< ಅರಣ್ಯಕಾಂಡ 2 >

1 ಯೆಹೋವನು ಮಾತನಾಡಿ ಮೋಶೆ ಮತ್ತು ಆರೋನರಿಗೆ ಹೇಳಿದ್ದೇನೆಂದರೆ,
و خداوند موسی و هارون را خطاب کرده، گفت:۱
2 “ಇಸ್ರಾಯೇಲರೆಲ್ಲರೂ ಒಬ್ಬೊಬ್ಬರಾಗಿ ಕುಟುಂಬದ ಗುರುತುಗಳ ಪ್ರಕಾರ ದೇವದರ್ಶನದ ಗುಡಾರದ ಸುತ್ತಲೂ ಸ್ವಲ್ಪ ದೂರವಾಗಿ ಡೇರೆಗಳನ್ನು ತಮ್ಮ ತಮ್ಮ ದಂಡಿನ ಧ್ವಜದ ಹತ್ತಿರದಲ್ಲಿ ಹಾಕಿಕೊಳ್ಳಬೇಕು. ಅವರು ದೇವದರ್ಶನದ ಗುಡಾರದ ಎದುರಿನಲ್ಲಿ ಇಳಿದುಕೊಳ್ಳಬೇಕು.”
«هر کس از بنی‌اسرائیل نزد علم ونشان خاندان آبای خویش خیمه زند، در برابر واطراف خیمه اجتماع خیمه زنند.۲
3 ದೇವದರ್ಶನ ಗುಡಾರದ ಪೂರ್ವದಿಕ್ಕಿನಲ್ಲಿ ಸೂರ್ಯೋದಯವಾಗುವ ಕಡೆಗೆ ಯೆಹೂದ ಕುಲದ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ತಮ್ಮ ದಂಡಿನ ಧ್ವಜದ ಹತ್ತಿರ ಡೇರೆಗಳನ್ನು ಹಾಕಿಕೊಳ್ಳಬೇಕು. ಯೆಹೂದ ಕುಲದ ಸೈನ್ಯಾಧಿಪತಿಯು ಅಮ್ಮೀನಾದಾಬನ ಮಗನಾದ ನಹಶೋನನು.
و به‌جانب مشرق به سوی طلوع آفتاب اهل علم محله یهودابرحسب افواج خود خیمه زنند، و رئیس بنی یهودا نحشون بن عمیناداب باشد.۳
4 ಅವನ ಸೈನಿಕರ ಸಂಖ್ಯೆ 74,600 ಮಂದಿ.
و فوج اوکه از ایشان شمرده شدند هفتاد و چهار هزار وششصد نفر بودند.۴
5 ಯೆಹೂದ ಕುಲದ ಬಳಿಯಲ್ಲಿ ಇಳಿದುಕೊಳ್ಳುವವರು ಇಸ್ಸಾಕಾರನ ಕುಲದವರು. ಚೂವಾರನ ಮಗನಾದ ನೆತನೇಲನು ಇಸ್ಸಾಕಾರರ ಸೈನ್ಯಾಧಿಪತಿ.
و سبط یساکار در پهلوی اوخیمه زنند، و رئیس بنی یساکار نتنائیل بن صوغرباشد.۵
6 ಅವನ ಸೈನಿಕರ ಸಂಖ್ಯೆ 54,400 ಮಂದಿ.
و فوج او که از ایشان شمرده شدند پنجاه و چهار هزار و چهارصد نفر بودند.۶
7 ಇಸ್ಸಾಕಾರರ ಬಳಿಯಲ್ಲಿ ಇಳಿದುಕೊಳ್ಳುವವರು ಜೆಬುಲೂನ್ ಕುಲದವರು. ಹೇಲೋನನ ಮಗನಾದ ಎಲೀಯಾಬನು ಜೆಬುಲೂನ್ಯರ ಸೈನ್ಯಾಧಿಪತಿ.
و سبطزبولون و رئیس بنی زبولون الیاب بن حیلون باشد.۷
8 ಅವನ ಸೈನಿಕರ ಸಂಖ್ಯೆ 57,400 ಮಂದಿ.
و فوج او که از ایشان شمرده شدند، پنجاه وهفت هزار و چهارصد نفر بودند.۸
9 ಹೀಗೆ ಯೆಹೂದ ಕುಲದ ದಂಡಿಗೆ ಸೇರಿದವರ ಸೈನಿಕರ ಒಟ್ಟು ಸಂಖ್ಯೆ 1,86,400 ಮಂದಿ. ಇವರು ಮುಂಭಾಗದಲ್ಲಿ ಹೊರಡಬೇಕು.
جمیع شمرده شدگان محله یهودا برحسب افواج ایشان صد و هشتاد و شش هزار و چهارصد نفر بودند. وایشان اول کوچ کنند.۹
10 ೧೦ ದಕ್ಷಿಣ ದಿಕ್ಕಿನಲ್ಲಿ ರೂಬೇನ್ ಕುಲದ ದಂಡಿಗೆ ಸೇರಿದವರು ಸೈನ್ಯ ಸೈನ್ಯವಾಗಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಶೆದೇಯೂರನ ಮಗನಾದ ಎಲೀಚೂರನು ರೂಬೇನ್ ಕುಲದ ಸೈನ್ಯಾಧಿಪತಿ.
و بر جانب جنوب، علم محله روبین برحسب افواج ایشان باشد، و رئیس بنی روبین الیصور بن شدیئور باشد.۱۰
11 ೧೧ ಅವನ ಸೈನಿಕರ ಸಂಖ್ಯೆ 46,500 ಮಂದಿ.
و فوج او که از ایشان شمرده شدند چهل و شش هزار و پانصد نفر بودند.۱۱
12 ೧೨ ರೂಬೇನ್ ಕುಲದವರ ಬಳಿಯಲ್ಲಿ ಇಳಿದುಕೊಳ್ಳುವವರು ಸಿಮೆಯೋನ್ ಕುಲದವರು. ಚೂರೀಷದ್ದೈಯನ ಮಗನಾದ ಶೆಲುಮೀಯೇಲನು ಸಿಮೆಯೋನ್ ಕುಲದ ಸೈನ್ಯಾಧಿಪತಿ.
و در پهلوی او سبط شمعون خیمه زنندو رئیس بنی شمعون شلومیئیل بن صوریشدای باشد.۱۲
13 ೧೩ ಅವನ ಸೈನಿಕರ ಸಂಖ್ಯೆ 59,300 ಮಂದಿ.
و فوج او که از ایشان شمرده شدند، پنجاه و نه هزار و سیصد نفر بودند.۱۳
14 ೧೪ ತರುವಾಯ ಗಾದ್ಯರ ಕುಲದವರು. ರೆಗೂವೇಲನ ಮಗನಾದ ಎಲ್ಯಾಸಾಫನು ಗಾದ್ ಕುಲದ ಸೈನ್ಯಾಧಿಪತಿ.
و سبط جادو رئیس بنی جاد الیاساف بن رعوئیل باشد.۱۴
15 ೧೫ ಅವನ ಸೈನಿಕರ ಸಂಖ್ಯೆ 45,650 ಮಂದಿ.
وفوج او که از ایشان شمرده شدند، چهل و پنج هزار و ششصد و پنجاه نفر بودند.۱۵
16 ೧೬ ಹೀಗೆ ರೂಬೇನ್ ಕುಲದ ದಂಡಿಗೆ ಸೇರಿದ ಸೈನಿಕರ ಒಟ್ಟು ಸಂಖ್ಯೆ 1,51,450 ಮಂದಿ. ಇವರು ಎರಡನೆಯ ದಂಡಾಗಿ ಹೊರಡಬೇಕು.
جمیع شمرده شدگان محله روبین برحسب افواج ایشان صد و پنجاه و یک هزار و چهارصد و پنجاه نفربودند و ایشان دوم کوچ کنند.۱۶
17 ೧೭ ಅನಂತರ ಸೈನ್ಯಗಳ ಮಧ್ಯದಲ್ಲಿ ದೇವದರ್ಶನದ ಗುಡಾರವು ಲೇವಿಯರ ಪಾಳೆಯದಿಂದ ಹೊರಡಬೇಕು. ಅವರು ಇಳಿದುಕೊಳ್ಳುವ ಪ್ರಕಾರವೇ ತಮ್ಮ ತಮ್ಮ ಧ್ವಜಗಳನ್ನು ಹಿಡಿದುಕೊಂಡು ತಮಗೆ ಗೊತ್ತಾದ ಸ್ಥಾನದಲ್ಲಿ ಹೊರಡಬೇಕು.
و بعد از آن خیمه اجتماع با محله لاویان درمیان محله‌ها کوچ کند، چنانکه خیمه می‌زنند، همچنان هر کس در جای خود نزد علمهای خویش کوچ کنند.۱۷
18 ೧೮ ಪಶ್ಚಿಮ ದಿಕ್ಕಿನಲ್ಲಿ ಎಫ್ರಾಯೀಮ್ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಅಮ್ಮೀಹೂದನ ಮಗನಾದ ಎಲೀಷಾಮಾನು ಎಫ್ರಾಯೀಮ್ ಕುಲದ ಸೈನ್ಯಾಧಿಪತಿ.
و به طرف مغرب، علم محله افرایم برحسب افواج ایشان و رئیس بنی افرایم، الیشمع بن عمیهود باشد.۱۸
19 ೧೯ ಅವನ ಸೈನಿಕರ ಸಂಖ್ಯೆ 40,500 ಮಂದಿ.
و فوج او که از ایشان شمرده شدند، چهل هزار و پانصد نفر بودند.۱۹
20 ೨೦ ಎಫ್ರಾಯೀಮ್ ಬಳಿಯಲ್ಲಿ ಮನಸ್ಸೆ ಕುಲದವರೂ ತಮ್ಮ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಪೆದಾಚೂರನ ಮಗನಾದ ಗಮ್ಲೀಯೇಲ್ ಮನಸ್ಸೆ ಕುಲದ ಸೈನ್ಯಾಧಿಪತಿ.
و درپهلوی او سبط منسی، و رئیس بنی منسی جملیئیل بن فدهصور باشد.۲۰
21 ೨೧ ಅವನ ಸೈನಿಕರ ಸಂಖ್ಯೆ 32,200 ಮಂದಿ.
و فوج او که ازایشان شمرده شدند، سی و دو هزار و دویست نفربودند.۲۱
22 ೨೨ ತರುವಾಯ ಬೆನ್ಯಾಮೀನ ಕುಲದವರು. ಗಿದ್ಯೋನಿಯ ಮಗನಾದ ಅಬೀದಾನ್ ಬೆನ್ಯಾಮೀನ ಕುಲದ ಸೈನ್ಯಾಧಿಪತಿ.
و سبط بنیامین و رئیس بنی بنیامین، ابیدان بن جدعونی باشد.۲۲
23 ೨೩ ಅವನ ಸೈನಿಕರ ಸಂಖ್ಯೆ 35,400 ಮಂದಿ.
و فوج او که از ایشان شمرده شدند، سی و پنج هزار و چهارصد نفربودند.۲۳
24 ೨೪ ಹೀಗೆ ಎಫ್ರಾಯೀಮ್ಯರ ದಂಡಿಗೆ ಸೇರಿದ ಸೈನಿಕರ ಒಟ್ಟು ಸಂಖ್ಯೆ 1,08,100 ಮಂದಿ. ಇವರು ಮೂರನೆಯ ದಂಡಾಗಿ ಹೊರಡಬೇಕು.
جمیع شمرده شدگان محله افرایم برحسب افواج ایشان، صد و هشت هزار و یکصدنفر بودند، و ایشان سوم کوچ کنند.۲۴
25 ೨೫ ಉತ್ತರ ದಿಕ್ಕಿನಲ್ಲಿ ದಾನ್ ಕುಲದ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಅಮ್ಮೀಷದ್ದೈಯ ಮಗನಾದ ಅಹೀಗೆಜೆರ್ ದಾನ್ ಕುಲದ ಸೈನ್ಯಾಧಿಪತಿ.
و به طرف شمال، علم محله دان، برحسب افواج ایشان، و رئیس بنی دان اخیعزر بن عمیشدای باشد.۲۵
26 ೨೬ ಅವನ ಸೈನಿಕರ ಸಂಖ್ಯೆ 62,700 ಮಂದಿ.
و فوج او که از ایشان شمرده شدند، شصت و دو هزاروهفت صد نفر بودند.۲۶
27 ೨೭ ದಾನ್ ಕುಲದ ಬಳಿಯಲ್ಲಿ ಆಶೇರ್ ಕುಲದವರು ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಒಕ್ರಾನನ ಮಗನಾದ ಪಗೀಯೇಲನು ಆಶೇರ್ ಕುಲದವರ ಸೈನ್ಯಾಧಿಪತಿ.
ودر پهلوی ایشان سبط اشیر خیمه زنند، و رئیس بنی اشیر فجعیئیل بن عکران باشد.۲۷
28 ೨೮ ಅವನ ಸೈನಿಕರ ಸಂಖ್ಯೆ 41,500 ಮಂದಿ.
و فوج او که از ایشان شمرده شدند، چهل و یک هزار و پانصدنفر بودند.۲۸
29 ೨೯ ತರುವಾಯ ನಫ್ತಾಲಿ ಕುಲದವರು, ಏನಾನನ ಮಗನಾದ ಅಹೀರನು ನಫ್ತಾಲಿ ಕುಲದ ಸೈನ್ಯಾಧಿಪತಿ.
و سبط نفتالی و رئیس بنی نفتالی اخیرع بن عینان باشد.۲۹
30 ೩೦ ಅವನ ಸೈನಿಕರ ಸಂಖ್ಯೆ 53,400 ಮಂದಿ.
و فوج او که از ایشان شمرده شدند، پنجاه و سه هزار و چهارصد نفربودند.۳۰
31 ೩೧ ಹೀಗೆ ದಾನ್ ಕುಲದ ದಂಡಿಗೆ ಸೇರಿದ ಸೈನಿಕರ ಒಟ್ಟು ಸಂಖ್ಯೆ 1,57,600 ಮಂದಿ. ಇವರು ಕಡೆಯ ದಂಡಾಗಿ ಹೊರಡಬೇಕು.
جمیع شمرده شدگان محله دان، صد وپنجاه و هفت هزار و ششصد نفر بودند. ایشان نزدعلمهای خود در عقب کوچ کنند.۳۱
32 ೩೨ ಮೋಶೆ ಮತ್ತು ಆರೋನರು ಇಸ್ರಾಯೇಲರ ಗೋತ್ರಗಳ ಪ್ರಕಾರ ದಂಡುಗಳಲ್ಲಿ ಸೈನಿಕರಾಗಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ 6,03,550 ಮಂದಿ.
اینانند شمرده شدگان بنی‌اسرائیل برحسب خاندان آبای ایشان، جمیع شمرده شدگان محله‌ها موافق افواج ایشان شش صد و سه هزار وپانصد و پنجاه نفر بودند.۳۲
33 ೩೩ ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಲೇವಿಯರು ಇಸ್ರಾಯೇಲರ ಸಂಗಡ ಲೆಕ್ಕಹಾಕಲಿಲ್ಲ.
اما لاویان چنانکه خداوند به موسی‌امر فرموده بود، در میان بنی‌اسرائیل شمرده نشدند.۳۳
34 ೩೪ ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಾಯೇಲರು ಮಾಡಿದರು. ಹಾಗೆಯೇ ದಂಡು ದಂಡಾಗಿ ಡೇರೆಗಳನ್ನು ಹಾಕಿಕೊಳ್ಳುತ್ತಿದ್ದರು ಮತ್ತು ಗೋತ್ರಕುಟುಂಬಗಳ ಪ್ರಕಾರವೇ ಹೊರಡುತ್ತಿದ್ದರು.
و بنی‌اسرائیل موافق هرچه خداوند به موسی‌امر فرموده بود، عمل نمودند، به اینطورنزد علمهای خود خیمه می‌زدند و به اینطور هرکس برحسب قبایل خود با خاندان آبای خودکوچ می‌کردند.۳۴

< ಅರಣ್ಯಕಾಂಡ 2 >