< ಅರಣ್ಯಕಾಂಡ 17 >

1 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ,
És szólt az Örökkévaló Mózeshez, mondván:
2 “ನೀನು ಇಸ್ರಾಯೇಲರ ಸಂಗಡ ಮಾತನಾಡಿ, ‘ಅವರ ಪೂರ್ವಿಕರ ಒಂದೊಂದು ಕುಲದ ಅಧಿಪತಿಯಿಂದ ಗೋತ್ರಗಳ ಪ್ರಕಾರವಾಗಿ ಒಂದೊಂದು ಕೋಲುಗಳನ್ನು ತೆಗೆದುಕೊಳ್ಳಬೇಕು. ಗೋತ್ರಗಳ ಪ್ರಕಾರವಾಗಿ ಒಬ್ಬೊಬ್ಬ ಪ್ರಧಾನರ ಹೆಸರಿನಲ್ಲಿ ಹನ್ನೆರಡು ಕೋಲುಗಳನ್ನು ತೆಗೆದುಕೊಳ್ಳಬೇಕು. ಅವನವನ ಕೋಲಿನ ಮೇಲೆ ಅವರ ಹೆಸರನ್ನು ಬರೆಯಿಸಬೇಕು.
Szólj Izrael fiaihoz és vegyél tőlük egy-egy botot az atyai ház szerint, minden fejedelmeiktől, atyáik háza szerint, tizenkét botot; mindegyiknek nevét írd az ő botjára.
3 ಲೇವಿ ಕುಲಕ್ಕೂ ಒಂದು ಕೋಲು ಇರುವುದರಿಂದ ಅದರ ಮೇಲೆ ಆರೋನನ ಹೆಸರನ್ನು ಬರೆಯಿಸಬೇಕು ಏಕೆಂದರೆ ಅವರ ಪೂರ್ವಿಕರ ಗೋತ್ರದ ಮುಖ್ಯಸ್ಥನಿಗೆ ಒಂದು ಕೋಲು ಇರಬೇಕು.
Áron nevét pedig írd Lévi botjára, mert egy botja legyen az ő atyáik háza fejének.
4 ನೀನು ಆ ಕೋಲುಗಳನ್ನು ದೇವದರ್ಶನದ ಗುಡಾರದಲ್ಲಿ ಆಜ್ಞಾಶಾಸನಗಳ ಮುಂದೆ ನಾನು ನಿಮಗೆ ದರ್ಶನಕೊಡುವ ಸ್ಥಳದಲ್ಲಿ ಇಡಬೇಕು.
És tedd azokat a gyülekezés sátorába, a bizonyság elé, ahol találkozom veletek.
5 ನಾನು ಯಾರನ್ನು ಆಯ್ದುಕೊಳ್ಳುತ್ತೇನೋ ಅವನ ಕೋಲು ಚಿಗುರುವುದು. ಇಸ್ರಾಯೇಲರು ನಿಮ್ಮಿಬ್ಬರ ವಿರುದ್ಧವಾಗಿ ಗುಣುಗುಟ್ಟುವುದನ್ನು ನಾನು ನಿಲ್ಲಿಸಿ ಬಿಡುವೆನು’” ಎಂದನು.
És lesz, az a férfiú, akit én kiválasztok, annak botja fog kivirulni; így elhárítom magamról Izrael fiainak zúgolódását, mellyel ők ellenetek zúgolódnak.
6 ಅದಕ್ಕೆ ಮೋಶೆಯು ಇಸ್ರಾಯೇಲರ ಸಂಗಡ ಮಾತನಾಡಿದನು. ಅವರ ಕುಲಾಧಿಪತಿಗಳೆಲ್ಲರೂ ಕುಲಕ್ಕೆ ಒಂದು ಕೋಲಿನ ಪ್ರಕಾರ ಹನ್ನೆರಡು ಕೋಲುಗಳನ್ನು ಅವನ ಕೈಗೆ ಕೊಟ್ಟರು. ಅವುಗಳೊಡನೆ ಆರೋನನ ಕೋಲೂ ಇತ್ತು.
És Mózes szólt Izrael fiainak és adtak neki mind a fejedelmeik egy-egy botot egy-egy fejedelem részére, atyáik háza szerint, tizenkét botot; és Áron botja az ő botjaik között.
7 ಮೋಶೆ ಆ ಕೋಲುಗಳನ್ನು ಆಜ್ಞಾಶಾಸನಗಳಿರುವ ಗುಡಾರದಲ್ಲಿ ಯೆಹೋವನ ಸನ್ನಿಧಿಯಲ್ಲಿ ಇಟ್ಟನು.
Mózes pedig odatette a botokat az Örökkévaló színe elé, a bizonyság sátorába.
8 ಮರುದಿನ ಮೋಶೆಯು ಆಜ್ಞಾಶಾಸನಗಳಿರುವ ಗುಡಾರದಲ್ಲಿ ಹೋಗಿ ನೋಡಲಾಗಿ ಅಗೋ, ಲೇವಿ ಕುಲಕ್ಕೋಸ್ಕರ ಆರೋನನಿಗೆ ಕೊಟ್ಟಿದ್ದ ಕೋಲು ಚಿಗುರಿ, ಮೊಗ್ಗುಬಿಟ್ಟು ಹೂವಾಗಿ ಬಾದಾಮಿ ಹಣ್ಣುಗಳನ್ನು ಫಲಿಸಿತ್ತು!
És volt másnap, bement Mózes a bizonyság sátorába, íme kivirult Áron botja, Lévi háza számára; bimbót fakasztott, virágot hajtott és mandolát érlelt.
9 ಮೋಶೆ ಆ ಕೋಲುಗಳನ್ನೆಲ್ಲಾ ಯೆಹೋವನ ಸನ್ನಿಧಿಯಿಂದ ಇಸ್ರಾಯೇಲರ ಬಳಿಗೆ ತಂದು ತೋರಿಸಿದನು. ಅವರು ನೋಡಿ ತಮ್ಮತಮ್ಮ ಕೋಲುಗಳನ್ನು ಪರೀಕ್ಷಿಸಿ ತೆಗೆದುಕೊಂಡರು.
És kivitte Mózes mind a botokat, az Örökkévaló színe elől Izrael minden fiaihoz; látták és elvitte kiki az ő botját.
10 ೧೦ ತರುವಾಯ ಯೆಹೋವನು ಮೋಶೆಗೆ, “ಆರೋನನ ಕೋಲನ್ನು ತಿರುಗಿ ಆಜ್ಞಾಶಾಸನಗಳ ಮುಂದೆ ಇಡಬೇಕು. ಅದು ತಿರುಗಿಬೀಳುವವರಿಗೆ ದೃಷ್ಟಾಂತವಾಗಿ ಅಲ್ಲೇ ಇರಬೇಕು. ಇವರು ಇನ್ನು ಮುಂದೆ ನನಗೆ ವಿರುದ್ಧವಾಗಿ ಗುಣುಗುಟ್ಟಿ ನಾಶವಾಗದಂತೆ ನೀನು ಹೀಗೆ ಮಾಡು” ಎಂದು ಆಜ್ಞಾಪಿಸಿದನು.
És mondta az Örökkévaló Mózesnek; Tedd vissza Áron botját a bizonyság elé őrizet végett, jelül az ellenszegülés fiai számára, hogy megszűntesd zúgolódásukat ellenem, és meg ne haljanak.
11 ೧೧ ಯೆಹೋವನ ಅಪ್ಪಣೆಯ ಪ್ರಕಾರವೇ ಮೋಶೆ ಮಾಡಿದನು.
És Mózes megcselekedte; amint az Örökkévaló parancsolta neki, úgy cselekedett.
12 ೧೨ ಇಸ್ರಾಯೇಲರು ಮೋಶೆಯ ಬಳಿಗೆ ಬಂದು ಅವನಿಗೆ, “ನಾವು ಇಲ್ಲಿ ಸಾಯುತ್ತೇವೆ; ಇಲ್ಲವೇ ನಾಶವಾಗಿ ಹೋಗುತ್ತೇವೆ.
És Izrael fiai szóltak Mózeshez, mondván: Íme, elpusztulunk, elveszünk, mindnyájan elveszünk!
13 ೧೩ ಯೆಹೋವನ ಗುಡಾರದ ಹತ್ತಿರಕ್ಕೆ ಬರುವವರೆಲ್ಲರೂ ಸಾಯುತ್ತಾರಷ್ಟೆ; ನಾವೆಲ್ಲರೂ ಹಾಗೆಯೇ ಸಾಯಬೇಕೇನು?” ಎಂದು ಕೇಳಿದರು.
Mindenki, aki közel megy az Örökkévaló hajlékához, meghal; hát vajon teljesen elpusztulunk-e?

< ಅರಣ್ಯಕಾಂಡ 17 >