ ಕೊಯ್ಯುವನು, ಹೆಮ್ಮೆಯಿಂದ ಹಿಡಿದ ದಂಡವು ಅವನ ಕೈಯಿಂದ ಬಿದ್ದುಹೋಗುವುದು.
Amene amafesa zoyipa amakolola mavuto, ndipo ndodo yaukali wake idzathyoka.
9 ೯ ದಯಾದೃಷ್ಟಿಯವನು ಆಶೀರ್ವಾದವನ್ನು ಪಡೆಯುವನು, ತನ್ನ ಆಹಾರವನ್ನು ಬಡವರಿಗೆ ಕೊಡುತ್ತಾನಲ್ಲವೆ.
Amene ali ndi diso lachifundo adzadalitsika, pakuti iye amagawana chakudya chake ndi anthu osauka.
10 ೧೦ ಧರ್ಮನಿಂದಕನನ್ನು ಓಡಿಸಿಬಿಟ್ಟರೆ ಜಗಳವು ತೊಲಗುವುದು, ಹೌದು, ವ್ಯಾಜ್ಯವು ತೀರಿ ಅವಮಾನವು ಇಲ್ಲವಾಗುವುದು.
Chotsani munthu wonyoza, ndipo kukangana kudzatha; mapokoso ndi zonyoza zidzaleka.
11 ೧೧ ಹೃದಯಶುದ್ಧಿಯನ್ನು ಅಪೇಕ್ಷಿಸುವ ಮತ್ತು ಸವಿಮಾತನಾಡುವ ಮನುಷ್ಯನಿಗೆ ರಾಜನ ಸ್ನೇಹವು ದೊರೆಯುವುದು.
Amene amakonda kukhala woyera mtima ndi kumayankhula mawu abwino, adzakhala bwenzi la mfumu.
12 ೧೨ ಯೆಹೋವನ ಕಣ್ಣು ತಿಳಿವಳಿಕೆಗೆ ಕಾವಲು, ಆತನು ವಂಚಕನ ಮಾತುಗಳನ್ನು ಕೆಡವಿಬಿಡುವನು.
Maso a Yehova amakhala pa anthu odziwa bwino zinthu, koma Iye adzalepheretsa mawu a anthu osakhulupirika.
13 ೧೩ “ಹೊರಗೆ ಸಿಂಹವಿದೆ, ನನ್ನನ್ನು ಬೀದಿಯಲ್ಲಿ ಕೊಂದ್ದಿತು” ಎಂಬುದು ಸೋಮಾರಿಯ ನೆವ.
Munthu waulesi amati, “Kunjaku kuli mkango. Ine ndidzaphedwa mʼmisewu!”
14 ೧೪ ಜಾರಸ್ತ್ರೀಯ ಬಾಯಿ ಆಳವಾದ ಹಳ್ಳ, ಯೆಹೋವನಿಗೆ ಸಿಟ್ಟನ್ನೆಬ್ಬಿಸಿದವನು ಅದರಲ್ಲಿ ಬೀಳುವನು.
Pakamwa pa mkazi wachigololo pali ngati dzenje lozama; amene Yehova wamukwiyira adzagwamo.
15 ೧೫ ಮೂರ್ಖತನವು ಮಕ್ಕಳ ಮನಸ್ಸಿಗೆ ಸಹಜ, ಆದರೆ ಶಿಕ್ಷಕನ ಬೆತ್ತವು ಅದನ್ನು ತೊಲಗಿಸುವುದು.
Uchitsiru umakhala mu mtima mwa mwana, koma ndodo yomulangira mwanayo idzachotsa uchitsiruwo.
16 ೧೬ ಸ್ವಂತ ಲಾಭಕ್ಕಾಗಿ ಬಡವರನ್ನು ಹಿಂಸಿಸುವವನಿಗೂ, ಸಿರಿವಂತರಿಗೆ ಲಂಚಕೊಡುವವನಿಗೂ ಕೊರತೆಯೇ ಗತಿ.
Amene amapondereza anthu osauka kuti awonjezere chuma chake, ndiponso amene amapereka mphatso kwa anthu olemera onsewa adzasauka.
17 ೧೭ ಕಿವಿಗೊಟ್ಟು ಜ್ಞಾನಿಗಳ ಮಾತುಗಳನ್ನು ಕೇಳು, ನನ್ನ ಜ್ಞಾನಬೋಧೆಗೆ ಮನಸ್ಸು ಕೊಡು.
Utchere khutu lako ndipo umvere mawu anzeru; uyike mtima wako pa zimene ndikukuphunzitsa kuti udziwe.
18 ೧೮ ನೀನು ಆ ಮಾತುಗಳನ್ನು ಅಂತರಂಗದಲ್ಲಿ ಕಾಪಾಡುತ್ತಾ, ತುಟಿಗಳಲ್ಲಿ ಸಿದ್ಧಪಡಿಸಿಕೊಂಡಿದ್ದರೆ ಎಷ್ಟೋ ರಮ್ಯ.
Zidzakhala zokondweretsa ngati uzisunga mu mtima mwako ndi wokonzeka kuziyankhula.
19 ೧೯ ನೀನು ಯೆಹೋವನಲ್ಲಿ ಭರವಸವಿಡಬೇಕೆಂದು, ಅವುಗಳನ್ನು ಈ ದಿನ ನಿನಗೇ ತಿಳಿಯಪಡಿಸಿದ್ದೇನೆ.
Ndakuphunzitsa zimenezi lero koma makamaka uziopa Yehova.
20 ೨೦ ಸತ್ಯವಚನಗಳು ಎಷ್ಟೋ ಯಥಾರ್ಥವೆಂದು ನೀನು ತಿಳಿದುಕೊಂಡು, ನಿನ್ನನ್ನು ಕಳುಹಿಸಿದವರಿಗೆ ಸತ್ಯವಚನಗಳನ್ನೇ ಅರಿಕೆ ಮಾಡುವಂತೆ,
Kodi suja ndinakulembera malangizo makumi atatu okuchenjeza ndi okupatsa nzeru,
21 ೨೧ ಸತ್ಯ, ತಿಳಿವಳಿಕೆಯ ವಿಷಯವಾಗಿ ಇದಕ್ಕೆ ಮೊದಲೇ ನಿನಗಾಗಿ ಬರೆದಿರುವೆನಲ್ಲಾ.
malangizo okudziwitsa zolungama ndi zoona ndi kuti ukawayankhe zoona amene akutumawo?
22 ೨೨ ಬಡವರಿಗೆ ದಿಕ್ಕಿಲ್ಲವೆಂದು ತಿಳಿದು ಅವರನ್ನು ಸೂರೆ ಮಾಡಬೇಡ, ನ್ಯಾಯಸ್ಥಾನದಲ್ಲಿ ದರಿದ್ರರನ್ನು ತುಳಿಯಬೇಡ.
Mʼmphawi usamubere chifukwa ndi osauka, ndipo usawapondereze anthu osowa mʼbwalo la milandu,
23 ೨೩ ಯೆಹೋವನೇ ಅವರ ವ್ಯಾಜ್ಯವನ್ನು ನಡೆಸಿ, ಹಾಳುಮಾಡಿದವರ ಜೀವವನ್ನು ಹಾಳುಮಾಡುವನು.
pakuti Yehova adzawateteza pa mlandu wawo ndipo adzalanda moyo onse amene amawalanda iwo.
24 ೨೪ ಕೋಪಿಷ್ಠನ ಸಂಗಡ ಸ್ನೇಹ ಬೆಳಸಬೇಡ, ಸಿಟ್ಟುಗಾರನ ಸಹವಾಸ ಮಾಡಬೇಡ.
Usapalane naye ubwenzi munthu wosachedwa kupsa mtima ndipo usayanjane ndi munthu amene sachedwa kukwiya
25 ೨೫ ಮಾಡಿದರೆ ಅವನ ದುರ್ನಡತೆಯನ್ನು ಅನುಸರಿಸಿ, ನಿನ್ನ ಆತ್ಮವನ್ನು ಉರುಲಿಗೆ ಸಿಕ್ಕಿಸಿಕೊಳ್ಳುವಿ ನೋಡಿಕೋ.
kuopa kuti iwe ungadzaphunzire njira zake ndi kukodwa mu msampha.
26 ೨೬ ಮಾತುಕೊಟ್ಟು ಸಾಲಕ್ಕೆ ಹೊಣೆಯಾಗುವವರಲ್ಲಿ, ನೀನೂ ಒಬ್ಬನಾಗಬೇಡ,
Usakhale munthu wopereka chikole kapena kukhala mboni pa ngongole;
27 ೨೭ ಆ ಸಾಲವನ್ನು ತೀರಿಸುವುದಕ್ಕೆ ನಿನ್ನಿಂದಾಗದಿರಲು, ಸಾಲಕೊಟ್ಟವನು ನಿನ್ನ ಕೆಳಗಿನ ಹಾಸಿಗೆಯನ್ನು ಕಿತ್ತುಹಾಕುವುದು ಬೇಕೇ?
ngati ulephera kupeza njira yolipirira adzakulanda ngakhale bedi lako lomwe.
28 ೨೮ ನಿನ್ನ ಪೂರ್ವಿಕರು ಹಾಕಿದ ಪೂರ್ವಕಾಲದ ಮೇರೆಯನ್ನು ದಾಟಬೇಡ.
Usasunthe mwala wamʼmalire akalekale amene anayikidwa ndi makolo ako.
29 ೨೯ ತನ್ನ ಕೆಲಸದಲ್ಲಿ ಚಾತುರ್ಯವುಳ್ಳವನನ್ನು ನೋಡು, ಇಂಥವನು ರಾಜನ ಸನ್ನಿಧಿಯಲ್ಲಿ ನಿಲ್ಲುವನೇ ಹೊರತು, ಸಾಮಾನ್ಯ ಜನರ ಮುಂದೆ ಅಲ್ಲ.
Kodi ukumuona munthu waluso pa ntchito yake? Iye adzatumikira mafumu; sadzatumikira anthu wamba.