< ಜ್ಞಾನೋಕ್ತಿಗಳು 16 >
1 ೧ ಹೃದಯದ ಸಂಕಲ್ಪವು ಮನುಷ್ಯನ ವಶವು, ತಕ್ಕ ಉತ್ತರಕೊಡುವ ಶಕ್ತಿಯು ಯೆಹೋವನಿಂದಾಗುವುದು.
हृदयका योजनाहरू मानिसका हुन्, तर जिब्रोको जवाफ परमप्रभुबाट नै आउँछ ।
2 ೨ ಮನುಷ್ಯನ ನಡತೆಯೆಲ್ಲಾ ಸ್ವಂತ ದೃಷ್ಟಿಗೆ ಶುದ್ಧವಾಗಿದೆ, ಯೆಹೋವನು ಅಂತರಂಗವನ್ನೇ ಪರೀಕ್ಷಿಸುವನು.
मानिसका सबै मार्ग उसको आफ्नै दृष्टिमा शुद्ध छन्, तर परमप्रभुले अभिप्रायहरू जोख्नुहुन्छ ।
3 ೩ ನಿನ್ನ ಕಾರ್ಯಭಾರವನ್ನು ಯೆಹೋವನಿಗೆ ವಹಿಸಿದರೆ, ನಿನ್ನ ಉದ್ದೇಶಗಳು ಸಫಲವಾಗುವವು.
आफ्ना कामहरू परमप्रभुमा सुम्प, र तिम्रा योजनाहरू सफल हुने छन् ।
4 ೪ ಯೆಹೋವನು ಒಂದೊಂದನ್ನೂ ತಕ್ಕ ಗುರಿಯಿಂದ ಸೃಷ್ಟಿಸಿದ್ದಾನೆ, ಹೌದು, ಕೇಡಿನ ದಿನಕ್ಕಾಗಿ ಕೆಡುಕರನ್ನು ಉಂಟುಮಾಡಿದ್ದಾನೆ.
परमप्रभुले हरेक थोक यसको आफ्नो उद्धेश्यको लागि बनाउनुभएको छ । उहाँले दुष्टहरूलाई समेत विनाशको दिनको लागि राख्नुभएको छ ।
5 ೫ ಅಹಂಕಾರಿಗಳೆಲ್ಲಾ ಯೆಹೋವನಿಗೆ ಅಸಹ್ಯ, ಅವರಿಗೆ ದಂಡನೆ ಖಂಡಿತ.
अहङ्कारी हृदय भएको हरेकलाई परमप्रभु घृणा गर्नुहुन्छ, तर यो निश्चित छ, कि तिनीहरू दण्डविना उम्कने छैनन् ।
6 ೬ ಕೃಪಾಸತ್ಯತೆಗಳಿಂದ ಪಾಪನಿವಾರಣೆ, ಯೆಹೋವನ ಭಯಭಕ್ತಿಯಿಂದ ಹಾನಿನಿವಾರಣೆ.
करारको विश्वसनियता र भरोसाद्वारा अधर्मको प्रायश्चित्त हुन्छ, र परमप्रभुको भयद्वारा मानिसहरू खराबीबाट तर्कने छन् ।
7 ೭ ಯೆಹೋವನು ಒಬ್ಬನ ನಡತೆಗೆ ಮೆಚ್ಚಿದರೆ, ಅವನ ಶತ್ರುಗಳನ್ನೂ ಮಿತ್ರರನ್ನಾಗಿ ಮಾಡುವನು.
जब मानिसका मार्गहरूले परमप्रभुलाई खुसी पार्छन्, तब उहाँले त्यसका शत्रुहरूलाई पनि त्यससित मिलापमा राख्नुहुने छ ।
8 ೮ ಅನ್ಯಾಯದಿಂದ ಗಳಿಸಿದ ಬಹು ಧನಕ್ಕಿಂತಲೂ, ನ್ಯಾಯದಿಂದ ಕೂಡಿಸಿದ ಅಲ್ಪ ಧನವೇ ಲೇಸು.
अन्यायसित कमाएको धेरै धन-सम्पत्तिभन्दा बरु ठिकसित कमाएको थोरै नै उत्तम हुन्छ ।
9 ೯ ಮನುಷ್ಯನು ತನ್ನ ಮನದಂತೆ ದಾರಿಯನ್ನು ಆರಿಸಿಕೊಂಡರೂ, ಯೆಹೋವನೇ ಅವನಿಗೆ ಗತಿಯನ್ನು ಏರ್ಪಡಿಸುವನು.
मानिसले आफ्नो हृदयमा योजना बुन्छ, तर परमप्रभुले नै त्यसका कदमहरू निर्धारण गर्नुहुन्छ ।
10 ೧೦ ರಾಜನ ತುಟಿಗಳಲ್ಲಿ ದೈವೋಕ್ತಿ, ನ್ಯಾಯತೀರಿಸುವುದರಲ್ಲಿ ಅವನ ಬಾಯಿ ತಪ್ಪಿಹೋಗದು.
राजाको ओठमा अन्तर्ज्ञानयुक्त निर्णयहरू हुन्छन् । तिनको मुखले न्यायलाई धोका दिनुहुँदैन ।
11 ೧೧ ನ್ಯಾಯದ ಅಳತೆ ಮತ್ತು ತಕ್ಕಡಿಗಳು ಯೆಹೋವನ ಏರ್ಪಾಡು, ಚೀಲದಲ್ಲಿನ ತೂಕದಕಲ್ಲುಗಳೆಲ್ಲಾ ಆತನ ಕೈಕೆಲಸವೇ.
इमानदार तराजु परमप्रभुबाट आउँछ । थैलीमा भएका सबै ढक उहाँका काम हुन् ।
12 ೧೨ ರಾಜರು ಸಿಂಹಾಸನಕ್ಕೆ ಧರ್ಮವೇ ಆಧಾರವೆಂದು ತಿಳಿದು, ಅಧರ್ಮವನ್ನಾಚರಿಸಲು ಅಸಹ್ಯಪಡುವರು.
राजाले दुष्ट कामहरू गर्दा त्यसलाई तुच्छ ठानिनुपर्छ, किनकि ठिक गरेर नै सिंहासन स्थापित हुन्छ ।
13 ೧೩ ರಾಜರು ಸತ್ಯದ ತುಟಿಗಳನ್ನು ಮೆಚ್ಚುವರು, ಯಥಾರ್ಥವಾದಿಯನ್ನು ಪ್ರೀತಿಸುವರು.
ठिक बोल्ने ओठमा राजा आनन्दित हुन्छ, र सत्य बोल्ने व्यक्तिलाई तिनी प्रेम गर्छन् ।
14 ೧೪ ರಾಜನ ಕೋಪ ಮೃತ್ಯುವಿನ ದೂತ, ಜಾಣನು ಅದನ್ನು ಶಮನಪಡಿಸುವನು.
राजाको क्रोध मृत्युको दूत हो, तर बुद्धिमान् मानिसले तिनको रिसलाई शान्त पार्ने कोसिस गर्छ ।
15 ೧೫ ಪ್ರಭುವಿನ ಮುಖಪ್ರಸನ್ನತೆ ಜೀವ, ಆತನ ದಯೆ ಮುಂಗಾರುಮುಗಿಲು.
राजाको मुहारको ज्योतिमा जीवन हुन्छ, र तिनको निगाह वसन्त ऋतुमा झरी ल्याउने बादलजस्तै हो ।
16 ೧೬ ಬಂಗಾರಕ್ಕಿಂತಲೂ ಜ್ಞಾನವನ್ನು ಪಡೆಯುವುದು ಎಷ್ಟೋ ಮೇಲು, ಬೆಳ್ಳಿಗಿಂತಲೂ ವಿವೇಕವನ್ನು ಹೊಂದುವುದು ಲೇಸು.
सुनभन्दा बुद्धि प्राप्त गर्नु र चाँदीभन्दा समझशक्ति प्राप्त गर्नु उत्तम हुन्छ ।
17 ೧೭ ಸತ್ಯವಂತನ ರಾಜಮಾರ್ಗ ಹಾನಿಗೆ ದೂರ, ತನ್ನ ನಡತೆಯನ್ನು ಗಮನಿಸುವವನು ತನ್ನ ಆತ್ಮವನ್ನು ಕಾಯುವನು.
धर्मी मानिसहरूको लोकमार्ग खराबीबाट अलग रहन्छ । आफ्नो जीवनको रक्षा गर्नेले आफ्नो मार्गको रखवाली गर्छ ।
18 ೧೮ ಗರ್ವದಿಂದ ಭಂಗ, ಉಬ್ಬಿನಿಂದ ದೊಬ್ಬು.
विनाशअगि घमण्ड आउँछ, र पतनअगि हठी आत्मा आउँछ ।
19 ೧೯ ಸೊಕ್ಕಿನವರ ಸಂಗಡ ಸೂರೆಯನ್ನು ಹಂಚಿಕೊಳ್ಳುವುದಕ್ಕಿಂತಲೂ, ದೀನರ ಸಂಗಡ ದೈನ್ಯದಿಂದಿರುವುದು ವಾಸಿ.
घमण्डी मानिसहरूलाई लुटको माल बाँड्नुभन्दा बरु गरिब मानिसहरूका बिचमा विनम्र हुनु उत्तम हुन्छ ।
20 ೨೦ ದೇವರ ವಾಕ್ಯವನ್ನು ಸ್ಮರಿಸುವವನು ಸುಕ್ಷೇಮವನ್ನು ಪಡೆಯುವನು, ಯೆಹೋವನಲ್ಲಿ ಭರವಸವಿಡುವವನು ಭಾಗ್ಯವಂತನು.
सिकाइएको शिक्षामा मनन गर्नेले असल कुरो पाउने छ, र परमप्रभुमाथि भरोसा गर्नेहरू आशिषित् हुने छन् ।
21 ೨೧ ಜ್ಞಾನಹೃದಯರಿಗೆ ಜಾಣರೆಂಬ ಬಿರುದು ಬರುವುದು, ಸವಿತುಟಿಯಿಂದ ಉಪದೇಶ ಶಕ್ತಿಯು ಹೆಚ್ಚುವುದು.
हृदयमा बुद्धिमान् हुनेलाई विवेकशील भनिन्छ, र मिठा बोलीवचनले सिकाउने क्षमताको विकास गर्छ ।
22 ೨೨ ವಿವೇಕಿಗೆ ವಿವೇಕವೇ ಜೀವದ ಬುಗ್ಗೆ, ಮೂರ್ಖನಿಗೆ ಮೂರ್ಖತನವೇ ದಂಡನೆ.
समझशक्ति भएको व्यक्तिको लागि त्यो जीवनको फुहारा हो, तर मूर्खहरूको अर्ती नै तिनीहरूको मूर्खता हो ।
23 ೨೩ ಜ್ಞಾನಿಯ ಹೃದಯವು ಅವನ ಬಾಯಿಗೆ ಜಾಣತನವನ್ನೂ, ಅವನ ತುಟಿಗಳಿಗೆ ಉಪದೇಶ ಶಕ್ತಿಯನ್ನೂ ಹೆಚ್ಚಿಸುವುದು.
बुद्धिमान् व्यक्तिको हृदयले उसको मुखलाई अन्तर्दृष्टि प्रदान गर्छ, र उसको ओठमा विश्वसनीयता थप्छ ।
24 ೨೪ ಸವಿನುಡಿಯು ಜೇನುಕೊಡ, ಅದು ಆತ್ಮಕ್ಕೆ ಸಿಹಿ, ಎಲುಬಿಗೆ ಕ್ಷೇಮ.
मिठा वचनहरू महका चाकाजस्ता हुन्, जुन प्राणको लागि मिठो हुन्छ, र हड्डीहरूका लागि चङ्गाइ हुन्छ ।
25 ೨೫ ಮನುಷ್ಯನ ದೃಷ್ಟಿಗೆ ಸರಳವಾಗಿ ತೋರುವ ಒಂದು ದಾರಿಯುಂಟು, ಕಟ್ಟಕಡೆಗೆ ಅದು ಮರಣಮಾರ್ಗವೇ.
कुनै बाटो मानिसलाई सिधाजस्तो लाग्ला, तर अन्त्यमा त्यसले मृत्युमा पुर्याउँछ ।
26 ೨೬ ದುಡಿಯುವವನಿಗೆ ಅವನ ಹೊಟ್ಟೆಯೇ ದುಡಿಯುವಂತೆ ಮಾಡುವುದು, ದುಡಿಯಲಿಕ್ಕೆ ಅವನ ಬಾಯೇ ಅವನನ್ನು ಒತ್ತಾಯ ಮಾಡುವುದು.
परिश्रमीको पेटले नै त्यसलाई काम गर्न लगाउँछ । त्यसको भोकले त्यसलाई अभिप्रेरित गर्छ ।
27 ೨೭ ನೀಚನು ಕೇಡೆಂಬ ಕುಣಿಯನ್ನು ತೋಡುತ್ತಾನೆ, ಅವನ ಮಾತುಗಳು ಬೆಂಕಿಯ ಉರಿಯಂತಿದೆ.
बेकम्मा मानिसले खराबीको खाल्डो खन्छ, र त्यसको बोलीवचन पोल्ने आगोझैँ हुन्छ ।
28 ೨೮ ತುಂಟನು ಜಗಳ ಬಿತ್ತುತ್ತಾನೆ, ಚಾಡಿಕೋರನು ಮಿತ್ರರನ್ನು ಅಗಲಿಸುತ್ತಾನೆ.
टेडो मानिसले द्वन्द्व निम्त्याउँछ, र कुरा काट्नाले घनिष्ठ मित्रहरूमा पनि फाटो आउँछ ।
29 ೨೯ ಬಲಾತ್ಕಾರಿಯು ನೆರೆಯವನನ್ನು ಮರುಳುಗೊಳಿಸಿ, ದುರ್ಮಾರ್ಗಕ್ಕೆ ಎಳೆಯುವನು.
हिंसा गर्ने मानिसले आफ्नो छिमेकीलाई झुट बोल्छ, र त्यसलाई बेठिक मार्गमा लैजान्छ ।
30 ೩೦ ಕಣ್ಣನ್ನು ಮುಚ್ಚಿಕೊಳ್ಳುವವನು ಕುಯುಕ್ತಿಯನ್ನು ಕಲ್ಪಿಸುವನು, ತುಟಿಯನ್ನು ಕಚ್ಚುವವನು ಕೇಡನ್ನು ಸಾಧಿಸುವನು.
द्वेषपूर्ण आँखा झिम्क्याउनेले टेडो षड्यन्त्र रचिरहेको हुन्छ । आफ्नो ओठ लेब्र्याउनेले खराबी ल्याउँछ ।
31 ೩೧ ನರೆಗೂದಲೇ ಸುಂದರ ಕಿರೀಟವು, ಅದು ಧರ್ಮಮಾರ್ಗದಲ್ಲಿ ದೊರಕುವುದು.
फुलेको कपाल शोभाको मुकुट हो । ठिक तरिकाले जिएर यसलाई प्राप्त गर्न सकिन्छ ।
32 ೩೨ ದೀರ್ಘಶಾಂತನು ಶೂರನಿಗಿಂತಲೂ ಶ್ರೇಷ್ಠ, ತನ್ನನ್ನು ಆಳುವವನು ಪಟ್ಟಣವನ್ನು ಗೆದ್ದವನಿಗಿಂತಲೂ ಬಲಿಷ್ಠ.
योद्धा हुनुभन्दा बरु रिसाउनमा धिमा हुनु उत्तम हुन्छ, र आफ्नो आत्मालाई नियन्त्रण गर्नेचाहिँ सहरमाथि विजयी हासिल गर्नेभन्दा बलियो हुन्छ ।
33 ೩೩ ಮಡಲಿನಲ್ಲಿ ಚೀಟು ಹಾಕಬಹುದು, ಅದರ ತೀರ್ಪು ಯೆಹೋವನದೇ.
सप्कोमा चिट्ठा त हालिन्छ, तर निर्णयचाहिँ परमप्रभुबाट नै आउँछ ।