< ಅರಣ್ಯಕಾಂಡ 5 >
1 ೧ ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
၁ထာဝရဘုရားသည်မောရှေအား၊
2 ೨ “ಕುಷ್ಠರೋಗಿಗಳನ್ನು, ಸಾಂಕ್ರಾಮಿಕವಾದ ಚರ್ಮರೋಗ ಇರುವವರನ್ನು, ಮೇಹಸ್ರಾವವುಳ್ಳವರನ್ನು ಹಾಗು ಹೆಣದ ಸೋಂಕಿನಿಂದ ಅಶುದ್ಧರಾದವರನ್ನು ಪಾಳೆಯದಿಂದ ಹೊರಡಿಸಬೇಕೆಂದು ಇಸ್ರಾಯೇಲರಿಗೆ ಆಜ್ಞಾಪಿಸು.
၂``ဣသရေလအမျိုးသားတို့တွင် ကိုယ်ရေ ပြားရောဂါစွဲသောသူသို့မဟုတ်ရိနာစွဲ သောသူ၊ လူသေကောင်နှင့်ထိမိသဖြင့်မသန့် စင်သောသူတို့ကို စခန်းအပြင်သို့နှင်ထုတ် ရန်ဆင့်ဆိုလော့။-
3 ೩ ಅಂಥವರು ಗಂಡಸರೇ ಆಗಲಿ ಅಥವಾ ಹೆಂಗಸರೇ ಆಗಲಿ, ಅವರೆಲ್ಲರನ್ನೂ ಪಾಳೆಯದಿಂದ ಹೊರಗೆಹಾಕಬೇಕು. ನಾನೇ ಅವರ ಪಾಳೆಯದಲ್ಲಿ ವಾಸವಾಗಿರುವುದರಿಂದ ಅವರು ಅದನ್ನು ಅಪವಿತ್ರ ಮಾಡಬಾರದು.”
၃ငါ၏လူမျိုးတော်နှင့်အတူငါရှိရာစခန်း ကိုမညစ်ညူးစေရန် ဘာသာရေးထုံးနည်း အရမသန့်စင်သူတို့ကိုစခန်းအပြင်သို့ နှင်ထုတ်ရမည်'' ဟုမိန့်တော်မူ၏။-
4 ೪ ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಾಯೇಲರು ಹಾಗೆಯೇ ಮಾಡಿದರು. ಇಸ್ರಾಯೇಲರು ಯೆಹೋವನಿಗೆ ವಿಧೇಯರಾಗಿ ಅಶುದ್ಧರಾದವರನ್ನೆಲ್ಲಾ ಪಾಳೆಯದಿಂದ ಹೊರಗೆ ಕಳುಹಿಸಿದರು.
၄ထာဝရဘုရားမိန့်တော်မူသည်အတိုင်း ဣသရေလအမျိုးသားတို့သည်မသန့်စင် သူတို့ကိုစခန်းအပြင်သို့နှင်ထုတ်လိုက် ကြ၏။
5 ೫ ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
၅ထာဝရဘုရားသည်ဣသရေလအမျိုးသား တို့လိုက်နာရန် အောက်ပါညွှန်ကြားချက်များ ကိုမောရှေအားပေးတော်မူ၏။ တစ်စုံတစ်ယောက် သည်အခြားသူတစ်ဦးအား မတော်မတရား ပြု၍ထာဝရဘုရား၏ပညတ်တော်ကို ချိုးဖောက်လျှင်၊-
6 ೬ “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು: ಯಾವ ಪುರುಷನಾಗಲಿ, ಸ್ತ್ರೀಯಾಗಲಿ ಮತ್ತೊಬ್ಬನನ್ನು ಮೋಸಗೊಳಿಸುವುದರಿಂದ ಯೆಹೋವನಿಗೆ ದ್ರೋಹಮಾಡಿ ಅಪರಾಧಿಗಳಾದರೆ,
၆
7 ೭ ಅಂಥವರು ತಮ್ಮ ಅಪರಾಧವನ್ನು ಅರಿಕೆಮಾಡಬೇಕು. ಅದಲ್ಲದೆ ಅಪರಾಧ ಮಾಡಿದವನು ನಷ್ಟಪಟ್ಟವನಿಗೆ ಮೂಲದ್ರವ್ಯದ ಬೆಲೆಗೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಸೇರಿಸಿ ಕೊಡಬೇಕು.
၇ထိုသူသည်မိမိ၏အပြစ်ကိုဝန်ချတောင်းပန် ၍ မတော်မတရားပြုခြင်းခံရသူအားလျော် ကြေးအပြည့်အပြင် နှစ်ဆယ်ရာခိုင်နှုန်းထပ် ဆောင်းပေးရမည်။-
8 ೮ “ಆದರೆ ದಂಡವನ್ನು ತೆಗೆದುಕೊಳ್ಳುವವನು ಮೃತನಾಗಿ ಅವನ ಸಂಬಂಧಿಕರು ಯಾರೂ ಇಲ್ಲದಿದ್ದರೆ, ಆ ದ್ರವ್ಯವು ಯೆಹೋವನಿಗೆ ಸೇರಬೇಕು. ಆ ದ್ರವ್ಯ ಮತ್ತು ದೋಷಪರಿಹಾರಕ್ಕಾಗಿ ಸಮರ್ಪಿಸಲ್ಪಡುವ ಪ್ರಾಯಶ್ಚಿತ್ತದ ಟಗರು ಈ ಎರಡೂ ಯಾಜಕನಿಗೆ ಸೇರಬೇಕು.
၈အကယ်၍လျော်ကြေးလက်ခံမည့်သူသည် သေဆုံး၍ဆွေမျိုးသားချင်းမကျန်ရစ်လျှင် လျော်ကြေးကိုယဇ်ပုရောဟိတ်အတွက်ထာဝရ ဘုရားထံဆက်သရမည်။ အပြစ်ကူးလွန်သူ သည်လျော်ကြေးအပြင် သန့်စင်ခြင်းဝတ် အတွက်သိုးထီးကိုလည်းပေးဆောင်ရ မည်။-
9 ೯ ಇಸ್ರಾಯೇಲರು ಪರಿಶುದ್ಧವಾದ ವಸ್ತುಗಳಿಂದ ಪ್ರತ್ಯೇಕಿಸಿ ತರುವ ಕಾಣಿಕೆಗಳೆಲ್ಲಾ ಯಾಜಕನಿಗೇ ಸಲ್ಲಬೇಕು.
၉ယဇ်ပုရောဟိတ်မှတစ်ဆင့်ဣသရေလအမျိုး သားတို့က ထာဝရဘုရားအားဆက်သသော အထူးအလှူဒါနရှိသမျှကိုယဇ်ပုရော ဟိတ်ပိုင်သည်။-
10 ೧೦ ಪ್ರತಿ ಮನುಷ್ಯನು ಯೆಹೋವನಿಗೆ ಮೀಸಲಾಗಿಟ್ಟದ್ದನ್ನು ಯಾವ ಯಾಜಕನಿಗೆ ತಂದು ಒಪ್ಪಿಸುತ್ತಾನೋ ಅದು ಆ ಯಾಜಕನದ್ದಾಗಿರುತ್ತದೆ.”
၁၀ယဇ်ပုရောဟိတ်သည်မိမိအားလှူသမျှတို့ ကိုပိုင်၏။
11 ೧೧ ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
၁၁ထာဝရဘုရားသည်မောရှေမှတစ်ဆင့်ဣသ ရေလအမျိုးသားတို့အား အောက်ပါညွှန်ကြား ချက်များကိုပေးတော်မူ၏။ ခင်ပွန်းသည်တစ်ဦး သည်မိမိ၏ဇနီးသစ္စာဖောက်၍ အခြားယောကျာ်း နှင့်ပြစ်မှားခဲ့သည်ဟုခင်ပွန်းသည်ကမယုံ သင်္ကာဖြစ်အံ့။ သို့သော်လည်းဇနီးသည်ထို အမှုကိုလျှို့ဝှက်ထား၍သော်လည်းကောင်း၊ မျက်မြင်သက်သေမရှိ၍သော်လည်းကောင်း၊ လက်ပူးလက်ကြပ်မမိ၍သော်လည်းကောင်း ခင်ပွန်းကအတိအကျမစွပ်စွဲနိုင်။ သို့ တည်းမဟုတ်ဇနီးသည်အခြားသူတစ်ဦး နှင့်မဖောက်ပြန်သော်လည်း ခင်ပွန်းသည်က မယားအားမယုံသင်္ကာဖြစ်အံ့။-
12 ೧೨ “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು: ‘ಯಾರ ಹೆಂಡತಿ ತಪ್ಪು ದಾರಿ ಹಿಡಿದು ಗಂಡನಿಗೆ ಅಪನಂಬಿಗಸ್ತಳಾಗಿ,
၁၂
13 ೧೩ ಯಾರ ಕೈಗೆ ಸಿಕ್ಕದೆಯೂ ಸಾಕ್ಷಿ ಇಲ್ಲದೆಯೂ ರಹಸ್ಯವಾಗಿಯೇ ಪರಪುರುಷನೊಡನೆ ಸಂಗಮಿಸಿ ಗಂಡನಿಗೆ ದ್ರೋಹಿಯಾಗಿ ಅಶುದ್ಧಳಾದ ಸಂದರ್ಭದಲ್ಲಿ,
၁၃
14 ೧೪ ಅಥವಾ ಅವಳು ಹಾಗೆ ಮಾಡದೆ ಅಶುದ್ಧಳಾಗದ ಸಂದರ್ಭದಲ್ಲಿಯೂ, ಆಕೆಯು ಕೆಟ್ಟುಹೋದಳೆಂಬ ಸಂಶಯ ಗಂಡನಿಗೆ ಬಂದರೆ,
၁၄
15 ೧೫ ಆಗ ಅವನು ಮಾಡಬೇಕಾದದ್ದೇನೆಂದರೆ, ಆ ಪುರುಷನು ತನ್ನ ಹೆಂಡತಿಯನ್ನು ಯಾಜಕನ ಬಳಿಗೆ ಕರೆದುಕೊಂಡು ಬರಬೇಕು ಮತ್ತು ಅವಳ ಸಂಗತಿಯನ್ನು ವಿಚಾರಿಸುವುದಕ್ಕಾಗಿ ಅವನು ಯಾಜಕನಿಗೆ ಮೂರು ಸೇರು ಜವೆಗೋದಿಯ ಹಿಟ್ಟನ್ನು ಕಾಣಿಕೆಯಾಗಿ ತಂದುಕೊಡಬೇಕು. ಅದು ವ್ಯಭಿಚಾರ ಸಂಶಯವನ್ನು ಸೂಚಿಸುವುದಕ್ಕೂ ಮತ್ತು ಪಾಪವನ್ನು ಹೊರಪಡಿಸುವುದಕ್ಕೂ ಯೆಹೋವನಿಗೆ ನೈವೇದ್ಯವಾದ ಕಾಣಿಕೆಯಾದುದರಿಂದ ಆ ಹಿಟ್ಟಿನ ಮೇಲೆ ಎಣ್ಣೆಯನ್ನು ಹೊಯ್ಯಲೂಬಾರದು, ಧೂಪವನ್ನು ಇಡಲೂಬಾರದು.
၁၅မည်သို့ပင်ဖြစ်စေ၊ ခင်ပွန်းသည်ဇနီးကိုယဇ် ပုရောဟိတ်ထံသို့ခေါ်ဆောင်သွားရမည်။ သူ သည်ပူဇော်သကာအဖြစ် မုယောမုန့်ညက် နှစ်ပေါင်ကိုလည်းယူခဲ့ရမည်။ သို့ရာတွင် ပူဇော်သကာသည်မယုံသင်္ကာသဖြင့် အမှန် တရားကိုဖော်ထုတ်ရန်ဖြစ်သောကြောင့် သူ သည်မုန့်ညက်ပေါ်တွင်သံလွင်ဆီကိုမ လောင်းရ၊ နံ့သာပေါင်းကိုလည်းမတင်ရ။
16 ೧೬ “‘ಯಾಜಕನು ಅವಳನ್ನು ಕರೆದು ಯೆಹೋವನ ಸಮ್ಮುಖದಲ್ಲಿ ನಿಲ್ಲಿಸಬೇಕು.
၁၆ယဇ်ပုရောဟိတ်သည်ထိုအမျိုးသမီးကို ယဇ်ပလ္လင်ရှေ့သို့သွား၍ရပ်နေစေရမည်။-
17 ೧೭ ಯಾಜಕನು ಮಣ್ಣಿನ ಪಾತ್ರೆಯಲ್ಲಿ ಪರಿಶುದ್ಧ ಜಲವನ್ನು ತೆಗೆದುಕೊಂಡು, ದೇವದರ್ಶನದ ಗುಡಾರದ ನೆಲದಿಂದ ಸ್ವಲ್ಪ ಧೂಳನ್ನು ಆ ನೀರಿನಲ್ಲಿ ಹಾಕಬೇಕು.
၁၇သူသည်မြေအိုးတွင်ရေသန့်ကိုထည့်၍ ထာဝရ ဘုရားစံတော်မူရာတဲတော်တလင်းမှမြေ မှုန့်အနည်းငယ်ကိုယူပြီးလျှင် ထိုရေအိုး ထဲသို့ထည့်ရမည်။-
18 ೧೮ ಯಾಜಕನು ಆ ಸ್ತ್ರೀಯನ್ನು ಯೆಹೋವನ ಸಮ್ಮುಖದಲ್ಲಿ ನಿಲ್ಲಿಸಿ, ಅವಳ ತಲೆಯ ಮೇಲಿರುವ ಮುಸುಕನ್ನು ತೆಗೆದು, ಕೂದಲನ್ನು ಕೆದರಿಸಿ ವ್ಯಭಿಚಾರದ ಸಂಶಯವನ್ನು ಸೂಚಿಸುವ ಆ ನೈವೇದ್ಯದ ಹಿಟ್ಟನ್ನು ಅವಳ ಕೈಯಲ್ಲಿ ಇಟ್ಟು, ಶಾಪವನ್ನುಂಟುಮಾಡುವ ವಿಷಕರವಾದ ಆ ನೀರನ್ನು ಯಾಜಕನು ತನ್ನ ಕೈಯಲ್ಲಿ ಹಿಡಿದುಕೊಳ್ಳಬೇಕು.
၁၈ထိုနောက်သူသည်အမျိုးသမီးဆံပင်ကို ဖြေ၍ ပူဇော်သကာမုန့်ညက်ကိုသူ့လက်ထဲ သို့ထည့်ရမည်။ ယဇ်ပုရောဟိတ်သည်ကျိန်စာ သင့်စေသော ရေခါးပါရှိသည့်အိုးကိုလက် ထဲတွင်ကိုင်ထားရမည်။-
19 ೧೯ ಯಾಜಕನೂ ಅವಳಿಂದ ಪ್ರಮಾಣಮಾಡಿಸಿ ಹೀಗೆ ಹೇಳಬೇಕು, “ಒಬ್ಬ ಪರಪುರುಷನ ಸಂಗಮಮಾಡದಿದ್ದರೆ, ನಿನ್ನ ಗಂಡನನ್ನು ಬಿಟ್ಟು ನೀನು ಜಾರತ್ವ ಮಾಡದೇ ನಿರಪರಾಧಿಯಾಗಿದ್ದರೆ ಶಪಿಸಲ್ಪಟ್ಟ ವಿಷಕರವಾದ ಈ ನೀರು ನಿನಗೆ ಯಾವ ಹಾನಿಯನ್ನು ಮಾಡುವುದಿಲ್ಲ.
၁၉ထိုနောက်သူသည်အမျိုးသမီးအားဤသို့ ကျိန်စာတိုက်ရမည်။ ``သင်သည်အခြားသော ယောကျာ်းနှင့်မဖောက်ပြန်မကူးလွန်ခဲ့သည် ရှိသော် ဤသစ္စာရေကြောင့်ကျရောက်မည့်ဘေး ဒဏ်နှင့်ကင်းလွတ်ပါစေသား။-
20 ೨೦ ಆದರೆ ನೀನು ನಿನ್ನ ಗಂಡನನ್ನು ಬಿಟ್ಟು ಪರಪುರುಷನೊಡನೆ ಜಾರತ್ವಮಾಡಿ ಅಶುದ್ಧಳಾಗಿದ್ದರೆ ನಿನ್ನ ಗಂಡನನ್ನು ಬಿಟ್ಟು ಮತ್ತೊಬ್ಬನೊಡನೆ ನೀನು ಸಂಗಮಿಸಿದ್ದರೆ,”
၂၀သို့သော်သင်သည်သစ္စာဖောက်ခဲ့လျှင်၊
21 ೨೧ “ಯೆಹೋವನು ನಿನ್ನ ತೊಡೆಗಳು ಕ್ಷೀಣವಾಗಿ ಹೋಗುವಂತೆ, ನಿನ್ನ ಹೊಟ್ಟೆಯು ಉಬ್ಬುವಂತೆ ಮಾಡಿ ನಿನ್ನನ್ನು ನಿನ್ನ ಜನರ ಮಧ್ಯದಲ್ಲಿ ಶಾಪಗ್ರಸ್ತಳನ್ನಾಗಿ ನೇಮಿಸಲಿ.
၂၁သင်သည်သင်၏လူမျိုးအတွက်အမင်္ဂလာ ဖြစ်ပါစေသား။ သင်၏မိန်းမအင်္ဂါတို့သည် ခြောက်ကပ်လာ၍ သင်၏ဝမ်းဗိုက်သည်ဖောင်း ပွလာလိမ့်မည်။-
22 ೨೨ ಶಾಪವನ್ನುಂಟುಮಾಡುವ ಈ ನೀರು ನಿನ್ನೊಳಗೆ ಸೇರಿ ನಿನ್ನ ಹೊಟ್ಟೆಯು ಉಬ್ಬುವಂತೆ ನಿನ್ನ ತೊಡೆಗಳು ಕ್ಷೀಣವಾಗಿ ಹೋಗುವಂತೆ ನಿನ್ನ ಜನನೇಂದ್ರಿಯಗಳು ಬತ್ತಿ ಹೋಗುವಂತೆ ಮಾಡುವುದು.” ಅದಕ್ಕೆ ಆ ಸ್ತ್ರೀಯು, “ನಾನು ಅಪರಾಧಿಯಾಗಿದ್ದರೆ ಹಾಗೆಯೇ ಆಗಲಿ” ಎಂದು ಹೇಳಬೇಕು.
၂၂ဤရေသည်သင်၏ဝမ်းထဲသို့ရောက်၍ဝမ်း ဗိုက်ကိုဖောင်းပွလာစေလျက် သင်၏မိန်းမ အင်္ဂါကိုခြောက်ကပ်စေလိမ့်မည်။ ထိုအခါအမျိုးသမီးက``ဤသစ္စာတည်ပါ စေသော'' ဟုဝန်ခံရမည်။
23 ೨೩ “‘ಇದಲ್ಲದೆ ಯಾಜಕನು ಈ ಶಾಪವಚನಗಳನ್ನು ಸುರುಳಿಯಲ್ಲಿ ಬರೆದು, ವಿಷಕರ ಜಲದಲ್ಲಿ ಆ ಶಾಪವಚನವನ್ನು ತೊಳೆಯಬೇಕು.
၂၃ထိုနောက်ယဇ်ပုရောဟိတ်သည် ထိုကျိန်စာကို ရေးသား၍စာကိုရေခါးထဲတွင်ချေဖျက် ရမည်။-
24 ೨೪ ಶಾಪವನ್ನುಂಟುಮಾಡುವ ವಿಷಕರವಾದ ನೀರನ್ನು ಆ ಸ್ತ್ರೀಗೆ ಕುಡಿಸಬೇಕು. ಆಗ ಶಪಿಸುವ ನೀರು ಅವಳಲ್ಲಿ ಸೇರಿ ವಿಷಕರವಾಗುವುದು.
၂၄အမျိုးသမီးအား ပြင်းပြသောဝေဒနာ ဖြစ်စေနိုင်မည့်ရေကိုမတိုက်မီ၊-
25 ೨೫ ಬಳಿಕ ಯಾಜಕನು ಆ ಸ್ತ್ರೀಯ ಕೈಯಿಂದ ವ್ಯಭಿಚಾರದ ಸಂಶಯ ಸೂಚಕವಾದ ಕಾಣಿಕೆಯನ್ನು ತೆಗೆದುಕೊಂಡು, ಆ ಕಾಣಿಕೆಯನ್ನು ಯೆಹೋವನ ಸಮ್ಮುಖದಲ್ಲಿ ನೈವೇದ್ಯಮಾಡಿ ಯಜ್ಞವೇದಿಯ ಹತ್ತಿರ ತರಬೇಕು.
၂၅ယဇ်ပုရောဟိတ်သည် အမျိုးသမီး၏လက်ထဲမှ မုန့်ညက်ကိုယူ၍ ထာဝရဘုရားအားဆက်ကပ် ပြီးလျှင် ယဇ်ပလ္လင်ပေါ်သို့တင်ရမည်။-
26 ೨೬ ಆಗ ಯಾಜಕನು ನೈವೇದ್ಯವಾದದ್ದನ್ನು ಸೂಚಿಸುವುದಕ್ಕಾಗಿ ಕಾಣಿಕೆಯಿಂದ ಒಂದು ಹಿಡಿಯನ್ನು ತೆಗೆದುಕೊಂಡು ಯಜ್ಞವೇದಿಯ ಮೇಲೆ ಸುಟ್ಟು ಆ ನೀರನ್ನು ಸ್ತ್ರೀಗೆ ಕುಡಿಸಬೇಕು.
၂၆ထိုနောက်သူသည်မုန့်ညက်လက်တစ်ဆုပ်စာမျှကို ယူ၍ ယဇ်ပလ္လင်ပေါ်တွင်မီးရှို့ပူဇော်ရမည်။ နောက် ဆုံးတွင်ယဇ်ပုရောဟိတ်သည် အမျိုးသမီးအား သစ္စာရေကိုသောက်စေရမည်။-
27 ೨೭ ಅವಳು ಅಶುದ್ಧಳಾಗಿ ಗಂಡನಿಗೆ ದ್ರೋಹಮಾಡಿದವಳಾಗಿದ್ದರೆ ಆ ನೀರನ್ನು ಕುಡಿದ ನಂತರ ಆ ನೀರು ಅವಳೊಳಗೆ ಸೇರಿ ವಿಷವಾಗುವುದರಿಂದ ಅವಳ ಹೊಟ್ಟೆ ಉಬ್ಬುವುದು, ಅವಳ ತೊಡೆಗಳು ಕ್ಷೀಣವಾಗಿ ಹೋಗುವವು. ಆಗ ಆ ಸ್ತ್ರೀಯು ತನ್ನ ಜನರ ಮಧ್ಯದಲ್ಲಿ ಶಾಪಗ್ರಸ್ತಳಾಗುವಳು.
၂၇အမျိုးသမီးသည်အခြားယောကျာ်းနှင့်ဖောက် ပြန်ကူးလွန်ခဲ့လျှင် သူသည်ဝေဒနာပြင်းပြ စွာခံရ၍ သူ၏ဝမ်းဗိုက်သည်ဖောင်းပွလာလျက် သူ၏မိန်းမအင်္ဂါသည်လည်းခြောက်ကပ်လာလိမ့် မည်။ သူသည်မိမိလူမျိုးအတွက်အမင်္ဂလာ ဖြစ်လိမ့်မည်။-
28 ೨೮ ಆದರೆ ಆ ಸ್ತ್ರೀಯು ಪರಿಶುದ್ಧಳಾಗಿ ನಿರಪರಾಧಿಯಾದ ಪಕ್ಷಕ್ಕೆ ಯಾವ ಹಾನಿಯನ್ನು ಅನುಭವಿಸದೆ ಸಂತಾನವನ್ನು ಪಡೆಯುವಳು.
၂၈သို့ရာတွင်အမျိုးသမီးသည် ကူးလွန်မှုမရှိ ခဲ့သော် ဘေးမသင့်ဘဲသားသမီးမွေးဖွား နိုင်စွမ်းရှိလိမ့်မည်။
29 ೨೯ ಒಬ್ಬ ಹೆಂಡತಿ ತನ್ನ ಗಂಡನನ್ನು ಬಿಟ್ಟು ಜಾರತ್ವಮಾಡಿ ಅಶುದ್ಧಳಾದರೆ ಇಂತಹ ವ್ಯಭಿಚಾರದ ಸಂಶಯವನ್ನು ಪರಿಹರಿಸುವ ನಿಯಮ ಇದೇ.
၂၉အဆိုပါပညတ်သည်ကားခင်ပွန်းသည်က မိမိဇနီးဖောက်ပြန်သည်ဟူ၍မယုံသင်္ကာ ဖြစ်သည့်အခါ၌ လိုက်နာရသောပညတ်ဖြစ် သည်။ ယဇ်ပုရောဟိတ်သည် အမျိုးသမီးကို ယဇ်ပလ္လင်ရှေ့တွင်ရပ်စေ၍ ဤပညတ်အတိုင်း စစ်ဆေးစီရင်ရမည်။-
30 ೩೦ ಗಂಡನು ಹೆಂಡತಿಯ ವಿಷಯದಲ್ಲಿ ಸಂಶಯ ಪಟ್ಟರೆ ಅವನು ಅವಳನ್ನು ಯೆಹೋವನ ಸಮ್ಮುಖದಲ್ಲಿ ತಂದು ನಿಲ್ಲಿಸಬೇಕು. ಯಾಜಕನು ಅವಳ ವಿಷಯದಲ್ಲಿ ಈ ವಿಧಿನಿಯಮವನ್ನು ನೆರವೇರಿಸಬೇಕು.
၃၀
31 ೩೧ ಆಗ ಗಂಡನು ನಿರಪರಾಧಿಯಾಗುವನು. ಆ ಹೆಂಡತಿಯು ತನ್ನ ಅಕ್ರಮವನ್ನು ಹೊತ್ತುಕೊಳ್ಳುವಳು.’”
၃၁ခင်ပွန်းသည်ပြစ်မှုကင်းစေရမည်။ သို့ရာ တွင်ဇနီးသည်ပြစ်မှုကူးလွန်လျှင် အပြစ် အလျောက်ဒဏ်ခံစေရမည်။