< ಫಿಲಿಪ್ಪಿಯವರಿಗೆ ಬರೆದ ಪತ್ರಿಕೆ 1 >

1 ಕ್ರಿಸ್ತ ಯೇಸುವಿನ ದಾಸರಾದ ಪೌಲ ಮತ್ತು ತಿಮೊಥೆಯರು, ಫಿಲಿಪ್ಪಿಯದಲ್ಲಿ ಕ್ರಿಸ್ತ ಯೇಸುವಿನ ಮೂಲಕ ದೇವಜನರಾಗಿರುವವರೆಲ್ಲರಿಗೂ ಮತ್ತು ಅವರೊಂದಿಗಿರುವ ಸಭಾಧ್ಯಕ್ಷರಿಗೂ ಹಾಗೂ ಸಭಾಸೇವಕರಿಗೂ ಬರೆಯುವುದೇನೆಂದರೆ,
ಪೌಲತೀಮಥಿನಾಮಾನೌ ಯೀಶುಖ್ರೀಷ್ಟಸ್ಯ ದಾಸೌ ಫಿಲಿಪಿನಗರಸ್ಥಾನ್ ಖ್ರೀಷ್ಟಯೀಶೋಃ ಸರ್ವ್ವಾನ್ ಪವಿತ್ರಲೋಕಾನ್ ಸಮಿತೇರಧ್ಯಕ್ಷಾನ್ ಪರಿಚಾರಕಾಂಶ್ಚ ಪ್ರತಿ ಪತ್ರಂ ಲಿಖತಃ|
2 ನಮ್ಮ ತಂದೆಯಾದ ದೇವರಿಂದಲೂ, ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ, ಶಾಂತಿಯೂ ಲಭಿಸಲಿ.
ಅಸ್ಮಾಕಂ ತಾತ ಈಶ್ವರಃ ಪ್ರಭು ರ್ಯೀಶುಖ್ರೀಷ್ಟಶ್ಚ ಯುಷ್ಮಭ್ಯಂ ಪ್ರಸಾದಸ್ಯ ಶಾನ್ತೇಶ್ಚ ಭೋಗಂ ದೇಯಾಸ್ತಾಂ|
3 ನಾನು ನಿಮ್ಮನ್ನು ನೆನಪಿಸಿಕೊಳ್ಳುವಾಗೆಲ್ಲಾ ನನ್ನ ದೇವರಿಗೆ ಸ್ತೋತ್ರಸಲ್ಲಿಸುತ್ತೇನೆ, ನಾನು ನಿಮಗಾಗಿ ದೇವರನ್ನು ಪ್ರಾರ್ಥಿಸುವ ಎಲ್ಲಾ ಸಮಯಗಳಲ್ಲಿಯೂ ಸಂತೋಷದಿಂದಲೇ ಪ್ರಾರ್ಥಿಸುವವನಾಗಿದ್ದೇನೆ.
ಅಹಂ ನಿರನ್ತರಂ ನಿಜಸರ್ವ್ವಪ್ರಾರ್ಥನಾಸು ಯುಷ್ಮಾಕಂ ಸರ್ವ್ವೇಷಾಂ ಕೃತೇ ಸಾನನ್ದಂ ಪ್ರಾರ್ಥನಾಂ ಕುರ್ವ್ವನ್
4
ಯತಿ ವಾರಾನ್ ಯುಷ್ಮಾಕಂ ಸ್ಮರಾಮಿ ತತಿ ವಾರಾನ್ ಆ ಪ್ರಥಮಾದ್ ಅದ್ಯ ಯಾವದ್
5 ನೀವು ಮೊದಲಿನಿಂದ ಇಂದಿನವರೆಗೂ ಸುವಾರ್ತಾಪ್ರಚಾರದಲ್ಲಿ ಸಹಕಾರಿಗಳಾಗಿದ್ದೀರೆಂದು ನನ್ನ ದೇವರಿಗೆ ಕೃತಜ್ಞತಾಸ್ತುತಿ ಮಾಡುತ್ತೇನೆ.
ಯುಷ್ಮಾಕಂ ಸುಸಂವಾದಭಾಗಿತ್ವಕಾರಣಾದ್ ಈಶ್ವರಂ ಧನ್ಯಂ ವದಾಮಿ|
6 ಈ ಒಳ್ಳೆಯ ಕೆಲಸವನ್ನು ನಿಮ್ಮಲ್ಲಿ ಪ್ರಾರಂಭಿಸಿದಾತನು ಅದನ್ನು ನಡಿಸಿಕೊಂಡು ಯೇಸು ಕ್ರಿಸ್ತನು ಬರುವ ದಿನದೊಳಗಾಗಿ ಪೂರ್ಣತೆಗೆ ತರುವನೆಂದು ನನಗೆ ಭರವಸವುಂಟು.
ಯುಷ್ಮನ್ಮಧ್ಯೇ ಯೇನೋತ್ತಮಂ ಕರ್ಮ್ಮ ಕರ್ತ್ತುಮ್ ಆರಮ್ಭಿ ತೇನೈವ ಯೀಶುಖ್ರೀಷ್ಟಸ್ಯ ದಿನಂ ಯಾವತ್ ತತ್ ಸಾಧಯಿಷ್ಯತ ಇತ್ಯಸ್ಮಿನ್ ದೃಢವಿಶ್ವಾಸೋ ಮಮಾಸ್ತೇ|
7 ನಿಮ್ಮೆಲ್ಲರನ್ನು ಕುರಿತು ನನಗೆ ಹೀಗನ್ನಿಸುವುದು ಸೂಕ್ತವೇ ಸರಿ. ನಾನು ಬಂಧನದಲ್ಲಿರುವಾಗಲೂ, ಸುವಾರ್ತೆಯ ಕುರಿತಾದ ವಾದ-ಪ್ರತಿವಾದಗಳಲ್ಲಿಯು ನೀವೆಲ್ಲರೂ ನನ್ನೊಂದಿಗೆ ದೇವರ ಕೃಪೆಯಲ್ಲಿ ಪಾಲುಗಾರರಾಗಿದ್ದೀರೆಂದು ನಿಮ್ಮನ್ನು ನನ್ನ ಹೃದಯದಲ್ಲಿರಿಸಿಕೊಂಡಿದ್ದೇನೆ.
ಯುಷ್ಮಾನ್ ಸರ್ವ್ವಾನ್ ಅಧಿ ಮಮ ತಾದೃಶೋ ಭಾವೋ ಯಥಾರ್ಥೋ ಯತೋಽಹಂ ಕಾರಾವಸ್ಥಾಯಾಂ ಪ್ರತ್ಯುತ್ತರಕರಣೇ ಸುಸಂವಾದಸ್ಯ ಪ್ರಾಮಾಣ್ಯಕರಣೇ ಚ ಯುಷ್ಮಾನ್ ಸರ್ವ್ವಾನ್ ಮಯಾ ಸಾರ್ದ್ಧಮ್ ಏಕಾನುಗ್ರಹಸ್ಯ ಭಾಗಿನೋ ಮತ್ವಾ ಸ್ವಹೃದಯೇ ಧಾರಯಾಮಿ|
8 ಕ್ರಿಸ್ತ ಯೇಸುವಿಗಿರುವಂಥ ಕನಿಕರದಿಂದ ನಿಮ್ಮೆಲ್ಲರಿಗೋಸ್ಕರ ಎಷ್ಟೋ ಹಂಬಲಿಸುತ್ತೇನೆ. ಇದಕ್ಕೆ ದೇವರೇ ಸಾಕ್ಷಿ.
ಅಪರಮ್ ಅಹಂ ಖ್ರೀಷ್ಟಯೀಶೋಃ ಸ್ನೇಹವತ್ ಸ್ನೇಹೇನ ಯುಷ್ಮಾನ್ ಕೀದೃಶಂ ಕಾಙ್ಕ್ಷಾಮಿ ತದಧೀಶ್ವರೋ ಮಮ ಸಾಕ್ಷೀ ವಿದ್ಯತೇ|
9 ಮತ್ತು ನಿಮ್ಮ ಪ್ರೀತಿಯು ಇನ್ನೂ ಅಧಿಕವಾಗಿ ಹೆಚ್ಚುತ್ತಾ ಪೂರ್ಣ ಜ್ಞಾನ ವಿವೇಕಗಳಿಂದ ಕೂಡಿರಬೇಕೆಂದು ನಾನು ನಿಮಗೋಸ್ಕರ ಪ್ರಾರ್ಥಿಸುತ್ತೇನೆ.
ಮಯಾ ಯತ್ ಪ್ರಾರ್ಥ್ಯತೇ ತದ್ ಇದಂ ಯುಷ್ಮಾಕಂ ಪ್ರೇಮ ನಿತ್ಯಂ ವೃದ್ಧಿಂ ಗತ್ವಾ
10 ೧೦ ಹೀಗೆ ಉತ್ತಮ ಕಾರ್ಯಗಳು ಯಾವವೆಂಬುದನ್ನು ನೀವು ವಿವೇಚಿಸುವವರಾಗಬೇಕೆಂತಲೂ ಹಾಗೂ ಕ್ರಿಸ್ತನು ಬರುವ ದಿನದಲ್ಲಿ ನೀವು ಸರಳರಾಗಿಯೂ, ನಿರ್ಮಲರಾಗಿಯೂ,
ಜ್ಞಾನಸ್ಯ ವಿಶಿಷ್ಟಾನಾಂ ಪರೀಕ್ಷಿಕಾಯಾಶ್ಚ ಸರ್ವ್ವವಿಧಬುದ್ಧೇ ರ್ಬಾಹುಲ್ಯಂ ಫಲತು,
11 ೧೧ ಯೇಸು ಕ್ರಿಸ್ತನ ಮೂಲಕವಾಗಿರುವ ನೀತಿಯೆಂಬ ಫಲದಿಂದ ತುಂಬಿದವರಾಗಿಯೂ ಇರಬೇಕೆಂದು ದೇವರಿಗೆ ಘನತೆಯನ್ನೂ ಸ್ತೋತ್ರವನ್ನೂ ಸಲ್ಲಿಸಬೇಕೆಂತಲೂ ಬೇಡಿಕೊಳ್ಳುತ್ತೇನೆ.
ಖ್ರೀಷ್ಟಸ್ಯ ದಿನಂ ಯಾವದ್ ಯುಷ್ಮಾಕಂ ಸಾರಲ್ಯಂ ನಿರ್ವಿಘ್ನತ್ವಞ್ಚ ಭವತು, ಈಶ್ವರಸ್ಯ ಗೌರವಾಯ ಪ್ರಶಂಸಾಯೈ ಚ ಯೀಶುನಾ ಖ್ರೀಷ್ಟೇನ ಪುಣ್ಯಫಲಾನಾಂ ಪೂರ್ಣತಾ ಯುಷ್ಮಭ್ಯಂ ದೀಯತಾಮ್ ಇತಿ|
12 ೧೨ ಸಹೋದರರೇ, ನನಗೆ ಸಂಭವಿಸಿರುವಂಥವುಗಳೆಲ್ಲವೂ ಸುವಾರ್ತೆಯ ಪ್ರಸಾರಣೆಗೆ ಸಹಾಯವಾಯಿತೆಂದು ನೀವು ತಿಳಿಯಬೇಕೆಂಬುದಾಗಿ ಅಪೇಕ್ಷಿಸುತ್ತೇನೆ.
ಹೇ ಭ್ರಾತರಃ, ಮಾಂ ಪ್ರತಿ ಯದ್ ಯದ್ ಘಟಿತಂ ತೇನ ಸುಸಂವಾದಪ್ರಚಾರಸ್ಯ ಬಾಧಾ ನಹಿ ಕಿನ್ತು ವೃದ್ಧಿರೇವ ಜಾತಾ ತದ್ ಯುಷ್ಮಾನ್ ಜ್ಞಾಪಯಿತುಂ ಕಾಮಯೇಽಹಂ|
13 ೧೩ ಹೇಗೆಂದರೆ ನನ್ನ ಸೆರೆವಾಸವು ಕ್ರಿಸ್ತನ ನಿಮಿತ್ತವೇ ಎಂದು ಅರಮನೆಯ ಕಾವಲುಗಾರರೆಲ್ಲರಿಗೂ ಹಾಗೂ ಉಳಿದವರೆಲ್ಲರಿಗೂ ತಿಳಿಯಲ್ಪಟ್ಟಿತು.
ಅಪರಮ್ ಅಹಂ ಖ್ರೀಷ್ಟಸ್ಯ ಕೃತೇ ಬದ್ಧೋಽಸ್ಮೀತಿ ರಾಜಪುರ್ಯ್ಯಾಮ್ ಅನ್ಯಸ್ಥಾನೇಷು ಚ ಸರ್ವ್ವೇಷಾಂ ನಿಕಟೇ ಸುಸ್ಪಷ್ಟಮ್ ಅಭವತ್,
14 ೧೪ ಇದಲ್ಲದೆ ಸಹೋದರರಲ್ಲಿ ಬಹಳ ಜನರು ನನ್ನ ಬಂಧನದಿಂದಲೇ ಕರ್ತನಲ್ಲಿ ಭರವಸವುಳ್ಳವರಾಗಿ ದೇವರ ವಾಕ್ಯವನ್ನು ನಿರ್ಭಯದಿಂದ ಹೇಳುವುದಕ್ಕೆ ಇನ್ನೂ ಹೆಚ್ಚು ಧೈರ್ಯಹೊಂದಿದ್ದಾರೆ.
ಪ್ರಭುಸಮ್ಬನ್ಧೀಯಾ ಅನೇಕೇ ಭ್ರಾತರಶ್ಚ ಮಮ ಬನ್ಧನಾದ್ ಆಶ್ವಾಸಂ ಪ್ರಾಪ್ಯ ವರ್ದ್ಧಮಾನೇನೋತ್ಸಾಹೇನ ನಿಃಕ್ಷೋಭಂ ಕಥಾಂ ಪ್ರಚಾರಯನ್ತಿ|
15 ೧೫ ಕೆಲವರು ಹೊಟ್ಟೆಕಿಚ್ಚುಪಟ್ಟು ಭೇದ ಹುಟ್ಟಿಸಬೇಕೆಂಬ ಮನಸ್ಸಿನಿಂದ ಮತ್ತು ಬೇರೆ ಕೆಲವರು ಒಳ್ಳೆಯ ಭಾವದಿಂದ ಕ್ರಿಸ್ತನನ್ನು ಪ್ರಚುರಪಡಿಸುತ್ತಾರೆ.
ಕೇಚಿದ್ ದ್ವೇಷಾದ್ ವಿರೋಧಾಚ್ಚಾಪರೇ ಕೇಚಿಚ್ಚ ಸದ್ಭಾವಾತ್ ಖ್ರೀಷ್ಟಂ ಘೋಷಯನ್ತಿ;
16 ೧೬ ಇವರಂತೂ ನಾನು ಸುವಾರ್ತೆಯ ವಿಷಯದಲ್ಲಿ ಉತ್ತರ ಹೇಳುವುದಕ್ಕಾಗಿ ಇಲ್ಲಿ ಹಾಕಲ್ಪಟ್ಟಿದ್ದೆನೆಂದು ತಿಳಿದು ಪ್ರೀತಿಯಿಂದ ಪ್ರಸಿದ್ಧಿಪಡಿಸುತ್ತಿದ್ದಾರೆ.
ಯೇ ವಿರೋಧಾತ್ ಖ್ರೀಷ್ಟಂ ಘೋಷಯನ್ತಿ ತೇ ಪವಿತ್ರಭಾವಾತ್ ತನ್ನ ಕುರ್ವ್ವನ್ತೋ ಮಮ ಬನ್ಧನಾನಿ ಬಹುತರಕ್ಲೋಶದಾಯೀನಿ ಕರ್ತ್ತುಮ್ ಇಚ್ಛನ್ತಿ|
17 ೧೭ ಆ ಬೇರೆ ತರದವರಾದರೋ ನಾನು ಬೇಡಿಯಿಂದ ಬಂಧಿತನಾಗಿರುವಾಗಲೂ ನನಗೆ ಸಂಕಟವನ್ನು ಹೆಚ್ಚಿಸಬೇಕೆಂದು ಯೋಚಿಸಿ, ಪ್ರಾಮಾಣಿಕವಲ್ಲದ ಸ್ವಾರ್ಥ ಉದ್ದೇಶದಿಂದ ಕ್ರಿಸ್ತನನ್ನು ಪ್ರಸಿದ್ಧಿಪಡಿಸುತ್ತಾರೆ.
ಯೇ ಚ ಪ್ರೇಮ್ನಾ ಘೋಷಯನ್ತಿ ತೇ ಸುಸಂವಾದಸ್ಯ ಪ್ರಾಮಾಣ್ಯಕರಣೇಽಹಂ ನಿಯುಕ್ತೋಽಸ್ಮೀತಿ ಜ್ಞಾತ್ವಾ ತತ್ ಕುರ್ವ್ವನ್ತಿ|
18 ೧೮ ಹೇಗಾದರೇನು? ಯಾವ ರೀತಿಯಿಂದಾದರೂ ಸರಿಯೇ ಕಪಟದಿಂದಾಗಲಿ ಅಥವಾ ಸತ್ಯದಿಂದಾಗಲಿ ಕ್ರಿಸ್ತನನ್ನು ಪ್ರಸಿದ್ಧಿಪಡಿಸುವುದುಂಟು, ಇದಕ್ಕೆ ನಾನು ಸಂತೋಷಿಸುತ್ತೇನೆ, ಮುಂದೆಯೂ ಸಂತೋಷಿಸುವೆನು.
ಕಿಂ ಬಹುನಾ? ಕಾಪಟ್ಯಾತ್ ಸರಲಭಾವಾದ್ ವಾ ಭವೇತ್, ಯೇನ ಕೇನಚಿತ್ ಪ್ರಕಾರೇಣ ಖ್ರೀಷ್ಟಸ್ಯ ಘೋಷಣಾ ಭವತೀತ್ಯಸ್ಮಿನ್ ಅಹಮ್ ಆನನ್ದಾಮ್ಯಾನನ್ದಿಷ್ಯಾಮಿ ಚ|
19 ೧೯ ಯಾಕೆಂದರೆ ನಿಮ್ಮ ವಿಜ್ಞಾಪನೆಯಿಂದಲೂ ಮತ್ತು ಯೇಸು ಕ್ರಿಸ್ತನ ಆತ್ಮನ ಸಹಾಯದಿಂದಲೂ ಇದು ನನ್ನ ಬಿಡುಗಡೆಗೆ ಅನುಕೂಲವಾಗುವುದೆಂದು ಬಲ್ಲೆನು.
ಯುಷ್ಮಾಕಂ ಪ್ರಾರ್ಥನಯಾ ಯೀಶುಖ್ರೀಷ್ಟಸ್ಯಾತ್ಮನಶ್ಚೋಪಕಾರೇಣ ತತ್ ಮನ್ನಿಸ್ತಾರಜನಕಂ ಭವಿಷ್ಯತೀತಿ ಜಾನಾಮಿ|
20 ೨೦ ಹೇಗೆಂದರೆ ನಾನು ಯಾವ ವಿಷಯದಲ್ಲಾದರೂ ನಾಚಿಕೆಪಡದೆ ಎಂದಿನಂತೆ ಈಗಲೂ ಸಹ ತುಂಬಾ ಧೈರ್ಯದಿಂದಿರುವುದರಿಂದ ಬದುಕಿದರೂ ಸರಿಯೇ ಅಥವಾ ಸತ್ತರೂ ಸರಿಯೇ ನನ್ನ ಶರೀರದ ಮೂಲಕ ಕ್ರಿಸ್ತನಿಗೆ ಮಹಿಮೆಯುಂಟಾಗಬೇಕೆಂದು ನನ್ನ ಬಹು ಅಭಿಲಾಷೆಯಾಗಿದೆ, ಹಾಗೆಯೇ ಆಗುವುದೆಂಬ ಭರವಸೆವುಂಟು.
ತತ್ರ ಚ ಮಮಾಕಾಙ್ಕ್ಷಾ ಪ್ರತ್ಯಾಶಾ ಚ ಸಿದ್ಧಿಂ ಗಮಿಷ್ಯತಿ ಫಲತೋಽಹಂ ಕೇನಾಪಿ ಪ್ರಕಾರೇಣ ನ ಲಜ್ಜಿಷ್ಯೇ ಕಿನ್ತು ಗತೇ ಸರ್ವ್ವಸ್ಮಿನ್ ಕಾಲೇ ಯದ್ವತ್ ತದ್ವದ್ ಇದಾನೀಮಪಿ ಸಮ್ಪೂರ್ಣೋತ್ಸಾಹದ್ವಾರಾ ಮಮ ಶರೀರೇಣ ಖ್ರೀಷ್ಟಸ್ಯ ಮಹಿಮಾ ಜೀವನೇ ಮರಣೇ ವಾ ಪ್ರಕಾಶಿಷ್ಯತೇ|
21 ೨೧ ನನಗಂತೂ ಬದುಕುವುದೆಂದರೆ ಕ್ರಿಸ್ತನೇ, ಸಾಯುವುದು ಲಾಭವೇ.
ಯತೋ ಮಮ ಜೀವನಂ ಖ್ರೀಷ್ಟಾಯ ಮರಣಞ್ಚ ಲಾಭಾಯ|
22 ೨೨ ಶರೀರದಲ್ಲಿಯೇ ಬದುಕಬೇಕಾದ್ದಲ್ಲಿ ನನ್ನ ಕೆಲಸಮಾಡಿ ಫಲಹೊಂದಲು ನನಗೆ ಸಾಧ್ಯವಾಗುವುದು. ಹೀಗಿರಲಾಗಿ ನಾನು ಯಾವುದನ್ನಾರಿಸಿಕೊಳ್ಳಬೇಕೆನ್ನುವುದು ನನಗೆ ತಿಳಿಯದು.
ಕಿನ್ತು ಯದಿ ಶರೀರೇ ಮಯಾ ಜೀವಿತವ್ಯಂ ತರ್ಹಿ ತತ್ ಕರ್ಮ್ಮಫಲಂ ಫಲಿಷ್ಯತಿ ತಸ್ಮಾತ್ ಕಿಂ ವರಿತವ್ಯಂ ತನ್ಮಯಾ ನ ಜ್ಞಾಯತೇ|
23 ೨೩ ಈ ಎರಡರ ನಡುವೆ ಸಿಕ್ಕಿಕೊಂಡಿದ್ದೇನೆ, ಇಲ್ಲಿಂದ ಹೊರಟು ಕ್ರಿಸ್ತನ ಜೊತೆಯಲ್ಲಿರಬೇಕೆಂಬುದೇ ನನ್ನ ಅಭಿಲಾಷೆ, ಅದು ಅತ್ಯುತ್ತಮವಾಗಿದೆ.
ದ್ವಾಭ್ಯಾಮ್ ಅಹಂ ಸಮ್ಪೀಡ್ಯೇ, ದೇಹವಾಸತ್ಯಜನಾಯ ಖ್ರೀಷ್ಟೇನ ಸಹವಾಸಾಯ ಚ ಮಮಾಭಿಲಾಷೋ ಭವತಿ ಯತಸ್ತತ್ ಸರ್ವ್ವೋತ್ತಮಂ|
24 ೨೪ ಆದರೆ ನಾನಿನ್ನೂ ಶರೀರದಲ್ಲಿ ವಾಸಮಾಡಿಕೊಂಡಿರುವುದು ನಿಮಗೋಸ್ಕರ ಬಹು ಅವಶ್ಯಕವಾಗಿದೆ.
ಕಿನ್ತು ದೇಹೇ ಮಮಾವಸ್ಥಿತ್ಯಾ ಯುಷ್ಮಾಕಮ್ ಅಧಿಕಪ್ರಯೋಜನಂ|
25 ೨೫ ಆದ್ದರಿಂದ ನಿಮಗೆ ಕ್ರಿಸ್ತನಂಬಿಕೆಯಲ್ಲಿ ಅಭಿವೃದ್ಧಿಯೂ ಆನಂದವೂ ಉಂಟಾಗುವುದಕ್ಕೋಸ್ಕರ ನಾನು ಜೀವದಿಂದುಳಿದು ನಿಮ್ಮೆಲ್ಲರ ಬಳಿಯಲ್ಲಿರುವೆನೆಂದು ದೃಢವಾಗಿ ನಂಬಿದ್ದೇನೆ.
ಅಹಮ್ ಅವಸ್ಥಾಸ್ಯೇ ಯುಷ್ಮಾಭಿಃ ಸರ್ವ್ವೈಃ ಸಾರ್ದ್ಧಮ್ ಅವಸ್ಥಿತಿಂ ಕರಿಷ್ಯೇ ಚ ತಯಾ ಚ ವಿಶ್ವಾಸೇ ಯುಷ್ಮಾಕಂ ವೃದ್ಧ್ಯಾನನ್ದೌ ಜನಿಷ್ಯೇತೇ ತದಹಂ ನಿಶ್ಚಿತಂ ಜಾನಾಮಿ|
26 ೨೬ ಹೀಗೆ ನಾನು ತಿರುಗಿ ನಿಮ್ಮ ಬಳಿಗೆ ಬರುವುದರಿಂದ ನೀವು ಕ್ರಿಸ್ತ ಯೇಸುವಿನ ವಿಷಯವಾಗಿ ಉಲ್ಲಾಸಪಡುವುದಕ್ಕೆ ನನ್ನಿಂದ ಅಧಿಕ ಆಸ್ಪದವಿರುವುದು.
ತೇನ ಚ ಮತ್ತೋಽರ್ಥತೋ ಯುಷ್ಮತ್ಸಮೀಪೇ ಮಮ ಪುನರುಪಸ್ಥಿತತ್ವಾತ್ ಯೂಯಂ ಖ್ರೀಷ್ಟೇನ ಯೀಶುನಾ ಬಹುತರಮ್ ಆಹ್ಲಾದಂ ಲಪ್ಸ್ಯಧ್ವೇ|
27 ೨೭ ಹೇಗೂ ಕ್ರಿಸ್ತನ ಸುವಾರ್ತೆಗೆ ಯೋಗ್ಯರಾಗಿ ನಡೆದುಕೊಳ್ಳಿರಿ. ಆಗ ನಾನು ಬಂದು ನಿಮ್ಮನ್ನು ನೋಡಿದರೂ ಸರಿಯೇ, ದೂರದಲ್ಲಿದ್ದು ನಿಮ್ಮ ಸುದ್ದಿಯನ್ನು ಕೇಳಿದರೂ ಸರಿಯೇ, ನೀವು ನಿಮ್ಮ ವಿರೋಧಿಗಳಿಗೆ ಯಾವ ವಿಷಯದಲ್ಲಾದರೂ ಹೆದರದೆ ಏಕಮನಸ್ಸಿನಿಂದ ದೃಢವಾಗಿ ನಿಂತು ಸುವಾರ್ತೆಯಲ್ಲಿಟ್ಟ ನಂಬಿಕೆಗೋಸ್ಕರ ಐಕಮತ್ಯದಿಂದ ಹೋರಾಡುವವರಾಗಿದ್ದೀರೆಂದು ನಾನು ತಿಳಿದುಕೊಳ್ಳುವೆನು.
ಯೂಯಂ ಸಾವಧಾನಾ ಭೂತ್ವಾ ಖ್ರೀಷ್ಟಸ್ಯ ಸುಸಂವಾದಸ್ಯೋಪಯುಕ್ತಮ್ ಆಚಾರಂ ಕುರುಧ್ವಂ ಯತೋಽಹಂ ಯುಷ್ಮಾನ್ ಉಪಾಗತ್ಯ ಸಾಕ್ಷಾತ್ ಕುರ್ವ್ವನ್ ಕಿಂ ವಾ ದೂರೇ ತಿಷ್ಠನ್ ಯುಷ್ಮಾಕಂ ಯಾಂ ವಾರ್ತ್ತಾಂ ಶ್ರೋತುಮ್ ಇಚ್ಛಾಮಿ ಸೇಯಂ ಯೂಯಮ್ ಏಕಾತ್ಮಾನಸ್ತಿಷ್ಠಥ, ಏಕಮನಸಾ ಸುಸಂವಾದಸಮ್ಬನ್ಧೀಯವಿಶ್ವಾಸಸ್ಯ ಪಕ್ಷೇ ಯತಧ್ವೇ, ವಿಪಕ್ಷೈಶ್ಚ ಕೇನಾಪಿ ಪ್ರಕಾರೇಣ ನ ವ್ಯಾಕುಲೀಕ್ರಿಯಧ್ವ ಇತಿ|
28 ೨೮ ನೀವು ಹೀಗಿರುವುದು ವಿರೋಧಿಗಳ ನಾಶನಕ್ಕೂ, ನಿಮ್ಮ ರಕ್ಷಣೆಗೂ ಒಂದು ಗುರುತಾಗಿದೆ. ಅದು ದೇವರಿಂದಾದ ಮುನ್ಸೂಚನೆಯಾಗಿದೆ.
ತತ್ ತೇಷಾಂ ವಿನಾಶಸ್ಯ ಲಕ್ಷಣಂ ಯುಷ್ಮಾಕಞ್ಚೇಶ್ವರದತ್ತಂ ಪರಿತ್ರಾಣಸ್ಯ ಲಕ್ಷಣಂ ಭವಿಷ್ಯತಿ|
29 ೨೯ ಕ್ರಿಸ್ತನ ಮೇಲೆ ನಂಬಿಕೆಯಿಡುವುದು ಮಾತ್ರವಲ್ಲ ಆತನಿಗೋಸ್ಕರ ಬಾಧೆಯನ್ನನುಭವಿಸುವುದು ನಿಮಗೆ ವರವಾಗಿ ದೊರಕಿದೆ.
ಯತೋ ಯೇನ ಯುಷ್ಮಾಭಿಃ ಖ್ರೀಷ್ಟೇ ಕೇವಲವಿಶ್ವಾಸಃ ಕ್ರಿಯತೇ ತನ್ನಹಿ ಕಿನ್ತು ತಸ್ಯ ಕೃತೇ ಕ್ಲೇಶೋಽಪಿ ಸಹ್ಯತೇ ತಾದೃಶೋ ವರಃ ಖ್ರೀಷ್ಟಸ್ಯಾನುರೋಧಾದ್ ಯುಷ್ಮಾಭಿಃ ಪ್ರಾಪಿ,
30 ೩೦ ಹೀಗೆ ನೀವು ನನ್ನಲ್ಲಿ ಕಂಡಂಥ ಮತ್ತು ಈಗ ನನ್ನ ಕುರಿತಾಗಿ ಕೇಳುವಂಥ ಅದೇ ಹೋರಾಟವು ನಿಮಗೂ ಉಂಟು.
ತಸ್ಮಾತ್ ಮಮ ಯಾದೃಶಂ ಯುದ್ಧಂ ಯುಷ್ಮಾಭಿರದರ್ಶಿ ಸಾಮ್ಪ್ರತಂ ಶ್ರೂಯತೇ ಚ ತಾದೃಶಂ ಯುದ್ಧಂ ಯುಷ್ಮಾಕಮ್ ಅಪಿ ಭವತಿ|

< ಫಿಲಿಪ್ಪಿಯವರಿಗೆ ಬರೆದ ಪತ್ರಿಕೆ 1 >