< ಅರಣ್ಯಕಾಂಡ 35 >
1 ೧ ಯೊರ್ದನ್ ನದಿಯ ತೀರದಲ್ಲಿ ಯೆರಿಕೋ ಪಟ್ಟಣದ ಹತ್ತಿರವಿರುವ ಮೋವಾಬ್ಯರ ಮೈದಾನದಲ್ಲಿ ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
and to speak: speak LORD to(wards) Moses in/on/with Plains (of Moab) (Plains of) Moab upon Jordan Jericho to/for to say
2 ೨ “ಇಸ್ರಾಯೇಲರು ತಾವು ಹೊಂದುವ ಸ್ವತ್ತಿನಲ್ಲಿ ಕೆಲವು ಪಟ್ಟಣಗಳನ್ನೂ, ಆ ಪಟ್ಟಣಗಳ ಸುತ್ತಲಿನ ಭೂಮಿಯನ್ನೂ ಲೇವಿಯರಿಗೆ ವಾಸಕ್ಕಾಗಿ ಕೊಡಬೇಕೆಂದು ಅವರಿಗೆ ಆಜ್ಞಾಪಿಸು.
to command [obj] son: descendant/people Israel and to give: give to/for Levi from inheritance possession their city to/for to dwell and pasture to/for city around them to give: give to/for Levi
3 ೩ ಆ ಪಟ್ಟಣಗಳು ಲೇವಿಯರ ವಾಸ ಸ್ಥಳವಾಗುವುದು. ಸುತ್ತಲಿರುವ ಭೂಮಿಗಳು ಅವರ ದನಕುರಿಗಳಿಗಾಗಿಯೂ ಮತ್ತು ಪಶುಗಳಿಗಾಗಿಯೂ ಇರುವವು.
and to be [the] city to/for them to/for to dwell and pasture their to be to/for animal their and to/for property their and to/for all living thing their
4 ೪ ನೀವು ಲೇವಿಯರಿಗೆ ಕೊಡುವ ಪಟ್ಟಣಗಳು ಸುತ್ತಲಿನ ಭೂಮಿಯ ಪ್ರತಿಯೊಂದು ಪಟ್ಟಣಗಳ ಗೋಡೆಯಿಂದ ನಾಲ್ಕು ಕಡೆಯಲ್ಲಿಯೂ ಸಾವಿರ ಮೊಳದಷ್ಟು ವಿಸ್ತರಿಸಿಕೊಂಡಿರಬೇಕು.
and pasture [the] city which to give: give to/for Levi from wall [the] city and outside [to] thousand cubit around
5 ೫ ನೀವು ಪಟ್ಟಣದ ಹೊರಗಡೆ ಪೂರ್ವ ದಿಕ್ಕಿನಲ್ಲಿ ಎರಡು ಸಾವಿರ ಮೊಳ, ದಕ್ಷಿಣದಲ್ಲಿ ಎರಡು ಸಾವಿರ ಮೊಳ, ಪಶ್ಚಿಮದಲ್ಲಿ ಎರಡು ಸಾವಿರ ಮೊಳ, ಉತ್ತರದಲ್ಲಿ ಎರಡು ಸಾವಿರ ಮೊಳ, ಅಳೆಯಬೇಕು. ಮಧ್ಯದಲ್ಲಿ ಪಟ್ಟಣಗಳಿರಬೇಕು. ಹೀಗೆ ಅವರ ಪಟ್ಟಣಗಳ ಉಪನಗರಗಳು ಇರಬೇಕು.
and to measure from outside to/for city [obj] side east [to] thousand in/on/with cubit and [obj] side south thousand in/on/with cubit and [obj] side sea: west thousand in/on/with cubit and [obj] side north thousand in/on/with cubit and [the] city in/on/with midst this to be to/for them pasture [the] city
6 ೬ ಮನುಷ್ಯನನ್ನು ಹತ್ಯೆಮಾಡಿದವರು ಆಶ್ರಯಕ್ಕಾಗಿ ಓಡಿ ಹೋಗುವುದಕ್ಕೋಸ್ಕರ ನೀವು ನೇಮಿಸುವ ಆರು ಆಶ್ರಯನಗರಗಳನ್ನೂ, ಬೇರೆ ನಲ್ವತ್ತೆರಡು ಪಟ್ಟಣಗಳನ್ನೂ ಅಂತು ನಲ್ವತ್ತೆಂಟು ಪಟ್ಟಣಗಳನ್ನು ಲೇವಿಯರಿಗೆ ಕೊಡಬೇಕು.
and [obj] [the] city which to give: give to/for Levi [obj] six city [the] refuge which to give: allow to/for to flee there [to] [the] to murder and upon them to give: give forty and two city
7 ೭ ನೀವು ಲೇವಿಯರಿಗೆ ಹುಲ್ಲುಗಾವಲುಗಳ ಸಂಗಡ ಕೊಡಬೇಕಾದ ಸಮಸ್ತ ಪಟ್ಟಣಗಳು ನಲ್ವತ್ತೆಂಟಾಗಿರಬೇಕು.
all [the] city which to give: give to/for Levi forty and eight city [obj] them and [obj] pasture their
8 ೮ ಇಸ್ರಾಯೇಲರ ಸ್ವತ್ತಿನಲ್ಲಿ ಆಯಾ ಕುಲದ ಸ್ವತ್ತಿನ ಪ್ರಮಾಣಕ್ಕೆ ತಕ್ಕ ಹಾಗೆ ಹೆಚ್ಚಾದ ಜನರುಳ್ಳವರಿಂದ ಹೆಚ್ಚಾಗಿಯೂ, ಕಡಿಮೆಯಾದ ಜನರಿಂದ ಕಡಿಮೆಯಾಗಿಯೂ ಲೇವಿಯರಿಗೋಸ್ಕರ ಊರುಗಳನ್ನು ಕೊಡಿಸಬೇಕು.”
and [the] city which to give: give from possession son: descendant/people Israel from with [the] many to multiply and from with [the] little to diminish man: anyone like/as lip: according inheritance his which to inherit to give: give from city his to/for Levi
9 ೯ ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
and to speak: speak LORD to(wards) Moses to/for to say
10 ೧೦ “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಬೇಕು, ‘ನೀವು ಯೊರ್ದನ್ ನದಿಯನ್ನು ದಾಟಿ ಕಾನಾನ್ ದೇಶವನ್ನು ಸೇರಿದ ನಂತರ,
to speak: speak to(wards) son: descendant/people Israel and to say to(wards) them for you(m. p.) to pass [obj] [the] Jordan land: country/planet [to] Canaan
11 ೧೧ ಆಶ್ರಯ ಸ್ಥಾನಗಳಾಗುವುದಕ್ಕೆ ಪಟ್ಟಣಗಳನ್ನು ನೇಮಿಸಬೇಕು. ಕೈತಪ್ಪಿ ಮತ್ತೊಬ್ಬನನ್ನು ಕೊಂದವನು ಅವುಗಳಲ್ಲಿ ಒಂದಕ್ಕೆ ಓಡಿಹೋಗಿ ಸುರಕ್ಷಿತನಾಗಿರಬಹುದು.
and to meet to/for you city city refuge to be to/for you and to flee there [to] to murder to smite soul: person in/on/with unintentionally
12 ೧೨ ಅವನು ಸಭೆಯವರಿಂದ ತೀರ್ಪು ಹೊಂದುವುದಕ್ಕಿಂತ ಮೊದಲೇ ಹತವಾದವನ ಸಮೀಪಬಂಧುವಿನಿಂದ ಸಾಯದಂತೆ ಆ ಆಶ್ರಯ ಪಟ್ಟಣಗಳು ನಿಮ್ಮೊಳಗೆ ಇರಬೇಕು.
and to be to/for you [the] city to/for refuge from to redeem: avenge and not to die [the] to murder till to stand: stand he to/for face: before [the] congregation to/for justice: judgement
13 ೧೩ ಹೀಗೆ ಆರು ಪಟ್ಟಣಗಳನ್ನು ಆಶ್ರಯದ ಪಟ್ಟಣಗಳಾಗಿ ನೇಮಿಸಬೇಕು.
and [the] city which to give: give six city refuge to be to/for you
14 ೧೪ ನೀವು ಯೊರ್ದನ್ ನದಿಯ ಆಚೆಯಲ್ಲಿ ಮೂರು ಮತ್ತು ಕಾನಾನ್ ದೇಶದಲ್ಲಿ ಮೂರು ಪಟ್ಟಣಗಳನ್ನು ನೇಮಿಸಬೇಕು. ಅವು ಆಶ್ರಯದ ಪಟ್ಟಣಗಳಾಗಿ ಇರಬೇಕು.
[obj] three [the] city to give: give from side: beyond to/for Jordan and [obj] three [the] city to give: give in/on/with land: country/planet Canaan city refuge to be
15 ೧೫ ಕೈತಪ್ಪಿ ಮತ್ತೊಬ್ಬನನ್ನು ಕೊಂದವನು ಇಸ್ರಾಯೇಲನಾಗಲಿ, ಪರದೇಶದವನಾಗಲಿ ಮತ್ತು ನಿಮ್ಮಲ್ಲಿ ಇಳಿದುಕೊಂಡವನಾಗಲಿ ಆ ಆರು ಪಟ್ಟಣಗಳೊಳಗೆ ಒಂದಕ್ಕೆ ಓಡಿಹೋಗಿ ಆಶ್ರಯಹೊಂದಬಹುದು.
to/for son: descendant/people Israel and to/for sojourner and to/for sojourner in/on/with midst their to be six [the] city [the] these to/for refuge to/for to flee there [to] all to smite soul: person in/on/with unintentionally
16 ೧೬ “‘ಯಾವನಾದರೂ ಕಬ್ಬಿಣದ ಆಯುಧದಿಂದ ಮತ್ತೊಬ್ಬನನ್ನು ಹೊಡೆದು ಕೊಂದರೆ ಅವನು ನರಹತ್ಯೆ ಮಾಡಿದವನೆಂದು ನೀವು ನಿರ್ಣಯಿಸಬೇಕು. ಅಂಥವನಿಗೆ ಮರಣಶಿಕ್ಷೆಯಾಗಬೇಕು.
and if in/on/with article/utensil iron to smite him and to die to murder he/she/it to die to die [the] to murder
17 ೧೭ ಯಾವನಾದರೂ ಮನುಷ್ಯನನ್ನು ಕೊಲ್ಲುವಷ್ಟು ದೊಡ್ಡ ಕಲ್ಲನ್ನು ಕೈಯಲ್ಲಿ ಹಿಡಿದು ಮತ್ತೊಬ್ಬನನ್ನು ಹೊಡೆದು ಕೊಂದರೆ ಅವನು ನರಹತ್ಯೆ ಮಾಡಿದವನೇ. ಅವನಿಗೆ ಮರಣಶಿಕ್ಷೆಯಾಗಬೇಕು.
and if in/on/with stone hand: tool which to die in/on/with her to smite him and to die to murder he/she/it to die to die [the] to murder
18 ೧೮ ಯಾವನಾದರೂ ಮನುಷ್ಯನನ್ನು ಕೊಲ್ಲುವಷ್ಟು ದೊಡ್ಡ ಮರದ ಆಯುಧವನ್ನು ಕೈಯಲ್ಲಿ ಹಿಡಿದು ಮತ್ತೊಬ್ಬನನ್ನು ಹೊಡೆದು ಕೊಂದರೆ ಅವನು ನರಹತ್ಯೆಮಾಡಿದವನೇ. ಅವನಿಗೆ ಮರಣಶಿಕ್ಷೆಯಾಗಬೇಕು.
or in/on/with article/utensil tree: stick hand: tool which to die in/on/with him to smite him and to die to murder he/she/it to die to die [the] to murder
19 ೧೯ ನರಹತ್ಯೆಮಾಡಿದವನು ಎಲ್ಲಿ ಸಿಕ್ಕಿದರೂ ಅವನನ್ನು ಕೊಲ್ಲಬೇಕಾದವನು ಯಾರೆಂದರೆ ಹತವಾದವನ ಸಮೀಪಬಂಧುವೇ.
to redeem: avenge [the] blood he/she/it to die [obj] [the] to murder in/on/with to fall on he in/on/with him he/she/it to die him
20 ೨೦ ಯಾವನಾದರೂ ಮತ್ತೊಬ್ಬನನ್ನು ಹಗೆಮಾಡಿ ನೂಕುವುದರಿಂದಾಗಲಿ, ಸಮಯ ನೋಡಿಕೊಂಡು ಅವನ ಮೇಲೆ ಏನಾದರೂ ಎಸೆಯುವುದರಿಂದಾಗಲಿ,
and if in/on/with hating to thrust him or to throw upon him in/on/with ambush and to die
21 ೨೧ ಇಲ್ಲವೆ ದ್ವೇಷದಿಂದ ಕೈಯಾರೆ ಹೊಡೆಯುವುದರಿಂದಾಗಲಿ ಕೊಂದರೆ ಅವನು ನರಹತ್ಯೆಮಾಡಿದವನೇ. ಅವನಿಗೆ ಮರಣಶಿಕ್ಷೆಯಾಗಬೇಕು. ಹತವಾದವನ ಸಮೀಪಬಂಧುವು ಅವನನ್ನು ಎಲ್ಲಿ ಕಂಡರೂ ಕೊಲ್ಲಬೇಕು.
or in/on/with enmity to smite him in/on/with hand his and to die to die to die [the] to smite to murder he/she/it to redeem: avenge [the] blood to die [obj] [the] to murder in/on/with to fall on he in/on/with him
22 ೨೨ “‘ಆದರೆ ಒಬ್ಬನು ಯಾವ ದ್ವೇಷವೂ ಇಲ್ಲದೆ ಆಕಸ್ಮಾತ್ತಾಗಿ ನೂಕುವುದರಿಂದಾಗಲಿ, ಹಾನಿಮಾಡುವ ಸಮಯವನ್ನು ನೋಡಿಕೊಳ್ಳದೆ ಏನಾದರೂ ಎಸೆಯುವುದರಿಂದಾಗಲಿ,
and if in/on/with suddenness in/on/with not enmity to thrust him or to throw upon him all article/utensil in/on/with not ambush
23 ೨೩ ಕೊಲ್ಲುವಷ್ಟು ದೊಡ್ಡ ಕಲ್ಲನ್ನು ತಿಳಿಯದೆ ಬೀಳಿಸುವುದರಿಂದಾಗಲಿ ಮತ್ತೊಬ್ಬನು ಸತ್ತರೆ ಅವನು ಆ ಮನುಷ್ಯನಿಗೆ ವೈರಿಯಾಗಿರದೆಯೂ ಹಾನಿಯನ್ನು ಮಾಡಬೇಕೆಂಬ ಅಭಿಪ್ರಾಯವಿಲ್ಲದೆಯೂ ಇದ್ದ ಪಕ್ಷಕ್ಕೆ,
or in/on/with all stone which to die in/on/with her in/on/with not to see: see and to fall: fall upon him and to die and he/she/it not enemy to/for him and not to seek distress: harm his
24 ೨೪ ಸಭೆಯವರು ಹತ್ಯೆಮಾಡಿದವನಿಗೂ, ಹತವಾದವನ ಸಮೀಪಬಂಧುವಿಗೂ ಈ ಸಂಗತಿಗಳಿಗೆ ಅನುಸಾರವಾಗಿ ನ್ಯಾಯತೀರಿಸಬೇಕು.
and to judge [the] congregation between [the] to smite and between to redeem: avenge [the] blood upon [the] justice: judgement [the] these
25 ೨೫ ಸಭೆಯು ಹತ್ಯಮಾಡಿದವನನ್ನು ಆ ಸಮೀಪ ಬಂಧುವಿನ ಕೈಯಿಂದ ತಪ್ಪಿಸಿ ಅವನು ಓಡಿಹೋಗಿದ್ದ ಆಶ್ರಯನಗರಕ್ಕೆ ತಿರುಗಿ ಸೇರಿಸಬೇಕು. ಪಟ್ಟಾಭಿಷೇಕ ಹೊಂದಿದ ಮಹಾಯಾಜಕನು ಜೀವದಿಂದಿರುವ ತನಕ ಅವನು ಆ ಪಟ್ಟಣದಲ್ಲೇ ವಾಸಿಸಬೇಕು.
and to rescue [the] congregation [obj] [the] to murder from hand to redeem: avenge [the] blood and to return: rescue [obj] him [the] congregation to(wards) city refuge his which to flee there [to] and to dwell in/on/with her till death [the] priest [the] great: large which to anoint [obj] him in/on/with oil [the] holiness
26 ೨೬ “‘ಆ ಹತ್ಯೆಮಾಡಿದವನು ಯಾವಾಗಲಾದರೂ ತಾನು ಓಡಿಹೋಗಿದ್ದು ಆಶ್ರಯಪಟ್ಟಣದ ಮೇರೆಯ ಹೊರಗೆ ಹೋಗಿರುವಾಗ,
and if to come out: come to come out: extends [the] to murder [obj] border: boundary city refuge his which to flee there [to]
27 ೨೭ ಹತವಾದವನ ಸಮೀಪಬಂಧುವು ಅವನನ್ನು ಆಶ್ರಯಪಟ್ಟಣದ ಹೊರಗೆ ಕಂಡು ಕೊಂದುಹಾಕಿದರೆ ಅವನು ಕೊಲೆಪಾತಕನಾಗುವುದಿಲ್ಲ.
and to find [obj] him to redeem: avenge [the] blood from outside to/for border: boundary city refuge his and to murder to redeem: avenge [the] blood [obj] [the] to murder nothing to/for him blood
28 ೨೮ ಮಹಾಯಾಜಕನು ಜೀವದಿಂದಿರುವ ತನಕ ಅವನು ಆಶ್ರಯ ಪಟ್ಟಣದೊಳಗೆ ಇರಬೇಕಾಗಿತ್ತು. ಮಹಾಯಾಜಕನು ತೀರಿಹೋದ ನಂತರ ಅವನು ತನ್ನ ಸ್ವಾಸ್ತ್ಯವಿರುವ ಸ್ಥಳಕ್ಕೆ ಹೋಗಬಹುದು.
for in/on/with city refuge his to dwell till death [the] priest [the] great: large and after death [the] priest [the] great: large to return: return [the] to murder to(wards) land: country/planet possession his
29 ೨೯ “‘ನೀವೂ, ನಿಮ್ಮ ಸಂತತಿಯವರೂ ನಿಮ್ಮ ಎಲ್ಲಾ ವಾಸಸ್ಥಳಗಳಲ್ಲಿ ಈ ಮಾತುಗಳಿಗೆ ಅನುಸಾರವಾಗಿ ನ್ಯಾಯತೀರಿಸಬೇಕು.
and to be these to/for you to/for statute justice: judgement to/for generation your in/on/with all seat your
30 ೩೦ ಯಾವನಾದರೂ ಮತ್ತೊಬ್ಬನನ್ನು ಕೊಂದಾಗ ನೀವು ಸಾಕ್ಷಿಗಳನ್ನು ವಿಚಾರಿಸಿಕೊಂಡು ಅವನಿಗೆ ಮರಣಶಿಕ್ಷೆಯನ್ನು ವಿಧಿಸಬಾರದು.
all to smite soul: person to/for lip: word witness to murder [obj] [the] to murder and witness one not to answer in/on/with soul: person to/for to die
31 ೩೧ “‘ಮರಣಶಿಕ್ಷೆಗೆ ಪಾತ್ರನಾದ ಕೊಲೆಪಾತಕನನ್ನು ಉಳಿಸುವುದಕ್ಕೆ ಈಡನ್ನು ತೆಗೆದುಕೊಳ್ಳಬಾರದು. ಅವನಿಗೆ ಮರಣಶಿಕ್ಷೆಯೇ ಆಗಬೇಕು.
and not to take: recieve ransom to/for soul: life to murder which he/she/it wicked to/for to die for to die to die
32 ೩೨ ನೀವು ಆಶ್ರಯಪಟ್ಟಣಕ್ಕೆ ಓಡಿಹೋದವನಿಂದ ಧನವನ್ನು ತೆಗೆದುಕೊಂಡು ಮಹಾಯಾಜಕನು ಜೀವದಿಂದಿರುವಾಗಲೇ ಸ್ವಸ್ಥಳಕ್ಕೆ ಹೋಗಗೊಡಿಸಬಾರದು. ಅವನಿಗೆ ಮರಣಶಿಕ್ಷೆಯೇ ಆಗಬೇಕು.
and not to take: recieve ransom to/for to flee to(wards) city refuge his to/for to return: return to/for to dwell in/on/with land: country/planet till death [the] priest
33 ೩೩ “‘ನೀವು ಹೀಗೆ ನಡೆದುಕೊಂಡರೆ ನಿಮ್ಮ ದೇಶವು ಅಪವಿತ್ರವಾಗುವುದಿಲ್ಲ. ರಕ್ತವು ದೇಶವನ್ನು ಅಪವಿತ್ರ ಮಾಡುವುದು. ಕೊಲ್ಲಲ್ಪಟ್ಟವನ ರಕ್ತಕ್ಕಾಗಿ ಕೊಂದವನ ರಕ್ತದಿಂದಲೇ ಹೊರತು ಬೇರೆ ಪ್ರಾಯಶ್ಚಿತ್ತವಿಲ್ಲ.
and not to pollute [obj] [the] land: country/planet which you(m. p.) in/on/with her for [the] blood he/she/it to pollute [obj] [the] land: country/planet and to/for land: country/planet not to atone to/for blood which to pour: kill in/on/with her for if: except in/on/with blood to pour: kill him
34 ೩೪ ನೀವು ವಾಸಿಸುವ ದೇಶವನ್ನು ಅಪವಿತ್ರಮಾಡಬಾರದು. ಯೆಹೋವನೆಂಬ ನಾನೇ ಇಸ್ರಾಯೇಲರ ಮಧ್ಯದಲ್ಲಿ ವಾಸಿಸುತ್ತೇನೆ.’”
and not to defile [obj] [the] land: country/planet which you(m. p.) to dwell in/on/with her which I to dwell in/on/with midst her for I LORD to dwell in/on/with midst son: descendant/people Israel