< ಅರಣ್ಯಕಾಂಡ 34 >
1 ೧ ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
上主訓示梅瑟說:「
2 ೨ “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಬೇಕು, ‘ಸಮಸ್ತ ಕಾನಾನ್ ದೇಶವೇ ನಿಮಗೆ ಸ್ವದೇಶವಾಗಿ ದೊರಕುವುದು.
你命令以色列子民說:你們幾時進入客納罕地,這地應是你們抽籤分配的產業。客納罕地的邊界是:
3 ೩ ನೀವು ಅಲ್ಲಿ ಸೇರಿದಾಗ ಎದೋಮ್ಯರ ಗಡಿಗಳ ಬಳಿಯಲ್ಲಿರುವ ಚಿನ್ ಅರಣ್ಯವು ನಿಮ್ಮ ದಕ್ಷಿಣದ ಮೇರೆಯಾಗಿರಬೇಕು. ಆ ಮೇರೆಯ ಪೂರ್ವದಿಕ್ಕಿನಲ್ಲಿರುವ ಲವಣಸಮುದ್ರದ ಕೊನೆಯಿಂದ ಪ್ರಾರಂಭಿಸಬೇಕು.
你們南部的地區,是由親曠野直到厄東邊境。你們南邊的邊界是:由鹽海的極端往東,
4 ೪ ದಕ್ಷಿಣಕ್ಕೆ ತಿರುಗಿಕೊಂಡು ಅಕ್ರಬ್ಬೀಮ್ ಎಂಬ ಕಣಿವೆಯ ಮಾರ್ಗವಾಗಿ ಚಿನಿಗೆ ಬರಬೇಕು. ಅದರ ಮೂಲೆ ಕಾದೇಶ್ ಬರ್ನೇಯದ ದಕ್ಷಿಣದ ಕಡೆಯಲ್ಲಿರುವುದು. ಅಲ್ಲಿಂದ ಅದು ಹಚರದ್ದಾರಿಗೆ ಹೊರಟು ಅಚ್ಮೋನಿಗೆ ಹಾದು ಹೋಗಬೇಕು.
繞過阿刻辣賓高地的南部,經過親直達卡德士巴爾乃亞南部,再到哈匝爾阿達爾,經過阿茲孟,
5 ೫ ಅಚ್ಮೋನಿನಿಂದ ಐಗುಪ್ತ ದೇಶದ ಹಳ್ಳಕ್ಕೆ ಬಂದು ಸಮುದ್ರದ ದಡದಲ್ಲಿ ಮುಗಿಯಬೇಕು.
由阿茲孟邊界再轉向埃及河,直到大海。
6 ೬ ಪಶ್ಚಿಮ ದಿಕ್ಕಿನಲ್ಲಿ ಮಹಾಸಮುದ್ರದ ದಡವೇ ನಿಮ್ಮ ದೇಶದ ಮೇರೆಯಾಗಿರುವುದು.
西部的邊界:大海作你們的邊界,這是你們西方的邊界。
7 ೭ ಉತ್ತರ ದಿಕ್ಕಿನ ಮೇರೆಗಾಗಿ ನೀವು ಮಹಾಸಮುದ್ರದಿಂದ,
你們北方的邊界如下:由大海劃界,直到曷爾山;
8 ೮ ಹೋರ್ ಪರ್ವತದಿಂದ ಹಮಾತಿನವರೆಗೂ ಮತ್ತು ಅಲ್ಲಿಂದ ಚೆದಾದಿನ ಹತ್ತಿರಕ್ಕೆ ಇರುವುದು.
由曷爾山劃到哈瑪特關口,使邊界直達責辣得。
9 ೯ ಆ ಮೇಲೆ ಅದು ಜಿಫ್ರೋನಿಗೆ ಹೋಗಿ ಹಚರೇನಾನಿನ ಬಳಿಯಲ್ಲಿ ಮುಗಿಯಬೇಕು. ಇದು ನಿಮ್ಮ ಉತ್ತರ ದಿಕ್ಕಿನ ಮೇರೆಯಾಗಿರುವುದು.
這邊界再伸至齊弗龍,直達哈匝爾厄南:這是你們北方的邊界。
10 ೧೦ ಪೂರ್ವದಿಕ್ಕಿನ ಮೇರೆಗಾಗಿ ಹಚರೇನಾನಿನಿಂದ ಶೆಫಾಮಿಗೆ ಗುರುತು ಹಾಕಬೇಕು.
你們東部的邊界:自哈匝爾厄南劃到舍番。
11 ೧೧ ಶೆಫಾಮಿನಿಂದ ಅಯಿನಿನ ಪೂರ್ವದಲ್ಲಿರುವ ರಿಬ್ಲಕ್ಕೆ ಬರಬೇಕು. ತರುವಾಯ ಅದು ಗಟ್ಟಾ ಇಳಿದು ಕಿನ್ನೆರೆತ್ ಸಮುದ್ರದ ಪೂರ್ವದಲ್ಲಿರುವ ಬೆಟ್ಟಗಳಿಗೆ ಹೋಗಬೇಕು.
由舍番邊界下延至阿殷東面的黎貝拉;由此邊界,再下延與基乃勒特海東岸相接。
12 ೧೨ ಅಲ್ಲಿಂದ ಅದು ಯೊರ್ದನ್ ನದಿಗೆ ಇಳಿದು ಅದನ್ನು ಅನುಸರಿಸಿ ಲವಣಸಮುದ್ರದ ಬಳಿಯಲ್ಲಿ ಮುಗಿಯಬೇಕು. ಇವೇ ನಿಮ್ಮ ದೇಶದ ಮೇರೆಗಳು’” ಎಂದನು.
此後,邊界再沿約但河下延,直達鹽海:這是你們疆土四周的邊界。」
13 ೧೩ ಅದಕ್ಕನುಸಾರವಾಗಿ ಮೋಶೆಯು ಇಸ್ರಾಯೇಲರಿಗೆ, “ನೀವು ಚೀಟುಹಾಕಿ ಹಂಚಿಕೊಳ್ಳಬೇಕೆಂದು ಯೆಹೋವನು ಆಜ್ಞಾಪಿಸಿದ ದೇಶವು ಇದೇ. ಒಂಭತ್ತುವರೆ ಕುಲದವರಿಗೆ ಇದನ್ನು ಹಂಚಿಕೊಡಬೇಕು.
梅瑟又吩咐以色列子民說:「這就是你們應抽籤分為產業的地方,是上主命令分給九個半支派的,
14 ೧೪ ರೂಬೇನ್ಯರ ಮಕ್ಕಳ ಗೋತ್ರವೂ, ಗಾದ್ಯರ ಮಕ್ಕಳ ಗೋತ್ರವೂ, ಮನಸ್ಸೆ ಕುಲದವರಲ್ಲಿ ಅರ್ಧಗೋತ್ರವೂ ತಮ್ಮ ಪೂರ್ವಿಕರ ಗೋತ್ರಗಳ ಪ್ರಕಾರವಾಗಿ ತಮ್ಮ ಸ್ವತ್ತನ್ನು ಹೊಂದಿದ್ದಾರೆ.
因為勒烏本子孫支派和加得子孫支派,為自己的家族已取得產業;默納協半支派也取得了自己的產業:
15 ೧೫ ಎರಡುವರೆ ಗೋತ್ರಗಳು ತಮ್ಮ ಸ್ವತ್ತನ್ನು ಯೊರ್ದನ್ ನದಿಯ ಆಚೆ ಯೆರಿಕೋ ಪಟ್ಟಣದ ಪೂರ್ವದಿಕ್ಕಿನಲ್ಲಿ ಪಡೆದುಕೊಂಡಿದ್ದಾರೆ.”
這兩個半支派,已在耶里哥對面,約但河東岸,向日出之地,取得了產業。」
16 ೧೬ ಯೆಹೋವನು ಮೋಶೆಯ ಸಂಗಡ ಮಾತನಾಡಿ ಆಜ್ಞಾಪಿಸಿದ್ದೇನೆಂದರೆ,
上主又訓示梅瑟說:「
17 ೧೭ “ದೇಶವನ್ನು ನಿಮಗೆ ಹಂಚಬೇಕಾದ ಜನರ ಹೆಸರುಗಳು ಯಾವುವೆಂದರೆ: ಮಹಾಯಾಜಕನಾದ ಎಲ್ಲಾಜಾರನು ಮತ್ತು ನೂನನ ಮಗನಾದ ಯೆಹೋಶುವನೂ.
這是給你們分配土地的人名:厄肋阿匝爾大司祭和農的兒子若蘇;
18 ೧೮ ಒಂದೊಂದು ಕುಲದಿಂದ ನೇಮಿಸಲ್ಪಟ್ಟ ಒಬ್ಬ ಕುಲಾಧಿಪತಿಯೂ ಇವರೇ. ಇವರು ಕಾನಾನ್ ದೇಶದಲ್ಲಿ ತಮ್ಮ ತಮ್ಮ ಸ್ವತ್ತುಗಳನ್ನು ಹಂಚಿಕೊಡಬೇಕು.
此外由每支派選派一位首領來分配土地;
19 ೧೯ ನೀವು ಆಯಾ ಕುಲಗಳಿಂದ ನೇಮಿಸಬೇಕಾದವರು ಯಾರೆಂದರೆ: ಯೆಹೂದ ಕುಲದಿಂದ ಯೆಫುನ್ನೆಯ ಮಗನಾದ ಕಾಲೇಬ್,
這些人的名字就是:猶大支派,是耶孚乃的兒子加肋布;
20 ೨೦ ಸಿಮೆಯೋನ್ ಕುಲದಿಂದ ಅಮ್ಮಿಹೂದನ ಮಗ ಶೆಮೂವೇಲ್,
西默盎子孫支派,是阿米胡得的兒子舍慕耳;
21 ೨೧ ಬೆನ್ಯಾಮೀನ್ ಕುಲದಿಂದ ಕಿಸ್ಲೋನನ ಮಗ ಎಲೀದಾದ್,
本雅明支派,是基斯隆的兒子厄里達得;
22 ೨೨ ದಾನ್ ಕುಲದಿಂದ ಯೊಗ್ಲೀಯ ಮಗ ಬುಕ್ಕೀ ಕುಲಾಧಿಪತಿ,
丹子孫支派的首領,是約革里的兒子步克;
23 ೨೩ ಯೋಸೇಫನ ವಂಶದವರಲ್ಲಿ: ಮನಸ್ಸೆ ಕುಲದಿಂದ ಏಫೋದನ ಮಗ ಹನ್ನೀಯೇಲ್ ಕುಲಾಧಿಪತಿ,
若瑟子孫:默納協子孫支派的首領,是厄缶得的兒子哈尼耳;
24 ೨೪ ಎಫ್ರಾಯೀಮ್ ಕುಲದಿಂದ ಶಿಫ್ಟಾನನ ಮಗ ಕೆಮೂವೇಲ್ ಕುಲಾಧಿಪತಿ,
厄弗辣因子孫支派的首領,是色弗堂的兒子刻慕耳;
25 ೨೫ ಜೆಬುಲೂನ್ ಕುಲದಿಂದ ಪರ್ನಾಕನ ಮಗ ಎಲೀಚಾಫಾನ್ ಕುಲಾಧಿಪತಿ,
則步隆子孫支派的首領,是帕爾納客的兒子厄里匝番;
26 ೨೬ ಇಸ್ಸಾಕಾರ್ ಕುಲದಿಂದ ಅಜ್ಜಾನನ ಮಗ ಪಲ್ಟೀಯೇಲ್ ಕುಲಾಧಿಪತಿ,
依撒加爾子孫支派的首領,是阿倉的兒子帕耳提耳;
27 ೨೭ ಆಶೇರ್ ಕುಲದಿಂದ ಶೆಲೋಮಮೀಯ ಮಗ ಅಹೀಹೂದ್ ಕುಲಾಧಿಪತಿ,
阿協爾子孫支派的首領,是舍羅米的兒子阿希胡得;
28 ೨೮ ನಫ್ತಾಲಿ ಕುಲದಿಂದ ಅಮ್ಮಿಹೂದನ ಮಗ ಪೆದಹೇಲ್ ಕುಲಾಧಿಪತಿ ಇವರೇ.”
納斐塔里子孫支派的首領,是阿米胡得的兒子培達赫耳。」
29 ೨೯ ಕಾನಾನ್ ದೇಶದಲ್ಲಿ ಇಸ್ರಾಯೇಲರಿಗೆ ಅವರವರ ಸ್ವತ್ತುಗಳನ್ನು ಹಂಚಿಕೊಡುವುದಕ್ಕೆ ಯೆಹೋವನು ಇವರನ್ನೆಲ್ಲಾ ನೇಮಿಸಿದನು.
這些人是上主任命,為在客納罕地給以色列子民分配產業的人。」