< ಅರಣ್ಯಕಾಂಡ 34 >

1 ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
परमेश्वर मोशेशी बोलला व म्हणाला,
2 “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಬೇಕು, ‘ಸಮಸ್ತ ಕಾನಾನ್ ದೇಶವೇ ನಿಮಗೆ ಸ್ವದೇಶವಾಗಿ ದೊರಕುವುದು.
इस्राएल लोकांस ही आज्ञा दे आणि त्यांना सांग, तुम्ही कनान देशात येत आहात. तुम्ही त्या देशाचा पराभव करा. तुम्ही सर्व कनान देश घ्या.
3 ನೀವು ಅಲ್ಲಿ ಸೇರಿದಾಗ ಎದೋಮ್ಯರ ಗಡಿಗಳ ಬಳಿಯಲ್ಲಿರುವ ಚಿನ್ ಅರಣ್ಯವು ನಿಮ್ಮ ದಕ್ಷಿಣದ ಮೇರೆಯಾಗಿರಬೇಕು. ಆ ಮೇರೆಯ ಪೂರ್ವದಿಕ್ಕಿನಲ್ಲಿರುವ ಲವಣಸಮುದ್ರದ ಕೊನೆಯಿಂದ ಪ್ರಾರಂಭಿಸಬೇಕು.
दक्षिणेकडे अदोमाजवळच्या त्सीन रानाचा काही भाग तुम्हास मिळेल. तुमची दक्षिणेकडची सीमा मृत समुद्राच्या दक्षिण टोकापासून सुरु होईल.
4 ದಕ್ಷಿಣಕ್ಕೆ ತಿರುಗಿಕೊಂಡು ಅಕ್ರಬ್ಬೀಮ್ ಎಂಬ ಕಣಿವೆಯ ಮಾರ್ಗವಾಗಿ ಚಿನಿಗೆ ಬರಬೇಕು. ಅದರ ಮೂಲೆ ಕಾದೇಶ್ ಬರ್ನೇಯದ ದಕ್ಷಿಣದ ಕಡೆಯಲ್ಲಿರುವುದು. ಅಲ್ಲಿಂದ ಅದು ಹಚರದ್ದಾರಿಗೆ ಹೊರಟು ಅಚ್ಮೋನಿಗೆ ಹಾದು ಹೋಗಬೇಕು.
तेथून अक्रब्बीम चढावाचे दक्षिण टोक पार करून ती त्सीन रानातून कादेश-बर्ण्याला जाईल. आणि नंतर हसर-अद्दारपर्यंत जाऊन असमोनाला पोहोचेल.
5 ಅಚ್ಮೋನಿನಿಂದ ಐಗುಪ್ತ ದೇಶದ ಹಳ್ಳಕ್ಕೆ ಬಂದು ಸಮುದ್ರದ ದಡದಲ್ಲಿ ಮುಗಿಯಬೇಕು.
असमोनाहून ती मिसर देशाच्या नदीपर्यंत जाईल आणि समुद्रात तिची समाप्ती होईल.
6 ಪಶ್ಚಿಮ ದಿಕ್ಕಿನಲ್ಲಿ ಮಹಾಸಮುದ್ರದ ದಡವೇ ನಿಮ್ಮ ದೇಶದ ಮೇರೆಯಾಗಿರುವುದು.
तुमची पश्चिमेकडची सीमा म्हणजे महासमुद्र व त्याचा किनारा राहिल तीच तुमची पश्चिम सीमा आहे.
7 ಉತ್ತರ ದಿಕ್ಕಿನ ಮೇರೆಗಾಗಿ ನೀವು ಮಹಾಸಮುದ್ರದಿಂದ,
तुमची उत्तरेकडची सीमा महासमुद्रात सुरु होईल व होर पर्वताकडे एक रेषा आंखावी.
8 ಹೋರ್ ಪರ್ವತದಿಂದ ಹಮಾತಿನವರೆಗೂ ಮತ್ತು ಅಲ್ಲಿಂದ ಚೆದಾದಿನ ಹತ್ತಿರಕ್ಕೆ ಇರುವುದು.
होर पर्वतावरुन ती लेबो हमाथाला जाईल व तेथून सदादला.
9 ಆ ಮೇಲೆ ಅದು ಜಿಫ್ರೋನಿಗೆ ಹೋಗಿ ಹಚರೇನಾನಿನ ಬಳಿಯಲ್ಲಿ ಮುಗಿಯಬೇಕು. ಇದು ನಿಮ್ಮ ಉತ್ತರ ದಿಕ್ಕಿನ ಮೇರೆಯಾಗಿರುವುದು.
नंतर ती सीमा जिप्रोनला जाईल व हसर-एनानला ती संपेल. तेव्हा ती तुमची उत्तर सीमा.
10 ೧೦ ಪೂರ್ವದಿಕ್ಕಿನ ಮೇರೆಗಾಗಿ ಹಚರೇನಾನಿನಿಂದ ಶೆಫಾಮಿಗೆ ಗುರುತು ಹಾಕಬೇಕು.
१०तुमची पूर्व सीमा हसर-एनानजवळ सुरु होईल व ती शफामपर्यंत जाईल.
11 ೧೧ ಶೆಫಾಮಿನಿಂದ ಅಯಿನಿನ ಪೂರ್ವದಲ್ಲಿರುವ ರಿಬ್ಲಕ್ಕೆ ಬರಬೇಕು. ತರುವಾಯ ಅದು ಗಟ್ಟಾ ಇಳಿದು ಕಿನ್ನೆರೆತ್ ಸಮುದ್ರದ ಪೂರ್ವದಲ್ಲಿರುವ ಬೆಟ್ಟಗಳಿಗೆ ಹೋಗಬೇಕು.
११शफामपासून ती अईनाच्या पूर्वेकडे रिब्लाला जाईल. ती सीमा उतरत किन्नेरेथ समुद्राच्या पूर्वेकडील किनाऱ्याच्या पर्वतांच्या रांगापर्यंत जाईल.
12 ೧೨ ಅಲ್ಲಿಂದ ಅದು ಯೊರ್ದನ್ ನದಿಗೆ ಇಳಿದು ಅದನ್ನು ಅನುಸರಿಸಿ ಲವಣಸಮುದ್ರದ ಬಳಿಯಲ್ಲಿ ಮುಗಿಯಬೇಕು. ಇವೇ ನಿಮ್ಮ ದೇಶದ ಮೇರೆಗಳು’” ಎಂದನು.
१२आणि नंतर ती यार्देन नदीच्या काठाने जाऊन मृतसमुद्रात तिची समाप्ती होईल. तुझ्या देशाच्या या सीमा आहेत.
13 ೧೩ ಅದಕ್ಕನುಸಾರವಾಗಿ ಮೋಶೆಯು ಇಸ್ರಾಯೇಲರಿಗೆ, “ನೀವು ಚೀಟುಹಾಕಿ ಹಂಚಿಕೊಳ್ಳಬೇಕೆಂದು ಯೆಹೋವನು ಆಜ್ಞಾಪಿಸಿದ ದೇಶವು ಇದೇ. ಒಂಭತ್ತುವರೆ ಕುಲದವರಿಗೆ ಇದನ್ನು ಹಂಚಿಕೊಡಬೇಕು.
१३तेव्हा मोशेने इस्राएल लोकांस आज्ञा केली व म्हणाला की, चिठ्ठ्या टाकून ज्या देशाचे वतन तुम्हास मिळणार आहे. म्हणजे साडे नऊ वंशाना जो देश देण्याचे परमेश्वराने देण्याचे ठरविले आहे तो हाच.
14 ೧೪ ರೂಬೇನ್ಯರ ಮಕ್ಕಳ ಗೋತ್ರವೂ, ಗಾದ್ಯರ ಮಕ್ಕಳ ಗೋತ್ರವೂ, ಮನಸ್ಸೆ ಕುಲದವರಲ್ಲಿ ಅರ್ಧಗೋತ್ರವೂ ತಮ್ಮ ಪೂರ್ವಿಕರ ಗೋತ್ರಗಳ ಪ್ರಕಾರವಾಗಿ ತಮ್ಮ ಸ್ವತ್ತನ್ನು ಹೊಂದಿದ್ದಾರೆ.
१४रऊबेन आणि गादची वंश आणि मनश्शेच्या अर्ध्या वंशानी आधीच त्यांचे वतन घेतले आहे.
15 ೧೫ ಎರಡುವರೆ ಗೋತ್ರಗಳು ತಮ್ಮ ಸ್ವತ್ತನ್ನು ಯೊರ್ದನ್ ನದಿಯ ಆಚೆ ಯೆರಿಕೋ ಪಟ್ಟಣದ ಪೂರ್ವದಿಕ್ಕಿನಲ್ಲಿ ಪಡೆದುಕೊಂಡಿದ್ದಾರೆ.”
१५त्या अडीच वंशानी यरीहोजवळ यार्देन नदीच्या पूर्वेकडचे वतन मिळाले आहे.
16 ೧೬ ಯೆಹೋವನು ಮೋಶೆಯ ಸಂಗಡ ಮಾತನಾಡಿ ಆಜ್ಞಾಪಿಸಿದ್ದೇನೆಂದರೆ,
१६नंतर परमेश्वर मोशेशी बोलला. तो म्हणाला,
17 ೧೭ “ದೇಶವನ್ನು ನಿಮಗೆ ಹಂಚಬೇಕಾದ ಜನರ ಹೆಸರುಗಳು ಯಾವುವೆಂದರೆ: ಮಹಾಯಾಜಕನಾದ ಎಲ್ಲಾಜಾರನು ಮತ್ತು ನೂನನ ಮಗನಾದ ಯೆಹೋಶುವನೂ.
१७जो पुरुष हा देश तुम्हास वतन म्हणून वाटून देणार आहे तो याजक एलाजार आणि नूनाचा मुलगा यहोशवा.
18 ೧೮ ಒಂದೊಂದು ಕುಲದಿಂದ ನೇಮಿಸಲ್ಪಟ್ಟ ಒಬ್ಬ ಕುಲಾಧಿಪತಿಯೂ ಇವರೇ. ಇವರು ಕಾನಾನ್ ದೇಶದಲ್ಲಿ ತಮ್ಮ ತಮ್ಮ ಸ್ವತ್ತುಗಳನ್ನು ಹಂಚಿಕೊಡಬೇಕು.
१८प्रत्येक वंशाचा एक प्रमुख वतन म्हणून देशाची विभागणी करण्यास घ्यावा.
19 ೧೯ ನೀವು ಆಯಾ ಕುಲಗಳಿಂದ ನೇಮಿಸಬೇಕಾದವರು ಯಾರೆಂದರೆ: ಯೆಹೂದ ಕುಲದಿಂದ ಯೆಫುನ್ನೆಯ ಮಗನಾದ ಕಾಲೇಬ್,
१९त्या मनुष्यांची नावे ही आहेत यहूदाच्या वंशातला, यफुन्नेचा मुलगा कालेब.
20 ೨೦ ಸಿಮೆಯೋನ್ ಕುಲದಿಂದ ಅಮ್ಮಿಹೂದನ ಮಗ ಶೆಮೂವೇಲ್,
२०शिमोनाच्या वंशातील, अम्मीहुदाचा मुलगा शमुवेल.
21 ೨೧ ಬೆನ್ಯಾಮೀನ್ ಕುಲದಿಂದ ಕಿಸ್ಲೋನನ ಮಗ ಎಲೀದಾದ್,
२१बन्यामिनाच्या वंशातील, किसलोनाचा मुलगा अलीदाद.
22 ೨೨ ದಾನ್ ಕುಲದಿಂದ ಯೊಗ್ಲೀಯ ಮಗ ಬುಕ್ಕೀ ಕುಲಾಧಿಪತಿ,
२२दानी वंशातील, सरदार यागलीचा मुलगा बुक्की.
23 ೨೩ ಯೋಸೇಫನ ವಂಶದವರಲ್ಲಿ: ಮನಸ್ಸೆ ಕುಲದಿಂದ ಏಫೋದನ ಮಗ ಹನ್ನೀಯೇಲ್ ಕುಲಾಧಿಪತಿ,
२३योसेफाच्या वंशातील, सरदार मनश्शेच्या वंशातील, एफोदाचा मुलगा हन्नीएल.
24 ೨೪ ಎಫ್ರಾಯೀಮ್ ಕುಲದಿಂದ ಶಿಫ್ಟಾನನ ಮಗ ಕೆಮೂವೇಲ್ ಕುಲಾಧಿಪತಿ,
२४एफ्राईम वंशातील, सरदार शिफटानाचा मुलगा कमुवेल.
25 ೨೫ ಜೆಬುಲೂನ್ ಕುಲದಿಂದ ಪರ್ನಾಕನ ಮಗ ಎಲೀಚಾಫಾನ್ ಕುಲಾಧಿಪತಿ,
२५जबुलून वंशातील सरदार पनीकाचा मुलगा अलीसाफान.
26 ೨೬ ಇಸ್ಸಾಕಾರ್ ಕುಲದಿಂದ ಅಜ್ಜಾನನ ಮಗ ಪಲ್ಟೀಯೇಲ್ ಕುಲಾಧಿಪತಿ,
२६इस्साखार वंशातील सरदार अज्जानाचा मुलगा पलटीयेल.
27 ೨೭ ಆಶೇರ್ ಕುಲದಿಂದ ಶೆಲೋಮಮೀಯ ಮಗ ಅಹೀಹೂದ್ ಕುಲಾಧಿಪತಿ,
२७आशेरी वंशातील सरदार शलोमीचा मुलगा अहीहूद.
28 ೨೮ ನಫ್ತಾಲಿ ಕುಲದಿಂದ ಅಮ್ಮಿಹೂದನ ಮಗ ಪೆದಹೇಲ್ ಕುಲಾಧಿಪತಿ ಇವರೇ.”
२८आणि नफताली वंशातील सरदार अम्मीहुदाचा मुलगा पदाहेल.
29 ೨೯ ಕಾನಾನ್ ದೇಶದಲ್ಲಿ ಇಸ್ರಾಯೇಲರಿಗೆ ಅವರವರ ಸ್ವತ್ತುಗಳನ್ನು ಹಂಚಿಕೊಡುವುದಕ್ಕೆ ಯೆಹೋವನು ಇವರನ್ನೆಲ್ಲಾ ನೇಮಿಸಿದನು.
२९परमेश्वराने कनानाच्या भूमीची इस्राएल लोकांमध्ये वाटणी करण्यासाठी या मनुष्यांची निवड केली.

< ಅರಣ್ಯಕಾಂಡ 34 >