< ಅರಣ್ಯಕಾಂಡ 13 >

1 ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
တဖန် ထာဝရဘုရားသည် မောရှေအား မိန့် တော်မူသည်ကား၊
2 “ನಾನು ಇಸ್ರಾಯೇಲರಿಗೆ ಕೊಡುವ ಕಾನಾನ್ ದೇಶವನ್ನು ಸಂಚರಿಸಿ ನೋಡುವುದಕ್ಕೆ ನೀನು ಒಂದೊಂದು ಕುಲದಿಂದ ಒಬ್ಬೊಬ್ಬ ಮುಖ್ಯಸ್ಥನನ್ನು ಕಳುಹಿಸಬೇಕು” ಎಂದು ಆಜ್ಞಾಪಿಸಿದನು.
ဣသရေလ အမျိုးသားတို့အား ငါပေးသော ခါနာန်ပြည်ကို စူးစမ်းစေခြင်းငှါ၊ အမျိုးအနွယ်အသီး အသီးထဲက အဆွေအမျိုးသူကြီးဖြစ်သောသူ တမျိုး တယောက်စီ ရွေးကောက်၍ စေလွှတ်လော့ဟု၊
3 ಯೆಹೋವನ ಅಪ್ಪಣೆಯ ಮೇರೆಗೆ ಮೋಶೆ ಪಾರಾನ್ ಅರಣ್ಯದಿಂದ ಇಸ್ರಾಯೇಲರ ಮುಖ್ಯಸ್ಥರನ್ನು ಕಳುಹಿಸಿದನು.
ထာဝရဘုရားမှာ ထားတော်မူသည်အတိုင်း၊ မောရှေသည် လူတို့ကို ပါရန်တောက စေလွှတ်လေ၏။ စေလွှတ်သောသူအပေါင်းတို့သည် ဣသရေလအမျိုး၌ အကဲအမှူးဖြစ်ကြ၏။
4 ಅವರ ಹೆಸರುಗಳು ಯಾವುವೆಂದರೆ: ರೂಬೇನ್ ಕುಲದ ಜಕ್ಕೂರನ ಮಗನಾದ ಶಮ್ಮೂವ,
သူတို့အမည်ကား၊ ရုဗင်အမျိုး၊ ဇက္ကုရသားရှမွာ။
5 ಸಿಮೆಯೋನ್ ಕುಲದ ಹೋರಿಯನ ಮಗನಾದ ಶಾಫಾಟ್,
ရှိမောင်အမျိုး၊ ဟောရိသား၊ ရှာဖတ်။
6 ಯೆಹೂದ ಕುಲದ ಯೆಫುನ್ನೆಯನ ಮಗನಾದ ಕಾಲೇಬ್,
ယုဒအမျိုး၊ ယေဖုန္နသားကာလက်၊
7 ಇಸ್ಸಾಕಾರ್ ಕುಲದ ಯೋಸೇಫನ ಮಗನಾದ ಇಗಾಲ್,
ဣသခါမအမျိုး၊ ယောသပ်သားဣဂါလ။
8 ಎಫ್ರಾಯೀಮ್ ಕುಲದ ನೂನನ ಮಗನಾದ ಹೋಶೇಯ,
ဧဖရိမ်အမျိုး၊ နုန်သားဩရှေ
9 ಬೆನ್ಯಾಮೀನ್ ಕುಲದ ರಾಫೂವನ ಮಗನಾದ ಪಲ್ಟೀ,
ဗင်္ယာမိန်အမျိုး၊ ရာဖုသားပါလတိ။
10 ೧೦ ಜೆಬುಲೂನ್ ಕುಲದ ಸೋದೀಯನ ಮಗನಾದ ಗದ್ದೀಯೇಲ್,
၁၀ဇာဗုလုန်အမျိုး၊ သောဒိသား ဂါဒျေလ။
11 ೧೧ ಯೋಸೇಫ್ ಅಂದರೆ ಮನಸ್ಸೆ ಕುಲದ ಸೂಸೀಯನ ಮಗನಾದ ಗದ್ದೀ,
၁၁ယောသပ်သားတွင် မနာရှေအမျိုး၊ သုသိသား ဂဒ္ဒိ။
12 ೧೨ ದಾನ್ ಕುಲದ ಗೆಮಲ್ಲೀಯನ ಮಗನಾದ ಅಮ್ಮೀಯೇಲ್,
၁၂ဒန်အမျိုး၊ ဂေမလ္လိသားအမျေလ။
13 ೧೩ ಆಶೇರ್ ಕುಲದ ಮೀಕಾಯೇಲನ ಮಗನಾದ ಸೆತೂರ್,
၁၃အာရှာအမျိုး၊ မိက္ခေလသား သေသုရ။
14 ೧೪ ನಫ್ತಾಲಿ ಕುಲದ ವಾಪೆಸೀಯನ ಮಗನಾದ ನಹಬೀ,
၁၄နဿလိအမျိုး၊ ဝါဖသိသားနာဘိ၊
15 ೧೫ ಗಾದ್ ಕುಲದ ಮಾಕೀಯನ ಮಗನಾದ ಗೆಯೂವೇಲ್.
၁၅ဂဒ်အမျိုး မာခိသားဂွေလတည်းဟူသော၊
16 ೧೬ ದೇಶವನ್ನು ಸಂಚರಿಸಿ ನೋಡುವುದಕ್ಕೆ ಮೋಶೆ ಕಳುಹಿಸಿದ ಮನುಷ್ಯರ ಹೆಸರುಗಳು ಇವೇ. ಮೋಶೆ ನೂನನ ಮಗನಾದ ಹೋಶೇಯನಿಗೆ ಯೆಹೋಶುವನೆಂದು ಹೆಸರಿಟ್ಟನು.
၁၆ခါနာန်ပြည်ကို စူးစမ်းစေခြင်းငှါ မောရှေ စေလွှတ်သော သူတို့၏အမည်တည်း။ နုန်၏သားဩရှေကို ယောရှုဟူသောအမည်ဖြင့် မောရှေမှည့်လေ၏။
17 ೧೭ ಕಾನಾನ್ ದೇಶದಲ್ಲಿ ಸಂಚರಿಸಿ ನೋಡುವುದಕ್ಕೆ ಮೋಶೆ ಅವರನ್ನು ಕಳುಹಿಸುವಾಗ ಅವರಿಗೆ, “ನೀವು ಕಾನಾನ್ ದೇಶದ ದಕ್ಷಿಣ ಪ್ರಾಂತ್ಯದ ಮಾರ್ಗವಾಗಿ ಬೆಟ್ಟದ ಸೀಮೆಗೆ ಹತ್ತಿಹೋಗಿ ಆ ದೇಶದ ಸಂಗತಿಯನ್ನೆಲ್ಲಾ ನೋಡಿ ತಿಳಿದುಕೊಳ್ಳಬೇಕು.
၁၇ခါနာန်ပြည်ကို စူးစမ်းစေခြင်းငှါ မောရှေ စေလွှတ်လျက်၊ သင်တို့သည် တောင်မျက်နှာလမ်းဖြင့် သွား၍ တောင်ရိုးပေါ်သို့ တက်ကြလော့။
18 ೧೮ ಅಲ್ಲಿನ ನಿವಾಸಿಗಳು ಬಲಿಷ್ಠರೋ ಅಥವಾ ಬಲಹೀನರೋ, ಬಹಳ ಜನರೋ ಅಥವಾ ಸ್ವಲ್ಪ ಜನರೋ,
၁၈ထိုပြည်သည် အဘယ်သို့သော ပြည်ဖြစ် သနည်း။ ပြည်သားတို့သည် အားကြီးသလော၊ အား နည်းသလော။ များသလော၊ နည်းသလော။
19 ೧೯ ಅವರ ದೇಶವು ಒಳ್ಳೆಯದೋ ಅಥವಾ ಕೆಟ್ಟದ್ದೋ? ಅವರ ಪಟ್ಟಣಗಳು ಪಾಳೆಯಗಳೋ ಅಥವಾ ಕೋಟೆಗಳೋ?
၁၉သူတို့နေသောပြည် သည် ကောင်းသလော၊ မကောင်းလော။ သူတို့နေသော မြို့ရွာတို့သည် အဘယ်သို့နည်း တဲနှင့်နေကြသလော။ ခိုင်ခံ့သော မြို့နှင့်နေကြသလော။
20 ೨೦ ಭೂಮಿಯು ಸಾರವಾದುದೋ ಅಥವಾ ನಿಸ್ಸಾರವಾದುದೋ, ಮರಗಳುಳ್ಳದ್ದೋ ಅಥವಾ ಬಯಲುಪ್ರದೇಶವೋ ಎಂದು ನೋಡಿ ತಿಳಿದುಕೊಳ್ಳಬೇಕು. ಅದಲ್ಲದೆ ನೀವು ಧೈರ್ಯವುಳ್ಳವರಾಗಿದ್ದು ಆ ದೇಶದ ಉತ್ಪನ್ನಗಳಲ್ಲಿ ಕೆಲವನ್ನು ತರಬೇಕು” ಎಂದು ಹೇಳಿದನು. ಆಗ ದ್ರಾಕ್ಷಾಲತೆಗಳ ಪ್ರಥಮ ಫಲದ ಕಾಲವಾಗಿತ್ತು.
၂၀ထိုမြေသည် ကောင်းသလော၊ မကောင်းလော၊ တောများသလော၊ နည်းသလောဟုကြည့်ရှုကြလော့။ ရဲရင့်သောစိတ်ရှိကြလော့။ သစ်သီးအချို့ကိုလည်း ယူခဲ့ ကြလော့ဟု မှာလိုက်လေ၏။ ထိုကာလသည် စပျစ်သီး မှည့်စကာလဖြစ်သတည်း။
21 ೨೧ ಅವರು ಬೆಟ್ಟವನ್ನು ಹತ್ತಿ ಚಿನ್ ಅರಣ್ಯದಿಂದ ಹಮಾತಿನ ದಾರಿಯಲ್ಲಿರುವ ರೆಹೋಬಿನ ವರೆಗೆ ಆ ದೇಶವನ್ನು ಸಂಚರಿಸಿ ನೋಡಿದರು.
၂၁ထိုသူတို့သည် ဇိနတောမှသွား၍ ဟာမတ်မြို့သို့ ရောက်သော လမ်းနား၊ ရဟောဘမြို့တိုင်အောင် ခါနာန် ပြည်ကို စူးစမ်းကြ၏။
22 ೨೨ ಅವರು ಬೆಟ್ಟವನ್ನು ಹತ್ತಿ ಕಾನಾನ್ ದೇಶದ ದಕ್ಷಿಣ ಪ್ರಾಂತ್ಯವನ್ನು ದಾಟಿ ಹೆಬ್ರೋನಿಗೆ ಬಂದರು. ಅಲ್ಲಿ ಅಹೀಮನ್, ಶೇಷೈ, ತಲ್ಮೈ ಎಂಬ ಉನ್ನತ ಪುರುಷರು ಇದ್ದರು. ಹೆಬ್ರೋನ್ ಪಟ್ಟಣವು ಐಗುಪ್ತ ದೇಶದಲ್ಲಿರುವ ಚೋವನ್ ಪಟ್ಟಣಕ್ಕಿಂತ ಏಳು ವರ್ಷ ಮೊದಲು ನಿರ್ಮಿಸಲಾಗಿತ್ತು.
၂၂တောင်မျက်နှာ၌ ရှောက်သွား၍ အာနက အမျိုး သားအဟိမန်၊ ရှေရှဲ တာလမဲနေသော ဟေဗြုန်မြို့သို့ ရောက်ကြ၏။ ဟေဗြုန်မြို့ကား၊ အဲဂုတ္တုပြည်၌ ဇောနမြို့ မတည်မှီ ခုနစ်နှစ်ကတည်းသော မြို့ဖြစ်သတည်း။
23 ೨೩ ಅವರು ಎಷ್ಕೋಲ್ ಎಂಬ ತಗ್ಗಿಗೆ ಬಂದು ಅಲ್ಲಿ ದ್ರಾಕ್ಷಾಲತೆಯಿಂದ ಒಂದೇ ಗೊಂಚಲುಳ್ಳ ಕೊಂಬೆಯನ್ನು ಕೊಯ್ದರು; ಇಬ್ಬರು ಅದನ್ನು ಅಡ್ಡಕೋಲಿನಿಂದ ಹೊತ್ತುಕೊಂಡು ಬಂದರು. ಕೆಲವು ದಾಳಿಂಬೆ ಮತ್ತು ಅಂಜೂರದ ಹಣ್ಣುಗಳನ್ನೂ ತಂದರು.
၂၃ဧရှကောလချိုင့်သို့ ရောက်လျှင် အသီးတပြွတ် ပါသောစပျစ်နွယ်ပင် အခက်တခက်ကို ခုတ်၍ လူ နှစ်ယောက်တို့သည် ထမ်းဘိုးနှင့်ထမ်းကြ၏။ သလဲသီး၊ သင်္ဘောသဖန်းသီးများကိုလည်း ဆောင်ခဲ့ကြ၏။
24 ೨೪ ಇಸ್ರಾಯೇಲರು ಅಲ್ಲಿ ಆ ದ್ರಾಕ್ಷಿಯ ಗೊಂಚಲನ್ನು ಕೊಯ್ದದ್ದರಿಂದಲೇ ಆ ಸ್ಥಳಕ್ಕೆ “ಎಷ್ಕೋಲ್” ಎಂದು ಹೆಸರು ಉಂಟಾಯಿತು.
၂၄ဣသရေလအမျိုးသားခုတ်ယူသော စပျစ်သီး ပြွတ်ကို ထောက်၍၊ ထိုချိုင့်ကို ဧရှကောလချိုင့်ဟူသော အမည်ဖြင့် မှည့်သတည်း။
25 ೨೫ ಅವರು ನಲ್ವತ್ತು ದಿನಗಳು ಆ ದೇಶವನ್ನು ಸಂಚರಿಸಿ ನೋಡಿದರು.
၂၅အရက်လေးဆယ်လွန်မှ ခါနာန်ပြည်ကို စူးစမ်း သော အမှုပြီး၍ ပြန်လာကြ၏။
26 ೨೬ ಆ ಮೇಲೆ ಪಾರಾನ್ ಅರಣ್ಯದಲ್ಲಿದ್ದ ಮೋಶೆ, ಆರೋನರು ಮತ್ತು ಇಸ್ರಾಯೇಲರ ಸರ್ವಸಮೂಹದವರ ಬಳಿಗೆ ಕಾದೇಶಿಗೆ ಬಂದು ಅವರಿಗೆ ಸಮಾಚಾರವನ್ನು ತಿಳಿಸಿ ಆ ದೇಶದ ಹಣ್ಣುಗಳನ್ನು ತೋರಿಸಿದರು.
၂၆မောရှေနှင့် အာရုန်မှစ၍ ဣသရေလအမျိုး သားပရိသတ်အပေါင်းတို့နေရာ ပါရန်တော၊ ကာဒေရှ အရပ်သို့ ရောက်သောအခါ ပရိသတ်အပေါင်းတို့အား သိတင်းကြားပြော၍ ထိုပြည်၌ သီးသော အသီးကို ပြကြ၏။
27 ೨೭ ಅವರು ಮೋಶೆಗೆ, “ನೀನು ನಮ್ಮನ್ನು ಕಳುಹಿಸಿದ ದೇಶಕ್ಕೆ ಹೋದೆವು; ಅದು ನಿಜವಾಗಿಯೂ ಹಾಲೂ ಮತ್ತು ಜೇನೂ ಹರಿಯುವ ದೇಶವೇ; ಅಲ್ಲಿನ ಹಣ್ಣುಗಳು ಇಂಥವು.
၂၇မောရှေအားလည်း၊ အကျွန်ုပ်တို့သည်ကိုယ်တော် စေလွှတ်သော ပြည်သို့ရောက်ခဲ့ပါပြီ။ အကယ်စင်စစ် ထိုပြည်သည် နို့နှင့်ပျားရည်စီးသော ပြည်ဖြစ်ပါ၏။ ဤအသီးတို့ ကား ထိုပြည်၌သီးသော အသီးဖြစ်ပါ၏။
28 ೨೮ ಆದರೆ ಆ ದೇಶದ ನಿವಾಸಿಗಳು ಬಲಿಷ್ಠರು: ಅವರಿರುವ ಪಟ್ಟಣಗಳು ದೊಡ್ಡದಾಗಿಯೂ, ಕೋಟೆ ಕೊತ್ತಲುಗಳುಳ್ಳದ್ದಾಗಿಯೂ ಇದೆ. ಅದಲ್ಲದೆ ಅಲ್ಲಿ ಉನ್ನತ ಪುರುಷರನ್ನು ನೋಡಿದೆವು.
၂၈သို့ရာတွင် ပြည်သူပြည်သားတို့သည် အားကြီး ပါ၏။ ခိုင်ခံ့သော မြို့ကြီးနှင့်နေကြပါ၏။ ထိုမျှမက အာနကအမျိုးသားတို့ကိုလည်း မြင်ရပါ၏။
29 ೨೯ ದಕ್ಷಿಣ ಸೀಮೆಯಲ್ಲಿ ಅಮಾಲೇಕ್ಯರು, ಬೆಟ್ಟದ ಸೀಮೆಯಲ್ಲಿ ಹಿತ್ತಿಯರು, ಯೆಬೂಸಿಯರು, ಅಮೋರಿಯರು ಸಮುದ್ರತೀರದಲ್ಲಿ ಮತ್ತು ಯೊರ್ದನ್ ಹೊಳೆಯ ಬಳಿಯಲ್ಲಿ ಕಾನಾನ್ಯರೂ ವಾಸವಾಗಿದ್ದಾರೆ” ಎಂದು ತಿಳಿಸಿದರು.
၂၉အာမလက်အမျိုးသားတို့သည် တောင်ဘက် ၌၎င်း၊ ဟိတ္တိလူ၊ ယေဗုသိလူ၊ အာမောရိလူတို့သည် တောင်ရိုးပေါ်၌၎င်း၊ ခါနာနိလူတို့သည် ပင်လယ်နား ယော်ဒန်မြစ်နား၌၎င်း၊ နေကြပါသည်ဟု လျှောက်ဆိုကြ ၏။
30 ೩೦ ಇಸ್ರಾಯೇಲರು ಮೋಶೆಗೆ ವಿರುದ್ಧವಾಗಿ ಗುಣುಗುಟ್ಟಿದರು. ಕಾಲೇಬನು ಅವರನ್ನು ಸುಮ್ಮನಿರಿಸಿ, “ನಾವು ನಿರ್ಭಯವಾಗಿ ಆ ಬೆಟ್ಟದ ಸೀಮೆಗೆ ಹತ್ತಿಹೋಗಿ ಅದನ್ನು ಸ್ವಾಧೀನಪಡಿಸಿಕೊಳ್ಳೋಣ. ಅದನ್ನು ಜಯಿಸಲು ನಾವು ಶಕ್ತರಾಗಿದ್ದೇವೆ” ಎಂದು ಹೇಳಿದನು.
၃၀ကာလက်ကလည်း ချက်ခြင်းချီသွား၍ ထိုပြည် ကို သိမ်းယူကြစို့။ အောင်နိုင်ကောင်းသည်ဟု ဆို၍ မောရှေရှေ့မှာ လူများတို့ကို ငြိမ်းစေ၏။
31 ೩೧ ಆದರೆ ಅವನ ಜೊತೆಯಲ್ಲಿ ಹೋದವರು, “ಆ ಜನರು ನಮಗಿಂತ ಬಲಿಷ್ಠರು; ಅವರನ್ನು ಜಯಿಸಲು ನಮಗೆ ಶಕ್ತಿಸಾಲುವುದಿಲ್ಲ” ಎಂದು ಹೇಳಿದರು.
၃၁သူနှင့်အတူလိုက်သွားသော သူတို့က ထိုပြည် သားတို့ကို ငါတို့ မတိုက်နိုင်။ သူတို့သည် ငါတို့ထက် သာ၍ အားကြီးကြသည်ဟူ၍၎င်း၊
32 ೩೨ ಅದಲ್ಲದೆ ಇವರು ತಾವು ಸಂಚರಿಸಿ ನೋಡಿದ ದೇಶದ ವಿಷಯವಾಗಿ ಇಸ್ರಾಯೇಲರಿಗೆ ಅಶುಭ ಸಮಾಚಾರವನ್ನು ಹೇಳುವವರಾಗಿ, “ನಾವು ಸಂಚರಿಸಿ ನೋಡಿದ ದೇಶವು ತನ್ನಲ್ಲಿ ವಾಸಿಸುವವರನ್ನು ನುಂಗಿಬಿಡುತ್ತದೆ. ಅದಲ್ಲದೆ ನಾವು ಅದರಲ್ಲಿ ನೋಡಿದ ಜನರೆಲ್ಲರೂ ಬಹಳ ಎತ್ತರವಾದವರು.
၃၂ငါတို့သွား၍ စူးစမ်းသောပြည်သည် မိမိသား တို့ကို ဖျက်ဆီးတတ်၏။ ငါတို့တွေ့မြင်သော ပြည်သား အပေါင်းတို့သည် အလွန်အရပ်မြင့်ကြ၏။
33 ೩೩ ಅಲ್ಲಿ ನೆಫೀಲಿಯರನ್ನು ಅಂದರೆ ನೆಫೀಲಿಯ ವಂಶದವರಾದ ಉನ್ನತ ಪುರುಷರನ್ನು ನೋಡಿದೆವು. ನಾವು ಅವರ ಮುಂದೆ ಮಿಡತೆಗಳಂತೆ ಇದ್ದೇವೆ ಎಂದು ತಿಳಿದುಕೊಂಡೆವು. ಅವರಿಗೂ ನಾವು ಹಾಗೆಯೇ ಕಾಣಿಸಿದೆವು” ಎಂದು ಹೇಳಿದರು.
၃၃ကိုယ်ကြီးသော လူအမျိုးအနွယ် အာနကအမျိုး အနွယ်ဖြစ်၍ အလွန်ကြီးမားသော သူတို့ကိုလည်း မြင်ခဲ့ ကြပြီ။ သူတို့ရှေ့မှာ ငါတို့သည် ကိုယ်အထင်တိုင်း နှံကောင်ကဲ့သို့ဖြစ်ကြသည်ဟူ၍၎င်း၊ မိမိတို့စူးစမ်းသော ပြည်ကို ဣသရေလအမျိုးသားတို့အား မကောင်းသော သိတင်းကို ကြားပြောကြလေ၏။

< ಅರಣ್ಯಕಾಂಡ 13 >