< ನೆಹೆಮೀಯನು 7 >

1 ಗೋಡೆಯನ್ನು ಕಟ್ಟಿ ಮುಗಿಸಿದ ನಂತರ ನಾನು ಬಾಗಿಲುಗಳನ್ನು ಇರಿಸಿದೆನು; ದ್ವಾರಪಾಲಕರನ್ನೂ, ಗಾಯಕರನ್ನೂ, ಲೇವಿಯರನ್ನೂ ನೇಮಿಸಲಾಯಿತು.
石垣を築き扉を設け門を守る者謳歌者およびレビ人を立るにおよびて
2 ಆನಂತರ ನನ್ನ ತಮ್ಮನಾದ ಹನಾನಿಗೂ, ಬಹಳ ನಂಬಿಗಸ್ತನೂ ದೇವರಲ್ಲಿ ವಿಶೇಷ ಭಯಭಕ್ತಿಯುಳ್ಳವನೂ, ಕೋಟೆಯ ಅಧಿಕಾರಿಯೂ ಆದ ಹನನ್ಯನಿಗೂ ಯೆರೂಸಲೇಮಿನ ಮೇಲ್ವಿಚಾರಣೆಯನ್ನು ಒಪ್ಪಿಸಿದೆನು.
我わが兄弟ハナニおよび城の宰ハナニヤをしてヱルサレムを治めしむ彼は忠信なる人にして衆多の者に超りて神を畏るる者なり
3 ನಾನು ಅವರಿಗೆ, “ಬಿಸಿಲೇರುವುದಕ್ಕಿಂತ ಮೊದಲು ಯೆರೂಸಲೇಮಿನ ಬಾಗಿಲುಗಳನ್ನು ತೆರೆಯಬಾರದು; ಕಾವಲುಗಾರರು ಇನ್ನೂ ಇರುವಾಗಲೇ ಬಾಗಿಲುಗಳನ್ನು ಮುಚ್ಚಿ ಭದ್ರಪಡಿಸಬೇಕು. ಇದಲ್ಲದೆ ಯೆರೂಸಲೇಮಿನ ನಿವಾಸಿಗಳೊಳಗೆ ಕಾವಲುಗಾರರನ್ನು ಗೊತ್ತುಮಾಡಿರಿ, ಅವರಲ್ಲಿ ಕೆಲವರು ತಮ್ಮ ಕಾವಲಿನ ಸ್ಥಳಗಳಲ್ಲಿಯೂ, ಇನ್ನು ಕೆಲವರನ್ನು ಅವರ ಮನೆಯ ಎದುರಿನಲ್ಲಿಯೂ ಕಾವಲಿರುವಂತೆ ನೇಮಿಸಬೇಕು” ಎಂದು ಆಜ್ಞಾಪಿಸಿದೆನು.
我かれらに言ふ日の熱くなるまではヱルサレムの門を啓くべからず人々の立て守りをる間に門を閉させて汝らこれを堅うせよ汝らヱルサレムの民を番兵に立て各々にその所を守らしめ各々にその家と相對ふ處を守らしめよと
4 ಪಟ್ಟಣವು ವಿಸ್ತಾರವಾಗಿದ್ದರೂ ಅದರೊಳಗೆ ಬಹಳ ಸ್ವಲ್ಪ ಜನರು ಮಾತ್ರ ಇದ್ದರು. ಮನೆಗಳನ್ನು ಇನ್ನೂ ಕಟ್ಟಿರಲಿಲ್ಲ.
邑は廣くして大なりしかどもその内の民は寡くして家は未だ建ざりき
5 ಹೀಗಿರಲಾಗಿ ನಾನು ನನ್ನ ದೇವರ ಪ್ರೇರಣೆಯಿಂದ ಗಣ್ಯರನ್ನು, ಶ್ರೀಮಂತರನ್ನೂ, ಅಧಿಕಾರಿಗಳನ್ನೂ, ಸಾಧಾರಣ ಜನರನ್ನೂ ಜನಗಣತಿಗಾಗಿ ಸಭೆಸೇರಿಸಿದನು. ಆಗ ಯೆರೂಸಲೇಮಿಗೆ ಮೊದಲು ಬಂದವರ ಹೆಸರುಗಳ ಪಟ್ಟಿಯು ನನಗೆ ಸಿಕ್ಕಿತು. ಅದರಲ್ಲಿ ಬರೆದಿದ್ದೇನೆಂದರೆ,
我神はわが心に貴き人々牧伯等および民を集めてその名簿をしらぶる思念を起さしめたまへり我最先に上り來りし者等の系図の書を得て見にその中に書しるして曰く
6 ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ ಸೆರೆಯಾಗಿ ಒಯ್ಯಲ್ಪಟ್ಟವರು ಹಿಂತಿರುಗಿ ತಮ್ಮ ಸ್ವದೇಶವಾದ ಯೆಹೂದ ಪ್ರಾಂತ್ಯದ ಸ್ವಂತ ಪಟ್ಟಣಗಳಿಗೂ, ಯೆರೂಸಲೇಮಿಗೂ ಹಿಂತಿರುಗಿದರು.
往昔バビロンの王ネブカデネザルに擄へられバビロンに遷されたる者のうち俘囚をゆるされてヱルサレムおよびユダに上りおのおの己の邑に歸りし此州の者は左の如し 是皆ゼルバベル、ヱシユア、ネヘミヤ、アザリヤ、ラアミヤ、ナハマニ、モルデカイ、ビルシヤン、ミスペレテ、ビグワイ、ネホム、バアナ等に隨ひ來れり
7 ಅವರು ಜೆರುಬ್ಬಾಬೆಲ್, ಯೇಷೂವ, ನೆಹೆಮೀಯ. ಅಜರ್ಯ, ರಗಮ್ಯ, ನಹಮಾನೀ, ಮೊರ್ದೆಕೈ, ಬಿಲ್ಷಾನ್, ಮಿಸ್ಪೆರೆತ್, ಬಿಗ್ವೈ, ನೆಹೂಮ್, ಬಾಣ ಎಂಬ ನಾಯಕರೊಡನೆ ತಿರುಗಿ ಬಂದ ಇಸ್ರಾಯೇಲರು ಯಾರೆಂದರೆ:
そのイスラエルの民の人數は是のごとし
8 ಪರೋಷಿನವರು - 2,172.
パロシの子孫二千百七十二人
9 ಶೆಫಟ್ಯನ ಸಂತಾನದವರು - 372.
シパテヤの子孫三百七十二人
10 ೧೦ ಆರಹನ ಸಂತಾನದವರು - 652.
アラの子孫六百五十二人
11 ೧೧ ಪಹತ್ ಮೋವಾಬಿನವರಾದ ಯೇಷೂವ ಮತ್ತು ಯೋವಾಬನ ಸಂತಾನದವರು - 2,818.
ヱシユアとヨアブの族たるパハテモアブの子孫二千八百十八人
12 ೧೨ ಏಲಾಮಿನ ಸಂತಾನದವರು - 1,254.
エラムの子孫千二百五十四人
13 ೧೩ ಜತ್ತೂವಿನ ಸಂತಾನದವರು - 845.
ザツトの子孫八百四十五人
14 ೧೪ ಜಕ್ಕೈಯನ ಸಂತಾನದವರು - 760.
ザツカイの子孫七百六十人
15 ೧೫ ಬಿನ್ನೂಯನ ಸಂತಾನದವರು - 648.
ビンヌイの子孫六百四十八人
16 ೧೬ ಬೇಬೈಯನ ಸಂತಾನದವರು - 628.
ベバイの子孫六百二十八人
17 ೧೭ ಅಜ್ಗಾದಿನ ಸಂತಾನದವರು - 2,322.
アズガデの子孫二千三百二十二人
18 ೧೮ ಅದೋನೀಕಾಮಿನ ಸಂತಾನದವರು - 667.
アドニカムの子孫六百六十七人
19 ೧೯ ಬಿಗ್ವೈಯನ ಸಂತಾನದವರು - 2,067.
ビグワイの子孫二千六十七人
20 ೨೦ ಆದೀನನ ಸಂತಾನದವರು - 655.
アデンの子孫六百五十五人
21 ೨೧ ಆಟೇರಿನವರಾದ ಹಿಜ್ಕೀಯನ ಸಂತಾನದವರು - 98.
ヒゼキヤの家のアテルの子孫九十八人
22 ೨೨ ಹಾಷುಮಿನ ಸಂತಾನದವರು - 328.
ハシユムの子孫三百二十八人
23 ೨೩ ಬೇಚೈಯನ ಸಂತಾನದವರು - 324.
ベザイの子孫三百二十四人
24 ೨೪ ಹಾರಿಫಿನ ಸಂತಾನದವರು - 112.
ハリフの子孫百十二人
25 ೨೫ ಗಿಬ್ಯೋನಿನ ಸಂತಾನದವರು - 95.
ギベオンの子孫九十五人
26 ೨೬ ಬೇತ್ಲೆಹೇಮ್ ಮತ್ತು ನೆಟೋಫ ಊರಿನವರು - 188.
ベテレヘムおよびネトパの人百八十八人
27 ೨೭ ಅನಾತೋತ್ ಊರಿನವರು - 128.
アナトテの人百二十八人
28 ೨೮ ಬೇತಜ್ಮಾವೇತಿನ ಊರಿನವರು - 42.
ベテアズマウテの人四十二人
29 ೨೯ ಕಿರ್ಯತ್ಯಾರೀಮ್, ಕೆಫೀರಾ ಮತ್ತು ಬೇರೋತ್ ಊರಿನವರು - 743.
キリアテヤリム、ケピラおよびベエロテの人七百四十三人
30 ೩೦ ರಾಮಾ ಮತ್ತು ಗೆಬ ಊರಿನವರು - 621.
ラマおよびゲバの人六百二十一人
31 ೩೧ ಮಿಕ್ಮಾಸಿನವರು - 122.
ミクマシの人百二十二人
32 ೩೨ ಬೇತೇಲ್ ಮತ್ತು ಆಯಿ ಎಂಬ ಊರಿನವರು - 123.
ベテルおよびアイの人百二十三人
33 ೩೩ ಎರಡನೆಯ ನೆಬೋವಿನವರು - 52.
他のネボの人五十二人
34 ೩೪ ಎರಡನೆಯ ಏಲಾಮಿನವರು - 1,254.
他のエラムの民千二一百五十四人
35 ೩೫ ಹಾರಿಮನವರು - 320.
ハリムの民三百二十人
36 ೩೬ ಯೆರಿಕೋವಿನವರು - 347.
ヱリコの民三百四十五人
37 ೩೭ ಲೋದ್, ಹಾದೀದ್, ಮತ್ತು ಓನೋ ಊರಿನವರು - 721.
ロド、ハデデおよびオノの民七百二十一人
38 ೩೮ ಸೆನಾಹನವರು - 3,930.
セナアの子孫三千九百三十人
39 ೩೯ ಯಾಜಕರಲ್ಲಿ - ಯೆದಾಯನ ಸಂತಾನದವರಾದ ಯೇಷೂವನ ಮನೆಯವರು - 973.
祭司はヱシユアの家のヱダヤの子孫九百七十三人
40 ೪೦ ಇಮ್ಮೇರನ ಸಂತಾನದವರು - 1,052.
インメルの子孫千五十二人
41 ೪೧ ಪಷ್ಹೂರನ ಸಂತಾನದವರು - 1,247.
パシユルの子孫一千二百四十七人
42 ೪೨ ಹಾರಿಮನ ಸಂತಾನದವರು - 1,017
ハリムの子孫一千十七人
43 ೪೩ ಲೇವಿಯರಲ್ಲಿ - ಹೋದವ್ಯನ ಸಂತಾನದವರಾದ ಯೇಷೂವ, ಕದ್ಮೀಯೇಲ್ ಸಂತಾನದವರು - 74.
レビ人はホデワの子等ヱシユアとカデミエルの子孫七十四人
44 ೪೪ ಗಾಯಕರಲ್ಲಿ; ಆಸಾಫನ ಸಂತಾನದರು - 148.
謳歌者はアサフの子孫百四十八人
45 ೪೫ ದ್ವಾರಪಾಲಕರಲ್ಲಿ; ಶಲ್ಲೂಮ್, ಆಟೇರ್, ಟಲ್ಮೋನ್, ಅಕ್ಕೂಬ್, ಹಟೀಟಾ, ಶೋಬೈ ಇವರ ಸಂತಾನದವರು ಒಟ್ಟು - 138.
門を守る者はシヤルムの子孫アテルの子孫タルモンの子孫アツクブの子孫ハテタの子孫シヨバイの子孫百三十八人
46 ೪೬ ದೇವಾಲಯದ ಸೇವಕರಲ್ಲಿ; ಜೀಹ, ಹಸೂಫ, ಟಬ್ಬಾವೋತ್ ಸಂತಾನದರು,
ネテニ人はジハの子孫ハスパの子孫タバオテの子孫
47 ೪೭ ಕೇರೋಸ್, ಸೀಯ, ಪಾದೋನ್ ಸಂತಾನದರು,
ケロスの子孫シアの子孫パドンの子孫
48 ೪೮ ಲೆಬಾನ, ಹಗಾಬ, ಸಲ್ಮೈ ಸಂತಾನದರು,
レバナの子孫ハガバの子孫サルマイの子孫
49 ೪೯ ಹಾನಾನ್, ಗಿದ್ದೇಲ್, ಗಹರ್ ಸಂತಾನದರು,
ハナンの子孫ギデルの子孫ガハルの子孫
50 ೫೦ ರೆವಾಯ, ರೆಚೀನ್, ನೆಕೋದ ಸಂತಾನದರು,
レアヤの子孫レヂンの子孫ネコダの子孫
51 ೫೧ ಗಜ್ಜಾಮ್, ಉಜ್ಜ, ಪಾಸೇಹ ಸಂತಾನದವರು,
ガザムの子孫ウザの子孫パセアの子孫
52 ೫೨ ಬೇಸೈ, ಮೆಯನೀಮ್, ನೆಫೀಷೆಸೀಮ್ ಸಂತಾನದವರು,
ベサイの子孫メウニムの子孫ネフセシムの子孫
53 ೫೩ ಬಕ್ಬೂಕ್, ಹಕ್ಕೂಫ, ಹರ್ಹೂರ್ ಸಂತಾನದವರು,
バクブクの子孫ハクパの子孫ハルホルの子孫
54 ೫೪ ಬಚ್ಲೂತ್, ಮೆಹೀದ, ಹರ್ಷ ಸಂತಾನದವರು
バヅリテの子孫メヒダの子孫ハルシヤの子孫
55 ೫೫ ಬರ್ಕೋಸ್, ಸೀಸೆರ, ತೆಮಹ ಸಂತಾನದವರು,
バルコスの子孫シセラの子孫テマの子孫
56 ೫೬ ನೆಚೀಹ, ಹಟೀಫ ಸಂತಾನದವರು.
ネヂアの子孫ハテパの子孫等なり
57 ೫೭ ಸೊಲೊಮೋನನ ಸೇವಕರಲ್ಲಿ - ಸೋಟೈ, ಸೋಫೆರೆತ್, ಪೆರೀದನ ಸಂತಾನದವರು,
ソロモンの僕たりし者等の子孫は即ちソタイの子孫ソペレテの子孫ペリダの子孫
58 ೫೮ ಯಾಲ, ದರ್ಕೋನ್, ಗಿದ್ದೇಲ್ ಸಂತಾನದವರು,
ヤアラの子孫ダルコンの子孫ギデルの子孫
59 ೫೯ ಶೆಫಟ್ಯ, ಹಟ್ಟೀಲ್, ಪೋಕೆರೆತ್ ಹಚ್ಚೆಬಾಯೀಮ್, ಆಮೋನ್ ಸಂತಾನದವರು.
シパテヤの子孫ハツテルの子孫ポケレテハツゼバイムの子孫アモンの子孫
60 ೬೦ ಎಲ್ಲಾ ದೇವಾಲಯದ ಸೇವಕರೂ ಸೊಲೊಮೋನನ ಸೇವಕರು ಒಟ್ಟು 392 ಮಂದಿ.
ネテニ人とソロモンの僕たりし者等の子孫とは合せて三百九十二人
61 ೬೧ ತೇಲ್ಮೆಲಹ, ತೇಲ್ಹರ್ಷ, ಕೆರೂಬ್, ಆದ್ದೋನ್ ಮತ್ತು ಇಮ್ಮೇರ್, ಎಂಬ ಊರುಗಳಿಂದ ಬಂದವರಾಗಿ ತಮ್ಮ ಗೋತ್ರಗಳ ವಂಶಾವಳಿಗಳನ್ನು ತೋರಿಸಿ ತಾವು ಇಸ್ರಾಯೇಲರೆಂಬುದನ್ನು ಸ್ಥಾಪಿಸಲಾರದವರಾದ,
またテルメラ、テルハレサ、ケルブ、アドンおよびインメルより上り來れる者ありしがその宗家とその血統とを示してイスラエルの者なるを明かにすることを得ざりき
62 ೬೨ ದೆಲಾಯ, ಟೋಬೀಯ, ನೆಕೋದ ಇವರ ಸಂತಾನದವರು - 642.
是すなはちデラヤの子孫トビヤの子孫ネコダの子孫にして合せて六百四十二人
63 ೬೩ ಯಾಜಕರಲ್ಲಿ: ಹೋಬಾಯ, ಹಕ್ಕೋಚ್, ಬರ್ಜಿಲ್ಲೈ ಇವರ ಸಂತಾನದವರು ತಮ್ಮ ವಂಶಾವಳಿಯ ದಾಖಲೆ ತೋರಿಸಲಾರದೆ ಹೋದರು. ಬರ್ಜಿಲ್ಲೈ ಎಂಬುವನು ಗಿಲ್ಯಾದ್ಯನಾದ ಬರ್ಜಿಲ್ಲೈಯ ಹೆಣ್ಣುಮಕ್ಕಳಲ್ಲಿ ಒಬ್ಬಾಕೆಯನ್ನು ಮದುವೆ ಮಾಡಿಕೊಂಡು ಅವನ ಹೆಸರನ್ನು ಇಟ್ಟುಕೊಂಡಿದ್ದನು.
祭司の中にホバヤの子孫ハツコヅの子孫バルジライの子孫ありバルジライはギレアデ人バルジライの女を妻に娶りてその名を名りしなり
64 ೬೪ ಇವರು ತಮ್ಮ ವಂಶಾವಳಿ ಪತ್ರಗಳನ್ನು ಹುಡುಕಿದರೂ ಅವು ಸಿಕ್ಕದ ಕಾರಣ ಅವರನ್ನು ಅಶುದ್ಧರೆಂದು ಯಾಜಕೋದ್ಯೋಗದಿಂದ ತಳ್ಳಲ್ಪಟ್ಟರು.
是等の者系圖に載る者等の中にその籍を尋ねたれども在ざりき是故に汚れたる者として祭司の中より除かれたり
65 ೬೫ ಊರೀಮ್ ಮತ್ತು ತುಮ್ಮೀಮುಗಳ ಮೂಲಕ ದೈವನಿರ್ಣಯವನ್ನು ತಿಳಿಸಬಲ್ಲವನಾದ ಯಾಜಕನು ಬರುವ ತನಕ ಇವರು ಮಹಾಪರಿಶುದ್ಧ ಪದಾರ್ಥಗಳನ್ನು ಭೋಜನ ಮಾಡಬಾರದೆಂಬುದಾಗಿ ದೇಶಾಧಿಪತಿಯು ಆಜ್ಞಾಪಿಸಿದನು.
テルシヤタ即ち之に告てウリムとトンミムを帯る祭司の興るまでは至聖物を食ふべからずと言り
66 ೬೬ ಸರ್ವಸಮೂಹದವರ ಒಟ್ಟು ಸಂಖ್ಯೆಯು ನಲ್ವತ್ತೆರಡು ಸಾವಿರದ ಮುನ್ನೂರ ಅರವತ್ತಾಗಿತ್ತು.
會衆あはせて四萬二千三百六十人
67 ೬೭ ಈ ಸಂಖ್ಯೆಯಲ್ಲಿ ಲೆಕ್ಕಿಸಲ್ಪಡದ ಅವರ ಸೇವಕ ಸೇವಕಿಯರು ಏಳು ಸಾವಿರದ ಮುನ್ನೂರ ಮೂವತ್ತೇಳು ಮಂದಿ. ಅವರ ಗಾಯಕರೂ ಗಾಯಕಿಯರೂ ಇನ್ನೂರ ನಲ್ವತ್ತೈದು ಮಂದಿ.
この外にその僕婢七千三百三十七人謳歌男女二百四十五人あり
68 ೬೮ ಅವರಿಗೆ ಏಳು ನೂರ ಮೂವತ್ತಾರು ಕುದುರೆಗಳೂ, ಇನ್ನೂರ ನಲ್ವತ್ತೈದು ಹೇಸರಗತ್ತೆಗಳೂ,
その馬七百三十六匹その騾二百四十五匹
69 ೬೯ ನಾನೂರ ಮೂವತ್ತೈದು ಒಂಟೆಗಳೂ ಆರು ಸಾವಿರದ ಏಳುನೂರಿಪ್ಪತ್ತು ಕತ್ತೆಗಳೂ ಇದ್ದವು.
駱駝四百三十五匹驢馬六千七百二十匹
70 ೭೦ ಗೋತ್ರಪ್ರಧಾನರಲ್ಲಿ ಕೆಲವರು ಕೆಲಸಕಾರ್ಯಗಳಿಗಾಗಿ ಧನ ಸಹಾಯ ಮಾಡಿದರು. ತಿರ್ಷಾತಾ ಅನ್ನಿಸಿಕೊಳ್ಳುವ ದೇಶಾಧಿಪತಿಯು ಭಂಡಾರಕ್ಕೆ ಕೊಟ್ಟದ್ದು ಸಾವಿರ ಬಂಗಾರದ ನಾಣ್ಯಗಳು, ಐವತ್ತು ಬೋಗುಣಿಗಳು, ಐನೂರಮೂವತ್ತು ಯಾಜಕವಸ್ತ್ರಗಳು.
宗家の長の中工事のためにを納めし人々ありテルシヤタは光一千ダリク鉢五十祭司の衣服五百三十襲を施して庫に納む
71 ೭೧ ಬೇರೆ ಕೆಲವು ಮಂದಿ ಗೋತ್ರಪ್ರಧಾನರು ಕಟ್ಟಡದ ಭಂಡಾರಕ್ಕೆ ಕೊಟ್ಟದ್ದು - ಇಪ್ಪತ್ತು ಸಾವಿರ ಬಂಗಾರದ ನಾಣ್ಯಗಳು, ಒಂದು ಲಕ್ಷದ ಹತ್ತು ಸಾವಿರ ತೊಲಾ ಬೆಳ್ಳಿ;
また宗家の長數人は金二萬ダリク銀二千二百斤を工事のために庫に納む
72 ೭೨ ಉಳಿದ ಜನರು ಕೊಟ್ಟದ್ದು ಇಪ್ಪತ್ತು ಸಾವಿರ ಬಂಗಾರದ ನಾಣ್ಯಗಳು, ಒಂದು ಲಕ್ಷ ತೊಲಾ ಬೆಳ್ಳಿ, ಅರುವತ್ತೇಳು ಯಾಜಕವಸ್ತ್ರಗಳನ್ನು ನೀಡಿದರು.
その餘の民の納めし者は金二萬ダリク銀二千斤祭司の衣服六十七襲なりき
73 ೭೩ ಹೀಗೆ ಯಾಜಕರು, ಲೇವಿಯರು, ದ್ವಾರಪಾಲಕರು, ಗಾಯಕರು, ಸಾಧಾರಣ ಜನರು ಸೇರಿದವರು, ದೇವಾಲಯದ ಸೇವಕರು ಅಂತೂ ಇಸ್ರಾಯೇಲರೆಲ್ಲರೂ ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸ ಮಾಡತೊಡಗಿದರು.
かくて祭司レビ人門を守る者謳歌者民等ネテニ人およびイスラエル人すべてその邑々に住り イスラエルの子孫かくてその邑々に住みをりて七月にいたりぬ

< ನೆಹೆಮೀಯನು 7 >